ಬೆಂಗಳೂರು: ಹಿಂದುಳಿದಿರುವಿಕೆ, ಅವಕಾಶ ವಂಚನೆಯನ್ನು ಮುಂದಿಟ್ಟುಕೊಂಡು ಅನೇಕ ಸಮುದಾಯಗಳ ಮೀಸಲಾತಿ ಆಗ್ರಹಕ್ಕೆ ಒಕ್ಕಲಿಗ ಸಮುದಾಯವೂ ಭಾನುವಾರ ಸೇರ್ಪಡೆಯಾಗಿದ್ದು, ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಉಗ್ರರ ಟ್ರಯಲ್ ಬ್ಲಾಸ್ಟ್ ನಡೆದಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ, ಜನಸಂಕಲ್ಪ ಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ, ಗಡಿ ವಿವಾದವನ್ನು ಅನಗತ್ಯವಾಗಿ ಕೆದಕುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ, ಮತದಾರರ ಮಾಹಿತಿ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಅಧಿಕಾರಿಗಳ ಕಳ್ಳತನ ಬೆಳಕಿಗೆ ಬಂದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಒಕ್ಕಲಿಗ ಮೀಸಲಾತಿ: ಸರ್ಕಾರಕ್ಕೆ ಜನವರಿ 23 ಗಡುವು: ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಸವಾಲು
ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸುತ್ತಿರುವಾಗಲೇ ಒಕ್ಕಲಿಗ ಸಮುದಾಯದ ಮುಖಂಡರು ಮೀಸಲಾತಿ ಹೋರಾಟಕ್ಕೆ ಚಾಲನೆ ನೀಡಿದ್ದು, ಸರ್ಕಾರಕ್ಕೆ ಜನವರಿ 23ರ ಗಡುವು ನೀಡಲಾಗಿದೆ. ವಿಶ್ವೇಶ್ವರಪುರದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗ ಮಠಾಧೀಶರು, ವಿವಿಧ ಪಕ್ಷಗಳ ಒಕ್ಕಲಿಗ ಮುಖಂಡರು ಮಾತನಾಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ ವಿಶ್ಲೇಷಣೆ | ಮೀಸಲಾತಿ ʼಅಸ್ತ್ರʼವೇ ʼತಿರುಗುಬಾಣʼ ಆಗುವ ಅಪಾಯದ ಅಂಚಿನಲ್ಲಿ ಬಿಜೆಪಿ ಸರ್ಕಾರ
2. Karnataka Election 2023 | ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗೆ ಮುಂದುವರಿದ ಸಿದ್ದು VS ಡಿಕೆಶಿ ಪೈಪೋಟಿ
ವಿಧಾನಸಭೆ ಚುನಾವಣೆ (Karnataka Election 2023) ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್‌ನ ಇಬ್ಬರು ನಾಯಕರ ನಡುವೆ ಸಿಎಂ ಗಾದಿಗಾಗಿ ಪೈಪೋಟಿ ಮುಂದುವರಿದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮನ್ನು ತಾವು ಸಿಎಂ ಅಭ್ಯರ್ಥಿ ಎಂದು ಬಿಂಬಿಸುಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಒಕ್ಕಲಿಗರ ಮೀಸಲಾತಿ ಪ್ರಮಾಣ ಏರಿಕೆ ಕುರಿತ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಪರ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪರ ದನಿ ಕೇಳಿಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಮಂಗಳೂರು ಸ್ಫೋಟ | ಚಾರ್ಮಾಡಿ ತಪ್ಪಲಲ್ಲಿ ನಡೀತಾ ಟ್ರಯಲ್ ಬ್ಲಾಸ್ಟ್? ಸ್ಯಾಟಲೈಟ್ ಫೋನ್ ತನಿಖೆ ವೇಳೆ ಸಿಕ್ಕ ಸ್ಫೋಟಕ ಮಾಹಿತಿ
ಮಂಗಳೂರಿನಲ್ಲಿ ನವೆಂಬರ್ ೧೯ರಂದು ಸಂಜೆ ೪.೧೯ಕ್ಕೆ ಕುಕ್ಕರ್ ಬಾಂಬ್ ಸಿಡಿಯುವ ಕೆಲವು ದಿನಗಳ ಮುನ್ನ ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿ ದೊಡ್ಡದೊಂದು ಸ್ಫೋಟದ ಸದ್ದು ಕೇಳಿಸಿತ್ತು. ಆಗೆಲ್ಲ ಅದು ಯಾವುದೋ ಗರ್ನಲ್ ಹೊಡೆದ ಸದ್ದು ಎಂದು ಜನರು ನಂಬಿದ್ದರು. ಆದರೆ, ಈಗ ಇದೊಂದು ಟ್ರಯಲ್ ಬ್ಲಾಸ್ಟ್ ಆಗಿರಬಹುದಾ ಎಂಬ ಸಂಶಯ ತಲೆ ಎತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Janasankalpa Yatre | ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಿ.ಟಿ. ರವಿ: ಕೊಪ್ಪದಲ್ಲಿ ಉಗ್ರ ಭಾಷಣ
ಹಿಂದು ಶಬ್ದಕ್ಕೆ ಕೆಟ್ಟ ಅರ್ಥವಿದೆ ಎಂದಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, ಎರಡು ಬಾರಿ ಅವಾಚ್ಯ ಶಬ್ದವನ್ನೂ ಬಳಕೆ ಮಾಡಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ (Janasankalpa yatre) ಮಾತನಾಡಿದ್ದಾರೆ.
ವಿಜಯನಗರ ಸಾಮಾಜ್ರ್ಯ ಸ್ಥಾಪನೆಯಾಗಿದ್ದು ಹಿಂದು ರಕ್ಷಣೆಗಾಗಿ. ನಮಗೆ ಹಿಂದು ಮತ ಬೇಡ ಎಂದು ಅವರಿಗೆ ತಾಕತ್ತಿದ್ದರೆ ಹೇಳಲಿ. ನಿಜವಾಗಿ ಹಿಂದು ಎಂದು ಯಾರಾದರೂ ಗುರುತಿಸಿಕೊಂಡಿದ್ದರೆ ಅಂಥವರು ಕಾಂಗ್ರೆಸ್‌ಗೆ ಓಟ್ ಹಾಕಬಾರದು. ಹಿಂದು ಎನ್ನುವುದು ಕೆಟ್ಟ ಶಬ್ದ ಎಂದು ಅಪಪ್ರಚಾರ ಮಾಡುತ್ತಿರುವ ನಿಮ್ಮಂಥ ನಾಮರ್ದರಿಗೆ, ನಿಮ್ಮಂಥ ನಾಮರ್ದರಿಗೆ ಓಟ್ ಕೊಡುವುದಿಲ್ಲ ಎಂದು ನಾವು ಹೇಳಬೇಕು ಎಂದರು ವಾಗ್ದಾಳಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. SCST ಐಕ್ಯತಾ ಸಮಾವೇಶ | ಬಿಜೆಪಿಯ ಮೀಸಲಾತಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ; ದಿನಾಂಕ, ಸ್ಥಳ ಫಿಕ್ಸ್
ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿರುವ ಕ್ರಮವನ್ನು ಭರ್ಜರಿಯಾಗಿ ಚುನಾವಣೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ನಿಂದ ರೂಪಿಸಿರುವ ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶಕ್ಕೆ ದಿನಾಂಕ ನಿಗದಿಯಾಗಿದೆ. 2023ರ ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್‌ಸಿಎಸ್‌ಟಿ ಐಕ್ಯತಾ ಸಮಾವೇಶವನ್ನು ಆಯೋಜನೆ ಮಾಡಲು ತೀರ್ಮಾನ ಮಾಡಲಾಗಿದೆ. ಸಮಾವೇಶಕ್ಕೂ ಮುನ್ನ ಸ್ಥಳೀಯವಾಗಿ ಜಾಗೃತಿ ಸಭೆಗಳು ಮಾಡಲು ನಿರ್ಧಾರ ಮಾಡಲಾಗಿದ್ದು, ಸರಿಸುಮಾರು 5 ರಿಂದ 10 ಲಕ್ಷ ಜನ ಸೇರಿಸುವ ಗುರಿ ಹೊಂದಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Border Dispute | ಮಹಾ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ, ಎಂಇಎಸ್ ಬ್ಯಾನ್‌ಗೆ ಆಗ್ರಹ; ಶಿಂಧೆ, ಫಡ್ನವಿಸ್ ಪ್ರತಿಕೃತಿ ದಹನ
ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ (Border Dispute) ವಿಚಾರವಾಗಿ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಮರಾಠಿಗರ ಪುಂಡಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ಇಲ್ಲಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದೆ. ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಆಕ್ರೋಶ ಹೊರಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Border Dispute | ಮಹಾಜನ ವರದಿಯನ್ನು ಮಹಾರಾಷ್ಟ್ರದವರು ಒಪ್ಪಬೇಕು, ಇಲ್ಲದಿದ್ರೆ ಸುಮ್ನೆ ಕೂತ್ಕೋಬೇಕು: ಯತ್ನಾಳ್ ಕಿಡಿ
7. Forced conversion | ಮಂಗಳೂರಿನಲ್ಲಿ ಇಸ್ಲಾಂಗೆ ಹಿಂದೂ ಯುವತಿಯ ಬಲವಂತದ ಮತಾಂತರ ಆರೋಪ, ಕೇಸ್ ದಾಖಲು
ಮಂಗಳೂರಿನಲ್ಲಿ ಹಣ ಮತ್ತು ಕೆಲಸದ ಆಮಿಷ ಒಡ್ಡಿ, ಹಿಂದೂ ಯುವತಿಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಿದ (Forced conversion) ಪ್ರಕರಣ ವರದಿಯಾಗಿದೆ. ಮಂಗಳೂರಿನ ವೈದ್ಯೆ ಹಾಗೂ ಮುಸ್ಲಿಂ ಯುವಕರ ವಿರುದ್ಧ, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಯುವತಿಯನ್ನು ಇಸ್ಲಾಮ್ ಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಿಸಿದ ಬಗ್ಗೆ ದೂರು ದಾಖಲಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Voter Data | ಖಾಲಿ ಬಿಎಲ್‌ಒ ಕಾರ್ಡ್‌ಗಳಿಗೆ ಸೀಲ್, ಸಹಿ ಮಾಡಿ ವಿತರಿಸುತ್ತಿದ್ದ ಆರ್‌ಒಗಳು!
ಮತದಾರರ ಪಟ್ಟಿ ಅಕ್ರಮ ಪ್ರಕರಣ (Voter Data) ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಬಿಸಿ ಮುಟ್ಟಿಸುತ್ತಿದೆ. ಮತ್ತೊಂದೆಡೆ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು, ಪ್ರಕರಣದಲ್ಲಿ ಮೂವರು ಕಂದಾಯ ಅಧಿಕಾರಿಗಳು (ಆರ್‌ಒ) ಹಾಗೂ ಒಬ್ಬ ಸಹಾಯಕ ಕಂದಾಯ ಅಧಿಕಾರಿಯನ್ನು (ಎಆರ್‌ಒ) ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Tulunadu Daivaradhane | ದೈವಾರಾಧನೆ ಹೆಸರಲ್ಲಿ ದಂಧೆ; ದೈವಾರಾಧಕರಿಂದ ಕೊರಗಜ್ಜನಿಗೆ ದೂರು
ಮಂಗಳೂರು: ಕರಾವಳಿ ಹೊರಗಿನ ದೈವಾರಾಧನೆ (Tulunadu Daivaradhane) ವಿರುದ್ಧ ಮಂಗಳೂರಿನ ದೈವಾರಾಧಕರು ಸಿಡಿದೆದ್ದಿದ್ದು, ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ಕೊರಗಜ್ಜನ ಮೊರೆ ಹೋಗಿದ್ದಾರೆ. ಸಮಾಜವನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಬೇಕು. ಹೀಗೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Taliban Rule | ಅಫಘಾನಿಸ್ತಾನದಲ್ಲಿ ಅಳುವ ಮಕ್ಕಳಿಗೆ ನಿದ್ರೆ ಮಾತ್ರೆ, ಆಹಾರಕ್ಕಾಗಿ ಕಿಡ್ನಿ-ಹೆಣ್ಣು ಮಕ್ಕಳ ಮಾರಾಟ!
ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು (Taliban Rule) ಜಾರಿಯಾಗಿ ಎರಡು ವರ್ಷಗಳಾಯಿತು. ಆದರೆ, ಅಲ್ಲಿನ ಜನಜೀವನ ಪರಿಸ್ಥಿತಿ ಸುಧಾರಿಸಿದೆಯೇ? ಖಂಡಿತ ಇಲ್ಲ. ಅಲ್ಲಿನ ಮಕ್ಕಳು ಹಸಿವಿನಿಂದ ಸಾಯುತ್ತಿವೆ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ, ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ, ಅಂಗಾಂಗ ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Shelter gumbaz | ಗುಂಬಜ್ ಮಾದರಿ ಬಸ್ ನಿಲ್ದಾಣ ವಿವಾದಕ್ಕೆ ಅಂತ್ಯ ಹಾಡಲು ಶಾಸಕ ಎಸ್.ಎ ರಾಮ್‌ದಾಸ್ ಯತ್ನ
- ವೈಷ್ಣವ ಜನತೋ ಹಾಡು ಗಾಂಧೀಜಿಗೆ ಅಚ್ಚುಮೆಚ್ಚು, ಆದರೆ…; ಆಡಿಯೊ ಶೇರ್ ಮಾಡಿ, ವಿಶೇಷ ವಿಚಾರ ತಿಳಿಸಿದ ಪ್ರಧಾನಿ ಮೋದಿ!
- Aditi Prabhudeva | ಮದರಂಗಿ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ
- ಅಡಿಕೆಗೆ ಎಲೆ ಚುಕ್ಕಿ ರೋಗ | ಮುನ್ನೆಚ್ಚರಿಕಾ ಕ್ರಮಕ್ಕೆ 10 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
- ಇನ್ನೆರಡು ವರ್ಷದೊಳಗೆ ಕಾಶ್ಮೀರ ಉಗ್ರ ಮುಕ್ತ, ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಈಗ 109ರಿಂದ 29ಕ್ಕೆ ಇಳಿಕೆ: ಡಿಜಿಪಿ ಹೇಳಿಕೆ
- IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು
- Aadhaar-Mobile Link | ಆಧಾರ್ ಜತೆ ನಿಮ್ಮ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ!
- Bagalakote News | ವೃದ್ಧನ ಹೊಟ್ಟೆ ಒಳಗೆ ಇತ್ತು 187 ನಾಣ್ಯಗಳು; ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು