1.ರಾಜ್ಯ ಸರ್ಕಾರಿ ನೌಕರರು, ನೇಕಾರರಿಗೆ ದಸರಾ ಗಿಫ್ಟ್; ತುಟ್ಟಿ ಭತ್ಯೆ ಶೇ. 3.75 ಹೆಚ್ಚಳ, 250 ಯುನಿಟ್ ವಿದ್ಯುತ್ ಫ್ರೀ
ರಾಜ್ಯ ಸರ್ಕಾರ ಸರ್ಕಾರಿ ನೌಕರರು ಮತ್ತು ನೇಕಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಸರ್ಕಾರಿ ನೌಕರರಿಗೆ ಶೇ. 3.75 ತುಟ್ಟಿಭತ್ಯೆ ಘೋಷಿಸಲಾಗಿದ್ದರೆ, 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ವಿದ್ಯುತ್ ಮಗ್ಗಗಳಿಗೆ 250 ಯುನಿಟ್‌ವರೆಗೆ ಉಚಿತ ವಿದ್ಯುತ್ ಪ್ರಕಟಿಸಲಾಗಿದೆ.
ವರದಿ 1. DA Hike: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್; ತುಟ್ಟಿಭತ್ಯೆ ಶೇ. 3.75 ಹೆಚ್ಚಳ
ವರದಿ 2. Gift to weavers : ನೇಕಾರರಿಗೆ ಸರ್ಕಾರದಿಂದ ದಸರಾ ಗಿಫ್ಟ್; 250 ಯುನಿಟ್ ವಿದ್ಯುತ್ ಫ್ರೀ
2. ಹೈಕಮಾಂಡ್‌ಗೆ ಕಮಿಷನ್ ನೀಡಲು ಸರ್ಕಾರದಿಂದಲೇ ಕೃತಕ ವಿದ್ಯುತ್ ಅಭಾವ ಸೃಷ್ಟಿ!
ರಾಜ್ಯ ಸರ್ಕಾರವೇ ಕೃತಕ ವಿದ್ಯುತ್ ಅಭಾವವನ್ನು ತೋರಿಸುತ್ತಿದೆ. ಕೃತಕ ಅಭಾವದ ಹೆಸರಿನಲ್ಲಿ ವಿದ್ಯುತ್ ಖರೀದಿ ಮಾಡಿ ಕಮಿಷನ್ ಹೊಡೆದರೆ ಮಾತ್ರ ಹೈಕಮಾಂಡ್‌ಗೆ ಹಣ ಕಳುಹಿಸುವುದಕ್ಕೆ ಆಗುತ್ತದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಲೋಕಸಭೆ ಚುನಾವಣೆಗೆ ಮೋದಿ ಮಾಸ್ಟರ್ ಪ್ಲಾನ್; ಜನರ ಮನೆ ಬಾಗಿಲಿಗೇ ಬರಲಿದೆ ಸರ್ಕಾರ!
2024ರ ಲೋಕಸಭೆ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭವಾಗಿದೆ. ಈ ಚುನಾವಣೆಯನ್ನು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ದೇಶಾದ್ಯಂತ ಜನಕಲ್ಯಾಣ ಯೋಜನೆಗಳ ಸಮಗ್ರ ಜಾರಿಗೆ ಮೋದಿ 6 ತಿಂಗಳು ಗಡುವು ನೀಡಿದ್ದಾರೆ. ಆ ಮೂಲಕ ಬಡವರು ಹಾಗೂ ಮಧ್ಯಮ ವರ್ಗದವರ ಮತ ಸೆಳೆಯಲು ರಣತಂತ್ರ ಹೆಣೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. Power Point with HPK : ಚಿಕ್ಕೋಡಿ ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್; ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನಿಗೆ ಸಾಧ್ಯವಿಲ್ಲ!ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್ ಕೊಡುವ ಬಗ್ಗೆ ಚಿಂತನೆ ಇದೆ. ಹಾಗಾಗಿ ಅಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್ ಕೊಡುವುದು ಸಾಧ್ಯವಿಲ್ಲ. ಅದು ಲಕ್ಷ್ಮಿ ಅವರಿಗೂ ಗೊತ್ತಿದೆ. ಅವರು ಬೆಳಗಾವಿ ಕ್ಷೇತ್ರದ ಮೇಲೆ ಬೇಡಿಕೆ ಇಟ್ಟಿರಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (PwD Minister Satish Jarkiholi) ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೆರಡು ವರದಿಗಳು ಕೆಳಗಿನ ಲಿಂಕ್‌ನಲ್ಲಿವೆ
1.ಕಾಂಗ್ರೆಸ್‌ನಲ್ಲೂ ಗುಂಪಿದೆ, ನನ್ನ ಜತೆ ಶಾಸಕರು ಮುಂದೂ ಇರುತ್ತಾರೆ; ಟಿಫನ್ ಪಾಲಿಟಿಕ್ಸ್ ಬಗ್ಗೆ ಸತೀಶ್ ಉತ್ತರ
2.Power Point with HPK : ಜನ ಇರೋವರೆಗೂ ನಮ್ಮ ಕಂಟ್ರೋಲ್‌ನಲ್ಲೇ ಇರುತ್ತೆ ಬೆಳಗಾವಿ: ಜಾರಕಿಹೊಳಿ
5. ಭಾರತ-ಕಿವೀಸ್ ಜಬರ್ದಸ್ತ್ ಫೈಟ್‌ಗೆ ಅಂಗಣ ರೆಡಿ; ಹೇಗಿದೆ ಧರ್ಮಶಾಲಾ ಪಿಚ್?
ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವಕಪ್ ಕಣಕ್ಕೆ ಸಾಕ್ಷಿಯಾಗಲು ಕಾಯುತ್ತಿದೆ. ಎರಡೂ ತಂಡಗಳು ಕೂಟದಲ್ಲಿ ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಪಂದ್ಯಕ್ಕೆ ಭಾರಿ ಮಹತ್ವ ಬಂದಿದೆ. ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಂತಿದೆ.
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ವಿಶ್ವಕಪ್ ಕ್ರಿಕೆಟ್ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
6. ನಕಲಿ ವೋಟರ್ ಐಡಿ ತಯಾರಿ ಆರೋಪ; ಸಚಿವ ಬೈರತಿ ಸುರೇಶ್ ಆಪ್ತ ಸೇರಿ ಮೂವರು ವಶಕ್ಕೆ
ನಕಲಿ ಮತದಾರರ ಗುರುತಿನ ಚೀಟಿ (Fake Voter ID), ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ಗಳನ್ನು ಮಾಡಿಕೊಡುತ್ತಿರುವ ಆರೋಪದಲ್ಲಿ ಸಚಿವ ಬೈರತಿ ಸುರೇಶ್ (Minister Byrati Suresh) ಆಪ್ತ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ರಾಜಸ್ಥಾನದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್; ರಾಜೆ, ಗೆಹ್ಲೋಟ್‌ಗೆ ಯಾವ ಕ್ಷೇತ್ರ?
ರಾಜಸ್ಥಾನದಲ್ಲಿ ನವೆಂಬರ್ 25ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿವೆ. ಬಿಜೆಪಿಯು 83 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ 33 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಯಾರಿಗೆ ಎಲ್ಲಿ ಟಿಕೆಟ್ ಸಿಕ್ಕಿದೆ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಬಿಜೆಪಿ 92 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕುಟುಂಬ ರಾಜಕಾರಣಕ್ಕೆ ಬ್ರೇಕ್
8. ರಾಜತಾಂತ್ರಿಕ ಸಿಬ್ಬಂದಿ ವಿಚಾರದಲ್ಲಿ ಕೆನಡಾ ಪರ ನಿಂತ ಅಮೆರಿಕ, ಬ್ರಿಟನ್; ಡೋಂಟ್ ಕೇರ್ ಎಂದ ಭಾರತ
ರಾಜತಾಂತ್ರಿಕರ ಹೊರಹಾಕುವಿಕೆ (India Canada Row) ವಿಚಾರಕ್ಕೆ ಸಂಬಂಧಿಸಿ ಇದೀಗ ಅಮೆರಿಕ ಹಾಗೂ ಬ್ರಿಟನ್‌ಗಳು ಕೆನಡಾವನ್ನು ಬೆಂಬಲಿಸಿದ್ದು, ಭಾರತ ವಿರುದ್ಧ ತಿರುಗಿಬಿದ್ದಿವೆ. ಆದರೆ ಭಾರತವು ರಾಜತಾಂತ್ರಿಕರ ಆರೋಪವನ್ನು ತಳ್ಳಿ ಹಾಕಿದ್ದು, ಡೋಂಟ್ ಕೇರ್ ಎಂಬ ಸಂದೇಶ ರವಾನಿಸಿದೆ. ಈ ವಿಚಾರದಲ್ಲಿ ಯಾವುದೇ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ರಾವಣ ಪಾತ್ರಕ್ಕಾಗಿ ದಾಖಲೆ ಸಂಭಾವನೆ ಪಡೆದ ರಾಕಿಭಾಯ್ ಯಶ್!
ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ʼಕೆಜಿಎಫ್ 2ʼ ಚಿತ್ರ ಬಿಡುಗಡೆಯಾಗಿ ಸುಮಾರು ಒಂದೂವರೆ ವರ್ಷವಾದರೂ ಯಶ್ ಖದರ್ ಹಾಗೇ ಇದೆ. ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿರುವ ಅವರಿಗೆ ಸಿಕ್ಕಿರುವ ಸಂಭಾವನೆ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಬ್ಲೌಸ್, ಗುಪ್ತಾಂಗ, ಡ್ರೈಪ್ರೂಟ್ಸ್‌ನಲ್ಲಿ ಚಿನ್ನ ಸಾಗಣೆ; ಮೂವರು ಮಹಿಳೆಯರ ಬಂಧನ
ವಿದೇಶದಿಂದ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ಖತರ್ನಾಕ್ ಮಹಿಳೆಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ