Site icon Vistara News

ವಿಸ್ತಾರ TOP 10 NEWS: ಗ್ಯಾರಂಟಿಗೆ ಗುರುವಾರದ ಮುಹೂರ್ತದಿಂದ, 10 ಜನರು ಮೃತರಾದ ಕಾರು ಅಪಘಾತವರೆಗಿನ ಪ್ರಮುಖ ಸುದ್ದಿಗಳಿವು

vistara top 10 news Guarantee scheme implementation on thurseday to major accident and more news

vistara top 10 news Guarantee scheme implementation on thurseday to major accident and more news

1. Congress Guarantee: ಬುಧವಾರ ಸೆಮಿ ಫೈನಲ್‌; ಗುರುವಾರ ಫೈನಲ್‌: ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿ?
ಚುನಾವಣೆಗೆ ಮುನ್ನ ಘೋಷಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಮಂಗಳವಾರ ದಿನವಿಡೀ ಮಾರಥಾನ್‌ ಸಭೆಗಳನ್ನು ನಡೆಸಿದರು. ಗೃಹಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳನ್ನು ಚುನಾವಣೆಗೆ ಮುನ್ನ ಘೋಷಿಸಲಾಗಿತ್ತು. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. NPS News : ಗ್ಯಾರಂಟಿಗಳಂತೆ ಓಪಿಎಸ್‌ ಜಾರಿ ಕೂಡ ಸದ್ಯಕ್ಕಿಲ್ಲ; ಸರ್ಕಾರ ಯೋಚಿಸುತ್ತಿರುವುದಾದರೂ ಏನು?
ನೂತನ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೇ, ಇಲ್ಲವೇ ಎಂಬುದರ ಕುರಿತು ರಾಜ್ಯದ ಜನತೆ ಚರ್ಚಿಸುತ್ತಿದ್ದರೆ, ಸರ್ಕಾರಿ ನೌಕರರು ʻಹಳೆಯ ಪಿಂಚಣಿ ಯೋಜನೆʼ (ಓಪಿಎಸ್‌) ಜಾರಿ (NPS News ) ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವು ರಚಿಸಿದ ಟಿ.ವಿ. ಸೋಮನಾಥನ್‌ ಸಮಿತಿಯ ವರದಿ ನೋಡಿಕೊಂಡು ಈ ಕುರಿತು ತೀರ್ಮಾನಿಸುವ ಸಾಧ್ಯತೆಗಳಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Govt: ಬಿಜೆಪಿ ಯೋಜನೆಗಳ ವಿರುದ್ಧ ತನಿಖಾಸ್ತ್ರ ಪ್ರಯೋಗ: ಪರಿಶೀಲನೆ, ತಡೆಗೆ ಮುಂದಾದ ಕಾಂಗ್ರೆಸ್‌ ಸರ್ಕಾರ
ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿತು, 40% ಕಮಿಷನ್‌ ಪಡೆಯುತ್ತಿತ್ತು ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಇದೀಗ ಹಿಂದಿನ ಸರ್ಕಾರದ ಯೋಜನೆಗಳ ಕುರಿತು ತನಿಖೆ ನಡೆಸಲು ಮುಂದಾಗಲಾಗಿದೆ. ಲೋಕಸಭೆ ಚುನಾವಣೆಗೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೊಸ ಸರ್ಕಾರದ ಯೋಜನೆಗಳಿಗೆ ಹಣ ಹೊಂದಿಸಬೇಕಿರುವುದರಿಂದಲೂ ಹಳೆಯ ಯೋಜನೆಗಳಿಗೆ ಕೊಕ್ಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಪ್ರವಾಸಕ್ಕೆಂದು ಖುಷಿಯಿಂದ ಮೈಸೂರಿಗೆ ಬಂದು ಶವವಾದರು; ಒಂದೇ ಕುಟುಂಬದ 10 ಮಂದಿ ದುರ್ಮರಣ
 ಕೊಳ್ಳೆಗಾಲ-ಟಿ.ನರಸಿಪುರ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತವಾಗಿದ್ದು (Road Accident), ಮಗು ಸೇರಿ, ಒಂದೇ ಕುಟುಂಬದ 10 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲ ಬಳ್ಳಾರಿ ಮೂಲದವರಾಗಿದ್ದು, ಇನ್ನೋವಾ ಕಾರಿನಲ್ಲಿ ಪ್ರವಾಸಕ್ಕೆಂದು ಮೈಸೂರಿನ ಕಡೆಗೆ ಬಂದಿದ್ದರು. ಇವರ ಕಾರಿಗೆ ಕುರುಬೂರು ಗ್ರಾಮದ ಪಿಂಜರ ಪೋಲ್​​ ಎಂಬಲ್ಲಿ ಖಾಸಗಿ ಬಸ್​ ಡಿಕ್ಕಿಯಾಗಿದೆ. ಕಾರು ನುಜ್ಜುಗುಜ್ಜಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Delhi Murder: ಹಿಂದು ಬಾಲಕಿಗೆ 40 ಬಾರಿ ಇರಿದು, 20 ಸಲ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದ ಮುಸ್ಲಿಂ ಯುವಕ
ರಾಷ್ಟ್ರ ರಾಜಧಾನಿಯಲ್ಲಿ ಪ್ರಿಯತಮನಿಂದಲೇ ಹಿಂದು ಯುವತಿ ಶ್ರದ್ಧಾ ವಾಳ್ಕರ್‌ ಹತ್ಯೆಯಾದ ಬೆನ್ನಲ್ಲೇ ಮತ್ತೊಂದು ಭೀಕರ ಹತ್ಯೆ ನಡೆದಿದೆ. 16 ವರ್ಷದ ಹಿಂದು ಬಾಲಕಿಗೆ ಆಕೆಯ ಬಾಯ್‌ಫ್ರೆಂಡ್‌ (Delhi Murder) ಸುಮಾರು 40 ಬಾರಿ ಚಾಕು ಇರಿದು, 20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ, ಒದ್ದು ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೂರವಾಗಿ ಹತ್ಯೆ ಮಾಡಿರುವ ವಿಡಿಯೊ ಈಗ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. 9 Years of PM Modi: ಮೋದಿ ಸರ್ಕಾರದಿಂದ ಅಭಿವೃದ್ಧಿಯ ಸಾಕಾರ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತ ಸರ್ಕಾರ ತಮ್ಮದೆಂದು ನರೇಂದ್ರ ಮೋದಿಯವರು ನಂಬಿದ್ದು, ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. 9 Years of PM Modi : ಮೋದಿ ಸರ್ಕಾರದ ಸಾಧನೆ ಬಗ್ಗೆ ವಿತ್ತ ಸಚಿವೆ ನಿರ್ಮಲಾ ರಿಪೋರ್ಟ್‌ ಕಾರ್ಡ್‌ನಲ್ಲಿ ಏನಿದೆ?
ಕೇಂದ್ರ ಸರ್ಕಾರ ಹಣದುಬ್ಬರ ಹೆಚ್ಚಳವಾಗಲು ಬಿಡುವುದಿದಲ್ಲ. ಈಗಾಗಲೇ ಬೆಲೆ ಏರಿಕೆ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದು ( 9 Years of PM Modi ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಬಯಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ಎಲ್ಲ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಹಣದುಬ್ಬರ ಇಳಿಮುಖವಾಗುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Water Contamination : ರಾಯಚೂರಲ್ಲಿ ಮುಂದುವರಿದ ಕಲುಷಿತ ನೀರು ಸೇವನೆ ಪ್ರಕರಣ; ಮತ್ತೆ 8 ಮಂದಿ ಅಸ್ವಸ್ಥ
ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣವು (Water contamination) ಮುಂದುವರಿದಿದೆ. ಲಿಂಗಸುಗೂರು ತಾಲೂಕಿನ ಜೂಲಗುಡ್ಡ ಗ್ರಾಮದಲ್ಲೂ ಕಲುಷಿತ ನೀರು ಕುಡಿದು 8 ಮಂದಿ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ವಿಶೇಷ ಗೌರವ ಸೂಚಿಸಿ ಧೋನಿ ನಿವೃತ್ತಿ ಸುಳಿವು ನೀಡಿದ ಬಿಸಿಸಿಐ
ಈ ಬಾರಿಯ ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ಅವರ ವಿದಾಯದ ಸುದ್ದಿ ಎಲ್ಲರನ್ನೂ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಧೋನಿ ಮಾತ್ರ ಈ ವಿಚಾರವನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಈ ಬಾರಿ ಧೋನಿ ಅವರು ಫೈನಲ್​ ಬಳಿಕ ನಿವೃತ್ತಿ ನೀಡುವುದು ಪಕ್ಕಾ ಎನ್ನುತ್ತಿದ್ದರು. ಇದೀಗ ಬಿಸಿಸಿಐ ಧೋನಿಗೆ ವಿಶೇಷ ಗೌರವ ಸೂಚಿಸಿದ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಧೋನಿ ಅವರ ವಿದಾಯದ ಸುಳಿವನ್ನು ಬಿಟ್ಟುಕೊಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Ambareesh Birthday: ಅಂಬರೀಶ್‌ ಹುಟ್ಟು ಹಬ್ಬಕ್ಕೆ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರತಂಡದಿಂದ ಸ್ಪೆಷಲ್‌ ಗಿಫ್ಟ್‌!
ಮೇ 29 ಅಂಬರೀಶ್‌ ಅವರ 71ನೇ ಜನುಮದಿನ (Ambareesh Birthday). ಕನ್ನಡದಲ್ಲಿ ಮಾತ್ರವಲ್ಲದೆ ಅಂಬರೀಸ್ ಅವರು ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಅಪಾರ ಸ್ನೇಹ ಬಳಗ ಹೊಂದಿದ್ದರು. ರಾಜಕೀಯದಲ್ಲಿಯೂ ಗುರುತಿಸಿಕೊಂದ್ದರು. ಇದೀಗ ಅಂಬಿ ಹುಟ್ಟುಹಬ್ಬಕ್ಕೆ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರತಂಡ ವಿಡಿಯೊ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version