Site icon Vistara News

ವಿಸ್ತಾರ TOP 10 NEWS : ಬೊಮ್ಮಾಯಿ ಬಜೆಟ್‌ಗೆ ಮುಹೂರ್ತ ಫಿಕ್ಸ್‌, ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ಹಾಗೂ ಮತ್ತಷ್ಟು ಪ್ರಮುಖ ಸುದ್ದಿಗಳಿವು

vistara-top-10-news-karnataka budget date finalised to another inhuman incident in bengaluru and more news

1. Budget Session | ಫೆಬ್ರವರಿ 17ಕ್ಕೆ ಬೊಮ್ಮಾಯಿ ಸರ್ಕಾರದ ʼಚುನಾವಣಾ ಬಜೆಟ್‌ʼ
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ವಿಧಾನಸಭೆಯ ಅಂತಿಮ ಬಜೆಟ್‌ ಮಂಡಿಸಲು ದಿನಾಂಕವನ್ನು ಅಧಿಕೃವಾಗಿ ಆಯ್ಕೆ ಮಾಡಿದೆ. ಫೆಬ್ರವರಿ 17ರಂದು ರಾಜ್ಯದ ಬಜೆಟ್‌ ಮಂಡನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಧಾರ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Karnataka : ಫೆಬ್ರವರಿ ಅಂತ್ಯಕ್ಕೆ ನಾಲ್ಕೂ ದಿಕ್ಕುಗಳಿಂದ ಬಿಜೆಪಿ ಯಾತ್ರೆ; ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆ: ಕಟೀಲ್‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

2. Vehicle Scrappage Policy: 15 ವರ್ಷ ಹಳೆಯದಾದ ಎಲ್ಲ ಸರ್ಕಾರಿ ವಾಹನಗಳ ನೋಂದಣಿ ಏಪ್ರಿಲ್​ 1ರಿಂದ ರದ್ದು; ಗುಜರಿ ಸೇರಲೇಬೇಕು!
15 ವರ್ಷಗಳಿಗೂ ಹೆಚ್ಚು ಹಳತಾದ, ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರ ಅನ್ವಯ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳ, 15 ವರ್ಷಕ್ಕೂ ಹಳತಾದ ವಾಹನಗಳು ಇದೇ ವರ್ಷ (2023) ಏಪ್ರಿಲ್​ 1ರಿಂದ ಸಂಚಾರ ನಿಲ್ಲಿಸಿ, ಗುಜರಿ ಸೇರಲಿವೆ. ಅವುಗಳ ನೋಂದಣಿ ರದ್ದಾಗಲಿದೆ. ರಾಜ್ಯ ನಿಗಮಗಳು, ಸಾರಿಗೆ ಇಲಾಖೆಗಳ ಬಸ್​​ಗಳು ಮತ್ತು ಇತರ ವಾಹನಗಳಿಗೂ ಈ ನಿಯಮ ಅನ್ವಯ ಆಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ‌Karnataka Election : ಕಾಂಗ್ರೆಸ್‌ ಸೋಲಿಸಲು ಸುಪಾರಿ ಪಡೆದಿದ್ದು ಚಾಮರಾಜಪೇಟೆ ಶಾಸಕರ? ರಾಜಕೀಯ ವಲಯದಲ್ಲಿ ಚರ್ಚೆ
ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌) ಸಂಸ್ಥಾಪಕ ಕೆ. ಚಂದ್ರಶೇಖರ ರಾವ್‌ ಅವರಿಂದ 500 ಕೋಟಿ ರೂ. ಡೀಲ್‌ ಮಾಡಲಾಗಿದೆ ಎಂದು ತೆಲಂಗಾಣದ ಕಾಂಗ್ರೆಸ್‌ ನಾಯಕನ ಆರೋಪ ಇದೀಗ ಕರ್ನಾಟಕದಲ್ಲಿ ಭಾರೀ ಚರ್ಚೆಯ ವಿಷಯ. ಹೈದರಾಬಾದ್​ನಲ್ಲಿ ವ್ಯವಹಾರ ಹೊಂದಿರುವ ‘ಕೈ’ ನಾಯಕ, ಕೆಸಿಆರ್‌ ಅವರ ಫಾರ್ಮ್‌ ಹೌಸ್‌ನಲ್ಲಿ ಮೂರು ಬಾರಿ ಸಭೆ ನಡೆಸಿದ್ದಾರೆ ಎಂದು ಹೇಳಿರುವುದು ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಅವರ ಮೇಲೆ ಬೆಟ್ಟು ತೋರಿಸುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Man Dragged By Car | ಕಾರಿನ ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ.ವರೆಗೆ ಎಳೆದೊಯ್ದ ಮಹಿಳೆ
ದ್ವಿಚಕ್ರ ವಾಹನದ ಮೂಲಕ ವೃದ್ಧರೊಬ್ಬರನ್ನು ಒಂದೂವರೆ ಕಿ.ಮೀ. ಎಳೆದೊಯ್ದ ಪ್ರಕರಣ ನಡೆದ ಬೆನ್ನಲ್ಲೇ ರಾಜಧಾನಿಯಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಕಾರಿನ ಬಾನೆಟ್‌ ಮೇಲೆ ಯುವಕನೊಬ್ಬನನ್ನು ಸುಮಾರು ಒಂದು ಕಿ.ಮೀ.ವರೆಗೆ ಎಳೆದೊಯ್ದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Indian Army | ಇದೇ ಮೊದಲನೇ ಬಾರಿಗೆ ಕರ್ನಲ್‌ ಆಗುತ್ತಿದ್ದಾರೆ 108 ಮಹಿಳಾ ಯೋಧರು!
ಭಾರತೀಯ ಸೇನೆಯಲ್ಲಿ (Indian Army) ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕರ್ನಲ್‌ ಆಗಿ ಬಡ್ತಿ ನೀಡುವ ಕೆಲಸವನ್ನು ಇದೀಗ ಭಾರತೀಯ ಸೇನೆ ಮಾಡುತ್ತಿದೆ. ಇದೇ ತಿಂಗಳ 9ರಿಂದ 22ನೇ ತಾರೀಖಿನವರೆಗೆ ಸೇನೆಯ ಮುಖ್ಯ ಕಚೇರಿಯಲ್ಲಿ ಬಡ್ತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಒಟ್ಟಾರೆಯಾಗಿ 108 ಮಹಿಳೆಯರನ್ನು ಕರ್ನಲ್‌ ಆಗಿ ಬಡ್ತಿ ನೀಡಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ Explainer | Oscar awards | ಆಯ್ಕೆಯಾಗುತ್ತಾ ಭಾರತದ ಚಿತ್ರ? ಹೇಗಿರುತ್ತೆ ಸೆಲೆಕ್ಷನ್?
ಆಸ್ಕರ್‌ ಪ್ರಶಸ್ತಿ ಚಲನಚಿತ್ರಗಳಿಗೆ ಸಿಗುವ ಅತಿ ದೊಡ್ಡ ಜಾಗತಿಕ ಮನ್ನಣೆ. ಹಾಲಿವುಡ್‌ ನೆಲೆ ನಿಂತಿರುವ ಲಾಸ್‌ ಏಂಜಲೀಸ್‌ನಲ್ಲಿರುವ ʼಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಆಂಡ್‌ ಸೈನ್ಸಸ್‌ʼ ಈ ಪ್ರಶಸ್ತಿಯನ್ನು ಕೊಡಮಾಡುತ್ತದೆ. ಜ.24ರಂದು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಆಸ್ಕರ್‌ ಆಯ್ಕೆ ಪ್ರಕ್ರಿಯೆಯ ಬಗ್ಗೆ ಒಂದು ನೋಟ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Yogi Adityanath Temple | ಅಯೊಧ್ಯೆಯಲ್ಲಿ ಸಿಎಂ ಯೋಗಿಗಾಗಿ ಬೃಹತ್ ದೇವಾಲಯ ನಿರ್ಮಾಣ, ಮುಸ್ಲಿಮರಿಂದಲೂ ಕೊಡುಗೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹಿಂದು ಫೈರ್‌ ಬ್ರ್ಯಾಂಡ್‌ ಆದರೂ ಅವರ ಆಡಳಿತವನ್ನು ಮುಸ್ಲಿಮರೂ ಮೆಚ್ಚುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath Temple) ಅವರಿಗಾಗಿ ದೇವಾಲಯ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಮುಸ್ಲಿಮರು ಕೂಡ ಕೊಡುಗೆ ನೀಡುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. 40 ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು; 88ನೇ ವರ್ಷದಲ್ಲಿ 5 ಕೋಟಿ ರೂ. ಲಾಟರಿ ಹಣ ಪಡೆದು ಶ್ರೀಮಂತನಾದ ಅಜ್ಜ!
ಕಳೆದ 35-40 ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್​ ಖರೀದಿಸುತ್ತಿದ್ದ ಮಹಾಂತ ದ್ವಾರಕಾ ದಾಸ್​ ಎಂಬುವರಿಗೆ ಈಗ 88ನೇ ವರ್ಷದಲ್ಲಿ ಅದೃಷ್ಟ ಮನೆಬಾಗಿಲಿಗೆ ಬಂದಿದೆ. ಲೊಹ್ರಿ ಮಕರ ಸಂಕ್ರಾಂತಿ ನಿಮಿತ್ತ ದ್ವಾರಕಾ ದಾಸ್​ ಖರೀದಿಸಿದ್ದ ಲಾಟರಿಗೆ ಪ್ರಥಮ ಬಹುಮಾನ ಲಭಿಸಿದ್ದು, ಬರೋಬ್ಬರಿ 5 ಕೋಟಿ ರೂಪಾಯಿ ಹಣ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. BJP Karnataka : ಕಾಂಗ್ರೆಸ್‌-ಜೆಡಿಎಸ್‌ ಸಭೆ ಮಾಡಿದರೆ ಚಪ್ಪಲಿಗಳು ಕೈಯಲ್ಲಿರುತ್ತವೆ: ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ
ರಸ್ತೆ, ಚರಂಡಿಯಂತಹ ವಿಚಾರಗಳಿಗಿಂತ ಜಿಹಾದ್‌ ವಿಚಾರವೇ ಮುಖ್ಯ ಎಂದು ಇತ್ತೀಚೆಗೆ ಟೀಕೆಗೆ ಒಳಗಾಗಿದ್ದ ರಾಜ್ಯ ಬಿಜೆಪಿ (BJP Karnataka) ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇದೀಗ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ. ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Chat gpt : ಕಾಂಗ್ರೆಸ್‌ನಲ್ಲಿ ಯಾರು ಪವರ್‌ಫುಲ್‌? BSY ಮತ್ತೆ CM ಆಗ್ತಾರ? B.L. ಸಂತೋಷ್‌ ಶಕ್ತಿ ಏನು? HDK ಪ್ರಭಾವ ಎಷ್ಟು?; ಇಲ್ಲಿದೆ ಚಾಟ್‌ ಜಿಪಿಟಿ ʼಸಂದರ್ಶನʼ
ತಂತ್ರಜ್ಞಾನ ಮುಂದುವರಿಯುತ್ತಿದೆ, ಅದೂ ನಾಗಾಲೋಟದಲ್ಲಿ. ಓಪನ್‌ ಎಐ ಸಂಸ್ಥೆ ಆರಂಭಿಸಿರುವ ಚಾಟ್‌ ಜಿಪಿಟಿ (Chat gpt) ಎಂಬ ಭಾಷಾ ಮಾದರಿ ಈಗ ಎಲ್ಲ ಕಡೆ ಚರ್ಚೆಯಾಗುತ್ತಿರುವ ವಿಷಯ. ಕರ್ನಾಟಕ ರಾಜಕಾರಣದ ಕುರಿತು ಚಾಟ್‌ ಜಿಪಿಟಿಗೆ ಪ್ರಶ್ನೆ ಕೇಳಿದರೆ ಹೇಗೆ ಎಂಬ ಪ್ರಯತ್ನ ಇಲ್ಲಿದೆ.‌ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Mood Of Karnataka : ಕಾಂಗ್ರೆಸ್‌ 114, ಬಿಜೆಪಿ 76, ಜೆಡಿಎಸ್‌ 30 : ಹೈದರಾಬಾದ್‌ ಮೂಲದ ಸಂಸ್ಥೆಯ ಸಮೀಕ್ಷಾ ವರದಿ !
  2. ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?
  3. Pet Planet | ಅನಾಥ ಪ್ರಾಣಿಗಳಿಗೆ ಆಶ್ರಯ ನೀಡುವ ಪಶುವೈದ್ಯ; ಆಕರ್ಷಿಸುತ್ತಿದೆ ಹಲವು ಜೀವ ವೈವಿಧ್ಯಗಳ ಪೆಟ್ ಪ್ಲ್ಯಾನೆಟ್
  4. Pathaan Movie | ರಿಯಾಲಿಟಿ ಶೋನಲ್ಲಿ ಪ್ರಚಾರ ಬೇಡ ಅಂದ್ರಾ ಶಾರುಖ್‌ ಖಾನ್? ಇದು ʻಪಠಾಣ್‌ʼ ಹೊಸ ತಂತ್ರ!
  5. Anganawadi Workers: ಅಹೋರಾತ್ರಿ ಪ್ರತಿಭಟನೆಗೆ ಬಲವಂತದ ತಡೆ; ಮತ್ತೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದಅಂಗನವಾಡಿ ಕಾರ್ಯಕರ್ತೆಯರು
  6. Bhagawan controversy | ರಾಮ ಸೀತೆಗೆ ಹೆಂಡ ಕುಡಿಸಿ ತಾನೂ ಕುಡೀತಿದ್ದ: ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್‌
  7. ಪುತ್ರನನ್ನು ಕೊಲ್ಲಲು ಸುಪಾರಿ ಕೊಟ್ಟ ತಾಯಿ; ಪತ್ನಿಯನ್ನು ಬಿಟ್ಟು ಅಮ್ಮನೊಟ್ಟಿಗೆ ಇದ್ದವನು ವಿಲನ್​ ಆಗಿದ್ದೇಕೆ? ಬದುಕಿದ್ದು ಹೇಗೆ?
Exit mobile version