1. Power Point with HPK : ಸರಳ, ಪಾರದರ್ಶಕ ಕಂದಾಯ ಇಲಾಖೆಗೆ ಕೃಷ್ಣ ಬೈರೇಗೌಡ ‘3’ ಸೂತ್ರ!
ಬೆಂಗಳೂರು: ಸರಳ, ಪಾರದರ್ಶಕ ಕಂದಾಯ ಇಲಾಖೆಯನ್ನಾಗಿ (Revenue Department) ಮಾಡಲು ಈ ಬಾರಿ ನಾನು ನಿರ್ಧಾರ ಮಾಡಿದ್ದೇನೆ. ಕಂದಾಯ ಇಲಾಖೆ ಕಾರ್ಯವೈಖರಿ ಬಗ್ಗೆ ಕೆಲವು ದೂರುಗಳು ಇವೆ. ಇಲ್ಲಿ ನಾವು ಬದಲಾವಣೆ, ಸುಧಾರಣೆಗೆ ಚಾಲನೆ ನೀಡಿದ್ದೇವೆ. ಕೆಲವು ಕಡೆ ಸರಳೀಕರಣ ಮಾಡುತ್ತಲಿದ್ದು, ಅನಗತ್ಯ ಪದ್ಧತಿಗಳನ್ನು ತೆಗೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾನು ಮೂರು ಸೂತ್ರಗಳನ್ನು ಹಾಕಿಕೊಂಡಿದ್ದೇನೆ. ಇಲಾಖೆ ಅಧಿಕಾರಿಗಳ ಮಾನಸಿಕ ಸ್ಥಿತಿ ಬದಲಾವಣೆ, ಸರಳೀಕರಣ ವ್ಯವಸ್ಥೆ ಹಾಗೂ ಸಮಯದ ಪರಿಧಿಯೊಳಗೆ ಅರೆ ನ್ಯಾಯಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿಯನ್ನು ಹಾಕಿಕೊಂಡಿದ್ದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್: ಕೃಷ್ಣ ಬೈರೇಗೌಡ
2. Karnataka Politics : ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಒಲಿಯಿತಾ ವಿಪಕ್ಷ ನಾಯಕ ಸ್ಥಾನ?
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣ (Karnataka Politics) ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ನಡುವೆ ಕೆಲವು ವಿಚಾರದಲ್ಲಿ ಬಿಜೆಪಿ ಹಿಂದೆ ಬಿದ್ದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 2 ತಿಂಗಳು ಕಳೆದು ಮೂರನೇ ತಿಂಗಳಿಗೆ ಕಾಲಿಟ್ಟಿದ್ದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರಲಿಲ್ಲ. ಯಾರನ್ನು ಈ ಸ್ಥಾನದಲ್ಲಿ ಕೂರಿಸಬೇಕೆಂಬ ಬಗ್ಗೆ ವರಿಷ್ಠರು ಲೆಕ್ಕಾಚಾರದಲ್ಲಿ ತೊಡಗಿದ್ದರು. ಈಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಒಲಿಯಿತಾ ಎಂಬ ಚರ್ಚೆ ಹುಟ್ಟಿಕೊಂಡಿದ್ದು, ಬಿಜೆಪಿ ಹೈಕಮಾಂಡ್ ನಡೆ ಇದಕ್ಕೆ ಮತ್ತಷ್ಟು ಪುಷ್ಟೀಕರಣ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್
ಬೆಂಗಳೂರು: ವಿಧಾನ ಪರಿಷತ್ ನಾಮ ನಿರ್ದೇಶನ (Nominated to Legislative Council) ವಿಚಾರಕ್ಕೆ ಸಂಬಂಧಿಸಿ ಕೊನೆಗೂ ಮೂರು ಹೆಸರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅಂತಿಮಗೊಳಿಸಿದ್ದಾರೆ. ಮಾಜಿ ಸಚಿವೆ ಉಮಾಶ್ರೀ (Former Minister Umashree), ಮಾಜಿ ಸಚಿವ ಎಂ.ಆರ್. ಸೀತಾರಾಂ (Former minister MR Sitaram) ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ (Sudam Das) ಹೆಸರು ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೊನೇ ಕ್ಷಣದಲ್ಲಿ ಮನ್ಸೂರ್ ಅಲಿಖಾನ್ ಹೆಸರನ್ನು ಕೈಬಿಟ್ಟಿರುವುದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Amrit Bharat Station: ಕರ್ನಾಟಕದ 13 ರೈಲು ನಿಲ್ದಾಣ ಸೇರಿ ದೇಶದ 508 ಸ್ಟೇಷನ್‌ಗಳ ಅಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ
ನವದೆಹಲಿ: ಅಮೃತ ಭಾರತ ಸ್ಟೇಷನ್ ಯೋಜನೆ (Amrit Bharat Station) ಅಡಿಯಲ್ಲಿ ಕರ್ನಾಟಕದ 13 ರೈಲು ನಿಲ್ದಾಣಗಳು ಸೇರಿ ದೇಶದ 508 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಆಗಸ್ಟ್ 6) ಶಂಕುಸ್ಥಾಪನೆ ನೆರವೇರಿಸಿದರು. 508 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಸುಮಾರು 25 ಸಾವಿರ ಕೋಟಿ ರೂ. ವ್ಯಯವಾಗಲಿದ್ದು, ಇದಕ್ಕೆ ವರ್ಚ್ಯುವಲ್ ವೇದಿಕೆ ಮೂಲಕ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Ram Mandir: ಅಯೋಧ್ಯೆಯ ರಾಮ ಮಂದಿರಕ್ಕೆ ಶೀಘ್ರ 400 ಕೆಜಿ ತೂಕದ ವಿಶ್ವದ ಅತಿ ದೊಡ್ಡ ಬೀಗ ಕಾಣಿಕೆ!
ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ಲೋಕಾರ್ಪಣೆಗೊಳ್ಳಲಿರುವ ಅಯೋಧ್ಯೆಯ ರಾಮಮಂದಿರಕ್ಕಾಗಿ (Ram Mandir in Ayodhya) ಉತ್ತರ ಪ್ರದೇಶದ (Uttar Pradesh) ಅಲಿಗಢದ ಕುಶಲಕರ್ಮಿಯೊಬ್ಬರು (Aligarh Artisan) ವಿಶಿಷ್ಟ ಕಾಣಿಕೆಯೊಂದನ್ನು ನೀಡಲು ಮುಂದಾಗಿದ್ದಾರೆ. ಅಲಿಗಢದ ಸತ್ಯ ಪ್ರಕಾಶ್ ಶರ್ಮಾ (Satya Prakash Sharma) ಅವರು 400 ಕಿಲೋ ಗ್ರಾಮ್ ತೂಕದ ಬೃಹತ್ ಬೀಗವನ್ನು ತಯಾರಿಸಿದ್ದು(World’s Largest 400 Kg Lock), ಅದನ್ನು ರಾಮ ಮಂದಿರಕ್ಕೆ ನೀಡಲಿದ್ದಾರೆ. ಶರ್ಮಾ ಅವರು ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾಗಿದ್ದು, ರಾಮ ಮಂದಿರಕ್ಕೆ ನೀಡಲಿರುವ ಬೀಗವು, ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಬೀಗ ಎಂಬ ಖ್ಯಾತಿ ಗಳಿಸಿದೆ. ಈ ಬೀಗವನ್ನು ತಯಾರಿಸಲು ಅವರು ಹಲವು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು, ತಾವು ಸಾಕಷ್ಟು ಭಕ್ತರಿಂದ ಕಾಣಿಕೆ ಸ್ವೀಕರಿಸುತ್ತಿದ್ದು, ದೇವಾಲಯದಲ್ಲಿರುವ ದೊಡ್ಡ ಬೀಗವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಲಾಗುವುದು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6.PM Modi Statue: ಪುಣೆಯಲ್ಲಿ ನಿರ್ಮಾಣವಾಗಲಿದೆ ಮೋದಿ ಪ್ರತಿಮೆ; ಇದು ಏಕತಾ ಮೂರ್ತಿಗಿಂತ ಎತ್ತರ
7. Raj B Shetty: 2 ಬ್ರೇಕ್ ಅಪ್ ಆಗಿದೆ, ಈಗ ಒಂದು ರಿಲೇಶನ್ಶಿಪ್ ಇದೆ ಎಂದ ರಾಜ್ ಬಿ ಶೆಟ್ಟಿ!
8. Bengaluru Traffic: ಬೆಂಗಳೂರು ಟ್ರಾಫಿಕ್‌ನಿಂದಾಗಿ ವರ್ಷಕ್ಕೆ 19,725 ಕೋಟಿ ರೂ. ನಷ್ಟ!; ಅಧ್ಯಯನ ವರದಿ
9. World Cup 2023 : ಭಾರತಕ್ಕೆ ಪ್ರಯಾಣಿಸಲು ಪಾಕ್ ತಂಡಕ್ಕೆ ಅಲ್ಲಿನ ಸರಕಾರದ ಗ್ರೀನ್ ಸಿಗ್ನಲ್
10. Urfi Javed: ಬಿಗ್ ಬಾಸ್ ಕಣ್ಣುಗಳನ್ನೇ ಕದ್ದು ಬಿಟ್ರಾ ಅಂದ್ರು ನೆಟ್ಟಿಗರು; ಉರ್ಫಿ ಹೊಸ ಅವತಾರ!