Site icon Vistara News

ವಿಸ್ತಾರ TOP 10 NEWS: ಬಿಬಿಸಿ ಮೇಲೆ ಐಟಿ ದಾಳಿಯಿಂದ, ಅಡಿಕೆ ಕುರಿತು ಹೊಸ ಸಂಶೋಧನೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-IT Raid Over BBC to Arecanut research and more news

#image_title

1. IT Raid On BBC: ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ, ಮುಂಬಯಿ ಕಚೇರಿಗಳ ಮೇಲೆ ಐಟಿ ರೇಡ್​; ಉದ್ಯೋಗಿಗಳ ಮೊಬೈಲ್​ ಜಪ್ತಿ
ದೆಹಲಿ ಮತ್ತು ಮುಂಬಯಿಯಲ್ಲಿರುವ ಬಿಬಿಸಿ ಬ್ರಿಟಿಷ್​ ಮಾಧ್ಯಮ ಸಂಸ್ಥೆಯ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ರೇಡ್ (IT Raid On BBC)​ ಮಾಡಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಮೊಬೈಲ್, ಲ್ಯಾಪ್​ಟಾಪ್​​ಗಳನ್ನು ಜಪ್ತಿ ಮಾಡಿದ್ದಾರೆ. ಹಾಗೇ, ಅವರಿಗೆ ಕೆಲಸ ಮುಂದುವರಿಸಲು ಅವಕಾಶ ಕೊಡದೆ, ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಬಿಬಿಸಿ ವಿರುದ್ಧ, ಅಂತಾರಾಷ್ಟ್ರೀಯ ತೆರಿಗೆ ನಿಯಮಗಳ ಉಲ್ಲಂಘನೆ ಮತ್ತು ಹಣ ವರ್ಗಾವಣೆ ಅಕ್ರಮದ ಆರೋಪ ಕೇಳಿಬಂದಿದ್ದರಿಂದ ಐಟಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Amit Shah: ಮಂಡ್ಯದ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ; ಈ ಬಾರಿ ಬಿಜೆಪಿಗೆ ಅಧಿಕಾರ ಖಚಿತ: ಅಮಿತ್‌ ಶಾ ಸಂದರ್ಶನ
ಮಂಡ್ಯ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ ಹಾಗೂ ಬಿಜೆಪಿಯ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದು, ಹಳೆ ಮೈಸೂರು ಕರ್ನಾಟಕದ ರಾಜಕಾರಣದ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಮತ್ತೊಮ್ಮೆ ಸಾಬೀತಾಗಿದೆ. ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್‌ ಶಾ, ದೇಶದ ವಿವಿಧ ವಿಚಾರಗಳ ಜತೆಗೆ ಕರ್ನಾಟಕದ ರಾಜಕಾರಣದ ಕುರಿತೂ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Amit Shah: ಮೋದಿ ವಿರುದ್ಧ ರಾಹುಲ್‌ ಗಾಂಧಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ? ಅಮಿತ್‌ ಶಾ ಉತ್ತರ ಏನು?

3. Siddaramaiah: ಕರ್ನಾಟಕ ರಾಜಕಾರಣದಲ್ಲಿ ನಾನು ಎಂದೆಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ: ಸಿದ್ದರಾಮಯ್ಯ
ಕರ್ನಾಟಕ ರಾಜಕಾರಣದಲ್ಲಿ ನಾನು ಎಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ಚರ್ಚೆಯ ವೇಳೆ ಸ್ವಾರಸ್ಯಕರ ಮಾತಿನ ನಡುವೆ ಹೀಗೆ ಹೇಳಿದರು.…ಕರ್ನಾಟಕ ಪಾಲಿಟಿಕ್ಸ್‌ನಲ್ಲಿ ನಾನು ಯಾವಾಗಲೂ ರಿಲವೆಂಟ್ ಆಗಿ ಇರ್ತಿನಿ. Irrelevant ಆಗೋಕ್ಕೆ ಸಾಧ್ಯನೇ ಇಲ್ಲ. ಇವತ್ತು relevant, ಈ ಹಿಂದೆ ಸಹ relevant ಆಗಿದ್ದೆ ಈಗ ಸಹ relevant ಆಗಿದ್ದೇನೆ. I am always relevant politician in Karnataka politics ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Assembly Session: ಮಾಂಸಾಹಾರ ತ್ಯಜಿಸಿ ಪ್ಯೂರ್‌ ವೆಜಿಟೇರಿಯನ್‌ ಆದ ಸಿದ್ದರಾಮಯ್ಯ: ಮಾಜಿ ಸಿಎಂ ಹೇಳಿದ ಕಾರಣ ಏನು?

4. Karnataka Election: ಫೆ.20ರಂದು ಮಂಡ್ಯದಲ್ಲಿ ಯುವ ಮೋರ್ಚಾದ ಮೊದಲ ಸಮಾವೇಶ: ಬಿ.ವೈ. ವಿಜಯೇಂದ್ರ
ಬಿಜೆಪಿ ಹಳೆ ಮೈಸೂರು ಭಾಗಕ್ಕೆ ಒತ್ತು ಕೊಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ(Karnataka Election) 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Aero India 2023 : ಯುದ್ಧ ವಿಮಾನದಲ್ಲಿದ್ದ ಹನುಮಾನ್‌ ಚಿತ್ರವನ್ನು ತೆಗೆದು ಹಾಕಿದ ಎಚ್‌ಎಎಲ್, ಮುಖ್ಯಸ್ಥರು ಹೇಳಿದ್ದೇನು?
ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited) ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ತನ್ನ ನೂತನ ವಿಮಾನ HLFT -42 ಯುದ್ಧ ವಿಮಾನದ ಮಾದರಿಯಲ್ಲಿ ಇದ್ದ ಹಿಂದೂ ದೇವತೆ ಹನುಮಂತನ ಚಿತ್ರವನ್ನು ತೆಗೆದು ಹಾಕಿದೆ. ಎಚ್‌ಎಎಲ್‌ನ ಯುದ್ಧ ವಿಮಾನದ ರೆಕ್ಕೆಯಲ್ಲಿ ವಾಯುಪುತ್ರ ಹನುಮಾನ್‌ ಚಿತ್ರವನ್ನು ರಚಿಸಲಾಗಿತ್ತು. ಇದು ಸಾಕಷ್ಟು ಗಮನ ಸೆಳೆದಿತ್ತು. ಆದರೆ ಇದಕ್ಕೆ ಅಪಸ್ವರ ಹೊರಡುತ್ತಿದ್ದಂತೆಯೇ ಎಚ್‌ಎಎಲ್‌, ಹನುಮಂತನ ಚಿತ್ರವನ್ನು ತೆಗೆದು ಹಾಕಿದೆ. ಆದರೆ ಎಚ್‌ಎಎಲ್‌ನ ಈ ನಡೆಗೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Areca News: ಅಡಿಕೆ ಆರೋಗ್ಯಕ್ಕೆ ಮಾರಕವಲ್ಲ, ಔಷಧೀಯ ಗುಣವಿದೆ: ರಾಮಯ್ಯ ವಿವಿ ಸಂಶೋಧನೆ
ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಹಿಂದಿನ ಸಂಶೋಧನೆಗಳ ನಡುವೆ ಈಗ ಎಂ.ಎಸ್‌. ರಾಮಯ್ಯ ಯೂನಿವರ್ಸಿಟಿಯು ಸಂಶೋಧನೆ ನಡೆಸಿದ್ದು, ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ತಿಳಿಸಿದೆ. ಜತೆಗೆ, ಅಡಿಕೆಯಲ್ಲಿ ಅನೇಕ ಔಷಧೀಯ ಗುಣವಿದೆ ಎಂದು ತಿಳಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಅಡಿಕೆ ಟಾಸ್ಕ್‌ ಫೋರ್ಸ್‌ (Areca News) ಸಭೆಯ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. SSLC Exam 2023 : ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಬದಲಾವಣೆ; ಈ ಬಾರಿ ರಾಜ್ಯ ಮಟ್ಟದಲ್ಲಿ ಸಿದ್ಧವಾಗಲಿದೆ ಪ್ರಶ್ನೆ ಪತ್ರಿಕೆ
ಎಸ್‌ಎಸ್‌ಎಲ್‌ಸಿಯ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು (SSLC Exam 2023) ನಡೆಸಲು ಶಾಲೆಗಳು ಸಿದ್ಧತೆ ನಡೆಸಿರುವಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಪರೀಕ್ಷೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಮುಖ್ಯವಾಗಿ ರಾಜ್ಯ ಮಟ್ಟದಲ್ಲಿ ಈ ಬಾರಿ ಪ್ರಶ್ನೆ ಪತ್ರಿಕೆ ಸಿದ್ಧವಾಗಲಿದೆ. ಅಲ್ಲದೆ, ಪರೀಕ್ಷಾ ಶುಲ್ಕವನ್ನು 10 ರೂ. ಇಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Operation Tiger : ಆಪರೇಷನ್‌ ಟೈಗರ್‌ ಸಕ್ಸಸ್‌; ಕೊಡಗಿನಲ್ಲಿ ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ
ಪೊನ್ನಂಪೇಟೆಯಲ್ಲಿ ಕೇವಲ ೧೨ ಗಂಟೆ ಅವಧಿಯಲ್ಲಿ ಇಬ್ಬರನ್ನು ಕೊಂದು ಹಾಕಿದ ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಮಂಗಳವಾರ ಮುಂಜಾನೆಯಿಂದಲೇ ಅರಣ್ಯ ಇಲಾಖೆಯ ೧೫೦ಕ್ಕೂ ಅಧಿಕ ಸಿಬ್ಬಂದಿ ಹಾಗೂ ನಾಲ್ಕು ಆನೆಗಳ ಮೂಲಕ ಕಾರ್ಯಾಚರಣೆ (Operation Tiger) ಆರಂಭಿಸಿ ಮಧ್ಯಾಹ್ನದ ಹೊತ್ತಿಗೆ ಹುಲಿ ಸೆರೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Valentines Day: ಪ್ರೇಮಿಗಳ ದಿನದಂದು ಮಿಸ್ ಮಾಡದೇ ಪ್ರೇಮಿಗಳು ನೋಡಲೇಬೇಕಾದ 7 ಅದ್ಭುತ ಸಿನಿಮಾಗಳು
ಪ್ರೇಮಿಗಳ ದಿನ(Valentines Day). ಜಗತ್ತೇ ಪ್ರೀತಿಯಲ್ಲಿ ತುಂಬಿರುವ ದಿನವಿದು. ಪ್ರೇಮಿಗಳು ಪರಸ್ಪರ ಪ್ರೀತಿ ಹಂಚಿಕೊಳ್ಳುವ, ಹೇಳಿಕೊಳ್ಳುವ ವಿಶೇಷವಾದ ದಿನ. ಈ ಪ್ರೇಮಿಗಳ ದಿನಕ್ಕೆ ಪ್ರೇಮಿಗಳು ಔಟಿಂಗ್ ಹೋಗಿಯೋ, ಸಿನಿಮಾ ನೋಡಿಯೋ ಅಥವಾ ಪಾರ್ಟಿ ಮಾಡಿ ಕಳೆಯುತ್ತಾರೆ. ಸಿನಿಮಾ ನೋಡುವ ಆಸಕ್ತಿ ಇರುವ ಪ್ರೇಮಿಗಳು ಈ ದಿನ ಯಾವ ಸಿನಿಮಾ ನೋಡಬೇಕು ಎಂದು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Valentines day 2023 : ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ, ಪೂಜಿಸಿ ಪ್ರೇಮಿಗಳ ದಿನ ಆಚರಣೆ

10. Siddaramaiah: ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದ ಮತದಾರರು: ಮನೆಯೆದುರು ಧರಣಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಅಲ್ಲಿನ ಮತದಾರರು ಒತ್ತಾಯಿಸಿ ಧರಣಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರಯವ ಸಿದ್ದರಾಮಯ್ಯ ಅಧಿಕೃತ ನಿವಾಸದ ಎದುರು ಜಮಾಯಿಸಿದ ನೀರಾರು ಜನರು, ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Pathaan Movie : 1000 ಕೋಟಿ ರೂ. ಗಳಿಕೆಯತ್ತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ದಾಪುಗಾಲು!
  2. ಪೋರ್ಚುಗಲ್‌ ಚರ್ಚುಗಳಲ್ಲಿ 5000 ಮಕ್ಕಳ ಮೇಲೆ ಪಾದ್ರಿಗಳಿಂದ ಅತ್ಯಾಚಾರ!
  3. Rahul Gandhi: ವಾರಾಣಸಿಯಲ್ಲಿ ರಾಹುಲ್ ವಿಮಾನ ಇಳಿಸಲು ಅವಕಾಶ ನಿರಾಕರಣೆ, ಕಾಂಗ್ರೆಸ್ ಟೀಕೆ
  4. Rajini in Mangalore : ಪಿಲಿಕುಳದ ಗುತ್ತಿನ ಮನೆಯಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್‌; ಜೈಲರ್‌‌ ಸಿನಿಮಾ ಶೂಟಿಂಗ್‌
  5. Kotak Mahindra Bank :‌ ಗಣೇಶನ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ತನ್ಮಯ್‌ ಭಟ್‌, ಕೋಟಕ್‌ ಕ್ಯಾಂಪೇನ್‌ ವಾಪಸ್
  6. Pulwama Attack: ಪುಲ್ವಾಮಾ ದಾಳಿ ಕರಾಳ ನೆನಪು; ಯೋಧರ ಬಲಿದಾನವೇ ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರಣ ಎಂದ ಪ್ರಧಾನಿ ಮೋದಿ
Exit mobile version