Site icon Vistara News

ವಿಸ್ತಾರ TOP 10 NEWS: ಪಟ್ಟು ಬಿಡದ ಸರ್ಕಾರಿ ನೌಕರರು, ದೆಹಲಿ ಡಿಸಿಎಂ ಸಿಸೋಡಿಯಾ ರಾಜೀನಾಮೆ ಇತ್ಯಾದಿ ಪ್ರಮುಖ ಸುದ್ದಿಗಳಿವು

vistara-top-10-news-govt employees demands not met to sisodia resignation and more news

#image_title

1. Govt Employees Strike: ಸಿಎಸ್‌ ಸಂಧಾನ ವಿಫಲ; ಮನವೊಲಿಕೆಗೂ ಬಗ್ಗದ ಸರ್ಕಾರಿ ನೌಕರರ ಸಂಘ, ಸರ್ಕಾರದ ಅಧಿಕೃತ ಆದೇಶಕ್ಕೆ ಪಟ್ಟು
7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಬದ್ಧತೆಯನ್ನು ಸರ್ಕಾರ ದೃಢವಾಗಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿ ಮಾರ್ಚ್‌ ಒಂದರಿಂದ ಕರೆ ನೀಡಲಾಗಿರುವ ಸರ್ಕಾರಿ ನೌಕರರ ಮುಷ್ಕರವನ್ನು ಮನವೊಲಿಸಿ ತಡೆಯುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಪ್ರಯತ್ನ ವಿಫಲಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Govt Employees Strike : ಸರ್ಕಾರಿ ನೌಕರರ ಮುಷ್ಕರ ಹೇಗಿರಲಿದೆ? ನೌಕರರು ಪ್ರತಿಭಟನೆ ವೇಳೆ ಏನು ಮಾಡಲಿದ್ದಾರೆ?
7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಮಾರ್ಚ್‌ 1 ರಿಂದ ಮುಷ್ಕರ ನಡೆಸುವುದಾಗಿ ಪ್ರಕಟಿಸಿದ್ದಾರೆ. ಈ ಪ್ರತಿಭಟನೆ (Govt Employees Strike) ಹೇಗಿರುತ್ತದೆ? ನೌಕರರು ಈ ಪ್ರತಿಭಟನೆ ಸಂದರ್ಭದಲ್ಲಿ ಏನು ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Molasses Scam: ಕಾಕಂಬಿ ರಫ್ತು ಹಗರಣದಲ್ಲಿ ಸಿಎಂ, ಕೇಂದ್ರ ಸಚಿವರು ಭಾಗಿ: ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಆರೋಪ
ಕರ್ನಾಟಕದಲ್ಲೇ ಕಾಕಂಬಿ ( Molasses) ಕೊರತೆ ಇದ್ದರೂ ಗೋವಾ ಬಂದರಿನ ಮೂಲಕ ರಫ್ತು ಮಾಡುವ ಮೂಲಕ ಭ್ರಷ್ಟಾಚಾರ ಹಾಗೂ ಬೊಕ್ಕಸಕ್ಕೆ ತೆರಿಗೆ ನಷ್ಟ ಉಂಟು ಮಾಡಲಾಗಿದೆ ಎಂದು ಕಾಂಗ್ರೆಸ್‌ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Molasses Scam: ಕಾಕಂಬಿ ಹಗರಣ ಆರೋಪದ ಕುರಿತು ಸಿಎಂ ಬೊಮ್ಮಾಯಿ, ಅಬಕಾರಿ ಸಚಿವ ಗೋಪಾಲಯ್ಯ ಪ್ರತಿಕ್ರಿಯೆ

4. Manish Sisodia Resigns: ಬಂಧನದ ಬೆನ್ನಲ್ಲೇ ಡಿಸಿಎಂ ಸ್ಥಾನಕ್ಕೆ ಮನೀಷ್‌ ಸಿಸೋಡಿಯಾ ರಾಜೀನಾಮೆ
ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ಮನೀಷ್‌ ಸಿಸೋಡಿಯಾ (Manish Sisodia Resigns) ಅವರು ತಮ್ಮ ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸತ್ಯೇಂದರ್‌ ಜೈನ್‌ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸ್ವೀಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election: ವೀರೇಂದ್ರ ಪಾಟೀಲ್‌, ನಿಜಲಿಂಗಪ್ಪಗೆ ಕಾಂಗ್ರೆಸ್‌ ಅವಮಾನ ಮಾಡಿಲ್ಲ: ಮೋದಿ ಮಾತಿಗೆ ಡಿ.ಕೆ. ಶಿವಕುಮಾರ್‌ ಉತ್ತರ
ಕಾಂಗ್ರೆಸ್‌ ಪಕ್ಷವು ವೀರೇಂದ್ರ ಪಾಟೀಲರು ಹಾಗೂ ಎಸ್‌. ನಿಜಲಿಂಗಪ್ಪ ಅವರಿಗೆ ಅವಮಾನ ಮಾಡಿದೆ, ಇದೀಗ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಅವಮಾನಿಸುತ್ತಿದೆ ಎಂದು ಚುನಾವಣೆ ಹೊಸ್ತಿಲಲ್ಲಿ (Karnataka Election) ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಖಂಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಬಿಜೆಪಿ ನನ್ನನ್ನು ಮೂಲೆಗುಂಪು ಮಾಡಿಲ್ಲ, ಟಿಪ್ಪು-ಹಿಜಾಬ್​ಗಳೆಲ್ಲ ಅನಗತ್ಯ ವಿಚಾರಗಳು: ಬಿ.ಎಸ್​. ಯಡಿಯೂರಪ್ಪನವರ ಮಾತುಗಳಿವು
ಬಿಜೆಪಿ ಹಿರಿಯ, ಜನಮೆಚ್ಚಿದ ನಾಯಕ ಬಿ.ಎಸ್​.ಯಡಿಯೂರಪ್ಪ(BS Yediyurappa)ನವರು ಫೆ.27ರಂದು 80ನೇ ವರ್ಷದ ಜನ್ಮದಿನ ಆಚರಿಸಿಕೊಂಡರು. ಅವರ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಶಿವಮೊಗ್ಗ ಏರ್​ಪೋರ್ಟ್​ ಉದ್ಘಾಟಿಸಿದರು. ಯಡಿಯೂರಪ್ಪನವರಿಗೆ ಶುಭಕೋರಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಅಗತ್ಯವಿರುವ ‘ಬ್ರಹ್ಮಾಸ್ತ್ರ’ವನ್ನು ಬಿ.ಎಸ್​.ಯಡಿಯೂರಪ್ಪನವರ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಿಯೋಜಿಸಿದ್ದಾರೆ. ಇದೇ ಹೊತ್ತಲ್ಲಿ, ಬಿ.ಎಸ್.ಯಡಿಯೂರಪ್ಪನವರು ನ್ಯೂಸ್​ 18 ಮಾಧ್ಯಮಕ್ಕೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Vijaya Sankalpa Yatre: ಬುಧವಾರದಿಂದ ಶುರುವಾಗುವ ಯಾತ್ರೆಯನ್ನಾದರೂ ಸಫಲಗೊಳಿಸುವ ಯತ್ನದಲ್ಲಿ ಬಿಜೆಪಿ
ಈಗಾಗಲೆ ಜನಸಂಕಲ್ಪ ಯಾತ್ರೆಯನ್ನು ಬಿಜೆಪಿ ಆರಂಭಿಸಿತ್ತಾದರೂ ಅದು ಹೆಚ್ಚಿನ ಸದ್ದು ಮಾಡದೆ ತನ್ನಿಂತಾನೆ ಮುಕ್ತಾಯಗೊಂಡಿದೆ. ಇದೀಗ ನಾಲ್ಕು ರಥ ಯಾತ್ರೆಗಳಿಗೆ ಬುಧವಾರದಿಂದ ಚಾಲನೆ ನೀಡಲಾಗುತ್ತಿದೆ. ಈ ಯಾತ್ರೆಯನ್ನು ಸಫಲಗೊಳಿಸುವುದು ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಬಿಜೆಪಿ ಹೆಚ್ಚಿನ ಜಾಗ್ರತೆ ವಹಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟನೆ ನೆರವೇರಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. GDP Growth : 2022ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಜಿಡಿಪಿ 4.4% ಕ್ಕೆ ಇಳಿಕೆ
ಭಾರತದ ಜಿಡಿಪಿ ಬೆಳವಣಿಗೆ (GDP) ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಅಂದರೆ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 4.4%ರಷ್ಟು ದಾಖಲಾಗಿದೆ.( GDP Growth) ಅಂಕಿ ಅಂಶಗಳ ಸಚಿವಾಲಯವು ಜಿಡಿಪಿ ಕುರಿತ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, 2022-23ರ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 40.19 ಲಕ್ಷ ಕೋಟಿ ರೂ. ಜಿಡಿಪಿ ಮೌಲ್ಯ ದಾಖಲಾಗಿತ್ತು. 2021-22ರ ಇದೇ ಅವಧಿಯಲ್ಲಿ 38.51 ಲಕ್ಷ ಕೋಟಿ ರೂ. ಮೌಲ್ಯದ ಜಿಡಿಪಿ ದಾಖಲಾಗಿತ್ತು. ಅಧಿಕ ಹಣದುಬ್ಬರ, ಬೇಡಿಕೆಯ ಮಂದಗತಿಯ ಪರಿಣಾಮ ಜಿಡಿಪಿ ಬೆಳವಣಿಗೆ ಕೂಡ ನಿರೀಕ್ಷೆಗಿಂತ ತುಸು ಕಡಿಮೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Ghar Wapsi : ಅಸ್ಸಾಂನಲ್ಲಿ 35 ಕುಟುಂಬಗಳ 250 ಮಂದಿ ಘರ್​ ವಾಪ್ಸಿ, ಕ್ರೈಸ್ತ ಧರ್ಮದಿಂದ ಸನಾತನ ಧರ್ಮಕ್ಕೆ
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 250 ಹಿಂದುಗಳನ್ನು ಮಾತೃ ಧರ್ಮಕ್ಕೆ ವಾಪಸ್​ ಕರೆತರಲಾಗಿದ್ದು (Ghar Wapsi), ಅಖಿಲ ಭಾರತೀಯ ಘರ್​ ವಾಪ್ಸಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿತ್ತು. ಫೆಬ್ರವರಿ 21ರಂದು ಇಲ್ಲಿನ ಚಿಕ್ನಿಪಲಿ ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿ, ಗಂಗಾಜಲದಲ್ಲಿ ಪಾದ ತೊಳೆಯುವ ಮೂಲಕ ಮಾತೃ ಧರ್ಮಕ್ಕೆ ವಾಪಸ್​ ಕರೆತರಲಾಗಿದೆ. ಧರ್ಮ ಜಾಗರಣ್​ ಸಮನ್ವಯ ವಿಭಾಗ ಹಾಗೂ ಆರ್ಯ ಸಾಮ್​ ಸಂಸ್ಥೆಯೂ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ಉದ್ಯೋಗಿಯ ಹುಟ್ಟುಹಬ್ಬವನ್ನು ಖಾಸಗಿ ಜೆಟ್‌‌ನಲ್ಲಿ ಆಚರಿಸಿದ ಅನಂತ್ ಅಂಬಾನಿ!
ಉದ್ಯೋಗಿಗಳಿಗೆ ಬೋನಸ್‌ ನೀಡುವುದು, ಗಿಫ್ಟ್‌ಗಳನ್ನು ನೀಡುವುದು ಮಾಮೂಲಿ. ಆದರೆ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ (Anant Ambani) ತಮ್ಮ ಸಂಸ್ಥೆಯ ಉದ್ಯೋಗಿಯೊಬ್ಬರ ಬರ್ತ್‌ಡೇ ಅನ್ನೇ ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ಖಾಸಗಿ ಜೆಟ್‌ನಲ್ಲಿ ಜನ್ಮದಿನಾಚರಣೆ ಆಚರಿಸುವ ಮೂಲಕ ಉದ್ಯೋಗಿಗೆ ಖುಷಿ (Viral News) ಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. HD DeveGowda: ವಯೋಸಹಜ ಅನಾರೋಗ್ಯ: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದೇವೇಗೌಡರಿಗೆ ಚಿಕಿತ್ಸೆ
  2. ಚಂದ್ರಯಾನ-3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ: ಇಸ್ರೋ
  3. Cancer Detection Technology: ಕ್ಯಾನ್ಸರ್‌ ಕಣಗಳ ಪತ್ತೆಗೆ ಹೊಸ ಉಪಕರಣ
  4. Rishabh Pant: ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುವೆ; ರಿಷಭ್‌ ಪಂತ್‌ ವಿಶ್ವಾಸ
  5. ಕಾಶ್ಮೀರಿ ಪಂಡಿತ ಸಂಜಯ್​ ಶರ್ಮಾನನ್ನು ಕೊಂದ ಉಗ್ರನ ಹತ್ಯೆ; ಪುಲ್ವಾಮಾದಲ್ಲಿ ಮುಂದುವರಿದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ
Exit mobile version