1. Public Exam : 5, 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್, ಮಾರ್ಚ್ 27ರಿಂದ ಎಕ್ಸಾಂ ನಡೆಸಲು ಸೂಚನೆ
ಈ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ (Public Exam) ನಡೆಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಾರ್ಚ್ 27ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಈ ಬಾರಿ ಪರೀಕ್ಷೆ ನಡೆಸಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ ಆದೇಶದಿಂದ ಒಕ್ಕೂಟದ ನಿಲುವಿಗೆ ಹಿನ್ನಡೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
Drought In India: ಹೆಚ್ಚುತ್ತಿದೆ ತಾಪಮಾನ; ಭಾರತದಲ್ಲಿ ಈ ಬಾರಿ ಬರಗಾಲ? ಜಾಗತಿಕ ವಿಶ್ಲೇಷಣೆ ಏನು?
ಬೇಸಿಗೆ ಆರಂಭವಾಗುವ ಮೊದಲೇ ಬೇಸಿಗೆಯ ಅನುಭವವಾಗುತ್ತಿದೆ. ಮಾರ್ಚ್ ಮುಗಿಯುವ ಮೊದಲೇ ಸೂರ್ಯ ದಿನೇದಿನೆ ಪ್ರಖರವಾಗುತ್ತಿದ್ದಾನೆ. ಎಲ್ಲ ರಾಜ್ಯಗಳಲ್ಲೂ ಬೇಸಿಗೆಯನ್ನು ಎದುರಿಸಲು, ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ, ಜಾಗತಿಕ ಹವಾಮಾನ ಸಂಸ್ಥೆಗಳು ಭಾರತದಲ್ಲಿ ಸುರಿಯುವ ಮುಂಗಾರಿನ ಕುರಿತು ವರದಿ ಪ್ರಕಟಿಸಿವೆ. ವರದಿಯ ಅಂಶಗಳನ್ನು ಗಮನಿಸಿದರೆ, ಭಾರತಕ್ಕೆ ಈ ಬಾರಿ ಬರಗಾಲ (Drought In India) ಕಾಡುತ್ತದೆ ಎಂಬುದು ತಿಳಿಯುತ್ತಿದೆ. ಇದು ಆತಂಕವನ್ನೂ ಸೃಷ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. KPTCL Strike : ಶೇ.20 ರಷ್ಟು ವೇತನ ಹೆಚ್ಚಳ ಘೋಷಿಸಿದ ಸರ್ಕಾರ; ಕೆಪಿಟಿಸಿಎಲ್ ನೌಕರರ ಮುಷ್ಕರ ಹಿಂದಕ್ಕೆ?
ಮುಷ್ಕರಕ್ಕೆ ಮುಂದಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್) ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂಗಳ) (KPTCL Strike) ಅಧಿಕಾರಿಗಳು ಮತ್ತು ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವರ ಬೇಡಿಕೆಯಂತೆ ಅವರ ವೇತನವನ್ನು ಶೇ.20 ರಷ್ಟು ಹೆಚ್ಚು ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿನ ಅಧಿಕಾರಿಗಳು ಹಾಗೂ ಎಲ್ಲ ನೌಕರರ ಈಗಿರುವ ವೇತನದ ಮೇಲೆ ಏಪ್ರಿಲ್ 1 ರಿಂದ ಶೇ. 20 ರಷ್ಟು ಜಾರಿಗೆ ಬರಲಿದೆ. ಈ ಸಂಬಂಧ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. V. Somanna: ಎಲ್ಲವೂ ಅಂದುಕೊಂಡಂತೆ ಆಯಿತು: ನಗುಮೊಗದಲ್ಲಿ ಅಮಿತ್ ಶಾ ಮನೆಯಿಂದ ಹೊರಬಂದ ಸಚಿವ ವಿ. ಸೋಮಣ್ಣ
ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾರನೆಯ ದಿನವೇ ನವದೆಹಲಿಯಲ್ಲಿ ಕೇಂದ್ರ ಗೃಹ ಸಚೊವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ವಸತಿ ಸಚಿವ ವಿ. ಸೋಮಣ್ಣ, ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: V. Somanna: ವಿಜಯೇಂದ್ರ ವಯಸ್ಸೆಷ್ಟು? ನನ್ನ ವಯಸ್ಸೆಷ್ಟು?: ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಚಿವ ವಿ. ಸೋಮಣ್ಣ
5. Border Dispute: ಮತ್ತೆ ಗಡಿ ಕ್ಯಾತೆ ತೆಗೆದ ಶಿವಸೇನೆ-ಬಿಜೆಪಿ ʼಮಹಾʼ ಸರ್ಕಾರ: ರಾಜ್ಯದ ನೆಲದಲ್ಲಿ ತನ್ನ ಯೋಜನೆ ಜಾರಿಗೆ ತೀರ್ಮಾನ
ಗಡಿ ಕ್ಯಾತೆ ತೆಗೆಯುತ್ತ ಎರಡೂ ರಾಜ್ಯಗಳ ನಡುವೆ ಸಂಘರ್ಷ ಉಂಟುಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಯೋಜನೆಗಳನ್ನು ಕರ್ನಾಟಕದ ನೆಲದಲ್ಲಿ ಅನುಷ್ಠಾನ ಮಾಡುವ ವಿವಾದಾತ್ಮಕ ಹಾಗೂ ಪ್ರಚೋದನಾತ್ಮಕ ತೀರ್ಮಾನ ಕೈಗೊಂಡಿದೆ. ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯನ್ನು ಕರ್ನಾಟಕದ 865 ಹಳ್ಳಿಗಳಲ್ಲೂ ಜಾರಿ ಮಾಡಲು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರ ಕೈಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Border Dispute: ರಾಜ್ಯದ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ: ಸಿಎಂ ರಾಜೀನಾಮೆಗೆ ಡಿ.ಕೆ. ಶಿವಕುಮಾರ್ ಆಗ್ರಹ
6. Rahul Gandhi: ರಾಹುಲ್ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ
ಇಂಗ್ಲೆಂಡ್‌ನಲ್ಲಿ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ(Rahul Gandhi) ಅವರು ಕ್ಷಮೆಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಹೇಳಿದ್ದಾರೆ. ಯಾರು ಈಗ ರಾಹುಲ್ ಗಾಂಧಿ ಅವರು ಕ್ಷಮೆಗೆ ಆಗ್ರಹಿಸುತ್ತಿದ್ದಾರೋ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅವಮಾನಿಸಿದ್ದರ ಬಗ್ಗೆ ಉತ್ತರಿಸಬೇಕು ಎಂದು ಖರ್ಗೆ ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Panchamasali Reservation: ಪಂಚಮಸಾಲಿ ಮೀಸಲಾತಿ ಪೂರ್ಣ ವರದಿ ಸದ್ಯಕ್ಕಿಲ್ಲ: ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ( Panchamasali Reservation) ನೀಡುವ ಕುರಿತು ವರದಿಯನ್ನು ಗಡಿಬಿಡಿಯಲ್ಲಿ ನೀಡಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Teacher Transfer : ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಚಾಲನೆ; ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಕಡತ ಸಲ್ಲಿಕೆ
ಪದೇ ಪದೇ ಅಡ್ಡಿಗಳಿಂದಾಗಿ ಸ್ಥಗಿತಗೊಳ್ಳುತ್ತಿರುವ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆ ಈ ಶೈಕ್ಷಣಿಕ ಸಾಲಿನಲ್ಲಿಯೇ ಆರಂಭವಾಗಲಿದೆಯೇ? ವರ್ಗಾವಣೆಗೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ತಂದ ಈಗಿನ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿಯೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲಿದೆಯೇ? ಈ ಪ್ರಶ್ನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಉತ್ತರ ನೀಡಬೇಕಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Imran Khan: ಇಮ್ರಾನ್ ಖಾನ್‌ಗೆ ತಾತ್ಕಾಲಿಕ ರಿಲೀಫ್, ಗುರುವಾರದವರೆಗೆ ಬಂಧನಕ್ಕೆ ತಡೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಬಂಧನದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತೋಷಾಖಾನಾ ಹಗರಣದಲ್ಲಿ ಸಿಲುಕಿರುವ ಇಮ್ರಾನ್ ಖಾನ್ ಅವರನ್ನು ಗುರುವಾರ (ಮಾರ್ಚ್ 16) ಬೆಳಗ್ಗೆ 10 ಗಂಟೆಯವರೆಗೆ ಬಂಧಿಸದಂತೆ ಪೊಲೀಸರಿಗೆ ಲಾಹೋರ್ ಹೈಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ, ಖಾನ್ ಅವರಿಗೆ ತುಸು ರಿಲೀಫ್ ಸಿಕ್ಕಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಮ್ರಾನ್ ನಿವಾಸದಿಂದ ಪೊಲೀಸರು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಪತ್ನಿಯರಿಬ್ಬರಿಗೆ ತನ್ನನ್ನು ಹಂಚಿದ ಪತಿ!; 3 ದಿನ ಒಬ್ಬಳಿಗೆ, ಮತ್ತೆ ಮೂರು ದಿನ ಇನ್ನೊಬ್ಬಳಿಗೆ, ಭಾನುವಾರ ಫ್ರೀ!
ಮದುವೆ ಎನ್ನುವುದು ಜೀವನದ ಒಂದು ಸುಂದರ ಹಂತ. ಆದರೆ ಕೆಲವರು ಅದೇ ವಿಷಯದಲ್ಲಿ ಕಷ್ಟವನ್ನು ಮೈಮೇಲೆ ಎಳೆದುಕೊಂಡುಬಿಡುತ್ತಾರೆ. ಇಲ್ನೋಡಿ, ನೊಯ್ಡಾದ 28ವರ್ಷದ ಇಂಜಿನಿಯರ್ವೊಬ್ಬ ಒಂದು ಸಾಲದ್ದಕ್ಕೆ, ಮತ್ತೊಂದು ಮದುವೆಯಾಗಿ ಪೇಚಾಟಕ್ಕೆ ಸಿಲುಕಿ, ಅಂತೂ ಕೊನೆಗೊಂದು ದಾರಿ ಕಂಡುಕೊಂಡು ಪಾರಾಗಿದ್ದಾರೆ. ಇಬ್ಬರು ಹೆಂಡತಿಯರು ಮತ್ತು ಪತಿಯ ಮಧ್ಯೆ ಒಂದು ವಿಚಿತ್ರ ಒಪ್ಪಂದವಾಗಿ, ಇವರ ವೈವಾಹಿಕ ಜೀವನ ಸುಖಾಂತ್ಯ ಕಂಡಿದೆ. ಒಪ್ಪಂದದ ಅನ್ವಯ ಈ ಇಂಜಿನಿಯರ್ ವಾರದ ಮೊದಲ ಮೂರು ದಿನ ಒಬ್ಬಳು ಹೆಂಡತಿಯೊಂದಿಗೆ, ಮತ್ತೆ ಮೂರು ದಿನ ಇನ್ನೊಬ್ಬಳು ಪತ್ನಿಯೊಂದಿಗೆ ಕಾಲ ಕಳೆಯಬೇಕು. ಭಾನುವಾರ ಅವನ ‘ಪತಿ’ ಜವಾಬ್ದಾರಿಗೆ ರಜೆ..! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- UPSC Preparation : ವೃತ್ತಿಪರರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಕ್ಸೆಸ್ ಆಗಬೇಕಿದ್ದರೆ ಏನು ಮಾಡಬೇಕು?
- ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಆಯೋಜಿಸಿರುವ 4ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ತಾಲಿಬಾನಿಗಳು!
- ತಾಯಿ ಗರ್ಭದಲ್ಲೇ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ 90 ಸೆಕೆಂಡ್‌ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!
- BJP Animated Video: ವಿರೋಧಿಗಳ ತೆಗಳಿಕೆಯೂ ಗೆಲುವಿನ ಹೆಜ್ಜೆಗಳೇ; ಮೋದಿ ಸಾಧನೆ ವಿಡಿಯೊ ವೈರಲ್