Site icon Vistara News

Vistara Top 10 News: ಮಳೆಯಲ್ಲಿ ಮುಳುಗಿದ ಉತ್ತರ ಭಾರತ, ಸೋಮವಾರ ʼಧನಭಾಗ್ಯʼ ಜಾರಿ ಇತ್ಯಾದಿ ಪ್ರಮುಖ ಸುದ್ದಿಗಳಿವು

vistara top 10 news indias north been flooded to anna bhagya to be launched from monday and more news

1. Delhi Rain: ಮಳೆ ಪ್ರವಾಹದಲ್ಲಿ ಮುಳುಗುತ್ತಿದೆ ಉತ್ತರ ಭಾರತ; ಕಾಶ್ಮೀರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಯೋಧರು
ದೇಶದಲ್ಲಿ ದಕ್ಷಿಣ ಭಾಗದಲ್ಲಿ ಮಳೆ ಕೊರತೆ (Rain News) ಇನ್ನೂ ಕಾಡುತ್ತಿದೆ. ಅತ್ತ ಉತ್ತರ ಭಾಗ ಮತ್ತು ವಾಯುವ್ಯ ಭಾಗದಲ್ಲಿರುವ ರಾಜ್ಯಗಳಲ್ಲಿ ವರುಣ ರುದ್ರಾವತಾರ ತಾಳಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 153 ಎಂಎಂ ಮಳೆಯಾಗಿದ್ದು (Delhi Rain), 41 ವರ್ಷದ ನಂತರ ಇಷ್ಟು ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. 1982ರ ಜುಲೈನಲ್ಲಿ ಒಮ್ಮೆ ಭಯಂಕರ ಮಳೆಯಾಗಿತ್ತು. ಅದರಿಂದೀಚೆಗೆ 150ಎಂಎಂ ಗಡಿ ದಾಟಿರಲಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗೇ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ
ಹತ್ಯೆಯಾಗಿರುವ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ (Jain muni Murder) ಅವರ ಅಂತಿಮ ವಿಧಿವಿಧಾನವು ಜೈನ ಪರಂಪರೆಯಂತೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನವಾದರು. ಜೈನಮುನಿಯ ಅವರ ಪೂರ್ವಾಶ್ರಮದ ಅಣ್ಣನ ಮಗ, ಆಶ್ರಮದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಭೀಮಗೊಂಡ ಉಗಾರೆ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Pen Drive Issue:‌ ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್‌ ಪ್ರಶ್ನೆಗೆ ಶಿವಕುಮಾರ್‌ ಉತ್ತರ
ರಾಜ್ಯದಲ್ಲಿ ಈ ಹಿಂದೆ ಸಿಡಿ ಪ್ರಕರಣ, ವಿವಾದಗಳು ನಡೆಯುತ್ತಿದ್ದವು. ಈ ಬಾರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್‌ (Pen Drive) ಮೂಲಕ ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರಾಕರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Congress Guarantee: ಸೋಮವಾರದಿಂದ ಅನ್ನಭಾಗ್ಯ ಚಾಲನೆ: ನೇರವಾಗಿ ಅಕೌಂಟಿಗೆ ಬಂದು ಬೀಳಲಿದೆ 170 ರೂ.!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಅನ್ನಭಾಗ್ಯಕ್ಕೆ ಸೋಮವಾರದಿಂದ ಚಾಲನೆ ಸಿಗಲಿದೆ. ರಾಜ್ಯಕ್ಕೆ ಅಗತ್ಯವಾದ 2.3 ಮೆಟ್ರಿಕ್‌ ಟನ್‌ ಅಕ್ಕಿ ದೊರಕದ ಕಾರಣ ಅಲ್ಲಿವರೆಗೆ ಫಲಾನುಭವಿಗಳ ಖಾತೆಗೆ ಮಾಸಿಕ 170 ರೂ. ಹಾಕುವ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Anganawadi workers : ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಂಗನವಾಡಿ ಕಾರ್ಯಕರ್ತೆಯರು; ನಾಳೆ ರಾಜ್ಯಾದ್ಯಂತ ಪ್ರತಿಭಟನೆ
ರಾಜ್ಯಾದ್ಯಂತ ನಾಳೆ (ಜು.10) ಅಂಗನವಾಡಿ ಕಾರ್ಯಕರ್ತೆಯರು (Anganawadi workers) ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿದ್ದ ಮೊಬೈಲ್‌ಗಳನ್ನು ವಾಪಸ್ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Khalistani Terrorists: ಖಲಿಸ್ತಾನಿ ಧ್ವಜ ಬೀಸಿದ ಉಗ್ರರಿಗೆ ತಿರಂಗಾ ಮೂಲಕ ಭಾರತೀಯರ ತಿರುಗೇಟು
ಕೆನಡಾದ ಟೊರೊಂಟೊದಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿ ಎದುರು ಹಲವು ಖಲಿಸ್ತಾನಿ ಉಗ್ರರು ಜಮೆಯಾಗಿ ಪ್ರತಿಭಟನೆ ನಡೆಸಿದ್ದು, ಖಲಿಸ್ತಾನಿ (Khalistani Terrorists) ಧ್ವಜ ಬೀಸಿದ್ದಾರೆ. ಆದರೆ, ಖಲಿಸ್ತಾನಿಗಳಿಗೆ ಪ್ರತಿಯಾಗಿ ಅನಿವಾಸಿ ಭಾರತೀಯರು ತಿರಂಗಾ ಬೀಸುವ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ. ಖಲಿಸ್ತಾನಿಗಳು ತಮ್ಮ ಸಂಘಟನೆ ಧ್ವಜ ಹಾರಿಸುತ್ತಿದ್ದರೆ, ಅವರ ಎದುರು ನಿಂತ ಭಾರತೀಯರು ತಿರಂಗಾ ಬೀಸಿ ತಕ್ಕ ಪ್ರತ್ಯುತ್ತರ ನೀಡಿರುವ ವಿಡಿಯೊ ಈಗ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Digvijaya Singh: ಆರೆಸ್ಸೆಸ್‌ ಮಾಜಿ ಮುಖ್ಯಸ್ಥ ಗುರೂಜಿ ವಿರುದ್ಧ ಟ್ವೀಟ್; ದಿಗ್ವಿಜಯ್ ಸಿಂಗ್ ವಿರುದ್ಧ ಕೇಸ್ ದಾಖಲು
ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮಾಜಿ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ (MS Golwalkar) ಅವರ ವಿರುದ್ಧ ಅವಮಾನಕಾರಿ ಟ್ವೀಟ್ ಮಾಡಿದ ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (Digvijaya Singh) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ರಾತ್ರಿ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಥಳೀಯ ವಕೀಲ ಮತ್ತು ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಜೋಶಿ ಅವರು ಕೇಸ್ ದಾಖಲಿಸಿದ್ದಾರೆ ಎಂದು ತುಕೋಗಂಜ್ ಪೊಲೀಸ್ ಸ್ಟೇಷನ್ ಅಧಿಕಾರಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. PUBG Love Story: ಭಾರತ ನನ್ನದು, ನಾನೀಗ ಹಿಂದು; ಇದು ಪ್ರೀತಿ ಅರಸಿ ಪಾಕ್‌ನಿಂದ ಬಂದ ಮಹಿಳೆ ಮನದಾಳ
ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿಯನ್ನು ಬಯಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ದಿಟ್ಟ ಮಹಿಳೆ ಸೀಮಾ ಹೈದರ್‌ ಹಾಗೂ ಆಕೆಯ ಪ್ರಿಯತಮ ಸಚಿನ್‌ ಸಿಂಗ್, ನಾಲ್ಕು ಮಕ್ಕಳು ಜೈಲಿನಿಂದ (PUBG Love Story) ಹೊರಬಂದಿದ್ದಾರೆ. ಹೊರಬಂದಿರುವ ಸೀಮಾ ಹೈದರ್‌, “ಭಾರತ ಈಗ ನನ್ನ ದೇಶ. ನಾನು ಹಿಂದುತ್ವವನ್ನು ಸ್ವೀಕರಿಸಿದ್ದೇನೆ” ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಮದುವೆಯಾಗುವುದೇ ವೃತ್ತಿ, ಲಕ್ಷಲಕ್ಷ ಹಣ ಸಂಪಾದನೆ​; 15ನೇ ಹೆಂಡತಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದ!
ವಂಚನೆಯನ್ನು ವೃತ್ತಿ ಮಾಡಿಕೊಂಡವರಿಗೆ ಹಣಗಳಿಸಲು ನೂರೆಂಟು ಮಾರ್ಗಗಳು ಇರುತ್ತವೆ. ಹಾಗೇ, ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್​ (35) ಎಂಬಾತ ಕೂಡ ಕಾಲಕಾಲಕ್ಕೆ ಡಾಕ್ಟರ್​, ಎಂಜಿನಿಯರ್​, ಗುತ್ತಿಗೆದಾರ, ಉದ್ಯಮಿಯಾಗಿ ಬದಲಾಗಿ, ಬರೋಬ್ಬರಿ 15 ಮದುವೆಯಾಗಿ (Man Marries15 woman) ಲಕ್ಷಾಂತರ ರೂಪಾಯಿ ಹಣ ಮಾಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Ashes 2023 : ಹೇರ್​ ಕಟ್ ಮಾಡಿಸಿ ಕ್ಷೌರಿಕನಿಗೆ ಹಣ ಕೊಡದೇ ಓಡಿ ಹೋದ ಆಸೀಸ್ ಕ್ರಿಕೆಟಿಗರು!
ಆಸ್ಟ್ರೇಲಿಯಾ ತಂಡದ ವಿಕೆಟ್​ಕೀಪರ್​ ಅಲೆಕ್ಸ್ ಕ್ಯೇರಿ ಕ್ಷೌರಿಕನ ಅಂಗಡಿಯಲ್ಲಿ ದುಡ್ಡು ಕೊಡದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಮಾಜಿ ನಾಯಕ ಅಲೈಸ್ಟರ್​​ ಕುಕ್​ ಬೇಷರತ್​ ಕ್ಷಮೆ ಯಾಚಿಸಿದ್ದಾರೆ. ಈ ಪ್ರಸಂಗವು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಇದಕ್ಕೆ ಸ್ಪಷ್ಟನೆ ನೀಡಿತ್ತು ಇದೀಗ ಕುಕ್​ ಗೊಂದಲಕ್ಕೆ ಪೂರ್ಣ ವಿರಾಮ ಹೇಳಿದ್ದು, ಅಲೆಕ್ಸ್​ ಕ್ಯೇರಿಯ ಕ್ಷಮೆಯಾಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version