Site icon Vistara News

ವಿಸ್ತಾರ TOP 10 NEWS: ರಕ್ತ ರಂಜಿತವಾದ ರಾಜ್ಯ ರಾಜಕೀಯದಿಂದ, ಛತ್ತೀಸ್‌ಗಢದಲ್ಲಿ ನಕ್ಸಲ್‌ ದಾಳಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news karnataka election campaign to chattisgarh naxal attack and more news

#image_title

1. Yogi Adityanath: ಟೀಂ ಇಂಡಿಯಾದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇರಬೇಕು ನಿರ್ಧಾರ ಮಾಡಿ: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ
ಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಟೀಂ ಇಂಡಿಯಾ ರೀತಿ ಕೆಲಸ ಮಾಡುತ್ತಿದೆ. ಈ ತಂಡದಲ್ಲಿ ಕರ್ನಾಟಕದ ಎಷ್ಟು ಸದಸ್ಯರು ಇರಬೇಕು ಎನ್ನುವುದನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನರು ನಿರ್ಧಾರ ಮಾಡಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರೆ ನೀಡಿದ್ದಾರೆ. ಮಂಡ್ಯದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka Election : ರಾಜ್ಯದಲ್ಲೀಗ ರಕ್ತ ರಾಜಕೀಯ; ಬಿಎಸ್‌ವೈ, ಡಿಕೆಶಿ, ಕುಮಾರಸ್ವಾಮಿ ಹೇಳಿದ ನೆತ್ತರ ಕತೆಗಳು!
ರಾಜ್ಯ ರಾಜಕೀಯದಲ್ಲಿ (Karnataka Election 2023) ರಕ್ತದ ಕಥೆಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಹೇಳಿದ ಮೊದಲ ಕಥೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಂದುವರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election 2023: ಮೈಲಾರಿ ಹೋಟೆಲ್‌ನಲ್ಲಿ ದೋಸೆ ಎರೆದ ಪ್ರಿಯಾಂಕಾ ಗಾಂಧಿ; ಛೆ, ಸ್ವಲ್ಪ ಸೀದು ಹೋಯ್ತು!
ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಬುಧವಾರವಷ್ಟೇ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಗುರುವಾರ (ಏಪ್ರಿಲ್‌ 26) ಮೈಸೂರಿನ ಖ್ಯಾತ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದಿದ್ದಲ್ಲದೆ, ಅವರೇ ಸ್ವತಃ ದೋಸೆ ಎರೆದಿದ್ದಾರೆ.‌ ಜತೆಗೆ ಮನೆಯಲ್ಲಿಯೂ ಇದರ ರೆಸಿಪಿಯನ್ನು ಟ್ರೈ ಮಾಡುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Priyanka Gandhi: ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿ 45 ವರ್ಷಗಳ ಬಳಿಕ ಶೃಂಗೇರಿಗೆ ಬಂದ ಪ್ರಿಯಾಂಕಾ ಗಾಂಧಿ

4. Karnataka Election : ಸಿ.ಟಿ ರವಿ ಆಯ್ತು, ಈಗ ಆರ್‌ ಅಶೋಕ್‌ಗೂ ಮುಖ್ಯಮಂತ್ರಿ ಆಗೋ ಆಸೆ!
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಹುಮತ ಬರುತ್ತದೋ ಇಲ್ಲವೋ ಎನ್ನುವ ಬಗ್ಗೆ ಬಿಜೆಪಿಯ ನಾಯಕರು ತಲೆ ಕೆಡಿಸಿಕೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಹುದ್ದೆಯ (Chief Minister post) ವಿಚಾರವೂ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ಕೆಲವು ನಾಯಕರು ಇಂಥವರು ಮುಖ್ಯಮಂತ್ರಿ ಆಗಲಿ ಎಂದು ಶಿಫಾರಸು ಮಾಡಿದರೆ, ಇನ್ನು ಕೆಲವರು ನಾವ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶೇಷವೆಂದರೆ ಇದುವರೆಗೆ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ನಡೆಯುತ್ತಿದ್ದ ಚರ್ಚೆ ಈಗ ಒಕ್ಕಲಿಗ ಮುಖ್ಯಮಂತ್ರಿ ಕಡೆಗೆ ತಿರುಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election 2023 : ಬೆಂಗಳೂರಿನಲ್ಲಿ ವರಿಷ್ಠರ ಟಾರ್ಗೆಟ್‌ ಮುಟ್ಟದ ಬಿಜೆಪಿ; ಅಮಿತ್‌ ಶಾ ಗರಂ
ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಂತ್ರ-ಪ್ರತಿ ತಂತ್ರ ಹಣಿಯುವುದರಲ್ಲಿ ನಿರತರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಲಿವೆ ಎಂಬ ಲೆಕ್ಕಾಚಾರ ಜೋರಾಗಿದೆ. ಈ ನಡುವೆ ಬಿಜೆಪಿ ನಡೆಸಿದ ಸಮೀಕ್ಷೆಯೊಂದು ವರಿಷ್ಠರು ನಿಗದಿಪಡಿಸಿದ ಟಾರ್ಗೆಟ್‌ ಮುಟ್ಟುವಲ್ಲಿ ನಗರ ಬಿಜೆಪಿಯು ವಿಫಲವಾಗುತ್ತಿದೆ ಎಂದು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Karnataka Election 2023: 80 ವರ್ಷ ದಾಟಿದವರಿಂದ ಏ.29ರಿಂದಲೇ ಮನೆಯಿಂದ ಮತದಾನ; ಗೌಪ್ಯತೆಗೇನು ಕ್ರಮ?
ರಾಜ್ಯದಲ್ಲಿ ಈ ಬಾರಿ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣೆ (Karnataka Election 2023) ಆಯೋಗ ಕ್ರಮ ತೆಗೆದುಕೊಂಡಿದೆ. ಅದರಂತೆ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದಾರೆ. ಇವರು ಮತದಾನ ಮಾಡಲು ಚುನಾವಣೆ ಆಯೋಗವು ಕ್ರಮ ತೆಗೆದುಕೊಂಡಿದೆ. ಏಪ್ರಿಲ್‌ 29ರಿಂದ ಮೇ 6ರವರೆಗೆ 80 ವರ್ಷ ದಾಟಿದ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಬಳ್ಳಾರಿ ಜಿಲ್ಲೆ ಸಮೀಕ್ಷೆ : ಕಾಂಗ್ರೆಸ್‌, ಬಿಜೆಪಿ ಗೆಲುವಿನ ಮೇಲೆ ಪಕ್ಷಾಂತರಿಗಳ, ರೆಡ್ಡಿ ಪಕ್ಷದ ಎಫೆಕ್ಟ್‌
ಗಣಿ ಜಿಲ್ಲೆಯಲ್ಲಿ ಈ ಬಾರಿಯ ರಾಜಕೀಯ ಚಿತ್ರಣ ವಿಭಿನ್ನ ಚುನಾವಣೆ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ. (ಬಳ್ಳಾರಿ ಜಿಲ್ಲೆ ಸಮೀಕ್ಷೆ ) ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪಾಳೆಯದಲ್ಲಿ ಬಿರುಕು, ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಭಿನ್ನಮತ, ಪಕ್ಷಾಂತರ ಪರ್ವಗಳು ಕೆಲವು ಕ್ಷೇತ್ರಗಳ ಫಲಿತಾಂಶದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election 2023: ಕುಣಿಯುತ್ತಿದೆ ಕುರುಡು ಕಾಂಚಾಣ; 265 ಕೋಟಿ ರೂ. ಮೌಲ್ಯದ ನಗದು, ಆಭರಣ ಜಪ್ತಿ
ಚುನಾವಣೆ ಆಯೋಗ, ಪೊಲೀಸರು ಎಷ್ಟು ಕಟ್ಟೆಚ್ಚರ ವಹಿಸಿದರೂ, ಚುನಾವಣೆಯ ವೇಳೆ ಕುರುಡು ಕಾಂಚಾಣ ಕುಣಿಯುತ್ತಿದೆ. ನೀತಿ ಸಂಹಿತೆ ಜಾರಿಯಾದಾಗಿನಿಂದ ಹಿಡಿದು ಏಪ್ರಿಲ್‌ 25ರವರೆಗಿನ ಅವಧಿಯಲ್ಲಿ ಪೊಲೀಸರು, ಅಧಿಕಾರಿಗಳು 265 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ನಗದು, ಚಿನ್ನಾಭರಣ, ಬೆಳ್ಳಿ, ಡ್ರಗ್ಸ್‌, ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Naxal Attack: ಛತ್ತೀಸ್​ಗಢ್​ನಲ್ಲಿ ನಕ್ಸಲರಿಂದ ಐಇಡಿ ದಾಳಿ; 11 ಯೋಧರ ದುರ್ಮರಣ
ಛತ್ತೀಸ್​ಗಢ್​​ನಲ್ಲಿ ನಕ್ಸಲರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ದಂತೇವಾಡ ಜಿಲ್ಲೆಯ ಅರನ್‌ಪುರ ಎಂಬಲ್ಲಿ ಛತ್ತೀಸ್​ಗಢ ಜಿಲ್ಲಾ ಮೀಸಲು ಪಡೆ (DRG) ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದ ವಾಹನವನ್ನು ಗುರಿಯಾಗಿಸಿ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಅಳವಡಿಸಿ ಸ್ಫೋಟಿಸಿ (Naxal Attack) 11 ಯೋಧರ ಪ್ರಾಣ ತೆಗೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023: ಸಮಯ ಮುಗಿದಿದ್ದರೂ ಡಿಆರ್‌ಎಸ್ ರಿವ್ಯೂಗೆ ಅನುಮತಿ ಕೊಟ್ಟ ಅಂಪೈರ್; ನೆಟ್ಟಿಗರ ಆಕ್ರೋಶ
ಮಂಗಳವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿ ಅಂಪೈರ್​ ಅವರು ನೀಡಿದ ಒಂದು ನಿರ್ಧಾರಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ. ನಿಗದಿತ ಸಮಯ ಮುಗಿದಿದ್ದರೂ ಅಂಪೈರ್​ ಅವರು ಡಿಆರ್​ಎಸ್​ಗೆ ಸಮ್ಮತಿ ಸೂಚಿಸಿರುವ ಕ್ರಮಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ವಿಸ್ತಾರ Explainer: Mann ki baat @100 ಪ್ರಧಾನಿ ಮನ್ ಕಿ ಬಾತ್‌ಗೆ ನೂರು, ಕರ್ನಾಟಕದ ಸಾಧನೆಗಳ ಮಾತೇ ಜೋರು!
  2. Expressway : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೈಕ್‌, ಆಟೊ ಸಂಚಾರ ನಿಷೇಧ ಶೀಘ್ರ, ಕಾರಣವೇನು?
  3. Elon Musk : ಟ್ವಿಟರ್‌ ವೈಯಕ್ತಿಕ ಖಾತೆಯಿಂದ ಎಲಾನ್‌ ಮಸ್ಕ್‌ಗೆ ತಿಂಗಳಿಗೆ 80 ಲಕ್ಷ ರೂ. ಆದಾಯ! ಇದು ಹೇಗೆ?
  4. Video: ಕೇರಳ ರೋಡ್ ಶೋ ವೇಳೆ ಪ್ರಧಾನಿ ಮೋದಿಯತ್ತ ತೂರಿಬಂತು ಮೊಬೈಲ್; ಚುರುಕು ಕಣ್ಣಿನ ಎಸ್​ಪಿಜಿ ಕಮಾಂಡೋ​ ಮಾಡಿದ್ದೇನು?
  5. EPF e-passbook facility down : ಉಮಂಗ್‌ ಆ್ಯಪ್‌ನಲ್ಲಿ ನಿಮ್ಮ ಪಿಎಫ್ ಪಾಸ್‌ಬುಕ್‌ ವೀಕ್ಷಿಸುವುದು ಹೇಗೆ?
Exit mobile version