Site icon Vistara News

Vistara TOP 10 NEWS: ಬಿಜೆಪಿಯಲ್ಲಿ ಅಶಿಸ್ತಿನ ಸಮಸ್ಯೆಯಿಂದ, ಸರ್ಕಾರಕ್ಕೆ 6ನೇ ಗ್ಯಾರಂಟಿ ಸವಾಲಿನವರೆಗೆ ಪ್ರಮುಖ ಸುದ್ದಿಗಳಿವು

vistara top 10 news indiscipline in BJP to guarantee challenge for govt and more news

#image_title

1. Operation Kamala: ಸೋಲಿಗೆ ಆಪರೇಷನ್‌ ಕಮಲ ಕಾರಣ, ಅಶಿಸ್ತಿನ ವಲಸಿಗರ ಬಾಲ ಕಟ್‌ ಎಂದ ಈಶ್ವರಪ್ಪ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಕಂಡ ಕಂಡ ನಾಯಕರು ಕಂಡ ಕಂಡಂತೆ ಪರಾಭವದ ವಿಶ್ಲೇಷಣೆ ಮಾಡುತ್ತಿದ್ದಾರೆ. ಪಕ್ಷದೊಳಗೆ ನಡೆಯಬೇಕಾಗಿದ್ದ ಆಂತರಿಕ ಅವಲೋಕನ ಹಾದಿ ಬೀದಿಯಲ್ಲಿ ನಡೆಯುವ ಮೂಲಕ ಶಿಸ್ತಿನ ಪಕ್ಷದ ಅಶಿಸ್ತು (BJP Politics) ಬೀದಿ ಚರ್ಚೆಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಲು ಆಪರೇಷನ್‌ ಕಮಲವೇ (Operation Kamala) ಕಾರಣ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಹುಬ್ಬಳ್ಳಿಯಲ್ಲಿ ಕೇಳಿದ್ದು, ಅಶಿಸ್ತು ತೋರುವ ವಲಸಿಗರ ಬಾಲ ಕಟ್‌ ಮಾಡುವುದಾಗಿ ಎಚ್ಚರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ. (Vistara TOP 10 NEWS)

2. Legislative Assembly: ಬಜೆಟ್‌ ಅಂದ್ರೆ ಬಿ.ವೈ. ವಿಜಯೇಂದ್ರಗೆ ಗೊತ್ತಿರಬಹುದು; ಹೊಸ ಶಾಸಕರು ತಿಳ್ಕೊಬೇಕು ಎಂದ ಸಿಎಂ ಸಿದ್ದರಾಮಯ್ಯ
ನೂತನವಾಗಿ ಆಯ್ಕೆಯಾಗಿರುವ ಶಾಸಕರು (Legislative Assembly) ಬಜೆಟ್‌ ಸೇರಿದಂತೆ ಸಂಸದೀಯ ನಡವಳಿಕೆಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಹೊಸ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ನೆಲಮಂಗಲದ ಕ್ಷೇಮವನದಲ್ಲಿ ಆಯೋಜಿಸಿರುವ ಮೂರು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Vistara Impact: ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿ ಮಣ್ಣು ತೆಗೆಯುವವರ ವಿರುದ್ಧ FIRಗೆ ಸೂಚನೆ
ಕೆಆರ್‌ಎಸ್‌ ಒಡಲಿಗೆ ಹಗಲಿನಲ್ಲಿಯೇ ಕನ್ನ ಹಾಕುವವರ ವಿರುದ್ಧ ಕೊನೆಗೂ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ. ಗಣಿಗಾರಿಕೆ ಬಳಿಕ ಮರಳು, ಮಣ್ಣು ದಂಧೆಕೋರರ ಆಕ್ರಮಣದಿಂದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣಕ್ಕೆ ಬ್ರೇಕ್‌ ಹಾಕಲಾಗಿದೆ. ಅಕ್ರಮ ಮಣ್ಣು ಸಾಗಾಟ ವಿಚಾರವನ್ನು ವಿಸ್ತಾರ ನ್ಯೂಸ್‌ (Vistara Impact) ವರದಿ ಮಾಡಿದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಲು ಎಂಜಿನಿಯರ್ ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Politics: ಬಿಜೆಪಿ ಕಾಲದ ಹಗರಣಗಳ SIT ತನಿಖೆ?; ಅಧಿವೇಶನದಲ್ಲಿ ಪ್ರತಿಪಕ್ಷ ಕಟ್ಟಿ ಹಾಕಲು ಪ್ಲ್ಯಾನ್‌?
ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ (Budget session) ಜುಲೈ 3ರಿಂದ ಆರಂಭಗೊಳ್ಳಲಿದ್ದು, ಅದಕ್ಕಿಂತ ಮೊದಲು ಬಿಜೆಪಿ ಕಾಲದ ಹಗರಣಗಳ (Scams under BJP Government) ತನಿಖೆಗೆ ಆದೇಶ ನೀಡಬೇಕು ಎಂಬ ಒತ್ತಡ ಹೆಚ್ಚಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Bengaluru-Mysuru Expressway: ಈ ಹೈವೇ ಯಾವುದೋ ಹಳ್ಳಿ ರಸ್ತೆ ರೀತಿ ಇದೆ ಎಂದ ಸಚಿವ: ಹೆದ್ದಾರಿ ಕಾಮಗಾರಿ ತನಿಖೆ

5. Viral News: ಹೆಂಡಕ್ಕಾಗಿ ಹೋರಾಟ! ಬಸ್‌ಗಳಲ್ಲಿ ಡಿಫೆನ್ಸ್‌ ಮದ್ಯ ಒಯ್ಯೋಕೆ ಬೇಕು ಪರ್ಮಿಶನ್; ನಾರಿಯರ ಪ್ರತಿಭಟನೆ
ಶ್‌..! ಇದು ಎಣ್ಣೆಯ ವಿಷ್ಯ!!! ಇದರ ಬಗ್ಗೆ ಮಾತನಾಡಬೇಕಾದರೆ ಇರಲಿ ಎಚ್ಚರ. “ನೀವು ಕ್ಷಣಕ್ಕೊಂದು ರೂಲ್ಸ್‌ ಬದಲಾವಣೆ ಮಾಡಿದರೆ ಹೇಗೆ? ನಾವು ಮದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು? ಅರ‍್ರೇ, ಬಸ್‌ನಲ್ಲಿ ಮದ್ಯ ಸಾಗಾಟ ಮಾಡಬಾರದು ಎಂದರೆ ಹೇಗೆ? ನಾವೆಲ್ಲಿಗೆ ಹೋಗಬೇಕು? ಅದೆಲ್ಲಾ ಆಗಲ್ಲ, ನೀವು ನಮಗೆ ಪರ್ಮಿಶನ್‌ ಕೊಡ್ಲೇಬೇಕು!” ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮುಂದೆ ಹೀಗೊಂದು ಬೇಡಿಕೆಯನ್ನೂ ಇಟ್ಟಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Capital Investment Fund: ಬಂಡವಾಳ ಹೂಡಿಕೆಗೆ ಕೇಂದ್ರದಿಂದ ಕರ್ನಾಟಕಕ್ಕೆ 3,647 ಕೋಟಿ ರೂ. ವಿಶೇಷ ಅನುದಾನ ಮಂಜೂರು
ದೇಶದ 16 ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ವಿಶೇಷ ನೆರವನ್ನು (Capital Investment Fund) ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಇದರಲ್ಲಿ ಕರ್ನಾಟಕಕ್ಕೆ 3,647 ಕೋಟಿ ರೂ. ದೊರಕಲಿದೆ. 2023-24 ಹಣಕಾಸು ವರ್ಷದ ವಿಶೇಷ ಯೋಜನೆ ಅಡಿಯಲ್ಲಿ ಬಂಡವಾಳ ಹೂಡಿಕೆಗಾಗಿ 16 ರಾಜ್ಯಗಳಿಗೆ 56,415 ಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Mera Booth Sabse Mazboot: ಬೂತ್‌ ಸದಸ್ಯರ ಜತೆ ಮೋದಿ ಭಾಷಣ ನಾಳೆ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ?
ಮಂಗಳವಾರ ಬೆಳಗ್ಗೆ 10.30ಕ್ಕೆ ರಾಜ್ಯದ ಎಲ್ಲ ಮಂಡಲ ಕೇಂದ್ರಗಳಲ್ಲಿ ಮತ್ತು ದೇಶದ ಎಲ್ಲ ಮಂಡಲ ಕೇಂದ್ರಗಳಲ್ಲಿ ʼಮೇರಾ ಬೂತ್ ಸಬ್‍ಸೆ ಮಜ್‍ಬೂತ್ʼ (ನನ್ನ ಬೂತ್ ಶಕ್ತಿಶಾಲಿ ಬೂತ್) (Mera Booth Sabse Mazboot) ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಧ್ಯಪ್ರದೇಶದಿಂದ ಮೋದಿ ಮಾತನಾಡಲಿದ್ದು, ಕರ್ನಾಟಕದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ತಯಾರಿಗೆ ಅಧಿಕೃತವಾಗಿ ಮೋದಿ ಚಾಲನೆ ನೀಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Anganawadi workers : ಸರ್ಕಾರಕ್ಕೆ ತಲೆನೋವಾದ 6ನೇ ಗ್ಯಾರಂಟಿ; ನಾಳೆಯಿಂದ ಅಂಗನವಾಡಿ ಪ್ರತಿಭಟನೆ
ಅನ್ನ ಭಾಗ್ಯ, ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಸ್ಕೀಂ, ಯುವನಿಧಿ ಮತ್ತು ಮಹಿಳೆಯರ ಉಚಿತ ಪ್ರಯಾಣದ ಐದು ಗ್ಯಾರಂಟಿ ಸ್ಕೀಂಗಳ (Congress Guarantee) ಜತೆಗೆ ಹಿರಿಯ ನಾಯಕರೆಲ್ಲ ಘಂಟಾಘೋಷವಾಗಿ ಸಾರಿದ ಆರನೇ ಭರವಸೆಯೊಂದು ಈಗ ಕಾಂಗ್ರೆಸ್‌ ಸರ್ಕಾರದ (Congress Government) ತಲೆ ತಿನ್ನಲು ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Abdul nasir Madani : ಬೆಂಗಳೂರು ಜೈಲಿನಲ್ಲಿದ್ದ ಅಬ್ದುಲ್‌ ನಾಸಿರ್‌ ಮದನಿ ಕೇರಳದ ಮನೆಗೆ!
2008ರ ಬೆಂಗಳೂರು ಸ್ಫೋಟದ (2008 Bangalore Blast) ರೂವಾರಿ, ಹಲವಾರು ಕ್ರಿಮಿನಲ್‌ ಪ್ರಕರಣಗಳನ್ನು ಹೊತ್ತಿರುವ ಪಿಡಿಪಿ ಪಕ್ಷದ (PDP President) ಅಧ್ಯಕ್ಷ ಅಬ್ದುಲ್‌ ನಾಸಿರ್‌ ಮದನಿ (Abdul Nasir Madani) ಬೆಂಗಳೂರು ಜೈಲಿನಿಂದ ಕೇರಳದ (Bangalore to Kerala) ಮನೆಗೆ ಹೋಗಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Amazon: ಭಾರತದಲ್ಲಿ 2025ರ ಹೊತ್ತಿಗೆ 20 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಅಮೆಜಾನ್! ಮೋದಿ ಜತೆ ಸಿಇಒ ಮಾತುಕತೆ
ಇ ಕಾಮರ್ಸ್ ದೈತ್ಯ ಅಮೆಜಾನ್ (Amazon) ಭಾರತದಲ್ಲಿ (India) ಸುಮಾರು 15 ಶತಕೋಟಿ ಡಾಲರ್ ಹೂಡಿಕೆ ಮಾಡಲು ಸಜ್ಜಾಗಿದೆ. ಇದರೊಂದಿಗೆ ಭಾರತದಲ್ಲಿ ಅದರ ಒಟ್ಟು ಹೂಡಿಕೆಯ ಪ್ರಮಾಣ 26 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಭೇಟಿಯ ವೇಳೆ ಅಮೆಜಾನ್ ಸಿಇಒ ಆ್ಯಂಡಿ ಜಾಸ್ಸಿ (Amazon CEO Andy Jassy) ಅವರು ಈ ವಿಷಯವನ್ನು ತಿಳಿಸಿದ್ದಾರೆ. ಭಾರತದಲ್ಲಿ ಈವರೆಗೆ ನಾವು 11 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆ. ಹೆಚ್ಚುವರಿಯಾಗಿ ಇನ್ನೂ 15 ಶತಕೋಟಿ ಡಾಲರ್ ಹೂಡಿಕೆ ಮಾಡಲಿದ್ದೇವೆ. ಭಾರತದಲ್ಲಿ ಅಮೆಜಾನ್ ಹೂಡಿಕೆ ಮೊತ್ತ 26 ಶತಕೋಟಿ ಡಾಲರ್ ಆಗಲಿದೆ. ಹಾಗಾಗಿ, ಭವಿಷ್ಯದಲ್ಲಿ ಭಾರತದ ಜತೆಗೆ ನಾವು ಸಂಬಂಧವನ್ನು ಹೆಚ್ಚಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version