Site icon Vistara News

Vistara Top 10 News: ಎಚ್‌ಡಿಕೆ ಪೆನ್‌ಡ್ರೈವ್‌ ವಾರ್‌ನಿಂದ, ಬೆಂಗಳೂರಿನಲ್ಲಿ ಮಳೆ ವಾರ್ನಿಂಗ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news HD brings pen drive to assembly to bengaluru rain alert and more news of the day

1. Karnataka Politics: ಇಂಧನ ಇಲಾಖೆಯಲ್ಲಿ 10 ಕೋಟಿ ರೂ.ಗೆ ಒಂದು ಟ್ರಾನ್ಸ್‌ಫರ್‌: ಪೆನ್‌ಡ್ರೈವ್‌ ಹಿಡಿದೇ ಸದನಕ್ಕೆ ಬಂದ HDK
ರಾಜ್ಯ ಸರ್ಕಾರದ (Karnataka Politics) ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮುಂದುವರಿಸಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಈ ಬಾರಿ ಭ್ರಷ್ಟಾಚಾರದ ದಾಖಲೆಯಾಗಿ ಆಡಿಯೋ ಫೈಲ್‌ ಇರುವ ಪೆನ್‌ಡ್ರೈವ್‌ ಹಿಡಿದೇ ಸದನಕ್ಕೆ ಆಗಮಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Assembly Session: ನಿಲುವಳಿಯನ್ನು 69ಕ್ಕೆ ಬದಲಿಸಿದ ಸ್ಪೀಕರ್‌: ಗ್ಯಾರಂಟಿ ಚರ್ಚೆಯಲ್ಲಿ ಬಿಜೆಪಿ ವಿರುದ್ಧ ಸರ್ಕಾರಕ್ಕೆ ಮೇಲುಗೈ
ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಹಾಗೂ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವಿಧಾನಸಭೆಯಲ್ಲಿ (Assembly Session) ನಿಯಮ 61ರ ಅಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಸ್ಪೀಕರ್‌ ಯು.ಟಿ. ಖಾದರ್‌ ತಳ್ಳಿಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Text Revision : 7ನೇ ಕ್ಲಾಸ್‌ ಪಠ್ಯದಲ್ಲಿ ಮತ್ತೆ ಬಂತು ಏಸು ಕ್ರಿಸ್ತ, ಇಸ್ಲಾಮಿಕ್‌ ಸಾಮ್ರಾಜ್ಯದ ಕಥೆ
ರಾಜ್ಯದಲ್ಲಿ ಪಠ್ಯ ಪುಸ್ತಕ (Text book Controversy) ವಿಷಯದಲ್ಲಿ ಧರ್ಮ ದಂಗಲ್‌ (Dharma Dangal) ಮುಗಿಯುವಂತೆ ಕಾಣುತ್ತಿಲ್ಲ. ಬದಲಾಗಿ ಅದು ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ (Rohit Chakratheertha) ಅವರ ನೇತೃತ್ವದಲ್ಲಿ ನಡೆದ ಪಠ್ಯ ಪರಿಷ್ಕರಣೆಯಲ್ಲಿ (Text Revision) ಆರೆಸ್ಸೆಸ್‌ ಸಂಬಂಧಿತ, ಹಿಂದುತ್ವ ಸಂಬಂಧಿತ ವಿಚಾರಗಳನ್ನು ಅನಗತ್ಯವಾಗಿ ತುರುಕಲಾಗಿದೆ ಎಂದು ಕಾಂಗ್ರೆಸ್‌ ಆಪಾದಿಸಿತ್ತು. ಈಗ ಹಳೆ ಪಠ್ಯ ತೆಗೆದು ಹೊಸ ವಿಷಯಗಳನ್ನು ಸೇರಿಸಿರುವ ಕಾಂಗ್ರೆಸ್‌ ಸರ್ಕಾರ ಏಳನೇ ತರಗತಿ ಪಠ್ಯದಲ್ಲಿ ಹಿಂದೆ ಇದ್ದ ಏಸು ಕ್ರಿಸ್ತರ ಬೋಧನೆಗಳು, ಇಸ್ಲಾಮಿಕ್‌ ಸಾಮ್ರಾಜ್ಯದ ಕಥೆಗಳನ್ನು ಮತ್ತೆ ಪಠ್ಯವಾಗಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ
ಕೊನೆಗೂ ರಾಜ್ಯದಲ್ಲಿ ಮುಂಗಾರು ಮಳೆ ಪರ್ವ ಆರಂಭವಾಗಿದೆ. ಒಂದು ತಿಂಗಳ ಕಣ್ಣಾ ಮುಚ್ಚಾಲೆ ಬಳಿಕ ವರುಣ ತನ್ನ ಅಬ್ಬರವನ್ನು ಪ್ರಾರಂಭಿಸಿದ್ದಾನೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಕೆಲವು ಕಡೆ ಬಿರುಗಾಳಿ, ಗುಡುಗು-ಸಿಡಿಲುಗಳೊಂದಿಗೆ ಮಳೆ ಸುರಿಯುತ್ತಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆಯು ಗುರುವಾರ (ಜೂನ್‌ 6) ಭರ್ಜರಿ ಗಾಳಿಯೊಂದಿಗೆ ಬೀಸಲಿದೆ ಎಂದು ಹವಾಮಾನ ಇಲಾಖೆ (Weather Report) ತನ್ನ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!

5. NCP Crisis: ‘ಪವರ್​‘ಯಾರದ್ದು?; ಶರದ್ ಪವಾರ್ ಫೋಟೋ ಇಟ್ಕೊಂಡೇ ಸಭೆ ಮಾಡಿದ ಅಜಿತ್​ ಪವಾರ್​!
ಮಹಾರಾಷ್ಟ್ರದಲ್ಲಿ ಎನ್​ಸಿಪಿಯಲ್ಲಿ (NCP Crisis) ಒಡಕು ಮೂಡಿ, ಶರದ್ ಪವಾರ್ (Sharad Pawar) ಬಣ ಮತ್ತು ಅಜಿತ್ ಪವಾರ್ (Ajit Pawar) ಬಣವಾಗಿ ಇಬ್ಭಾಗವಾಗಿದೆ. ಯಾರ ಬಣಕ್ಕೆ ಎಷ್ಟು ಶಾಸಕರು/ಸಂಸದರ ಬಲ ಎಂಬುದನ್ನು ನಿರ್ಧರಿಸುವ ಸಭೆಗಳು ಇಂದು ನಡೆದಿದ್ದವು. ಅದರಲ್ಲೀಗ ಅಜಿತ್ ಪವಾರ್​ ಬಣ ನಡೆಸಿದ ಸಭೆಯಲ್ಲಿ ಎನ್​ಸಿಪಿಯ 53 ಶಾಸಕರಲ್ಲಿ 29 ಶಾಸಕರು, ನಾಲ್ವರು ಎಂಎಲ್​ಸಿಗಳು ಪಾಲ್ಗೊಂಡಿದ್ದರು. ಹಾಗೇ, ಶರದ್​ ಪವಾರ್ ನೇತೃತ್ವದ ಸಭೆಯಲ್ಲಿ 13 ಶಾಸಕರಷ್ಟೇ ಪಾಲ್ಗೊಂಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Data Protection Bill: ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕಕ್ಕೆ ಗ್ರೀನ್‌ ಸಿಗ್ನಲ್‌; ಏನಿದು ಬಿಲ್‌? ಏಕೆ ನಮಗೆಲ್ಲ ಪ್ರಮುಖ?
ದೇಶದ ಪ್ರತಿಯೊಬ್ಬ ನಾಗರಿಕರ ಡಿಜಿಟಲ್‌ ಡೇಟಾ ರಕ್ಷಣೆ ದಿಸೆಯಲ್ಲಿ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ ವಿಧೇಯಕಕ್ಕೆ (Data Protection Bill) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ. ಜುಲೈ 20ರಿಂದ ಆರಂಭವಾಗುವ ಸಂಸತ್‌ ಮುಂಗಾರು ಅಧಿವೇಶನದಲ್ಲಿಯೇ ನೂತನ ವಿಧೇಯಕವನ್ನು ಮಂಡಿಸಲಾಗುತ್ತದೆ. ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಕಾಯ್ದೆ ರೂಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Karnataka Politics: ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಸಿಡಿದೆದ್ದ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘ
ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದ ಕರ್ನಾಟಕ ಸ್ಟೇಟ್‌ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಇದೀಗ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಸಿಡಿದೆದ್ದಿದೆ. ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ಗುತ್ತಿಗೆದಾರರ ಬಿಲ್‌ ಪಾವತಿ ಮಾಡುತ್ತಿಲ್ಲ ಎಂದಿರುವ ಸಂಘ, ಈ ಕುರಿತು ನಿರ್ಧಾರ ಕೈಗೊಳ್ಳಲು ಜುಲೈ 15ರ ಗಡುವು ನೀಡಿದೆ.(Karnataka Politics). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Demolition Drive: ಹಿಂದು ಯುವತಿಯ ರೇಪ್‌ & ಮರ್ಡರ್, ಸಿಕಂದರ್‌ ಖಾನ್‌ ಮನೆ ಉಡೀಸ್‌ ಮಾಡಿದ ಯೋಗಿ ಸರ್ಕಾರ
ಉತ್ತರ ಪ್ರದೇಶದ ಫತೇಪುರದಲ್ಲಿ ಹಿಂದು ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಕಂದರ್‌ ಖಾನ್‌ (ಸೋನು) ಮನೆಯನ್ನು (Demolition Drive) ಧ್ವಂಸಗೊಳಿಸಲಾಗಿದೆ. ಸಿಕಂದರ್‌ ಖಾನ್‌ ಮನೆಯನ್ನು ಎರಡನೇ ಬಾರಿ ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಲಾಗಿದೆ. ಇದಕ್ಕೂ ಮೊದಲು ಜೂನ್‌ 27ರಂದು ಮನೆ ಕೆಡವಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Viral News: ಪ್ರೀತಿಗೆಲ್ಲಿ ಗಡಿ? ಪ್ರಿಯಕರನ ಅರಸಿ 4 ಮಕ್ಕಳ ಜತೆ ಪಾಕ್‌ನಿಂದ ಭಾರತಕ್ಕೆ ಬಂದ ಮಹಿಳೆ, ಮುಂದೇನಾಯ್ತು?
ಪ್ರೀತಿಗೆ ಭಾಷೆ, ವಯಸ್ಸು, ಪ್ರದೇಶ ಎಂಬ ಗಡಿ ಇಲ್ಲ ಎಂಬ ಮಾತಿದೆ. ಅದರಲ್ಲೂ, ಆನ್‌ಲೈನ್‌ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೇ ಯುವಕ-ಯುವತಿಯರ ಮಧ್ಯೆ ಪ್ರೀತಿ ಟಿಸಿಲೊಡೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಆನ್‌ಲೈನ್‌ನಲ್ಲಿ ಪಬ್ಜಿ ಆಡುವಾಗ ಶುರುವಾದ ಸ್ನೇಹವು, ಪ್ರೀತಿಗೆ ತಿರುಗಿ ಮಹಿಳೆಯೊಬ್ಬರು ಪ್ರಿಯಕರನನ್ನು ಅರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಈ ಅಮರ ಪ್ರೇಮ ಕತೆಯು ಸಾಮಾಜಿಕ ಜಾಲತಾಣಗಳಲ್ಲಿ (Viral News) ಭಾರಿ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Bitcoin Scam : SIT ತನಿಖೆ ಆದೇಶದ ಬೆನ್ನಿಗೇ ಶ್ರೀಕಿ ವಿರುದ್ಧ ಚಾರ್ಜ್‌ಶೀಟ್‌ ಹಾಕಿದ ಇ.ಡಿ
ಕರ್ನಾಟಕದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ (BJP Government Period) ನಡೆದ ಬಿಟ್‌ ಕಾಯಿನ್‌ ಹಗರಣದ (Bitcoin Scam) ಬಗ್ಗೆ ಕಾಂಗ್ರೆಸ್‌ ಸರ್ಕಾರ (Congress Government) ಎಸ್‌ಐಟಿ ತನಿಖೆಗೆ (SIT Investigation) ಆದೇಶ ನೀಡಿದ ಬೆನ್ನಿಗೇ ಜಾರಿ ನಿರ್ದೇಶನಾಲಯವೂ (Enforcement directorate) ಕಣಕ್ಕಿಳಿದಿದೆ. ಪ್ರಧಾನ ಆರೋಪಿ ಹ್ಯಾಕರ್‌ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ (Hacker Sriki) ಮತ್ತು 19 ಮಂದಿಯ ವಿರುದ್ಧ ಜಾರ್ಜ್‌ಶೀಟ್‌ (Chargesheet) ಸಲ್ಲಿಸಿದೆ. 2019ರಲ್ಲಿ ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್‌ ಘಟಕವನ್ನು (E-Governance Unit) ಹ್ಯಾಕ್‌ ಮಾಡಿ 11.5 ಕೋಟಿ ರೂ. ಕಳವು ಮಾಡಿದ ಪ್ರಕರಣದಲ್ಲಿ ಜಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version