Site icon Vistara News

ವಿಸ್ತಾರ TOP 10 NEWS: ಮೋದಿಗೆ ಪ್ರಶಸ್ತಿಗಳ ಸುರಿಮಳೆಯಿಂದ, ಬಿಜೆಪಿಯಲ್ಲಿ ನಾಯಕತ್ವ ರಗಳೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news international awards to modi to karnataka bjp leaders accusation and more news

#image_title

1. Modi Egypt Visit: ಮೋದಿಗೆ ಈಜಿಪ್ಟ್‌ ಅತ್ಯುನ್ನತ ಪ್ರಶಸ್ತಿ; ಪ್ರಧಾನಿಯಾದ ಬಳಿಕ ಸಿಕ್ಕ ಜಾಗತಿಕ ಪ್ರಶಸ್ತಿಗಳೆಷ್ಟು?
ಕೈರೋದಲ್ಲಿ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌-ಸಿಸಿ (Abdel Fattah al-Sisi) ಅವರು ತಮ್ಮ ರಾಷ್ಟ್ರದ ಅತ್ಯುನ್ನತ ನರೇಂದ್ರ ಮೋದಿ ಅವರಿಗೆ ಆರ್ಡರ್‌ ಆಫ್‌ ದಿ ನೈಲ್‌ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಜಿಪ್ಟ್‌ ಮಾತ್ರವಲ್ಲ ಜಗತ್ತಿನ ಹತ್ತಾರು ರಾಷ್ಟ್ರಗಳು ಮೋದಿ ಅವರಿಗೆ ತಮ್ಮ ರಾಷ್ಟ್ರಗಳ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಹಾಗಾದರೆ, 2014ರ ಬಳಿಕ ಮೋದಿ ಅವರಿಗೆ ಸಿಕ್ಕ ಜಾಗತಿಕ ಪ್ರಶಸ್ತಿಗಳು ಯಾವವು? ಯಾವ ರಾಷ್ಟ್ರ ಯಾವ ಪ್ರಶಸ್ತಿ ನೀಡಿದೆ ಎಂಬುದರ ಪಟ್ಟಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Modi Egypt Visit: ಈಜಿಪ್ಟ್‌ನಲ್ಲಿ ಸಾವಿರ ವರ್ಷ ಇತಿಹಾಸವಿರುವ ಮಸೀದಿಗೆ ಮೋದಿ ಭೇಟಿ, ಸೌಹಾರ್ದ ಸಂದೇಶ ರವಾನೆ

2. BJP Karnataka: ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಸವರಾಜ ಬೊಮ್ಮಾಯಿ ಹಾಗೂ ಬಸನನೌಡ ಪಾಟೀಲ್‌ ಯತ್ನಾಳ್‌
ರಾಜ್ಯ ಬಿಜೆಪಿ (BJP Karnataka) ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಜಿಲ್ಲಾ ಕಾರ್ಯಕರ್ತರ ಸಭೆಗಳು ನಡೆಯುತ್ತಿದ್ದು, ಇಬ್ಬರು ನಾಯಕರುಗಳು ವೇದಿಕೆ ಮೇಲೆಯೇ ಪರಸ್ಪರ ದೂಷಾರೋಪಣೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತಿಗೆ ವೇದಿಕೆಯಲ್ಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ
ಹೆಚ್ಚಿನ ಓದಿಗಾಗಿ: BJP Karnataka: ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ನೇರ ದಾಳಿ: ಹಳೆ ಕಥೆ ಬಿಚ್ಚಿಟ್ಟ ರಾಜ್ಯಾಧ್ಯಕ್ಷ ಆಕಾಂಕ್ಷಿ ವಿ. ಸೋಮಣ್ಣ

3. Siddaramaiah: ಅಚ್ಛೇ ದಿನ್‌ ಸುಳ್ಳಾಗಿದೆ, ಮೋದಿ ಹವಾ ಡೌನ್ ಆಗಿದೆ: ಮಹಾರಾಷ್ಟ್ರದಲ್ಲಿ ಕತ್ತಿ ಝಳಪಿಸಿದ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯು ಮಸುಕಾಗುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗಳೇ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮಹಾ ನಿರ್ಧಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Mohan Bhagawat: ಒಬ್ಬ ವ್ಯಕ್ತಿಯಿಂದ ಭಾರತದ ಏಳಿಗೆ ಅಸಾಧ್ಯ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಗಣಿನಾಡು ಬಳ್ಳಾರಿಗೆ ಭಾನುವಾರ ಭೇಟಿ ನೀಡಿದ್ದರು. ಬಳ್ಳಾರಿಯಲ್ಲಿ ಆರ್‌ಎಸ್‌ಎಸ್‌ನ ನೂತನ ಕಚೇರಿಯನ್ನು ಮೋಹನ್‌ ಭಾಗವತ್‌ ಉದ್ಘಾಟಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಗ್ಯಾರಂಟಿ ಯೋಜನೆಯ (Congress Guarantee Scheme) ಭಾಗವಾದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ (Shakti Scheme) ಭರಪೂರ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ವೇಳೆ ಮಹಿಳೆಯರು ಸಹ ಉತ್ಸಾಹದಿಂದ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ (Free Bus Service) ಮಾಡುತ್ತಿದ್ದಾರೆ. ಈ ಯೋಜನೆಯು ಜೂನ್‌ 11ರಂದು ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ಈಗ 14ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಒಟ್ಟು 166 ಕೋಟಿ ಮೌಲ್ಯ ದಾಟಿ ಮಹಿಳಾ ಪ್ರಯಾಣಿಕರು “ಶಕ್ತಿ” ಯೋಜನೆಯಡಿ ಸಂಚಾರ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Weather Report: ವೇಗ ಪಡೆಯದ ಮುಂಗಾರು; ಈ 12 ಜಿಲ್ಲೆಗಳಲ್ಲಿ ಸಾಧಾರಣ ಮಳೆ
ಮುಂದಿನ 48 ಗಂಟೆಯಲ್ಲಿ ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾದರೆ, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ಆದರೆ 12 ಜಿಲ್ಲೆಗಳಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಸಾಧಾರಣ ಮಳೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. World Cup 2023 : ವಿಶ್ವ ಕಪ್‌ಗೆ ತಂಡದ ಆಟಗಾರರ ಪಟ್ಟಿ ಸಲ್ಲಿಸಲು ಕೊನೇ ದಿನ ಪ್ರಕಟಿಸಿದ ಐಸಿಸಿ
ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್‌ಗೆ ತಮ್ಮತಮ್ಮ ತಂಡಗಳ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಆಗಸ್ಟ್ 29ಕ್ಕೆ ಕೊನೇ ದಿನಾಂಕ ಎಂದು ಐಸಿಸಿ ಗಡುವು ಕೊಟ್ಟಿದೆ. ಈ ಮೂಲಕ ಭಾಗವಹಿಸುವ ಎಲ್ಲಾ ತಂಡಗಳು ಮೆಗಾ ಈವೆಂಟ್‌ಗೆ ತಮ್ಮ ತಂಡಗಳ ಆಟಗಾರರನ್ನು ನಿಗದಿಪಡಿಸಲು ಇನ್ನು ಕೇವಲ 2 ತಿಂಗಳು ಮಾತ್ರ ಬಾಕಿ ಉಳಿದಿವೆ. ಟೂರ್ನಿ ಆರಂಭಕ್ಕೆ 30 ದಿನಗಳ ಮೊದಲು ಆಟಗಾರರ ಪಟ್ಟಿಯನ್ನು ನಮಗೆ ಸಲ್ಲಿಸಬೇಕಾಗುತ್ತದೆ. ಪಂದ್ಯಾವಳಿಗಳಿಗೆ ಒಂದು ವಾರದ ಮೊದಲು ಬೆಂಬಲ ಅವಧಿ ಪ್ರಾರಂಭವಾಗಬಹುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Train Accident: ಪಶ್ಚಿಮ ಬಂಗಾಳದಲ್ಲಿ ಎರಡು ರೈಲುಗಳು ಡಿಕ್ಕಿ, ಚೆಲ್ಲಾಪಿಲ್ಲಿಯಾಗಿ ಬಿದ್ದ 12 ಬೋಗಿಗಳು
ಒಡಿಶಾದ ಬಾಲಾಸೋರ್‌ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತ ಸಂಭವಿಸಿ ಕೆಲವೇ ದಿನಗಳು ಕಳೆದಿವೆ. ಸುಮಾರು 275 ಜನ ಸಾವಿಗೀಡಾದ, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡ ರೈಲು ದುರಂತದ ಕರಾಳ ನೆನಪುಗಳು ಮಾಸುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೈಲು (Train Accident) ಅಪಘಾತ ಸಂಭವಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು!
ಮೆಟಾ ಒಡೆತನದ ಮೆಸೇಜಿಂಗ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ. ಚಾಟ್ಸ್ ಮತ್ತು ಗ್ರೂಪ್ಸ್‌ಗಳಲ್ಲಿ ಪಿನ್ ಮಾಡಿದ ಮೆಸೇಜ್‌ ಎಷ್ಟು ಅವಧಿಯವರಿಗೆ ಇರಬೇಕು ಎಂಬ ನಿರ್ಧರಿಸುವ ಮೆಸೇಜ್ ಪಿನ್ ಡುರೇಷನ್ (Message Pin Duration) ಎಂಬ ಹೊಸ ಫೀಚರ್ ಲಾಂಚ್ ಮಾಡಲಿದೆ. ಈ ಕುರಿತು ವಾಟ್ಸಾಪ್ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯದಿಂದಾಗಿ ಬಳಕೆದಾರರಿಗೆ ಅಗತ್ಯವಾದ ಮೆಸೇಜ್ ಅನ್ನು ಗ್ರೂಪ್ಸ್ (Groups) ಮತ್ತು ಚಾಟ್ಸ್‌ನಲ್ಲಿ (Chats) ಸಂದೇಶವನ್ನು ಪಿನ್ ಮಾಡಬಹುದಾಗಿದೆ. ಇದರಿಂದಾಗಿ ಮಹತ್ವದ ಸಂದೇಶವನ್ನು ಹೈಲೈಟ್ ಮಾಡಲು ಸಾಧ್ಯವಾಗಲಿದೆ(WhatsApp New Feature). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್‌ ವೈರಲ್‌!
ಪ್ರಭಾಸ್, ಕೃತಿ ಸನೂನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿಪುರುಷ (Adipurush Movie) ಜೂನ್ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಅಂದಿನಿಂದ ಇದು ತನ್ನ VFX, ಸಂಭಾಷಣೆಗಳು ಮತ್ತು ವೇಷಭೂಷಣಗಳಿಗೆ ಹಿನ್ನಡೆಯನ್ನು ಅನುಭವಿಸುತ್ತಲೇ ಇದೆ. ಈ ಚಿತ್ರವು ಮೀಮ್‌ಗಳಿಗೆ ಆಹಾರವಾಗುತ್ತಿದ್ದಂತೆ, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಚಿತ್ರದ ಬಗ್ಗೆ ಟ್ರೋಲ್‌ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version