Site icon Vistara News

ವಿಸ್ತಾರ TOP 10 NEWS: ʼಆರ್‌ಎಸ್‌ಎಸ್‌ʼ ಭೂಮಿ ಮೇಲೆ ಸರ್ಕಾರದ ಕಣ್ಣಿನಿಂದ, ಬ್ರಿಜ್‌ ಭೂಷಣ್‌ ಕೇಸ್‌ನಲ್ಲಿ ಮಹತ್ವದ ತಿರುವಿನವರೆಗೆ ಪ್ರಮುಖ ಸುದ್ದಿಗಳಿವು

#image_title

1. Congress Guarantee: ಪಾರ್ಟ್‌ ಟೈಂ ಬಸ್ ಕಂಡಕ್ಟರ್‌ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಗ್ಯಾರಂಟಿ ಯೋಜನೆಗಳಿಗೆ ಅದ್ಧೂರಿಯಾಗಿ ಚಾಲನೆ ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ವಿನೂತನ ಉಪಾಯವೊಂದನ್ನು ಆಯ್ಕೆ ಮಾಡಿಕೊಂಡಿದೆ. ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಲು ಸ್ವತಃ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌ ಆಗಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌
ಗಂಡ ತೆರಿಗೆ ಕಟ್ಟುತ್ತಿದ್ದರೆ ಮಾತ್ರವಲ್ಲ ಮಗ ತೆರಿಗೆ ಕಟ್ಟುತ್ತಿದ್ದರೂ ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಾಗಿರುವ “ಗೃಹಲಕ್ಷ್ಮಿ”ಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ದಿನಕ್ಕೆ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಈ ಯೋಜನೆಗೆ ಗಂಡ ತೆರಿಗೆ ಕಟ್ಟುವುದು ಮಾತ್ರ ಒಳಪಡುತ್ತದೆ. ಮಗ ತೆರಿಗೆ ಕಟ್ಟುತ್ತಿದ್ದರೆ, ಜಿಎಸ್‌ಟಿ ರಿಟರ್ನ್ಸ್‌‌ ಸಲ್ಲಿಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. RSS: ʼಆರ್‌ಎಸ್‌ಎಸ್‌ʼಗೆ ನೀಡಿದ್ದ ಭೂಮಿ ಹಿಂಪಡೆಯಲಿದೆಯೇ ಸರ್ಕಾರ?: ಮಾಹಿತಿ ಕೇಳಿದ ಸಿಎಂ ಸಿದ್ದರಾಮಯ್ಯ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಂಘ ಸಂಸ್ಥೆಗಳಿಗೆ ನೀಡಲಾಗಿದ್ದ ಜಮೀನು ಹಾಗೂ ಸೌಲಭ್ಯಗಳನ್ನು ಹಿಂಪಡೆಯುವತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹೆಜ್ಜೆ ಇಟ್ಟಿದೆ. ಕಳೆದ ಆರು ತಿಂಗಳಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳಿಗೆ ಭೂಮಿ ಮಂಜೂರು ಬಗ್ಗೆ ಮಾಹಿತಿಯನ್ನು ಸಂಪುಟಕ್ಕೆ ತೆಗೆದುಕೊಂಡು ಬನ್ನಿ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Govt: ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಬಿಜೆಪಿ ನೀತಿಯನ್ನು ಕಿತ್ತೆಸೆದ ಕಾಂಗ್ರೆಸ್‌ ಸರ್ಕಾರ: ಇಬ್ಬರು ಸಚಿವರಿಗೆ ಜಿಲ್ಲೆ ಇಲ್ಲ
ರಾಜ್ಯ ಸರ್ಕಾರವು (Karnataka Govt) ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ಜೂನ್‌ 11ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಇದೀಗ ನೇಮಕವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಹೊರಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. BJP Karnataka: ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ: ಖುಲ್ಲಂ ಖುಲ್ಲಾ ಒಪ್ಪಿಕೊಂಡ ರಾಷ್ಟ್ರೀಯ ಮುಖಂಡ!
ರಾಜ್ಯ ಬಿಜೆಪಿಯ ಅನೇಕ ನಾಯಕರು ವಿವಿಧ ಪಕ್ಷಗಳ ಜತೆಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡುತ್ತಾರೆ ಎಂಬ ಆರೋಪಗಳನ್ನು ಇದೀಗ ಬಿಜೆಪಿ ಒಪ್ಪಿಕೊಂಡಿದೆ. ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ, ಅದರಿಂದಾಗಿಯೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಪ್ಪಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Wrestlers Protest: ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ವದ ತಿರುವು
ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿದೆ. ಬ್ರಿಜ್‌ ಭೂಷಣ್‌ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಜೂನ್​ 15ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್​ ಹೊಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?
ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Disney+ Hotstar: ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದೆ ಹಾಟ್ ಸ್ಟಾರ್
16ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಪ್ರಸಾರವನ್ನು ಉಚಿತವಾಗಿ ನೀಡಿದ ಜಿಯೋ ಸಿನಿಮಾಕ್ಕೆ ಇದೀಗ ಹಾಡ್​ ಸ್ಟಾರ್​ ಸೆಡ್ಡು ಹೊಡೆಯಲು ನಿರ್ಧರಿಸಿದ್ದು, ಈ ವರ್ಷ ನಡೆಯುವ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಉಚಿತವಾಗಿ ನೀಡಲಿದೆ. ಈ ಮೂಲಕ ಮತ್ತೆ ಕ್ರಿಕೆಟ್​ ಪ್ರೇಕ್ಷಕರನ್ನು ಸೆಳೆಯಲು ತಂತ್ರ ರೂಪಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Apsara Murder: ಪತ್ನಿ ಇದ್ದರೂ ಅರ್ಚಕನಿಗೆ ಬೇಕು ಲವ್ವರ್;‌ ಆಕೆ ಮದುವೆಯಾಗು ಎಂದಿದ್ದಕ್ಕೆ ಆದ ಕಿಲ್ಲರ್
ಮನೆಯಲ್ಲೊಬ್ಬಳು ಮಡದಿ ಇದ್ದರೂ ಲವ್ವರ್‌ ಇರಬೇಕು ಎಂಬ ಅರ್ಚಕನೊಬ್ಬನ ಶೋಕಿಗಾಗಿ ತೆಲಂಗಾಣದಲ್ಲಿ 30 ವರ್ಷದ ಮಹಿಳೆಯೊಬ್ಬರ (Apsara Murder) ಜೀವವೇ ಬಲಿಯಾಗಿದೆ. ಹೌದು, ಶಂಷಾಬಾದ್‌ ಜಿಲ್ಲೆಯ ಸರೂರ್‌ನಗರದಲ್ಲಿ ಅರ್ಚಕನು ತನ್ನ ಗರ್ಲ್‌ಫ್ರೆಂಡ್‌ಅನ್ನು ಮದುವೆಯಾಗಬೇಕಾಗುತ್ತದೆ ಎಂದು ಆಕೆಯನ್ನು ಕೊಂದು, ದೇಹವನ್ನು ಚರಂಡಿ ಗುಂಡಿಗೆ (Manhole) ಎಸೆದಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ರೋಡಲ್ಲಿ ನಿಂತು ಮಾತಾಡಕ್ಕಿಲ್ವಾ ಎಂದು ಚುಡಾಯಿಸಿದ; ನನ್‌ ಚಪ್ಪಲಿ ಮಾತಾಡತ್ತೆ ಅಂತ ಮೆಟ್ಟಲ್ಲಿ ಚಚ್ಚಿದಳು!
ಕುಂದಾಪುರ ತಾಲೂಕಿನ ವಕ್ವಾಡಿಯ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೇಡಿಸಿ ಕಿರುಕುಳ ಕೊಟ್ಟಿದ್ದು, ಆತನನ್ನು ಹಿಡಿದು ಆಕೆ ಚಪ್ಪಲಿ ಏಟು ನೀಡಿದ್ದಾಳೆ. ಈ ವಿಡಿಯೊ ಈಗ ವೈರಲ್‌ (Viral News) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version