1. ಬಿಜೆಪಿ, ಜೆಡಿಎಸ್ ಮೈತ್ರಿಗೆ ಮೋದಿ ಅಮಿತ್ ಶಾ ಸಮ್ಮತಿ; 4 ಸ್ಥಾನ ದಳಕ್ಕೆ ಎಂದ ಯಡಿಯೂರಪ್ಪ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮೋದಿ ಮತ್ತು ಅಮಿತ್ ಶಾ ಒಪ್ಪಿದ್ದಾರೆ, ಜೆಡಿಎಸ್‌ಗೆ ನಾಲ್ಕು ಸ್ಥಾನ ಬಿಟ್ಟುಕೊಡಲು ಮಾತುಕತೆ ಆಗಿದೆ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಮಾತು ಭಾರಿ ಸಂಚಲನಕ್ಕೆ ಕಾರಣವಾಯಿತು. ಕಾಂಗ್ರೆಸ್ ಇದನ್ನು ನಿರ್ಲಕ್ಷ್ಯ ಮಾಡುವ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದರೆ, ಜೆಡಿಎಸ್ ಇದೆಲ್ಲ ನಡೆದಿದ್ದು ಹೌದೆಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1: ಬಿಜೆಪಿ ಜತೆ ಕೈಜೋಡಿಸಲು ಜೆಡಿಎಸ್ ಶಾಸಕರಿಂದಲೇ ಒತ್ತಡ ಇತ್ತು ಎಂದ ದೇವೇಗೌಡ
ಪೂರಕ ವರದಿ 2: ಬಿಜೆಪಿ – ಜೆಡಿಎಸ್ ಮೈತ್ರಿ ಹಿಂದಿದೆ ಜಾತಿ ಲೆಕ್ಕಾಚಾರ; 28 ಕ್ಷೇತ್ರಗಳ ಜಾತಿ ಪ್ರಾಬಲ್ಯ ಏನು?
ಪೂರಕ ವರದಿ 3 : ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಸಿಎಂ, ಜೆಡಿಎಸ್ ಶಾಸಕರ ಕಥೆ ಏನೆಂದು ಕೇಳಿದ ಡಿಕೆಶಿ!
2. ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಅನಿವಾರ್ಯವಾದ ಬಿಎಸ್‌ವೈ; ಬಿ.ಎಲ್. ಸಂತೋಷ್ ಪ್ಲ್ಯಾನ್ ಉಲ್ಟಾ!
ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅನಿವಾರ್ಯವಾದರು. ಅವರನ್ನು ಹೊರಗಿಟ್ಟು ಪ್ರತಿಭಟನೆಯ ರೂಪುರೇಷೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪ್ಲ್ಯಾನ್ ಕೈಕೊಟ್ಟಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಸೆ. 16ರಿಂದ ರಾಜ್ಯಾದ್ಯಂತ ಹೋರಾಟ; ಸರ್ಕಾರ ತೊಲಗುವವರೆಗೂ ಅಭಿಯಾನ ಬಿಎಸ್‌ವೈ ಗುಡುಗು
3. G20 Summit 2023: ಜಿ20 ಶೃಂಗಸಭೆ ಆರಂಭಕ್ಕೆ ಕ್ಷಣಗಣನೆ! ನಾಳೆ ದಿಲ್ಲಿಯಲ್ಲಿ ವಿಶ್ವನಾಯಕರ ಸಮಾಗಮ
ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗ ಸಭೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ದಿಲ್ಲಿಯ ಐಕಾನಿಕ್ ಭಾರತ್ ಮಂಟಪಂನಲ್ಲಿ ನಡೆಯುವ ಈ ಸಭೆಗೆ ರಷ್ಯಾ ಹಾಗೂ ಚೀನಾ ಅಧ್ಯಕ್ಷರನ್ನು ಹೊರತುಪಡಿಸಿ ವಿಶ್ವದ ಪ್ರಮುಖ ನಾಯಕರೆಲ್ಲರೂ ಆಗಮಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1: ರಾಷ್ಟ್ರಪತಿ ಡಿನ್ನರ್ ವೇಳೆ 78 ಕಲಾವಿದರಿಂದ ವಸುಧೈವ ಕುಟುಂಬಕಂ ಸಂಗೀತ ಪ್ರದರ್ಶನ
ಪೂರಕ ವರದಿ 2: ಜಿ20 ವಿಶೇಷ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ, ಖರ್ಗೆಗಿಲ್ಲ ಆಮಂತ್ರಣ!
ಪೂರಕ ವರದಿ3 : ಪ್ರಧಾನಿ ಮೋದಿ ನಾಯಕತ್ವಕ್ಕೆ ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್ ಬಹುಪರಾಕ್!
4. Bangalore- Chennai Expressway: ಬೆಂಗಳೂರಿನಿಂದ ಚೆನ್ನೈಗೆ 2 ಗಂಟೆಯಲ್ಲಿ ರಸ್ತೆ ಪ್ರಯಾಣ?
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Bangalore- Chennai Expressway) ಈ ವರ್ಷಾಂತ್ಯ ಅಥವಾ ಜನವರಿ 2024ರೊಳಗೆ ಪ್ರಾರಂಭಿಸಲಾಗುವುದು. ಎರಡು ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಲು ಇದು ನಿರ್ಣಾಯಕ ದಾರಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. J&K Terrorism: ಜಮ್ಮು ಕಾಶ್ಮೀರದ ಉಗ್ರರಿಗೆ ಇನ್ನು ಅವರ ಜಮೀನೂ ಇಲ್ಲ
ಜಮ್ಮು- ಕಾಶ್ಮೀರ ಮೂಲದ, ಇಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಹಾಗೂ ಈಗ ವಾಸ್ತವ ಗಡಿರೇಖೆಯಾಚೆಗಿನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿರುವ ನೂರಾರು ಭಯೋತ್ಪಾದಕರು ಇದೀಗ ತಮ್ಮ ಆಸ್ತಿಪಾಸ್ತಿಗಳನ್ನು ಕೂಡ ಕಳೆದುಕೊಳ್ಳಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. Bypolls Results 2023: 7ರ ಪೈಕಿ 4ರಲ್ಲಿ ಬಿಜೆಪಿ ಪ್ರಾಬಲ್ಯ, ಚಾಂಡಿಗೆ ಜಯ, ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ
ಕೇರಳ, ತ್ರಿಪುರ, ಉತ್ತರ ಪ್ರದೇಶ ಸೇರಿ ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ (Bypolls Results 2023) ಸಾಧಿಸಿದೆ. ಕೇರಳದ ಪುತುಪಳ್ಳಿಯಲ್ಲಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್ ಅವರು ಗೆಲುವು ಸಾಧಿಸಿದ್ದಾರೆ. ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿರುವುದರಿಂದ ಇಂಡಿಯಾ ಒಕ್ಕೂಟಕ್ಕೆ ಉಪ ಚುನಾವಣೆಯಲ್ಲಿ ಹಿನ್ನಡೆಯಾದಂತಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
6. ಸನಾತನ ಧರ್ಮ; ಉದಯನಿಧಿ ವಿರುದ್ಧ ಮುಸ್ಲಿಂ ಮೌಲ್ವಿಗಳ ಆಕ್ರೋಶ, ಕ್ಷಮೆಯಾಚನೆಗೆ ಪಟ್ಟು
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಮುಖಂಡರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಹಕ್ಕು ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗಿಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು” ಎಂದು ಪಟ್ಟು ಹಿಡಿದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. Ind vs Pak : ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಬಂದರೆ ನಿರಾಶರಾಗಬೇಡಿ ; ಇಲ್ಲಿದೆ ಗುಡ್ ನ್ಯೂಸ್
ಭಾರತ ಮತ್ತು ಪಾಕಿಸ್ತಾನ (Ind vs Pak ನಡುವಿನ ಏಷ್ಯಾ ಕಪ್ ಸೂಪರ್ 4 (Asia Cup 2023) ಪಂದ್ಯಕ್ಕೆ ಮೀಸಲು ದಿನವಿಲ್ಲ ಎಂಬ ಹಲವು ವರದಿಗಳನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ (Asia Crikcet Council) ತಳ್ಳಿ ಹಾಕಿದೆ. ಇದೀಗ ಮೀಸಲು ದಿನ ಇರುತ್ತದೆ ಎಂಬುದನ್ನು ದೃಢಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್ ಪೀರಿಯೆಡ್ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!
ಗಂಡ-ಹೆಂಡತಿ ಪ್ರಬುದ್ಧರಾಗಿದ್ದು, ಪ್ರಜ್ಞಾಪೂರ್ವಕವಾಗಿ ವಿಚ್ಛೇದನಕ್ಕೆ (Divorce Case) ಒಪ್ಪಿದರೆ, ಮುಂದೆ ಯಾವ ಕಾರಣಕ್ಕೂ ನಿರ್ಧಾರ ಬದಲಾಗುವುದಿಲ್ಲ ಎನ್ನುವಷ್ಟು ದೃಢವಾಗಿದ್ದರೆ ಡೈವೋರ್ಸ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಿಧಿಸಲಾಗುವ ಕೂಲಿಂಗ್ ಪೀರಿಯೆಡ್ (Cooling period) ಬೇಕಾಗಿಲ್ಲ ಎಂದು ರಾಜ್ಯ ಹೈಕೋರ್ಟ್ (Karnataka High court) ಅಭಿಪ್ರಾಯಪಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Bigg Boss Kannada: ಬಿಗ್ ಬಾಸ್ ಬಂದ ಮೇಲೆ ಈ ಮೂರು ಧಾರಾವಾಹಿಗಳು ಅಂತ್ಯ?
ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಅವರ ಜನುಮದಿನವೇ ಬಿಗ್ ಬಾಸ್ (Bigg Boss Kannada) ಪ್ರೋಮೊ ಹಂಚಿಕೊಂಡು ಬಿಗ್ ಬಾಸ್ ಪ್ರಿಯರಿಗೆ ಗುಡ್‌ನ್ಯೂಸ್ ನೀಡಿತ್ತು. ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಮೂರು ಜನಪ್ರಿಯ ಧಾರಾವಾಹಿಗಳು ಅಂತ್ಯ ಕಾಣಲಿವೆ ಎಂಬ ಚರ್ಚೆಗಳು ಆಗುತ್ತಿವೆ. ಈಗಾಗಲೇ ಅನುಬಂಧ ಕಾರ್ಯಕ್ರಮ ಮುಗಿದ ಮೇಲೆ ಬಿಗ್ ಬಾಸ್ ಸೀಸನ್ 10ರ ಶೋ ಚಾಲನೆ ದೊರತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ