1. Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲೊಂದಾದ (Congress Guarantee) ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜಾರಿ ಸಂಬಂಧ ಅರ್ಜಿ ಸಲ್ಲಿಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜುಲೈ 19ರ ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. BJP Karnataka: ಮೇಲೆ ಕುಳಿತು ಆಟ ನೋಡುತ್ತಿರುವ ಬಿಜೆಪಿ ಬಿಗ್ ಬಾಸ್: ಸದನದ ರೇಸ್‌ನಲ್ಲಿ ಗೆದ್ದವನೇ ನಾಯಕ!
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಕಳೆದರೂ ರಾಜ್ಯ ಬಿಜೆಪಿಗೆ (BJP Karnataka) ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭವಾದರೂ ಎರಡೂ ಸದನಗಳಿಗೆ ನಾಯಕನಿಲ್ಲದೆ ʼಸಾಮೂಹಿಕ ನಾಯಕತ್ವʼದಲ್ಲಿ ಬಿಜೆಪಿ ಸದಸ್ಯರು ಭಾಗವಹಿಸುತ್ತಿದ್ದಾರೆ. ಸದನದಲ್ಲಿ ಯಾರು ಪಕ್ಷವನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಮೇಲೆ ಕುಳಿತ ವರಿಷ್ಠರು ನೋಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್
ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್ ರೂಪಿಸಿತ್ತು. ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮಾಡಿದ್ದ 40% ಕಮಿಷನ್ ಆರೋಪವನ್ನೇ ಆಧಾರವಾಗಿಸಿಕೊಂಡು ಪೆಸಿಎಂ ಪೋಸ್ಟರ್‌ಗಳನ್ನು ಬಹಿರಂಗವಾಗಿ ಅಂಟಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Kichcha Sudeep: ಸುದೀಪ್ ಯಾವ ವಿಚಾರಕ್ಕೆ ಕೋರ್ಟ್‌ಗೆ ಹೋಗಿದ್ದಾರೆಂಬುದೇ ಗೊತ್ತಿಲ್ಲ ಎಂದ ನಿರ್ಮಾಪಕ!
ನಟ ಕಿಚ್ಚ ಸುದೀಪ್ (Kichcha Sudeep) ನಿರ್ಮಾಪಕ ಎಮ್ ಎನ್ ಕುಮಾರ್ (MN Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ್ದಾರೆ. ಎಸಿಎಂಎಂ ನ್ಯಾಯಾಲಯಕ್ಕೆ ಕಿಚ್ಚ ಸುದೀಪ್ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಕೇಸ್ ಹೂಡಿದ್ದಾರೆ. ಯಾವ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕೋರ್ಟ್‌ಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಎಮ್ ಎನ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Ganja Seized : 12 ಕೋಟಿ ರೂ. ಗಾಂಜಾ ಸೀಜ್! ಇದು ಪುಷ್ಪ ಸಿನಿಮಾ ರಿಮೇಕ್
ಪುಷ್ಪ ಸಿನಿಮಾ (Pushpa Film) ಮಾದರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧಿಯಾಗಿದ್ದು, ಸುಮಾರು 12 ಕೋಟಿ ಮೌಲ್ಯದ ಗಾಂಜಾ ಜಪ್ತಿ (Ganja Seized) ಮಾಡಲಾಗಿದೆ. ಗೂಡ್ಸ್ ಗಾಡಿಯ ಸೀಕ್ರೇಟ್ ಕಂಪಾರ್ಟ್ಮೆಂಟ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ 1,500 ಕೆ.ಜಿ ಗಾಂಜಾವನ್ನು ಸಿಸಿಬಿ (CCB) ಮಹಿಳಾ ರಕ್ಷಣಾ ದಳ ವಶಪಡಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. KS Eshwarappa : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಫುಲ್ ರಿಲೀಫ್
ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Pateel) ಆತ್ಮಹತ್ಯೆ ಪ್ರಕರಣದಲ್ಲಿ (Contractor suicide case) ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜನಪ್ರತಿನಿಧಿ ನ್ಯಾಯಾಲಯವು (Peoples representative court) ಈ ಆತ್ಮಹತ್ಯೆಯಲ್ಲಿ ಈಶ್ವರಪ್ಪ ಅವರು ಯಾವುದೇ ರೀತಿಯಲ್ಲೂ ಶಾಮೀಲಾಗಿದ್ದಾರೆ ಎಂಬುದಕ್ಕೆ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿ ಉಡುಪಿ ಪೊಲೀಸರು (Udupi police) ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ಅಂಗೀಕರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. PM Modi France Visit: ವಿದೇಶದಲ್ಲಿ ಮೋದಿ ತಮಿಳು ಪ್ರೇಮ; ಫ್ರಾನ್ಸ್‌ನಲ್ಲೂ ವಣಕ್ಕಮ್, ತಲೈವಾ ಪದ ಬಳಕೆ
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಯಾವುದೇ ದೇಶಕ್ಕೆ ಹೋಗಲಿ, ಭಾರತದ ಘನತೆ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಭಾಷೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡುತ್ತಾರೆ. ಅದರಲ್ಲೂ ಇತ್ತೀಚೆಗೆ ಮೋದಿ ಅವರು ಬೇರೆ ದೇಶಗಳಿಗೆ ತೆರಳಿದಾಗ ತಮಿಳುನಾಡಿನ ಭಾಷೆ, ಸಂಸ್ಕೃತಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಫ್ರಾನ್ಸ್‌ನಲ್ಲೂ ಅವರು ತಮಿಳು ಭಾಷೆಯ ಕುರಿತು ಮಾತನಾಡಿರುವುದು ಇದಕ್ಕೆ ನಿದರ್ಶನವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Modi UAE Visit: ಪ್ರಧಾನಿ ಮೋದಿಗೆ ಫ್ರೆಂಡ್ಶಿಪ್ ಬ್ಯಾಂಡ್ ಹಾಕಿದ ಯುಎಇ ಅಧ್ಯಕ್ಷ
8. Rain News: ದೆಹಲಿಯಲ್ಲಿ ವರುಣಾರ್ಭಟ; ಪ್ರವಾಹದ ನೀರಲ್ಲಿ ಸ್ನಾನ ಮಾಡಲು ಹೋದ 3 ಮಕ್ಕಳ ಸಾವು
ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟ ಶನಿವಾರವೂ ಮುಂದುವರಿದಿದೆ. ಯಮುನೆ ಉಕ್ಕಿ ಹರಿಯುತ್ತಿದ್ದು, ನದಿ ನೀರು ಕೆಂಪು ಕೋಟೆಗೆ ನುಗ್ಗಿದೆ. ಸುಪ್ರೀಂ ಕೋರ್ಟ್ ಸಮೀಪವೂ ಪ್ರವಾಹ ಉಂಟಾಗಿದೆ. ಇನ್ನು ಜನರ ಪಾಡಂತೂ ಹೇಳತೀರದಾಗಿದೆ. ಮನೆ ತುಂಬ ನೀರು ತುಂಬಿದೆ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಅಡುಗೆ ಮಾಡಿಕೊಳ್ಳಲು, ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಆಗುತ್ತಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಪ್ರವಾಹದ ನೀರಿನಲ್ಲಿ ಸ್ನಾನ ಮಾಡಲು ಹೋದ ಮೂವರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Bengal Panchayat Polls: ಬಂಗಾಳದಲ್ಲಿ ಹೆಡ್‌ಬುಶ್; 344 ಅಭ್ಯರ್ಥಿಗಳ ಗೆಲುವು ಟಾಸ್ ಮೂಲಕವೇ ನಿರ್ಧಾರ!
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಕೊಲೆ ಮಧ್ಯೆಯೇ ಸ್ಥಳೀಯ ಸಂಸ್ಥೆ ಚುನಾವಣೆ (Bengal Panchayat Polls) ಮುಗಿದಿದೆ. 63,229 ಒಟ್ಟು ಸೀಟುಗಳ ಪೈಕಿ ತೃಣಮೂಲ ಕಾಂಗ್ರೆಸ್ ಒಟ್ಟು 34,901 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಾರ್ಟಿ (BJP) 9,719 ಕ್ಷೇತ್ರ ಗೆದ್ದಿದೆ. ಫಲಿತಾಂಶದ ಬಳಿಕವೂ ಹಿಂಸಾಚಾರ ನಡೆದಿದ್ದು, ಮೂವರ ಹತ್ಯೆಯಾಗಿದೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 344 ಕ್ಷೇತ್ರಗಳ ಫಲಿತಾಂಶವು ಟಾಸ್ ಮೂಲಕವೇ ನಿರ್ಧಾರವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. PRITAM Bull: ಪ್ರವಾಹದಲ್ಲಿ ಸಿಲುಕಿದ ಗೂಳಿಗಳ ರಕ್ಷಣೆ; ಒಂದು ಗೂಳಿ ಬೆಲೆ BMW ಕಾರಿನ ಬೆಲೆಗೆ ಸಮ
ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿ ಜನ-ಜಾನುವಾರುಗಳು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ. ನದಿ ತೀರದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಇಷ್ಟಾದರೂ, ಮಳೆ ಸಂಬಂಧಿತ ಅವಘಡಗಳಿಂದ ಉತ್ತರ ಪ್ರದೇಶದಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (NDRF) ಜನರ ಜತೆಗೆ ಜಾನುವಾರುಗಳನ್ನೂ ರಕ್ಷಿಸಿದ್ದಾರೆ. ಅದರಲ್ಲೂ, ಎನ್‌ಡಿಆರ್‌ಎಫ್ ಸಿಬ್ಬಂದಿಯು ನೊಯ್ಡಾದಲ್ಲಿ ಪ್ರೀತಂ (PRITAM) ಎಂಬ ವಿಶೇಷ ತಳಿಯ ಗುಳಿ ಸೇರಿ ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರೀತಂ (PRITAM Bull) ತಳಿಯ ಒಂದು ಗೂಳಿಯ ಬೆಲೆಯು ಬಿಎಂಡಬ್ಲ್ಯೂ ಕಾರಿನ ಬೆಲೆಗೆ ಸಮವಾಗಿರುವುದು ಅಚ್ಚರಿ ಎನಿಸಿದೆ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.