Site icon Vistara News

ವಿಸ್ತಾರ TOP 10 NEWS | ʼಮಹಾʼ ಉದ್ಧಟತನಕ್ಕೆ ಖಂಡನೆಯಿಂದ ʼಚಿಲುಮೆʼಗೆ ಬ್ಲಾಕ್‌ಲಿಸ್ಟ್‌ ದಂಡನೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news- karnataka condemns maharashtra resolution to chilume ngo blacklisted and more news of the day

ಬೆಂಗಳೂರು: ಗಡಿ ವಿವಾದದಲ್ಲಿ ಕಾಲು ಕೆರೆದು ಜಗಳಕ್ಕೆ ಬರುವ ಪ್ರವೃತ್ತಿಯನ್ನು ಮಹಾರಾಷ್ಟ್ರ ಸರ್ಕಾರ ಮುಂದುವರಿಸಿದ್ದು, ಕರ್ನಾಟಕದಲ್ಲಿ ಖಂಡನೆ ವ್ಯಕ್ತವಾಗಿದೆ. ಮೂಗಿನ ಮೂಲಕ ನೀಡುವ ಲಸಿಕೆಗೆ ದರ ನಿಗದಿಯಾಗಿದೆ. ರಾಜ್ಯದ ದೇವಸ್ಥಾನಗಳ ಸಮೀಕ್ಷೆಯನ್ನು ಸರ್ಕಾರ ಮಾಡಲಿದೆ. ಮತದಾರರ ದತ್ತಾಂಶ ಕಳ್ಳತನ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ಬಿಬಿಎಂಪಿ ಕಪ್ಪುಪಟ್ಟಿಗೆ ಸೇರಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Border Dispute | ಕರ್ನಾಟಕದಲ್ಲಿರುವ ಮರಾಠಿ ಭಾಷಿಕರ ಪ್ರದೇಶಗಳೆಲ್ಲ ನಮ್ಮ ರಾಜ್ಯಕ್ಕೇ ಸೇರಬೇಕು; ಮಹಾರಾಷ್ಟ್ರದಲ್ಲಿ ನಿರ್ಣಯ ಅಂಗೀಕಾರ; ಕರ್ನಾಟಕದಲ್ಲಿ ಖಂಡನೆ
‘ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಕರ್ನಾಟಕದ ಭಾಗದಲ್ಲಿರುವ ಮರಾಠಿ ಭಾಷಿಕರ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸಲಾಗುವುದು’ ಎಂಬ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಬೆಳಗಾವಿ ಅಧಿವೇಶನ | ʼಮಹಾʼ ಉದ್ಧಟತನಕ್ಕೆ ಒಕ್ಕೊರಲ ಖಂಡನೆ; ಒಂದಿಂಚು ಭೂಮಿಯನ್ನೂ ಬಿಡೆವು ಎಂದ ಕರ್ನಾಟಕ

2. iNCOVACC | ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ 19​ ಲಸಿಕೆಗೆ ದರ ನಿಗದಿ; ಒಂದು ಡೋಸ್​ಗೆ 800 ರೂಪಾಯಿ
ಭಾರತ್​ ಬಯೋಟೆಕ್​ ಕಂಪನಿ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ತೆಗೆದುಕೊಳ್ಳುವ ಕೊವಿಡ್​ 19 ಲಸಿಕೆ iNCOVACC (BBV154)ಗೆ ಈಗ ಬೆಲೆ ನಿಗದಿಯಾಗಿದೆ. ಈ ಇಂಟ್ರಾನಾಸಲ್​ ಲಸಿಕೆಯ ಒಂದು ಡೋಸ್​​ಗೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿ (+ ಶೇ.5ರಷ್ಟು ಜಿಎಸ್​ಟಿ ಇರಲಿದೆ. ಅಂದರೆ ಒಂದು ಡೋಸ್​ಗೆ 840 ರೂ.ಇರಲಿದೆ.) ಇರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election | ಆಪರೇಷನ್‌ಗೆ ಇಳಿಯಲಿದ್ದಾರೆ ಅಮಿತ್‌ ಶಾ; ಡಿಸೆಂಬರ್‌ 30ರಂದು ಯಾರ‍್ಯಾರು ಬರಲಿದ್ದಾರೆ ಪಕ್ಷಕ್ಕೆ?
ವಿಧಾನಸಭೆ ಚುನಾವಣೆಗೆ ಬಿಜೆಪಿಯನ್ನು ಸಜ್ಜುಗೊಳಿಸಲು ಆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಡಿಸೆಂಬರ್‌ 30ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ವಿವಿಧ ಪಕ್ಷಗಳಲ್ಲಿರುವ ಬಲಿಷ್ಠರನ್ನು ಸ್ವತಃ ಅಮಿತ್‌ ಶಾ ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸುತ್ತಾರೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ರಾಜ್ಯದ 35 ಸಾವಿರ ಮುಜರಾಯಿ ದೇವಸ್ಥಾನಗಳ ಸಮಗ್ರ ಸಮೀಕ್ಷೆ: ಧಾರ್ಮಿಕ ಪರಿಷತ್ತಿನ ಮಹತ್ವದ ನಿರ್ಧಾರ
ರಾಜ್ಯದ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 35 ಸಾವಿರಕ್ಕೂ ಹೆಚ್ಚಿನ ದೇವಸ್ಥಾನಗಳ ಸಮಗ್ರ ಆಸ್ತಿಯನ್ನೂ ಸಮೀಕ್ಷೆ ನಡೆಸಲು ಮಹತ್ವದ ತೀರ್ಮಾನ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಬೆಳಗಾವಿ ಅಧಿವೇಶನ | ಆರ್‌ಎಸ್‌ಎಸ್‌ ವಿರುದ್ಧ-ಕಾಂಗ್ರೆಸ್‌ ವಿರುದ್ಧ ಸದನಕ್ಕೆ ದಾಖಲೆ ನೀಡಿದ ಪ್ರಿಯಾಂಕ್‌ ಖರ್ಗೆ ಮತ್ತು ಸಿ.ಟಿ. ರವಿ
ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಮಯದಲ್ಲಿ ಚರ್ಚೆಯಾಗಿ ಪರಸ್ಪರ ಸವಾಲೊಡ್ಡುಕೊಂಡಿದ್ದ ಬಿಜೆಪಿ ಶಾಸಕ ಸಿ.ಟಿ. ರವಿ ಹಾಗೂ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ಸದನಕ್ಕೆ ಮಂಗಳವಾರ ದಾಖಲೆಗಳನ್ನು ಸಲ್ಲಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Hassan Blast | ಆಂಟಿ ಪ್ರೀತ್ಸೆ ಎಂದವನಿಗೆ NO ಅಂದಿದ್ದಕ್ಕೆ ಉಗ್ರ ಪ್ಲ್ಯಾನ್‌; ಮಿಕ್ಸಿ ಬಾಂಬ್‌ ಕಳಿಸಿದ್ದ ಪಾಗಲ್‌ ಪ್ರೇಮಿ!
ಹಾಸನದ ಕೊರಿಯರ್ ಶಾಪ್‌ನಲ್ಲಿ ಮಿಕ್ಸಿ ಬ್ಲಾಸ್ಟ್ (Hassan Blast) ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ವಿಚ್ಛೇದಿತ ಮಹಿಳೆಯೊಬ್ಬರ ಹಿಂದೆ ಬಿದ್ದಿದ್ದ ಪಾಗಲ್‌ ಪ್ರೇಮಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಮುಗಿಸಲು ಸ್ಕೆಚ್‌ ಹಾಕಿ ಮಿಕ್ಸಿ ಬಾಂಬ್‌ ಕಳಿಸಿದ್ದ ಎಂಬ ಸಂಗತಿ ಬಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Congress BJP Spar | ರಾಹುಲ್‌ ಗಾಂಧಿಯನ್ನು ರಾಮನಿಗೆ ಹೋಲಿಸಿದ ಕಾಂಗ್ರೆಸ್‌, ಹಿಂದುಗಳ ಭಾವನೆಗಳಿಗೆ ಅವಮಾನ ಎಂದ ಬಿಜೆಪಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಲ್ಮಾನ್‌ ಖುರ್ಷಿದ್‌ ಅವರು ರಾಮನಿಗೆ ಹೋಲಿಸಿರುವುದು ಕಾಂಗ್ರೆಸ್-ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿ ಏರ್ಪಡಲು ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. OBC Reservation In UP | ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ರದ್ದು, ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಹಿನ್ನಡೆ
ವಿಧಾನಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ (OBC Reservation In UP) ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Voter Data | ದತ್ತಾಂಶ ಕದ್ದ ಚಿಲುಮೆ ಸಂಸ್ಥೆ ಬ್ಯಾನ್‌: ಕಪ್ಪುಪಟ್ಟಿಗೆ ಸೇರಿಸುವ ಬಿಬಿಎಂಪಿ ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು ಉಲ್ಲೇಖ
ಮತದಾನ ಜಾಗೃತಿ ಕಾರ್ಯಕ್ಕೆಂದು ಅನುಮತಿ ಪಡೆದು ದತ್ತಾಂಶ (Voter Data) ಕಳ್ಳತನ ಮಾಡುತ್ತಿದೆ ಎಂಬ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯನ್ನು ಬಿಬಿಎಂಪಿ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಕುರಿತು ಬಿಬಿಎಂಪಿ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕ ನಂದೀಶ ರೆಡ್ಡಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Prahlad Modi | ಬಂಡೀಪುರಕ್ಕೆ ಹೊರಟಿದ್ದ ಮೋದಿ ಸಹೋದರನ ಕುಟುಂಬದ ಕಾರು ಅಪಘಾತ; ಮಗುವಿನ ಕಾಲು ಮೂಳೆ ಕಟ್‌, ಉಳಿದವರು ಪಾರು
ಬೆಂಗಳೂರಿನಿಂದ ಬಂಡೀಪುರಕ್ಕೆ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್‌ ಮೋದಿ ಅವರ ಕುಟುಂಬದ ಕಾರು ಇಲ್ಲಿನ ಕಡಕೊಳ‌ ಬಳಿ ಅಪಘಾತಕ್ಕೀಡಾಗಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿದ್ದು, ಮಗುವಿನ ಕಾಲಿನ ಮೂಳೆ ಕಟ್‌ ಆಗಿದ್ದರೆ, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನು ಹೊರತುಪಡಿಸಿದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಬೆಳಗಾವಿ ಅಧಿವೇಶನ | ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲು ನಿರ್ಧಾರ: ಚರ್ಚೆಯಾಗಿಲ್ಲ ಉತ್ತರದ ಸಮಸ್ಯೆ !
  2. Russian MP Dies In Odisha | ಪುಟಿನ್‌ ಟೀಕಾಕಾರರಾಗಿದ್ದ ರಷ್ಯಾ ಸಂಸದ, ಅವರ ಆಪ್ತ ಒಡಿಶಾದಲ್ಲಿ ನಿಗೂಢ ಸಾವು
  3. Hacker Arrested | ಅಮೆರಿಕ ಮಹಿಳೆಯಿಂದ ಸುಪಾರಿ ಪಡೆದು ಹರಿಯಾಣ ಮಹಿಳೆಯ ಮೊಬೈಲ್‌ ಹ್ಯಾಕ್, ಚಾರಿತ್ರ್ಯ ವಧೆ! ಆರೋಪಿ ಕರ್ನಾಟಕದವನು!
  4. ವಿಸ್ತಾರ Money Guide | PAN-Aadhaar link | ಆಧಾರ್‌ ಜತೆ ಮಾರ್ಚ್‌ 31 ರೊಳಗೆ ಲಿಂಕ್ ಮಾಡದಿದ್ದರೆ, ಪ್ಯಾನ್‌ ನಿಷ್ಕ್ರಿಯ
  5. Year Eneder 2022 | ಆರಕ್ಕೇರದ, ಮೂರಕ್ಕಿಳಿಯದ ಭಾರತದ ಸ್ಮಾರ್ಟ್​​ಫೋನ್​ ಮಾರುಕಟ್ಟೆ
Exit mobile version