Site icon Vistara News

ವಿಸ್ತಾರ TOP 10 NEWS : ಜೋಶಿ ವಿರುದ್ಧ ಎಚ್‌ಡಿಕೆ ʼಬ್ರಾಹ್ಮಣʼ ಹೇಳಿಕೆಯಿಂದ, ಯುದ್ಧೋತ್ಸಾಹಿ ಮುಷರಫ್‌ ನಿಧನದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-hdk-kumaraswamy-statement-over-brahmin-to-parvez-musharraf-death-and-more-news-of-the-day

#image_title

1. ಶೃಂಗೇರಿ ಮಠವನ್ನು ಒಡೆದ, ಮಹಾತ್ಮಾ ಗಾಂಧಿಯನ್ನು ಕೊಂದ ಬ್ರಾಹ್ಮಣರು ಇವರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ
ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಕುರಿತು ಟೀಕೆ ಮಾಡಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಲ್ಹಾದ ಜೋಶಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಇವರು ಶೃಂಗೇರಿ ಮಠವನ್ನು ಒಡೆದ ಹಾಗೂ ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ಮಹಾರಾಷ್ಟ್ರದ ಬ್ರಾಹ್ಮಣರು ಎಂದು ಹರಿಹಾಯ್ದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಪ್ರಲ್ಹಾದ ಜೋಶಿಯವರಿಗೆ ಸಿಎಂ ಆಗುವ ಅರ್ಹತೆ ಇದೆ: ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿದ ಸಿ.ಟಿ. ರವಿ
ಹೆಚ್ಚಿನ ಓದಿಗಾಗಿ: ಜಾತಿ ಮಾತುಗಳು ರಾಜಕಾರಣದಲ್ಲಿ ಅಪ್ರಸ್ತುತ: ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

2. Modi In Karnataka : ಸೋಮವಾರ ದಿನಪೂರ್ತಿ ಮೋದಿ ಹವಾ: ಒಂದೇ ದಿನ ಆರು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ
ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕರ್ನಾಟಕ ಪ್ರವಾಸ (Modi In Karnataka) ಮಾಡಲಿದ್ದು, ಒಂದೇ ದಿನ ಆರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election : ಬಿಜೆಪಿ ಶೀಘ್ರದಲ್ಲೇ ಕೋಮು ಗಲಭೆ ಮಾಡಿಸಲಿದೆ: ಸಂಸದ ಡಿ.ಕೆ. ಸುರೇಶ್‌ ಹೇಳಿಕೆ
ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಕೋಮುಗಲಭೆಯನ್ನು ನಡೆಸಲು ಬಿಜೆಪಿಯು ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ತಿಳಿಸಿದ್ದಾರೆ. ಸಿ.ಟಿ. ರವಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ (Karnataka Election) ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಡಿ.ಕೆ. ಶಿವಕುಮಾರ್‌ಗೆ ಎರಡು ಕುಕ್ಕರ್‌ ಮೇಲೆ ಪ್ರೀತಿ; ಒಂದು ಮಂಗಳೂರು ಇನ್ನೊಂದು ಬೆಳಗಾವಿ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ

4. Lok Sabha Election 2024: ಬಿಜೆಪಿಗೆ 400 ಸೀಟು ಗೆಲ್ಲುವ ಟಾರ್ಗೆಟ್, ಈಗಿನಿಂದಲೇ ತಯಾರಿ ಶುರು
ಎರಡು ಅವಧಿಯಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿ(BJP), 2024ರ ಚುನಾವಣೆಯಲ್ಲಿ 400 ಲೋಕಸಭೆ ಕ್ಷೆತ್ರಗಳನ್ನು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾಪನಗಳನ್ನು ಗೆದ್ದುಕೊಂಡಿತ್ತು. 2024ರ ಚುನಾವಣೆಯಲ್ಲಿ 400 ಸ್ಥಾನಗಳ್ನು ಗೆಲ್ಲುವುದಕ್ಕಾಗಿ ಬಿಜೆಪಿಯು (Lok Sabha Election 2024) ಈಗನಿಂದಲೇ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Chinese Apps Ban: ಚೀನಿ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಸಾಲ ನೀಡಿಕೆ ಆ್ಯಪ್ ನಿಷೇಧಿಸಿದ ಭಾರತ
ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್ ಆ್ಯಪ್ ಮತ್ತು 94 ಲೋನ್ ಲೆಂಡಿಂಗ್ ಆ್ಯಪ್‌ಗಳನ್ನು ಭಾರತ ಸರ್ಕಾರವು ನಿಷೇಧಿಸಿದೆ. ಕಳೆದ ಎರಡು ವರ್ಷದಿಂದ ಭಾರತ ಸರ್ಕಾರವು, ಭದ್ರತೆಯ ದೃಷ್ಟಿಯಿಂದ ಚೀನಾ ಮೂಲದ ಅನೇಕ ಆ್ಯಪ್‌ಗಳನ್ನು ನಿಷೇಧಿಸುತ್ತಾ ಬಂದಿದೆ. ಇದೀಗ ಆ ಪಟ್ಟಿಗೆ ಮತ್ತೆ 232 ಆ್ಯಪ್‌ಗಳು ಸೇರ್ಪಡೆಯಾಗಿವೆ(Chinese Apps Ban). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Pervez Musharraf Died: ಮುಷರಫ್‌ ಸಾವಿಗೆ ಕಾರಣವಾದ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ(Pervez Musharraf Died). ಕಳೆದ ಕೆಲವು ತಿಂಗಳಿನಿಂದ ಅವರು ಯುಎಇನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾದರೆ ಮುಷರಫ್‌ ಅವರಿಗೆ ಏನು ಆಗಿತ್ತು(Amyloidosis)? ಅವರ ಅಂಗಗಳ ಕಾರ್ಯಕ್ಷಮತೆ ಕ್ಷೀಣಿಸಲು ಏನು ಕಾರಣ? ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Pervez Musharraf Death: ಮುಷರಫ್ ಶಾಂತಿದೂತ ಎಂದು ಹೊಗಳಿದ ತರೂರ್, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

7. Asia Cup 2023: ಏಷ್ಯಾಕಪ್ ಆಯೋಜನೆ ಕೈ ತಪ್ಪಿದರೆ ವಿಶ್ವಕಪ್‌ ಬಹಿಷ್ಕಾರ: ಪಿಸಿಬಿ ಬೆದರಿಕೆ
ಏಷ್ಯಾಕಪ್(Asia Cup 2023) ಕ್ರಿಕೆಟ್‌ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯದೇ ಇದ್ದರೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕ ದಿನ ವಿಶ್ವ ಕಪ್‌ ಟೂರ್ನಿಯನ್ನು ಬಹಿಷ್ಕರಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಯಾರು?
ಅಮೆರಿಕದ ಶಾರ್ಟ್‌ ಸೆಲ್ಲರ್‌ ಮತ್ತು ಮಾರುಕಟ್ಟೆ ರಿಸರ್ಚ್‌ ಕಂಪನಿ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್‌ ಆ್ಯಂಡರ್ಸನ್‌, (Hindenburg founder) ಅದಾನಿ ಸಮೂಹದ ವಿರುದ್ಧದ ವರದಿಯ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ತೀವ್ರ ವಿವಾದಕ್ಕೂ ಗುರಿಯಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ
ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಬರೆದ, ವಿಜಯ್ ಜೋಷಿ ಅವರು ಕನ್ನಡಕ್ಕೆ ಅನುವಾದಿಸಿದ ‘ನಮ್ಮ ಭಾರತ’ ಪುಸ್ತಕವನ್ನು ಹರಿವು ಬುಕ್ಸ್ ಪ್ರಕಟಿಸಿದೆ.‌ ಗೋಪಿನಾಥ್ ಅವರ ವಿಚಾರಧಾರೆಗಳನ್ನು ಲೇಖಕ ವಿಜಯ್ ಜೋಷಿ ಸಶಕ್ತವಾಗಿ ನಿರೂಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Actor Yash: ಅಪ್ಪನಿಗೇ ಬೈಸೆಪ್ಸ್‌ ತೋರಿಸಿ ಆ್ಯಟಿಟ್ಯೂಡ್‌ ಪ್ರದರ್ಶಿಸಿದ ಯಶ್‌ ಪುತ್ರ, ಚೋಟಾ ರಾಕಿ ಭಾಯ್‌ ಎಂದ ಜನ
ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರು ಎಷ್ಟೇ ಸಿನಿಮಾಗಳಲ್ಲಿ ಬ್ಯುಸಿ ಆಗಿರಲಿ, ಯಾವುದೇ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ, ಕುಟುಂಬಸ್ಥರ ಜತೆ, ಅದರಲ್ಲೂ ಮಕ್ಕಳ ಜತೆ ಕಾಲ ಕಳೆಯುವುದನ್ನು ತಪ್ಪಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಯಶ್‌ ತಮ್ಮ ಪುತ್ರ ಯಥರ್ವ್‌ ಜತೆ ಆಟವಾಡಿದ್ದು, ಇದೇ ವೇಳೆ ಯಶ್‌ ತಮ್ಮ ಬೈಸೆಪ್ಸ್‌ ತೋರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಗ ಯಥರ್ವ್‌ ಕೂಡ ತನ್ನ ಬೈಸೆಪ್ಸ್‌ ತೋರಿಸಿ ತಂದೆಗೇ ಸವಾಲು ಹಾಕಿದ್ದಾನೆ. ಈ ವಿಡಿಯೊವನ್ನು ಯಶ್‌ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದು, ವಿಡಿಯೊ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version