1. Jain muni Murder : ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ: ಡಾ. ಜಿ. ಪರಮೇಶ್ವರ
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ (Jain muni Murder) ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ (Dr G Parameshwar) ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Murder Case : ಪುನೀತ್ ಫೋಟೊ ವಿವಾದವೇ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣ?
ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade activist) ವೇಣುಗೋಪಾಲ್ ನಾಯಕ್ (32) ಅವರ ಕೊಲೆಗೆ (Murder case) ಹನುಮ ಜಯಂತಿ (Hanuma Jayanti) ದಿನ ನಡೆದ ಫೋಟೊ ವಿವಾದವೇ ಕಾರಣವಾಯ್ತಾ? ಹೀಗೊಂದು ಪ್ರಶ್ನೆ ಈಗ ಎದ್ದುನಿಂತಿದೆ. ಇತ್ತೀಚೆಗೆ ನಡೆದ ಹನುಮ ಜಯಂತಿ ಸಂದರ್ಭದಲ್ಲಿ ದೇವಸ್ಥಾನದ ಬಳಿ ಬೈಕ್ ನಿಲ್ಲಿಸುವ ವಿವಾದ ಕೊಲೆಗೆ ಕಾರಣ ಎಂದು ಒಂದು ಕಡೆ ಹೇಳಲಾಗುತ್ತಿದ್ದರೆ, ಇನ್ನೊಂದು ಕಡೆ ಮೃತ ವೇಣುಗೋಪಾಲ್ ಅವರ ಪತ್ನಿಯ ಪ್ರಕಾರ ಹನುಮ ಜಯಂತಿ ದಿನ ಮೆರವಣಿಗೆ ವೇಳೆ ಪುನೀತ್ ರಾಜ್ ಕುಮಾರ್ (Puneet Rajkumar) ಫೋಟೊ ಇಡುವುದು ಬೇಡ ಎಂದು ಹೇಳಿದ್ದೇ ವಿವಾದದ ಮೂಲ. ಇದೀಗ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ತಿ. ನರಸೀಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Double Murder : ಜೈನ ಮುನಿ, ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆ ತನಿಖೆಗೆ ಬಿಜೆಪಿಯಿಂದ 2 ಟೀಮ್
3. Anna Bhagya: ಕೇಂದ್ರ ಸರ್ಕಾರ ಹೊಲಸು ರಾಜಕೀಯ ಮಾಡಿದೆ: ಅನ್ನ ಭಾಗ್ಯ ಹಣ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಆಕ್ರೋಶ
ಕೇಂದ್ರ ಸರ್ಕಾರ ಹೊಲಸು ರಾಜಕಾರಣ (Dirty Politics) ಮಾಡಿದ್ದರಿಂದಾಗಿ ಈಗ ಅನ್ನ ಭಾಗ್ಯ (Anna Bhagya) ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 170 ರೂ.ನಂತೆ ನೇರ ನಗದು ವರ್ಗಾವಣೆ ಆರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Assembly Session: ಎಲ್ಲ ಗೊತ್ತಿರೋಕೆ ನೀವೇನು ಸರ್ವಜ್ಞನ?: ಸರ್ವಜ್ಞ ನಗರ ಶಾಸಕ ಜಾರ್ಜ್ ವಿರುದ್ಧ ಯತ್ನಾಳ್ ಆಕ್ರೋಶ
ವಿದ್ಯುತ್ ಬಿಲ್ ಏರಿಕೆ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವ ವೇಳೆ ವಿಧಾನಸಭೆಯಲ್ಲಿ (Assembly Session) ಸಚಿವ ಕೆ.ಜೆ. ಜಾರ್ಜ್ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಗ್ವಾದ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Rain News: ಮಳೆಗೆ ‘ಉತ್ತರ’ ನಿರುತ್ತರ, ಅಲರ್ಟ್ ಆದ ಮೋದಿ, ಕೇಜ್ರಿವಾಲ್; ಇದುವರೆಗೆ 28 ಸಾವು
ಕಳೆದ 40 ವರ್ಷದಲ್ಲಿಯೇ ಕಂಡು ಕೇಳರಿಯದ ಮಳೆಗೆ (Rain News) ಉತ್ತರ ಭಾರತ ತತ್ತರಿಸಿ ಹೋಗಿದೆ. ಅದರಲ್ಲೂ, ಹಿಮಾಚಲ ಪ್ರದೇಶ ಹಾಗೂ ದೆಹಲಿಯಲ್ಲಿ ವರುಣಾರ್ಭಟ ಜೋರಾಗಿದ್ದು, ಜನ ಅಪಾಯಕ್ಕೆ ಸಿಲುಕಿದ್ದಾರೆ. ಇನ್ನು, ಭೂಕುಸಿತ, ಮನೆ ಕುಸಿತ ಸೇರಿ ಮಳೆ ಸಂಬಂಧಿತ ಹಲವು ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಲರ್ಟ್ ಆಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. KSRTC Employees News : ಸಾರಿಗೆ ನೌಕರರರಿಗೆ ಸರ್ಕಾರಿ ನೌಕರರಾಗುವ ಭಾಗ್ಯವಿಲ್ಲ!
ರಾಜ್ಯದ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ (KSRTC Employees News) ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ (ramalinga reddy) ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ವಿಸ್ತಾರ Explainer: Chandrayaan- 3; ಚಂದ್ರಯಾನ- 3ರ ವಿಶೇಷತೆಗಳು ಏನೇನು? ಏನಿದರ ಉದ್ದೇಶ?
ಚಂದ್ರಯಾನ-1, ಚಂದ್ರಯಾನ- 2ರ ಮುಂದುವರಿದ ಭಾಗವಾದ ಚಂದ್ರಯಾನ- 3 (Chandrayaan- 3) ಜುಲೈ 14ರಂದು ತನ್ನ ಯಾನವನ್ನು ಚಂದ್ರನೆಡೆಗೆ ಆರಂಭಿಸಲಿದೆ. ಇದಕ್ಕೆ ಒಂದು ವಿಶೇಷತೆಯೂ ಇದೆ. ಇದುವರೆಗೂ ಮಾನವ ಹಾರಿಬಿಟ್ಟ ನೌಕೆಗಳಲ್ಲಿ ಯಾವುದೂ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿರಲಿಲ್ಲ. ಚಂದ್ರಯಾನ-3 ತಿಂಗಳಿನ ದಕ್ಷಿಣ ಧ್ರುವದಲ್ಲಿ (south pole) ಹೆಜ್ಜೆಯೂರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Ram Mandir: ರಾಮಮಂದಿರ ನಿರ್ಮಾಣಕ್ಕೆ ವೇಗ; 1,600 ಕಾರ್ಮಿಕರು, ದಿನದ 18 ಗಂಟೆ ಬದಲು 24 ಗಂಟೆ ಕೆಲಸ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ (Ram Mandir) ಜನವರಿಯಲ್ಲಿ ಚಾಲನೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಜನವರಿಯಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಲಿದ್ದು, ಇದಕ್ಕಾಗಿ ಮಂದಿರ ನಿರ್ಮಾಣ ಕಾಮಗಾರಿಗೆ ಶರವೇಗ ನೀಡಲಾಗಿದೆ. ಅಲ್ಲದೆ, ಮಂದಿರ ನಿರ್ಮಾಣದ ಕಾರ್ಮಿಕರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Rafale Fighter Jet: 90 ಸಾವಿರ ಕೋಟಿ ರೂ.ಗೆ ಯುದ್ಧವಿಮಾನ ಖರೀದಿ! ಭಾರತ-ಫ್ರಾನ್ಸ್ ನಡುವೆ ‘ರಫೇಲ್’ ಡೀಲ್
ಭಾರತ ಸರ್ಕಾರವು (Indian Government) ಮತ್ತೆ ರಫೇಲ್ ಯುದ್ಧ ವಿಮಾನಗಳ (Rafale Fighter Jet) ಖರೀದಿಗೆ ಮುಂದಾಗಿದೆ. ಈ ಹಿಂದೆ ಭಾರತವು ಫ್ರಾನ್ಸ್‌ನಿಂದ (France Government) 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವಾರ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಭಾರತ ಸರ್ಕಾರವು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral News: ಸಾಯುವ ಮುನ್ನ 33 ವರ್ಷದ ಗರ್ಲ್‌ಫ್ರೆಂಡ್‌ಗೆ 900 ಕೋಟಿ ರೂ. ಆಸ್ತಿ ಬರೆದಿಟ್ಟ ಮಾಜಿ ಪ್ರಧಾನಿ!
ಹೆಚ್ಚು ಆಸ್ತಿ ಮಾಡಿರುವವರು ಸೇರಿ ಯಾರೇ ಆಗಲಿ, ತಾವು ಅಗಲಿದ ನಂತರ ತಮ್ಮ ಆಸ್ತಿಯನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ ಸೇರಲಿ ಎಂದು ವಿಲ್ ಬರೆದಿಡುತ್ತಾರೆ. ಅದರಂತೆ, ಅವರ ಕಾಲಾನಂತರ ಮಕ್ಕಳೋ, ಮೊಮ್ಮಕ್ಕಳೋ ಆಸ್ತಿಯನ್ನು ಅನುಭವಿಸುತ್ತಾರೆ. ಇನ್ನು ಮಕ್ಕಳಿರದವರು ಸಂಬಂಧಿಕರಿಗೋ, ಅನಾಥಾಶ್ರಮಕ್ಕೋ ಆಸ್ತಿಯನ್ನು ಬರೆದಿಡುತ್ತಾರೆ. ಆದರೆ, ಕೆಳೆದ ತಿಂಗಳು ಮೃತಪಟ್ಟ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (Silvio Berlusconi) ಅವರು ಸಾಯುವ ಮೊದಲು ತಮ್ಮ ಗರ್ಲ್‌ಫ್ರೆಂಡ್‌ಗೆ 905 ಕೋಟಿ ರೂ. ಮೌಲ್ಯದ (100 ದಶಲಕ್ಷ ಯುರೋ) (Viral News) ಆಸ್ತಿಯನ್ನು ಬರೆದಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.