ಬೆಂಗಳೂರು: ಚಿತ್ರದುರ್ಗ ಬ್ರಹನ್ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪ ಶನಿವಾರ ರಾಜ್ಯದಲ್ಲಿ ಭಾರಿ ಸದ್ದು ಮಾಡಿತು. ಇದರ ಜತೆಗೆ ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಕದನದ ಚರ್ಚೆ ಹಾಗೂ ೯ ಸೆಕೆಂಡ್‌ನಲ್ಲಿ ಧರಾಶಾಯಿಯಾಗಲಿರುವ ನೋಯ್ಡಾದ ಅವಳಿ ಕಟ್ಟಡದ ಬಗೆಗಿನ ಕುತೂಹಲ ಟಾಪ್ ಟ್ರೆಂಡ್‌ನಲ್ಲಿತ್ತು. ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಪಕ್ಕಾ ಆಗಿದೆ. ಆದರೆ, ಯಾರ ಸಾರಥ್ಯದಲ್ಲಿ ನಡೆಯಲಿದೆ ಎನ್ನುವುದು ನಿರ್ಧಾರವಾಗುವುದು ಗಣೇಶ ಚೌತಿಯ ಮುನ್ನಾದಿನ. ಈ ನಡುವೆ ಗಣೇಶ ಚತುರ್ಥಿಗೆ ಒಳ್ಳೆಯ ತಿಂಡಿ ಮಾಡಿ ತಿನ್ನಲು ಅವಕಾಶವಾಗಲಿ ಎಂಬಂತೆ ಅಡುಗೆ ತೈಲದ ಬೆಲೆ ಇಳಿದಿದೆ. ಹುದ್ದೆ ಕಳೆದುಕೊಳ್ಳುವ ಅಪಾಯದಲ್ಲಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಶಾಸಕರ ಜತೆ ಗಂಟೆಮೂಟೆ ಕಟ್ಟಿಕೊಂಡು ಔಟಿಂಗ್ ಹೋಗಿದ್ದೊಂದು ಕುತೂಹಲಕಾರಿ ಸುದ್ದಿ. ಜತೆಗೆ, ಗೋವಾದಲ್ಲಿ ಪ್ರಾಣ ಕಳೆದುಕೊಂಡ ಕಲರ್‌ಫುಲ್ ವ್ಯಕ್ತಿತ್ವದ ಸೋನಾಲಿ ಫೋಗಟ್ ಅವರ ಬದುಕಿನ ಸೀಕ್ರೆಟ್‌ಗಳೂ ಸೇರಿದಂತೆ ಇಂಟ್ರೆಸ್ಟಿಂಗ್ ಮತ್ತು ಬಹುಮುಖ್ಯ ಸುದ್ದಿಗಳ ಗುಚ್ಛವಿದು. ಅಂದ ಹಾಗೆ, ಎಲ್ಲರೂ ಓದಲೇಬೇಕಾದ ಹರಿಪ್ರಕಾಶ್ ಕೋಣೆಮನೆ ಅವರ ಸವಿಸ್ತಾರ ಅಂಕಣದಲ್ಲಿ ಈ ಬಾರಿ ಸಾವರ್ಕರ್ ಕುರಿತ ವಿಶೇಷ ಬರಹವಿದೆ.
೧. ಚಿತ್ರದುರ್ಗ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಇದೆಲ್ಲ ಷಡ್ಯಂತ್ರ ಎಂದ ಶ್ರೀಗಳು
ಚಿತ್ರದುರ್ಗದ ಪ್ರತಿಷ್ಠಿತ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅವರು ನಡೆಸುವ ಪ್ರೌಢಶಾಲೆಯೊಂದರ ೧೦ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದು ಪೋಕ್ಸೋ ಕಾಯಿದೆ ವ್ಯಾಪ್ತಿಗೆ ಬರುವ ಪ್ರಕರಣವಾಗಿರುವುದರಿಂದ ಶ್ರೀಗಳ ಬಂಧನವಾಗುವುದೇ ಎನ್ನುವ ಹಂತದವರೆಗೂ ಚರ್ಚೆಗಳು ನಡೆಯುತ್ತಿವೆ. ಹಾಸ್ಟೆಲ್ ವಾರ್ಡನ್ ಅವರನ್ನೂ ಆರೋಪಿ ಎಂದು ಗುರುತಿಸಿರುವ ಈ ಪ್ರಕರಣ ಮಠದ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ಶ್ರೀಗಳು ಹೇಳಿದ್ದು, ಕಾನೂನು ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಪೂರ್ಣ ವರದಿಗಾಗಿ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ ೧. ಆರೋಪವೇನು? ೨. ಶ್ರೀಗಳು ಹೇಳಿದ್ದೇನು? ೩. ಸಾಧ್ಯಾಸಾಧ್ಯತೆಗಳೇನು?
೨. ಇಂದು ಭಾರತ- ಪಾಕಿಸ್ತಾನ ಕ್ರಿಕೆಟ್ ಕದನ: ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ
ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಭಾನುವಾರ (ಆಗಸ್ಟ್ 28ರಂದು) ಏಷ್ಯಾ ಕಪ್- 2022ನೇ ಆವೃತ್ತಿಯ ಗುಂಪು ಹಂತದ ಪಂದ್ಯ ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ಆಯೋಜನೆಗೊಂಡಿದ್ದು, ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಕಳೆದ ವರ್ಷ ಇದೇ ಸ್ಟೇಡಿಯಮ್‌ನಲ್ಲಿ ನಡೆದ ಟಿ20 ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಭಾರತ ತಂಡ ಆ ಸೇಡು ತೀರಿಸಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಲಿಂಕ್ ಕ್ಲಿಕ್ ಮಾಡಿ IND vs PAK | ಕೊಹ್ಲಿ v/s ಬಾಬರ್, ಟಿ20ಯಲ್ಲಿ ಯಾರು ಬೆಸ್ಟ್?
೩. ಚಾಮರಾಜಪೇಟೆ ಮೈದಾನ ಗಣೇಶೋತ್ಸವಕ್ಕೆ ಯಾರು ಉಸ್ತುವಾರಿ?; ಆ. 30ರಂದು ತೀರ್ಮಾನ
ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಸರಕಾರ ದೃಢವಾದ ತೀರ್ಮಾನ ಮಾಡಿದೆ. ಆದರೆ, ಹೇಗೆ ಆಚರಣೆ ಮಾಡಬೇಕು, ಯಾರು ಆಚರಣೆ ಮಾಡಬೇಕು, ಯಾರಿಗೆ ಅನುಮತಿ ಎನ್ನುವ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಆಗಸ್ಟ್ ೩೦ರಂದು ಅಂದರೆ ಗಣೇಶ ಚತುರ್ಥಿಯ ಮುನ್ನಾದಿನ ತನ್ನ ತೀರ್ಮಾನವನ್ನು ಹೇಳುವುದಾಗಿ ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೪. ಗಣೇಶ ಚತುರ್ಥಿಗೆ GOOD NEWS: ಅಡುಗೆ ಎಣ್ಣೆ ದರ ಇಳಿಕೆ, ತಿಂಡಿ ಮಾಡಿ ತಿನ್ನಲು ಅನುಕೂಲ!
ಗಣೇಶ ಚತುರ್ಥಿಗೆ ಶುಭ ಸುದ್ದಿ ಬಂದಿದೆ. ಮೋದಕ ಪ್ರಿಯನ ಹಬ್ಬಕ್ಕೆ ನಾಲ್ಕಾರು ಬಗೆಯ ತಿಂಡಿ ಮಾಡಿ, ಮನೆ ಮಂದಿಯೆಲ್ಲ ಹಬ್ಬ ಆಚರಿಸೋಣ ಅಂತಿರೋರಿಗೆ ಇದು ಖುಷಿಯ ನ್ಯೂಸ್. ಅದೇನೆಂದರೆ, ಅಡುಗೆ ಎಣ್ಣೆಗಳ (Edible Oil Rate) ದರ ಒಂದು ಲೀಟರ್‌ಗೆ ೩೫ರಿಂದ ೪೫ ರೂ.ನಷ್ಟು ಇಳಿದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೫. ಇತಿಹಾಸದ ಕಣ್ತೆರೆಸಿ ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದವರು ಸಾವರ್ಕರ್
ದೇಶವನ್ನು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಸಿದ್ಧಪಡಿಸಬೇಕೆಂದರೆ ಮೊದಲು ಭಾರತೀಯರಲ್ಲಿರುವ ಗೊಂದಲಗಳನ್ನು ಬಗೆಹರಿಸಿ, ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸಬೇಕಿತ್ತು. ಹೋರಾಟಕ್ಕೆ ಧುಮುಕುವ ನಾಯಕನಿಗೆ ಮಾತ್ರವಲ್ಲ, ಆತನನ್ನು ಹಿಂಬಾಲಿಸುವ ಜನ ಸಮುದಾಯಕ್ಕೂ ನಾವೇನು ಮಾಡುತ್ತಿದ್ದೇವೆ ಮತ್ತು ಯಾಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಒಂದು ಸ್ಪಷ್ಟತೆ(ಕ್ಲಾರಿಟಿ) ಬೇಕು. ಸಾವರ್ಕರ್ ಅವರಿಗೆ ಈ ಖಚಿತತೆ ಇತ್ತು- ಹೀಗೆ ಸಾವರ್ಕರ್ ಅವರು ಸ್ವಾತಂತ್ರ್ಯ ಜ್ಯೋತಿ ಬೆಳಗಿದ ಬಗೆಯನ್ನು ವಿವರಿಸಿದ್ದಾರೆ ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆ ತಮ್ಮ ಸವಿಸ್ತಾರ ಅಂಕಣದಲ್ಲಿ. ಪೂರ್ಣ ಓದಿಗೆ ಈ ಲಿಂಕ್ ಕ್ಲಿಕ್ ಮಾಡಿ
೬. ಹೇಮಂತ್ ಸೊರೆನ್ ಸಿಎಂ ಗಾದಿ ಮೇಲೆ ತೂಗುಗತ್ತಿ: ಜಾರ್ಖಂಡ್ ಬಿಟ್ಟು ಹೊರಟ ಶಾಸಕರು!
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮುಖ್ಯಮಂತ್ರಿ ಗಾದಿ ಕಳೆದುಕೊಳ್ಳುವ ಲಕ್ಷಣ ದಟ್ಟವಾಗಿದೆ. ಸೊರೆನ್ ಅವರು ತಮ್ಮ ಒಡೆತನದಲ್ಲಿ ಇದ್ದ ಕಲ್ಲು ಗಣಿ ಗುತ್ತಿಗೆ ಅವಧಿಯನ್ನು ತಾವೇ ವಿಸ್ತರಿಸಿಕೊಂಡ ಅವರ ಕೊರಳಿಗೆ ಸ್ವಾರ್ಥ ರಾಜಕಾರಣದ ಕುಣಿಕೆ ಬಿದ್ದಿದೆ. ಹೀಗೆ ಅಧಿಕಾರ ಬಿಡಲೇಬೇಕಾಗಿರುವ ಅವರು ತಮ್ಮ ಶಾಸಕರನ್ನು ಕಟ್ಟಿಕೊಂಡು ಔಟಿಂಗ್ ಹೊರಟಿದ್ದಾರೆ. ಅವರು ಹೋಗಿದ್ದೆಲ್ಲಿಗೆ? ಅವರ ಉದ್ದೇಶವೇನು? ಪೂರ್ಣ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
೭. ಪ್ರತಿ ಮುಸಲ್ಮಾನರ ಮನೆ ಮುಂದೆ ಮಸೀದಿ ನಿರ್ಮಿಸುತ್ತ ಹೋದರೆ ಆಗುತ್ತಾ ಎಂದು ಕೇಳಿದ ಕೇರಳ ಹೈಕೋರ್ಟ್
ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಕೇಂದ್ರಗಳ ಬಗ್ಗೆ ಕೇರಳ ಹೈಕೋರ್ಟ್ ಮಹತ್ವದ ಆದೇಶವನ್ನು ಮಾಡಿದೆ. ”ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯದ ಪ್ರಾರ್ಥನಾ ಮಂದಿರಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಮುಚ್ಚಬೇಕು” ಎಂದು ಕೇರಳ ಹೈಕೋರ್ಟ್ ಸರ್ಕಾರಕ್ಕೆ ಖಡಕ್ಕಾಗಿ ಸೂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೮. 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೋಯ್ಡಾದ ಅವಳಿ ಕಟ್ಟಡ ಕೆಡವಲು ಆಗುವ ಖರ್ಚೆಷ್ಟು?
ನೋಯ್ಡಾದಲ್ಲಿರುವ ಅವಳಿ ಗಗನಚುಂಬಿ ಕಟ್ಟಡಗಳು ಭಾನುವಾರ ಧರೆಗುರುಳಲಿದೆ. ಅಪೆಕ್ಸ್ ಕಟ್ಟಡವು ೩೨ ಮಹಡಿ ಹೊಂದಿದೆ. ಸಿಯೇನ್ ಕಟ್ಟಡವು ೨೯ ಮಹಡಿಗಳನ್ನು ಹೊಂದಿದೆ. ಎರಡೂ ಕಟ್ಟಡಗಳನ್ನು ಭಾರತದ ೧೦ ಹಾಗೂ ವಿದೇಶದ ೭ ಬ್ಲಾಸ್ಟರ್‌ಗಳ ಯೋಜನೆ ಅನ್ವಯ ನೆಲಸಮ ಮಾಡಲಾಗುತ್ತದೆ. ಆದರೆ, ಸುಮಾರು ೭೦ ಕೋಟಿ ರೂ. ವೆಚ್ಚದಲ್ಲಿ ೨೦೦೫ರಲ್ಲಿ ನಿರ್ಮಾಣವಾದ ಕಟ್ಟಡಗಳ ನೆಲಸಮಗೊಳಿಸಲು ಎಷ್ಟು ಹಣ ಖರ್ಚಾಗುತ್ತದೆ ಗೊತ್ತೇ? ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
೯. ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರನ್ನು ಬಿಟ್ಟರೆ ಇನ್ಯಾರಿದ್ದಾರೆ? ಇದು ಖರ್ಗೆ ಪ್ರಶ್ನೆ
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಆದರೆ, ಕಾಂಗ್ರೆಸ್‌ನೊಳಗಿನ ನಾಯಕರಿಗೆ ಇನ್ನೂ ರಾಹುಲ್ ಮೇಲಿನ ನಂಬಿಕೆ ಹೋಗಿಲ್ಲ. ಹಿರಿಯ ನಾಯಕ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಂತೂ ರಾಹುಲ್ ಅವರಂತೆ ಇಡೀ ಭಾರತವನ್ನು ತಲುಪಬಲ್ಲ ಬೇರೆ ಯಾವ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲ. ಹಾಗಾಗಿ ಅವರೇ ಅಧ್ಯಕ್ಷ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೧೦. ಸೋನಾಲಿ ಫೋಗತ್ ಎಂಬ ಸುಂದರಿಯ ಬದುಕಿನ ಮತ್ತೊಂದು ಮುಖ!
ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್ ಸೋನಾಲಿ ಫೋಗಟ್ (Sonali Phogat) ಸಾವಿನ ಬಳಿಕ ಅವರ ಬದುಕಿನ ಮತ್ತೊಂದು ಮುಖ ತೆರೆದುಕೊಳ್ಳುತ್ತಿದೆ. ಬಡತನದ ಹಿನ್ನೆಲೆಯಿಂದ ಬಂದು, ಟಿವಿ ನಿರೂಪಕಿಯಾಗಿ, ನಟಿಯಾಗಿ, ಟಿಕ್‌ಟಾಕ್ ಸ್ಟಾರ್ ಆಗಿ, ಬಿಗ್‌ಬಾಸ್ ಸ್ಪರ್ಧಿಯಾಗಿ, ರಾಜಕಾರಣಿಯಾಗಿ ಮಿಂಚುತ್ತಿದ್ದ ಅವರ ಬದುಕು ನಾವೆಣಿಸಿದಷ್ಟು ಸುಂದರವಾಗಿರಲಿಲ್ಲ. ಪೂರ್ಣ ವಿವರಕ್ಕಾಗಿ ವಿಸ್ತಾರ EXPLAINER ಓದಿ