Site icon Vistara News

Vistara Top 10 News : ಮಣಿಪುರದ ಬಗ್ಗೆ ಮೌನ ಮುರಿದ ಮೋದಿ, ಬಿಜೆಪಿ ಜತೆ ಸೇರಿಕೊಂಡ ಎಚ್‌ಡಿಕೆ, ಪ್ರಮುಖ ಸುದ್ದಿಗಳು

Vistara TOP 10 News july 20

1.ಮಣಿಪುರದಲ್ಲಿ ಅಮಾನುಷ ಘಟನೆ; ಇಬ್ಬರು ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಭುಗಿಲೆದ್ದ ಆಕ್ರೋಶ
ಗಲಭೆಗ್ರಸ್ತ ಮಣಿಪುರದಲ್ಲಿ ಮೇ 4ರಂದು ನಡೆದಿದೆ ಎನ್ನಲಾದ ಭೀಕರ ಘಟನೆಯ ಒಂದು ವಿಡಿಯೋ ಭಾರಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. ಅಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸುವ ಈ ವಿಡಿಯೋದಿಂದಾಗಿ ಗಲಭೆ ಮತ್ತೆ ಸ್ಫೋಟಿಸಿದೆ. ಇತ್ತ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಬಗ್ಗೆ ಮೌನ ಮುರಿದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ದುಷ್ಟರನ್ನು ಸುಮ್ಮನೆ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ- ಸಂಸತ್‌ನಲ್ಲೂ ಪ್ರತಿಧ್ವನಿ

2. ಬೆಂಗಳೂರಿನಲ್ಲಿ ಗ್ರೆನೇಡ್ ದಾಳಿಗೆ ನಡೆದಿತ್ತು ಸಂಚು: ಸ್ವಾತಂತ್ರ್ಯ ದಿನ ನರಮೇಧಕ್ಕೆ ರೂಪಿಸಿದ್ದ ರಕ್ಕಸರು
ಬೆಂಗಳೂರಿನಲ್ಲಿ ಬಂಧಿತರಾಗಿರುವ ಐವರು ಉಗ್ರರು ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ದೊಡ್ಡ ಮಟ್ಟದ ಸ್ಪೋಟಕ್ಕೆ ಸಂಚು ನಡೆಸಿದ್ದರು ಮತ್ತು ಹಿಂದು ನಾಯಕರನ್ನು ಟಾರ್ಗೆಟ್‌ ಮಾಡಲು ಮುಂದಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಗ್ರೆನೇಡ್‌ ದಾಳಿಗೆ ನಡೆಸಿದ ಸಂಚಿನ ವಿವರಗಳು ಲಭ್ಯವಾಗಿವೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಸಂಚು ಬಯಲಾಗಿದ್ದು ಪರಪ್ಪನ ಅಗ್ರಹಾರದಿಂದ; ಸುಳಿವು ನೀಡಿದ್ದು ಒಂದು ಫೋನ್‌ ಕಾಲ್‌!

3. ಕೇಸರಿ ಪಡೆ ರಾಜಭವನ ಚಲೋಗೆ ದಳಪತಿಗಳ ಸಾಥ್‌- ಬಿಜೆಪಿ ಲೆಟರ್‌‌ ಹೆಡ್‌‌‌ನಲ್ಲಿ ಕುಮಾರಸ್ವಾಮಿ ಸಹಿ
ರಾಜ್ಯ ವಿಧಾನಸಭೆಯಲ್ಲಿ ಬುಧವಾರ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದು, ಅವರನ್ನು ಅಮಾನುಷವಾಗಿ ಎತ್ತಿ ಹೊರಗೆ ಹಾಕಿದ್ದು ಮತ್ತು ಇದಕ್ಕೆ ಕಾರಣವಾದ ಘಟನಾವಳಿಗಳ ವಿವರದೊಂದಿಗೆ ಬಿಜೆಪಿ ಮತ್ತು ಜೆಡಿಎಸ್‌ ಜತೆಯಾಗಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ದೂರು ನೀಡಿದೆ. ಅಚ್ಚರಿ ಎಂದರೆ ಬಿಜೆಪಿಯ ಲೆಟರ್‌ ಹೆಡ್‌ನಲ್ಲಿ ನೀಡಲಾಗಿರುವ ಈ ದೂರಿನಲ್ಲಿ ಮೊದಲ ಸಹಿಎಚ್.ಡಿ ಕುಮಾರಸ್ವಾಮಿ ಅವರದು. ಏನು ಕಥೆ ಇದು? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ರಾಜ್ಯಪಾಲರ ಅಂಗಳ ತಲುಪಿದ ಅಮಾನತು ಪಾಲಿಟಿಕ್ಸ್‌‌: ಸರ್ಕಾರ, ಸ್ಪೀಕರ್‌ ವಿರುದ್ಧ ಬಿಜೆಪಿ ದೂರು

4. ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಸಂಚಲನ; ಮೋದಿ ಜತೆ ತೇಜಸ್ವಿನಿ ಅನಂತಕುಮಾರ್, ಶಾ ಜತೆ ವಿಜಯೇಂದ್ರ ಭೇಟಿ
ಚುನಾವಣಾ ಸೋಲಿನ ಬಳಿಕ ನಿಂತ ನೀರಾಗಿದ್ದ ಕರ್ನಾಟಕ ಬಿಜೆಪಿ ರಾಜಕೀಯದಲ್ಲಿ ಸಣ್ಣ ಸಂಚಲನ (BJP Politics) ಕಾಣಿಸಿಕೊಂಡಿದೆ. ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರೆ, ಇತ್ತ ಮಾಜಿ ಕೇಂದ್ರ ಮಂತ್ರಿ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯಲ್ಲಿ ಭೇಟಿಯಾದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಗೃಹಲಕ್ಷ್ಮಿ ನೋಂದಣಿಗೆ ಸ್ಟಾರ್ಟಿಂಗ್‌ ಟ್ರಬಲ್‌: ಗೊಂದಲ ಬೇಡ, ಈ ನಿಯಮ ಪಾಲಿಸಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದ (ಜುಲೈ 20) ಆರಂಭವಾಗಿದೆಯಾದರೂ ನೋಂದಣಿ ನಿಯಮಗಳ (Registration rules) ಬಗೆಗಿನ ಗೊಂದಲ, ಸರ್ವರ್‌ ಸಮಸ್ಯೆ, ಮಾಹಿತಿಯ ಕೊರತೆಯಿಂದ ಸ್ಟಾರ್ಟಿಂಗ್‌ ಟ್ರಬಲ್‌ (Starting trouble) ಅನುಭವಿಸಿತು. ನೋಂದಣಿಯಲ್ಲಿ ಗೊಂದಲವಾಗದಂತೆ ಈ ನಿಯಮ ಪಾಲಿಸಲು ಸೂಚಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಅಡಕೆ ಸಮಸ್ಯೆ ಎದುರಿಸಲು ಒಟ್ಟಾಗಿ ನಿಲ್ಲುವ ಸಂಕಲ್ಪ; ಟಾಸ್ಕ್‌ಫೋರ್ಸ್‌ನಲ್ಲಿ ಮಹತ್ವದ ಚರ್ಚೆ
ಅಡಿಕೆ ಬೆಳೆ ಹಾಗೂ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಗುರುವಾರ (ಜುಲೈ 20) ಅಡಿಕೆ ಬೆಳೆಗಾರರ ಟಾಸ್ಕ್‌ಫೋರ್ಸ್‌ (Arecanut Growers Task Force) ಸಭೆಯನ್ನು ನಡೆಸಲಾಗಿದ್ದು, ಅಡಿಕೆ ಬೆಳೆಗೆ ಯಾವುದೇ ಸಮಸ್ಯೆ ಬಂದರೂ ಒಟ್ಟಾಗಿ ನಿಲ್ಲುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

7. ಡಿಕೆಶಿ ದೇಶದಲ್ಲೇ ಶ್ರೀಮಂತ ಶಾಸಕ; ಟಾಪ್‌ 20ರಲ್ಲಿ 12 ಶಾಸಕರು ನಮ್ಮವರೇ!
ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೇಶದಲ್ಲೇ ಶ್ರೀಮಂತ ಶಾಸಕ (Richest MLA In India) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಹಾಗೂ ನ್ಯಾಷನಲ್‌ ಎಲೆಕ್ಷನ್‌ ವಾಚ್‌ (NEW) ವರದಿ ತಯಾರಿಸಿದ್ದು, 1,413 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಡಿಕೆಶಿ ಅವರು ದೇಶದಲ್ಲೇ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಕೋರ್ಟ್‌ನಲ್ಲಿ ಹಾಸ್ಟೆಲ್‌ ಹುಡುಗರಿಗೆ ಜಯ;‌ ಚಿತ್ರನಟಿ ರಮ್ಯಾಗೆ ಹಿನ್ನಡೆ
ಬೆಂಗಳೂರು:
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್‌ಗೆ ನಿರ್ಬಂಧ ಕೋರಿ ನಟಿ ರಮ್ಯಾ (Actress Ramya) ನೋಟಿಸ್ ಜಾರಿ ಮಾಡಿದ್ದರು. ಆದರೀಗ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದೆ. ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ನಾಳೆ (ಜು.21ರಂದು) ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿದೆ ಕೋರ್ಟ್‌. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಏಷ್ಯಾ ಕಪ್‌ ಟೂರ್ನಿ ವೇಳಾಪಟ್ಟಿ ಪ್ರಕಟ: ಒಂದು ಪಂದ್ಯವನ್ನು ಪಾಕ್‌ನಲ್ಲೂ ಆಡಲಿದೆ ಭಾರತ
ಪಾಕಿಸ್ತಾನದ ತಗಾದೆಯಿಂದ ವಿಳಂಬವಾಗುತ್ತಿದ್ದ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ (Asia Cup 2023) ಕೊನೆಗೂ ಬುಧವಾರ ಪ್ರಕಟಗೊಂಡಿತು. ಪ್ರತಿಷ್ಠಿತ ಈ ಕ್ರಿಕೆಟ್​ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಂದ್ಯಾವಳಿ ನಡೆಯಲಿದೆ. ಭಾರತ ಒಂದು ಪಂದ್ಯವನ್ನಾಡಲು ಪಾಕ್​ಗೆ ತೆರಳಬೇಕಾಗಿದೆ. ಪೂರ್ಣ ವಿವರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಯೇಸುವನ್ನು ಭೇಟಿಯಾಗಲು ಉಪವಾಸ; ಪಾದ್ರಿ ಮಾತು ಕೇಳಿ 403 ಜನರ ಸಾವು
ಬಡತನ, ಪೌಷ್ಟಿಕಾಂಶ ಕೊರತೆಯಿಂದ ಜನ ನರಳುತ್ತಿರುವ ಕೀನ್ಯಾದಲ್ಲಿ ಕಂಡು ಕೇಳರಿಯದ ಮೂಢನಂಬಿಕೆಯು ನೂರಾರು ಜನರನ್ನು ಬಲಿ ಪಡೆದಿದೆ. ಯೇಸು ಕ್ರಿಸ್ತನನ್ನು ಭೇಟಿ ಮಾಡಬೇಕು ಎಂಬ ಆಸೆಯಿಂದ ಸಾಮೂಹಿಕವಾಗಿ ಜನ ಉಪವಾಸ ಕೈಗೊಂಡಿದ್ದು, ಇದುವರೆಗೆ 403 ಮಂದಿ (Kenya Deaths) ಮೃತಪಟ್ಟಿದ್ದಾರೆ. ಕೀನ್ಯಾದ ಕಾಡಿನಲ್ಲಿ ಸಾಮೂಹಿಕವಾಗಿ ಹೆಣಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version