Site icon Vistara News

ವಿಸ್ತಾರ TOP 10 NEWS: ಬಿಜೆಪಿಗೆ ಬ್ಯಾಡ್‌ಬೈ ಹೇಳಿದ ಜಗದೀಶ್‌ ಶೆಟ್ಟರ್‌, ಅಯೋಧ್ಯೆಯಲ್ಲಿ ಹೈ ಅಲರ್ಟ್‌ ಇತ್ಯಾದಿ ಪ್ರಮುಖ ಸುದ್ದಿಗಳಿವು

vistara top 10 news jagadish shettar resigns from bjp to high alert in ayodhya and more news

#image_title

1. Karnataka ELection: ಮೊದಲ ಕ್ಯಾಬಿನೆಟ್‌ನಲ್ಲೇ 4 ಗ್ಯಾರಂಟಿ ಜಾರಿ ಗ್ಯಾರಂಟಿ: ಕೋಲಾರದಲ್ಲಿ ರಾಹುಲ್‌ ಗಾಂಧಿ ಭಾಷಣ
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈಡೇರಿಸುವುದಾಗಿ ಘೋಷಣೆ ಮಾಡಿರುವ ನಾಲ್ಕು ಗ್ಯಾರಂಟಿ ಯೋಜನೆಗಳನ್ನು, ಕಾಂಗ್ರೆಸ್‌ ಸರ್ಕಾರದ ಮೊದಲ ಕ್ಯಾಬಿನೆಟ್‌ನಲ್ಲೇ ಅನುಷ್ಠಾನ ಮಾಡುವಂತೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ಕೋಲಾರದಲ್ಲಿ ಆಯೋಜಿಸಲಾಗಿದ್ದ ಜೈ ಭಾರತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023: ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದರು ಎಂದ ಸಿದ್ದರಾಮಯ್ಯ

2. Jagadish Shettar: 40 ವರ್ಷದ ಬಿಜೆಪಿ ಸಖ್ಯಕ್ಕೆ ಬ್ಯಾಡ್‌ಬೈ ಹೇಳಿದ ಜಗದೀಶ್‌ ಶೆಟ್ಟರ್‌: ಶಾಸಕ ಸ್ಥಾನದಿಂದ ನಿರ್ಗಮನ
ಸುಮಾರು 40 ವರ್ಷದ ಬಿಜೆಪಿಯೊಂದಿಗಿನ ಸಖ್ಯಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬೇಸರಿಂದ ಹೊರನಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election 2023: ನಾನು ಸಿಎಂ ರೇಸ್‌ನಲ್ಲಿ ಇಲ್ಲ; ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿದ್ದು, ಡಿಕೆಶಿಗೆ ಖರ್ಗೆ ಖಡಕ್‌ ವಾರ್ನಿಂಗ್
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಯಾರೇ ಮುಖ್ಯಮಂತ್ರಿಯಾಗಲಿ, ನನಗೆ ಅದು ಬೇಕಿಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಾಯಕರು ಮುಖ್ಯಮಂತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಜನರ ಬಗ್ಗೆ ತಲೆಕೆಡಿಸಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ನಾಯಕರಿಗೆ ಖಡಕ್‌ ಸೂಚನೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. IPL 2023: 15 ವರ್ಷಗಳ ಬಳಿಕ ಕೆಕೆಆರ್​ ತಂಡದಲ್ಲಿ ಶತಕದ ಸಂಭ್ರಮ
ಅದು ಉದ್ಘಾಟನಾ ಆವೃತ್ತಿಯ ಐಪಿಎಲ್​ನ ಮೊದಲ​ ಪಂದ್ಯ, ಇಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಿದ್ದವು. ಕೆಕೆಆರ್​ ಪರ ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್​ ತಂಡದ ಬ್ಯಾಟರ್​ ಬ್ರೆಂಡನ್​ ಮೆಕಲಮ್​ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ 158 ರನ್​ ಬಾರಿಸಿದ್ದರು. ಈ ಮೂಲಕ ಚೊಚ್ಚಲ ಆವೃತ್ತಿಯಲ್ಲೇ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ವಿಪರ್ಯಾಸ ಎಂದರೆ ಇದಾದ ಬಳಿಕ ಕೆಕೆಆರ್​ ತಂಡದ ಪರ ಯಾವ ಆಟಗಾರನು ಶತಕ ಬಾರಿಸಿರಲಿಲ್ಲ. ಇದೀಗ ಮುಂಬೈ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್​ ಅಯ್ಯರ್​ ಅವರು ಶತಕ ಸಿಡಿಸಿ 15 ವರ್ಷಗಳ ಬಳಿಕ ಈ ಕೊರಗನ್ನು ನೀಗಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Atiq Ahmed: ಅತೀಕ್‌, ಅಶ್ರಫ್‌ ಹತ್ಯೆ; ಅಯೋಧ್ಯೆಯಲ್ಲಿ ಅಲರ್ಟ್‌, ಯೋಗಿಯ ಎಲ್ಲ ಕಾರ್ಯಕ್ರಮ ರದ್ದು
ಗ್ಯಾಂಗ್‌ಸ್ಟರ್‌ಗಳಾದ ಅತೀಕ್‌ ಅಹ್ಮದ್‌ (Atiq Ahmed) ಹಾಗೂ ಆತನ ಸಹೋದರ ಅಶ್ರಫ್‌ ಅಹ್ಮದ್‌ನನ್ನು ಪ್ರಯಾಗ್‌ರಾಜ್‌ನಲ್ಲಿ ಶನಿವಾರ (March 15) ರಾತ್ರಿ ಹತ್ಯೆ ಮಾಡಲಾಗಿದೆ. ಇದು ರಾಜ್ಯ ಮಾತ್ರವಲ್ಲ, ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಈಗಾಗಲೇ ಗುಂಡಿನ ದಾಳಿ ನಡೆಸಿರುವ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಡೀ ದಿನದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ, ಪ್ರಯಾಗ್‌ರಾಜ್‌ ಹಾಗೂ ಅಯೋಧ್ಯೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Road Accident in Bengaluru: ಅಪಘಾತಗಳ ನಗರಿ ಎಂಬ ಕುಖ್ಯಾತಿಗೆ ರಾಜಧಾನಿ ಗುರಿ; 3 ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿ
ರಾಜಧಾನಿ ಬೆಂಗಳೂರು ಎಂದರೆ ಟ್ರಾಫಿಕ್‌ ಸಿಟಿ (Traffic city) ಎಂಬ ಹಣೆಪಟ್ಟಿರುವ ಸಮಯದಲ್ಲಿ ಇದೀಗ ಆ್ಯಕ್ಸಿಡೆಂಟ್‌ ಸಿಟಿ (Accident city) ಎಂಬ ಕಳಂಕವನ್ನು ಹೊತ್ತುಕೊಂಡಿದೆ. ಬೆಂಗಳೂರು ಮಹಾ ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಜತೆಯಲ್ಲೇ ಅಪಘಾತಗಳ (Road Accident) ಸಂಖ್ಯೆಯೂ ಹೆಚ್ಚಾಗುತ್ತಿದೆ. 2017ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಭೀಕರ ರಸ್ತೆ ಅಪಘಾತಗಳು ಸಂಭವಿಸಿರುವುದು ವರದಿ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ತುಂಡು ಭೂಮಿಗಾಗಿ ಹೆತ್ತಮ್ಮನ ಶಿರಚ್ಛೇದ ಮಾಡಿದ್ದ ದುರುಳನಿಗೆ ಮರಣ ದಂಡನೆ; ಸಮಾಜ ಘಾತುಕ ಕೃತ್ಯ ಎಂದ ಕೋರ್ಟ್
ಒಂದು ತುಂಡು ಭೂಮಿಗಾಗಿ ಅಮ್ಮನ ಶಿರವನ್ನೇ ಕತ್ತರಿಸಿದ್ದ ಕಟುಕ ಮಗನಿಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಜಮ್ಮು-ಕಾಶ್ಮೀರದ ಉಧಾಮ್​ಪುರದಲ್ಲಿ 2014ರಲ್ಲಿ ಘಟನೆ ನಡೆದಿತ್ತು. ಕೇಸ್​ ವಿಚಾರಣೆ ನಡೆಸಿದ್ದ ಉಧಾಮ್​ಪುರ ಪ್ರಿನ್ಸಿಪಾಲ್​ ಸೆಷನ್ಸ್​ ಜಡ್ಜ್​​ ಹಕ್ ನವಾಜ್ ಜರ್ಗರ್ ಇಂದು ತೀರ್ಪು ನೀಡಿದ್ದಾರೆ.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. 3 ವರ್ಷದ ಬಾಲಕಿಯನ್ನು ಶಾಲೆಯಲ್ಲೇ ಅತ್ಯಾಚಾರ ಮಾಡಿದ 1ನೇ ತರಗತಿ ಹುಡುಗ; ಪಾಲಕರಿಂದ ದೂರು
10ವರ್ಷದ ಹುಡುಗ ಮೂರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಫರ್​​ನಗರ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. ಆ ಬಾಲಕ 1ನೇ ತರಗತಿಯಲ್ಲಿ ಓದುತ್ತಿದ್ದರೆ, ಬಾಲಕಿ ಅದೇ ಶಿಕ್ಷಣ ಸಂಸ್ಥೆಯ ನರ್ಸರಿ ವಿಭಾಗಕ್ಕೆ ಬರುತ್ತಿದ್ದಳು. ಸದ್ಯ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಮಳೆ ಅಲರ್ಟ್‌; ಕೊಪ್ಪಳ, ವಿಜಯಪುರದಲ್ಲಿ ಗುಡುಗು ಸಾಧ್ಯತೆ
 ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ (Rain Update) ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ (Karnataka rain news) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Titanic House: ಟೈಟಾನಿಕ್‌ ಹಡಗಿನ ಮಾದರಿಯ ಮನೆ ನಿರ್ಮಿಸಿದ ರೈತ, 30 ವರ್ಷದ ಕನಸು ಈಗ ನನಸು
ಪಶ್ಚಿಮ ಬಂಗಾಳದ ರೈತರೊಬ್ಬರು ಕಷ್ಟಪಟ್ಟು ದುಡಿದು, ವಿಶ್ವವಿಖ್ಯಾತ ಟೈಟಾನಿಕ್‌ ಹಡಗಿನ ಮಾದರಿಯಲ್ಲಿಯೇ (Titanic House) ಮೂರು ಅಂತಸ್ತಿನ ಮನೆ ಕಟ್ಟಿದ್ದಾರೆ. ಆ ಮೂಲಕ ಮೂರು ದಶಕದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. PM Narendra Modi: ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ ಅಮೆರಿಕದ ವಾಣಿಜ್ಯ ಸಚಿವೆ!
  2. Chaya Singh: ʻಅಮೃತಧಾರೆʼಯಾಗಿ ಕಿರುತೆರೆಗೆ ಮರಳಿದ ಛಾಯಾ ಸಿಂಗ್
  3. Pakistan: ಪಾಕಿಸ್ತಾನದಲ್ಲಿ ಪೆಟ್ರೋಲ್ 10 ರೂ. ದರ ಹೆಚ್ಚಳ, ಈಗ ಲೀಟರ್‌ಗೆ 282 ರೂಪಾಯಿ!
  4. Sudan: ಸೂಡಾನ್ ಅರೆಸೇನೆ – ಸೇನೆ ಸಂಘರ್ಷ; ಒಬ್ಬ ಭಾರತೀಯ ಸೇರಿ 56 ಜನ ಮೃತ, 183 ಮಂದಿಗೆ ಗಾಯ
  5. ಸಂಡೇ ರೀಡ್‌ | ಕ್ಯಾಪ್ಟನ್‌ ಗೋಪಿನಾಥ್‌ ಜೀವನದ ಒಳʼಹರಿವುʼ ತೆರೆದಿಡುವ ಪುಸ್ತಕ ʼನಮ್ಮ ಭಾರತʼ

Exit mobile version