Site icon Vistara News

Vistara Top 10 News: ಸಿಎಂ ಕಚೇರಿ ವಿರುದ್ಧ HDK ಆರೋಪದಿಂದ, ಬಿಟ್‌ ಕಾಯಿನ್‌ ಫೈಲ್‌ ಪುನಃ ತೆರೆದ ಸರ್ಕಾರದವರೆಗಿನ ಪ್ರಮುಖ ಸುದ್ದಿಗಳಿವು

vistara top 10 news HD Kumaraswamy alleges corruption charges against cm office to govt reopens bit coin case and more news

1. Karnataka Politics: 40 ದಿನದ ಕಾಂಗ್ರೆಸ್‌ ಸರ್ಕಾರದ ವಿರುದ್ಧ HDK ಬಾಂಬ್‌: ಸಿಎಂ ಕಚೇರಿಯಲ್ಲಿ 30 ಲಕ್ಷ ರೂ. ಬೇಡಿಕೆ ಇಟ್ಟವರಾರು?
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತ ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಇನ್ನೂ 40 ದಿನಗಳಷ್ಟೆ ಆಗಿದ್ದು, ಸರ್ಕಾರದ (Karnataka Politics) ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪವನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. BJP Karnataka: ಪ್ರತಿಪಕ್ಷ ನಾಯಕನಿಗೆ ʼನಾಳೆ ಬಾʼ ಎಂದ ಬಿಜೆಪಿ: ಶಾಸಕಾಂಗ ಪಕ್ಷದ ಸಭೆ ಮತ್ತೆ ಮುಂದೂಡಿಕೆ
ವಿಧಾನಮಂಡಲ ಅಧೀವೇRಶನ ಆರಂಭವಾದರೂ ಪ್ರತಿಪಕ್ಷ ನಾಯಕನ ಸ್ಥಾನ ಘೋಷಣೆ ಮಾಡುವಲ್ಲಿ ಬಿಜೆಪಿ (BJP Karnataka) ವಿಫಲವಾಗಿದೆ. ಈಗಾಗಲೆ ಗೊಂದಲದ ಗೂಡಾಗಿರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯೇ ನಡೆಸಲು ಆಗುತ್ತಿಲ್ಲ. ಇದೀಗ ಮೂರು ದಿನದಲ್ಲಿ ಸತತ ಎರಡನೇ ಬಾರಿ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Karnataka: ಗೊಂದಲ ಇಲ್ಲ ಎಂದ ಬಿ.ಎಸ್‌. ಯಡಿಯೂರಪ್ಪ; ಸದನದಲ್ಲಿ ಅಶ್ವತ್ಥನಾರಾಯಣ-ಯತ್ನಾಳ್‌ ಗುಸುಗುಸು ಗುಟ್ಟೇನು?

3.Bitcoin Scam : ಬಿಟ್‌ ಕಾಯಿನ್‌ ಹಗರಣ ಮರುತನಿಖೆಗೆ ಸರ್ಕಾರ ಆದೇಶ ; ಬಿಜೆಪಿಗೆ ನಡುಕ?
ಹಿಂದಿನ ಬಿಜೆಪಿ ಸರ್ಕಾರದ ಹಲವು ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ ಎನ್ನಲಾದ ಬಿಟ್‌ ಕಾಯಿನ್‌ ಹಗರಣದ (Bitcoin scam) ಮರು ತನಿಖೆಗೆ ರಾಜ್ಯ ಸರ್ಕಾರದ (State Government) ಆದೇಶ ನೀಡಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳಾ ಮಹೇಶ್‌ ಕರ್ಭೀಕರ್‌, ವಂಶಿಕೃಷ್ಣ ಮತ್ತು ಅನೂಪ್‌ ಶೆಟ್ಟಿ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ (Special Investigation team- SIT) ರಚಿಸಲಾಗಿದ್ದು, ಅದು ತನಿಖೆಯನ್ನು ನಡೆಸಲಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (G Parameshwar) ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Assembly Session: ಸದನ ವರದಿಗೆ ಮಾಧ್ಯಮ ನಿರ್ಬಂಧ; 50 ಲಕ್ಷ ರೂ.ಗೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ ಸಚಿವಾಲಯ
ಕರ್ನಾಟಕ ವಿಧಾನಮಂಡಲ ವರದಿಗಾರಿಕೆಯನ್ನು ಮಾಡಲು ಖಾಸಗಿ ಸುದ್ದಿ ಸಂಸ್ಥೆಗಳ ಕ್ಯಾಮೆರಾವನ್ನು ನಿರ್ಬಂಧಿಸಿರುವ ವಿಧಾನಸಭೆ ಸಚಿವಾಲಯ ಇದೀಗ ಕಾರ್ಯಕಲಾಪ (Assembly Session) ಚಿತ್ರೀಕರಣಕ್ಕೆ 50 ಲಕ್ಷ ರೂ. ವ್ಯಯಿಸಲು ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Assembly Session: ಹಸಿದವರಿಗೆ ಅನ್ನ ನೀಡದವರು ಜನದ್ರೋಹಿಗಳು: ರಾಜ್ಯಪಾಲರ ಮೂಲಕ ಕೇಂದ್ರಕ್ಕೆ ಚಾಟಿ ಬೀಸಿದ ಸಿದ್ದು ಸರ್ಕಾರ
ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ನೀಡಿದ ಗ್ಯಾರಂಟಿ ಯೋಜನೆಗಳು ಈಗಾಗಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ರಾಜಕೀಯ ಕದನಕ್ಕೆ ಸಾಕ್ಷಿ ಆಗಿರುವುದು ಹಳೆಯ ವಿಚಾರ. ಆದರೆ ರಾಜ್ಯ ಸರ್ಕಾರದ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನುವುದು ರಾಜ್ಯಪಾಲರ ಅಂಗಳವನ್ನೂ ತಲುಪಿದ್ದು, ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದೇಶಿಸಿ(Assembly Session) ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Maharashtra Politics: ಅಜಿತ್‌ ಪವಾರ್‌ ವಿರುದ್ಧ ಸಮರ; 9 ಶಾಸಕರ ಮೇಲೆ ಎನ್‌ಸಿಪಿ ಅನರ್ಹತೆ ಅಸ್ತ್ರ
ಮಹಾರಾಷ್ಟ್ರದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು (Maharashtra Politics) ಎನ್‌ಸಿಪಿ ಮುಂದಾಗಿದೆ. ಭಾನುವಾರ ಏಕಾಏಕಿ ಮೈತ್ರಿ ಸರ್ಕಾರಕ್ಕೆ ಬೆಂಬಲಿಸಿದ ಅಜಿತ್‌ ಪವಾರ್‌, ಎಂಟು ಶಾಸಕರೊಂದಿಗೆ ತೆರಳಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಎಂಟು ಶಾಸಕರು ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ಇವರ ವಿರುದ್ಧ ಎನ್‌ಸಿಪಿಯು ಅನರ್ಹತೆಯ ಅರ್ಜಿ ಸಲ್ಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Narendra Modi: ಮೋದಿ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಡ್ರೋನ್‌ ಹಾರಾಟ; ಸಂಚಿನ ಶಂಕೆ, ತೀವ್ರ ತನಿಖೆ
ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಿವಾಸದ ಮೇಲೆ ಶಂಕಾಸ್ಪದವಾಗಿ ಡ್ರೋನ್‌ ಹಾರಾಟ ನಡೆಸಿದ್ದು, ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಗಿನ ಜಾವ 5.30ರ ಸುಮಾರಿಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಮೇಲೆ ಡ್ರೋನ್‌ ಹಾರಾಟ ನಡೆಸಿರುವುದನ್ನು ಮೋದಿ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿಶೇಷ ರಕ್ಷಣಾ ದಳದ ಅಧಿಕಾರಿಗಳು ನೋಡಿದ್ದಾರೆ. ಇದಾದ ಕೂಡಲೇ ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಡ್ರೋನ್‌ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Opposition Meet: ಎನ್‌ಸಿಪಿ ಬಿಕ್ಕಟ್ಟಿನ ನಡುವೆ ಜುಲೈ 17, 18ರಂದು ಬೆಂಗಳೂರಲ್ಲಿ ಪ್ರತಿಪಕ್ಷಗಳ ಸಭೆ
2024ರ ಲೋಕಸಭೆ ಚುನಾವಣೆಯನ್ನು ಒಂದಾಗಿ ಎದುರಿಸಲು ಮುಂದಾಗಿರುವ ಪ್ರತಿಪಕ್ಷಗಳು ಇತ್ತೀಚೆಗಷ್ಟೇ ಬಿಹಾರದ ಪಾಟ್ನಾದಲ್ಲಿ (Patna) ಸಭೆ ನಡೆಸಿದ್ದವು(Opposition Meet). ಈಗ ಮತ್ತೊಂದು ಸಭೆಯನ್ನು ಪ್ರತಿಪಕ್ಷಗಳು ಜುಲೈ 17, 18ರಂದು ಬೆಂಗಳೂರಲ್ಲಿ (Bengaluru) ನಡೆಸಲು ಮುಂದಾಗಿವೆ. ವಾಸ್ತವದಲ್ಲಿ ಈ ಸಭೆಯನ್ನು ಜುಲೈ 13, 14ರಂದು ಸಭೆ ನಡೆಸಲು ಮುಂದಾಗಿದ್ದವು. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಪ್ರತಿಪಕ್ಷಗಳು ಹೆಳಿದ್ದವು. ಅಂತಿಮವಾಗಿ ಸಭೆಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer: France Riots: ಫ್ರಾನ್ಸ್‌ ಹೊತ್ತಿ ಉರಿಯುತ್ತಿರುವುದೇಕೆ?
ಅರಬ್‌ ಮೂಲದ ಯುವಕನೊಬ್ಬನ್ನು ಪೊಲೀಸನೊಬ್ಬ ಕೊಂದುದೇ ಮೂಲವಾಗಿ, ಫ್ರಾನ್ಸ್‌ನಾದ್ಯಂತ ಗಲಭೆಗಳು ಭುಗಿಲೆದ್ದಿವೆ. ಜಗತ್ತಿನ ಗಮನ ಸೆಳೆದಿರುವ ಈ ಬೆಳವಣಿಗೆಯ ಬಗ್ಗೆ ವಿವರವಾದ ನೋಟ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ಮಹಿಳಾ ಟೀಚರ್‌ ಜತೆ ಓಡಿ ಹೋದ 17 ವರ್ಷದ ಬಾಲಕಿ, ಇಲ್ಲೂ ಲವ್‌ ಜಿಹಾದ್‌ ಶಂಕೆ
ಮುಸ್ಲಿಂ ಹುಡುಗ ಹಾಗೂ ಹಿಂದು ಹುಡುಗ ಪ್ರೀತಿಯಲ್ಲಿ ಬಿದ್ದರೆ, ಅವರಿಬ್ಬರೂ ಓಡಿ ಹೋದರೆ, ಹಿಂದು ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಅದನ್ನು ಲವ್‌ ಜಿಹಾದ್‌ ಎಂದು ಆರೋಪಿಸಲಾಗುತ್ತದೆ. ಆದರೆ, ರಾಜಸ್ಥಾನದ ಬಿಕಾನೇರ್‌ನಲ್ಲಿ ಮಹಿಳಾ ಟೀಚರ್‌ ಜತೆ 17 ವರ್ಷದ ಬಾಲಕಿಯು ಓಡಿಹೋಗಿದ್ದು, ಇಲ್ಲೂ ಲವ್‌ ಜಿಹಾದ್‌ ಇದೆ ಎಂದು ಬಾಲಕಿಯ ಕುಟುಂಬಸ್ಥರು (Viral News) ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version