Site icon Vistara News

ವಿಸ್ತಾರ TOP 10 NEWS | ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆಯಿಂದ, ಖಲಿಸ್ತಾನಿ ಅಡ್ಡೆಗಳ ಮೇಲಿನ ದಾಳಿವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-Janardana Reddys new party announcement to raids on Khalistani hideouts and more top stories of the day

ಬೆಂಗಳೂರು: ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ತಮ್ಮದೇ ಪಕ್ಷದ ಮೂಲಕ ರಾಜ್ಯ ರಾಜಕೀಯಕ್ಕೆ ಪುನರಾಗಮನವಾಗಿದ್ದಾರೆ. ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ಕುರಿತು ರಾಜ್ಯ ಸಚಿವ ಸಂಪುಟ ಸೋಮವಾರ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ, ಎನ್‌ಪಿಎಸ್‌ ನೌಕರರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ, ಮನ್‌ ಕಿ ಬಾತ್‌ನಲ್ಲಿ ಕರ್ನಾಟಕದ ಯಶೋಗಾಥೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ, ದೇಶದ ವಿವಿಧೆಡೆ ಖಲಿಸ್ತಾನಿ ಅಡ್ಡೆಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ
ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಸಚಿವ ಜನಾರ್ದನ ರೆಡ್ಡಿ ಮಹತ್ವದ ಹೆಜ್ಜೆ ಇರಿಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Janardhan Reddy | ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭದ ಲೆಕ್ಕ; ಟಿಕೆಟ್ ವಂಚಿತರಿಗೆ ವೇದಿಕೆಯಾಗಲಿದೆಯೇ ಹೊಸ ಪಕ್ಷ?

2. ಬೆಳಗಾವಿ ಅಧಿವೇಶನ | ಕರ್ನಾಟಕದಲ್ಲೂ ಅಧಿವೇಶನ ಮೊಟಕು?; ಮೀಸಲಾತಿ ಕುರಿತೂ ನಿರ್ಧಾರ: ಸೋಮವಾರ ಮಹತ್ವದ ಸಂಪುಟ ಸಭೆ
ಅವಧಿಗೆ ಮುನ್ನವೇ ಮೊಟಕುಗೊಂಡ ರೀತಿಯಲ್ಲೇ ಕರ್ನಾಟಕದಲ್ಲೂ ಬೆಳಗಾವಿ ಅಧಿವೇಶನ ಮೊಟಕುಗೊಳ್ಳುತ್ತದೆಯೇ ಎಂಬ ಚರ್ಚೆಗಳು ನಡೆದಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯ ಕುರಿತು ಕುತೂಹಲ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ
ಕೋವಿಡ್‌ ಕುರಿತು ಆತಂಕ ಬೇಡ, ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚೀನಾದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ನಡುವೆ, ಹೊಸ ವರ್ಷಾಚರಣೆ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳಲು ಸೋಮವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೊರೊನಾ ಹಾವಳಿ ಶುರುವಾದಾಗಿನಿಂದಲೂ ಸೋಂಕಿತರು, ಸಾವಿನ ಕುರಿತು ಮಾಹಿತಿ ನೀಡುವಲ್ಲಿ ಚೀನಾ ಕಳ್ಳಾಟ ಆಡುತ್ತಿದೆ. ಇದುವರೆಗೆ ನಿತ್ಯ ಕನಿಷ್ಠ ಪ್ರಕರಣಗಳ ಕುರಿತಷ್ಟೇ ಚೀನಾ ಮಾಹಿತಿ (China Covid Information) ನೀಡುತ್ತಿತ್ತು. ಆದರೆ, ಕಮ್ಯುನಿಸ್ಟ್‌ ರಾಷ್ಟ್ರದಲ್ಲಿ ಡಿಸೆಂಬರ್‌ 1ರಿಂದ 20ರ ಅವಧಿಯಲ್ಲಿ 25 ಕೋಟಿ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಸೋರಿಕೆಯಾದ ಕಾರಣ ಈಗ ನಿತ್ಯ ಕೊರೊನಾ ಸೋಂಕಿತರ ಮಾಹಿತಿ ನೀಡದಿರಲು ಚೀನಾ ತೀರ್ಮಾನಿಸಿದೆ.

Mann Ki Baat | ಹಲವು ದೇಶಗಳಲ್ಲಿ ಕೋವಿಡ್‌ ಕೇಸ್‌ ಏರಿಕೆ, ಇರಲಿ ಮುನ್ನೆಚ್ಚರ : ಪ್ರಧಾನಿ ನರೇಂದ್ರ ಮೋದಿ‌Coronavirus | ಚೀನಾದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದ ವ್ಯಕ್ತಿಗೆ ಕೊರೊನಾ

ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Surathkal Murder | ಸುರತ್ಕಲ್‌ನಲ್ಲಿ ನೆರವೇರಿದ ಜಲೀಲ್ ಅಂತ್ಯ ಸಂಸ್ಕಾರ; ವ್ಯಾಪಕ ಪೊಲೀಸ್‌ ಬಂದೋಬಸ್ತ್‌
ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಅಂಗಡಿ ಮಾಲೀಕ ಜಲೀಲ್ ಅವರ ಅಂತ್ಯ ಸಂಸ್ಕಾರ ನೂರಾರು ಜನರ ಸಮ್ಮುಖದಲ್ಲಿ ಭಾನುವಾರ ನಡೆಯಿತು. ಕೊಲೆ (Surathkal Murder) ನಡೆದ ಹಿನ್ನೆಲೆಯಲ್ಲಿ ಬೂದಿ ಮುಚ್ಚಿದ ಕೆಂಡಂತಾಗಿರುವ ಸುರತ್ಕಲ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. NPS News | ಎನ್‌ಪಿಎಸ್‌ ರದ್ದುಪಡಿಸುವ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ: ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಭೇಟಿ
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ. ಹೋರಾಟದ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತ್ಯೇಕವಾಗಿ ಭೇಟಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Pragya Singh Thakur | ಲವ್‌ ಜಿಹಾದ್‌ ವಿರುದ್ಧ ಹಿಂದು ಹೆಣ್ಣುಮಕ್ಕಳು ಆಟಂ ಬಾಂಬ್‌ಗಳಾಗಬೇಕು: ಪ್ರಜ್ಞಾ ಸಿಂಗ್ ಕರೆ
ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು ಎಂದು ಭೋಪಾಲ್‌ನ ಬಿಜೆಪಿ ಸಂಸದೆ‌ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಕರೆ ನೀಡಿದ್ದಾರೆ. ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದು ಜಾಗರಣ ವೇದಿಕೆಯ 3ನೇ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Tunisha Sharma Death | ನಟಿ ತುನಿಶಾ ಶರ್ಮಾ ಸಾವಿಗೆ ಲವ್‌ ಜಿಹಾದ್‌ ಕಾರಣ? ಪೊಲೀಸರು ಹೇಳುವುದೇನು?
ಮಹಾರಾಷ್ಟ್ರದ ಮುಂಬೈನಲ್ಲಿ ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣ (Tunisha Sharma Death) ಹಲವು ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ, ನಟಿ ಆತ್ಮಹತ್ಯೆ ಮಾಡಿಕೊಳ್ಳಲು ಲವ್‌ ಜಿಹಾದ್‌ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಸಾವಿಗೆ ಆಕೆಯ ಸಹ ನಟ ಶಿಜಾನ್‌ ಮೊಹಮ್ಮದ್‌ ಖಾನ್‌ ಕಾರಣ. ಇದರ ಹಿಂದೆ ಲವ್‌ ಜಿಹಾದ್‌ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. INDvsBAN | ಎರಡನೇ ಪಂದ್ಯದಲ್ಲಿ 3 ವಿಕೆಟ್​ ಜಯ ; ಬಾಂಗ್ಲಾದೇಶ ವಿರುದ್ಧ ಕ್ಲೀನ್​ ಸ್ವೀಪ್​ ಸಾಧನೆ ಮಾಡಿದ ಭಾರತ
ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ (INDvsBAN) ಎರಡನೇ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್​ಗಳ ವೀರೋಚಿತ ಜಯ ಸಾಧಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್​ ಸ್ವೀಪ್​ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಹಾದಿಯಲ್ಲಿ ಪ್ರಗತಿ ಸಾಧಿಸಲು ಭಾರತ ತಂಡಕ್ಕೆ ಸಾಧ್ಯವಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಖಲಿಸ್ತಾನಿ ಉಗ್ರರ ಬೆನ್ನು ಬಿದ್ದ ರಾಷ್ಟ್ರೀಯ ತನಿಖಾ ದಳ; ವಿವಿಧ ರಾಜ್ಯಗಳ 14 ಸ್ಥಳಗಳಲ್ಲಿ ರೇಡ್​​
ಖಲಿಸ್ತಾನ್​ ಲಿಬರೇಶನ್​ ಫೋರ್ಸ್​, ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್​ ಮತ್ತು ಇಂಟರ್​ನ್ಯಾಷನಲ್​ ಸಿಖ್​ ಯೂತ್ ಫೆಡರೇಶನ್​ ಉಗ್ರ ಸಂಘಟನೆಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಂದು ಪಂಜಾಬ್​, ಜಮ್ಮು-ಕಾಶ್ಮೀರ ಮತ್ತು ದೆಹಲಿಯ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Mann Ki Baat | ಗದಗದ ಹೋಟೆಲ್‌ ಉದ್ಯಮಿ ಕಾವೇಂಶ್ರಿಯವರ ಕಲಾ ಚೇತನ ವೇದಿಕೆಗೆ ಪ್ರಧಾನಿ ಮೋದಿ ಮೆಚ್ಚುಗೆ
ಗದಗ ಮೂಲದ ಹೋಟೆಲ್‌ ಉದ್ಯಮಿ ಕಾವೇಂಶ್ರೀ ಅವರ ಕಲಾ ಪೋಷಣೆಯ ತಪಸ್ಸು ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾನುಲಿ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ (Mann Ki Baat) ಮೆಚ್ಚುಗೆ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Christmas Celebrations | ರಾಜ್ಯಾದ್ಯಂತ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ; ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
  2. Atal Bihari Vajpayee Birth Day | ಭಾರತದ ಭದ್ರತಾ ವ್ಯವಸ್ಥೆಗೆ ಅಟಲ್ ಬಿಹಾರಿ ವಾಜಪೇಯಿ ಅವರ 5 ಕೊಡುಗೆಗಳು
  3. Christmas Party | ಉತ್ತರಾಖಂಡದಲ್ಲಿ ಕ್ರಿಸ್‌ಮಸ್‌ ಪಾರ್ಟಿ ಹೆಸರಲ್ಲಿ ಮತಾಂತರ? ಗ್ರಾಮದ ಜನ ದಾಳಿ ಮಾಡಿದ್ದೇಕೆ?
  4. ಮಕ್ಕಳ ಕಥೆ | ಮೂವರು ಜಾಣ ಸೊಸೆಯರು
Exit mobile version