Site icon Vistara News

ವಿಸ್ತಾರ TOP 10 NEWS | ರಾಜ್ಯದಲ್ಲಿ ಚಿರತೆ ಆತಂಕದಿಂದ, ಹೊಸ ವರ್ಷಕ್ಕೆ ವಿದ್ಯುತ್‌ ದರ ಇಳಿಕೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-leopard attack cases in karnataka to power tariff decrease and other news

ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ದಿನೇದಿನೆ ಹೆಚ್ಚಾಗುತ್ತಿದ್ದು, ರಾಜ್ಯದ ವಿವಿಧೆಡೆ ಚಿರತೆ ದಾಳಿ, ಓಡಾಟದಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಸದಾ ವಿದ್ಯುತ್‌ ದರ ಏರಿಕೆಗೇ ಸುದ್ದಿಯಾಗುತ್ತಿದ್ದ ಇಂಧನ ಇಲಾಖೆ ಈ ಬಾರಿ ದರ ಕಡಿತದ ಹೆಜ್ಜೆ ಇಡುವ ಮುನ್ಸೂಚನೆ ನೀಡಿದೆ, ಶ್ರೀರಾಮ ಸೇನೆ ಚುನಾವಣೆ ಕಣಕ್ಕಿಳಿಯುತ್ತಿರುವುದು ಬಿಜೆಪಿಯ ನಿದ್ದಗೆಡಿಸಿದೆ, ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Operation Leopard | ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ದೊಡ್ಡಬಳ್ಳಾಪುರದಲ್ಲೆಲ್ಲ ಚಿರತೆ ಹಾವಳಿ, ದಾಳಿ
ರಾಜ್ಯದ ವಿವಿಧೆಡೆಗಳಲ್ಲಿ ಚಿರತೆ ಹಾವಳಿ ಕಂಡುಬಂದಿದ್ದು, ಜನರು ಭಯಭೀತಗೊಂಡಿರುವುದರ ಜತೆಗೆ ವನ್ಯಜೀವಿ ಸಂರಕ್ಷಣೆ ಕುರಿತೂ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ಹೊರವಲಯದ ಐಟಿಸಿ ಫ್ಯಾಕ್ಟರಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಏರ್‌ಪೋರ್ಟ್‌ ರಸ್ತೆ ತರಬನಹಳ್ಳಿ ಬಳಿಯ ಐಟಿಸಿ ಫ್ಯಾಕ್ಟರಿ ಬಳಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಶಿವಮೊಗ್ಗದ ಹರಮಘಟ್ಟ ಗ್ರಾಮದಲ್ಲಿ ಚಿರತೆಯೊಂದನ್ನು ಬಹು ಕಷ್ಟಪಟ್ಟು ಸೆರೆ ಹಿಡಿಯಲಾಗಿದೆ (Leopard trapped) ಈ ಚಿರತೆ ಕಳೆದ ಕೆಲವು ವಾರಗಳಿಂದ ಭಾರಿ ಆತಂಕವನ್ನು ಸೃಷ್ಟಿ ಮಾಡಿತ್ತು. ಮೈಸೂರಿನ ತಿ. ನರಸೀಪುರದಲ್ಲಿ ಗುರುವಾರ ರಾತ್ರಿ ಒಬ್ಬ ಯುವತಿಯನ್ನು ಅದು ಬಲಿ ಪಡೆದಿದೆ. ಚಿರತೆಗಳ ಭಯದಿಂದ ಮೈಸೂರಿನ ಬಹು ಜನಪ್ರಿಯ ಕೆಆರ್‌ಎಸ್‌ ಬೃಂದಾವನ ಪ್ರದೇಶವನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಲಾಗಿತ್ತು.

2. ಹೊಸ ವರ್ಷದಲ್ಲಿ ವಿದ್ಯುತ್‌ ದರ ಶಾಕ್‌?: ಈ ಬಾರಿ ದರ ಇಳಿಕೆ ಮೂಲಕ ಅಚ್ಚರಿ ಮೂಡಿಸಲು ಮುಂದಾದ ಇಂಧನ ಇಲಾಖೆ
ಹೊಸ ವರ್ಷ ಆರಂಭಕ್ಕೆ ಮುನ್ನವೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ದಪಡಿಸಿದೆ. ಪ್ರತಿ ಬಾರಿ ಇಂಧನ ದರ ಪರಿಷ್ಕರಣೆ ಎಂದಾಗ ಹೆಚ್ಚಳವನ್ನೇ ಮಾಡುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿ, ಕಡಿತ ಮಾಡುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಗೃಹ ಬಳಕೆಯೂ ಸೇರಿ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದ್ದು, ಪ್ರತಿ ಯುನಿಟ್‌ಗೆ ೭೦ ಪೈಸೆಯಿಂದ 2 ರೂ.ವರೆಗೂ ಶುಲ್ಕ ಇಳಿಕೆಯಾಗುವ ನಿರೀಕ್ಷೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Voter Data | ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ: ಸಿಎಂ ಬೊಮ್ಮಾಯಿ
ರಾಜ್ಯಾದ್ಯಂತ ಅನಧಿಕೃತ ಸಮೀಕ್ಷೆಗಳು ನಡೆದು ಅಲ್ಪಸಂಖ್ಯಾತರ ಮತದಾರರನ್ನು ಕೈ ಬಿಡಲಾಗುತ್ತಿದೆ (Voter Data)ಎನ್ನುವುದು ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಪ್ರತಿಕ್ರಿಯಿಸಿ, ಈಗಾಗಲೇ ರಾಜ್ಯ ಚುನಾವಣೆ ಆಯೋಗ ಈ ಬಗ್ಗೆ ಗಮನ ಹರಿಸಿದೆ. ಚುನಾವಣಾ ಆಯೋಗದ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತದೆ. ಈ ಕುರಿತು ಭಾರತ ಮತ್ತು ರಾಜ್ಯ ಚುನಾವಣಾ ಆಯೋಗ ಕಾಳಜಿ ವಹಿಸಿದೆ ಎಂದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. 7th Pay Commission | 7ನೇ ವೇತನ ಆಯೋಗಕ್ಕೆ ಸಿಬ್ಬಂದಿ ನೇಮಕ; ಸರ್ಕಾರದಿಂದ ಆದೇಶ
ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿರುವ ರಾಜ್ಯ ಸರ್ಕಾರ ಆಯೋಗಕ್ಕೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ. ಆಯೋಗಕ್ಕೆ ಕಾರ್ಯನಿರ್ವಹಿಸಲು ಅಗತ್ಯವಾಗಿರುವ 44 ಹುದ್ದೆಗಳನ್ನು ಸೃಜಿಸಿ, ಮಂಜೂರಾತಿ ನೀಡಲಾಗಿದೆ. ಇದರಿಂದ ಆಯೋಗಕ್ಕೆ ಕೂಡಲೇ ಕಾರ್ಯಾರಂಭ ಮಾಡುವುದಕ್ಕೆ ಅನುಕೂಲವಾದಂತಾಗಿದೆ. ಆರ್ಥಿಕ ಇಲಾಖೆ ಈ ಮಂಜೂರಾತಿ ನೀಡಿ, ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ ವಿಶೇಷ | ಡಿಸೆಂಬರ್‌ ಅಂತ್ಯಕ್ಕೆ ಶ್ರೀರಾಮ ಸೇನೆ 25 ಅಭ್ಯರ್ಥಿಗಳ ಘೋಷಣೆ: BJP ನಿದ್ದೆಗೆಡಿಸಿದ ಮುತಾಲಿಕ್‌ ನಡೆ
ಹಿಂದುತ್ವ ಮತಗಳನ್ನು ಆಚೀಚೆ ಹೋಗದಂತೆ ಹಿಡಿದಿಟ್ಟುಕೊಳ್ಳಲು ಬಿಜೆಪಿ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಅನೇಕ ಸವಾಲುಗಳನ್ನು ಒಡ್ಡುತ್ತಿದ್ದಾರೆ.ಈ ಬಾರಿ ಕಣಕ್ಕಿಳಿಯುವುದಾಗಿ ಶ್ರೀರಾಮ ಸೇನೆ ಘೋಷಣೆ ಮಾಡಿರುವುದು ʼಒರಿಜಿನಲ್‌ ಹಿಂದುತ್ವ ಪಕ್ಷʼ ಎಂದು ಹೇಳಿಕೊಳ್ಳುವ ಬಿಜೆಪಿಗೆ ತಣ್ಣಗೆ ಬಿಸಿ ಮುಟ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಇತ್ತ ಜೆಡಿಎಸ್‌ ಜತೆಗೆ ನಂಟು; ಅತ್ತ ಜಮೀರ್‌ ಅಹ್ಮದ್‌ ಜತೆಗೂ ಮಾತು: ಕುತೂಹಲ ಕೆರಳಿಸಿದ KCR ನಡೆ
ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ಅಥವಾ ಒಟ್ಟಾಗಿ ಚುನಾವಣೆ ಎದುರಿಸುವ ಕುರಿತು ಈಗಾಗಲೆ ಜೆಡಿಎಸ್‌ ಜತೆಗೆ ಮಾತುಕತೆ ನಡೆಸಿರುವ ತೆಲಂಗಾಣದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ ಶಾಸಕ, ಸಿದ್ದರಾಮಯ್ಯ ಆಪ್ತ ಜಮೀರ್‌ ಅಹ್ಮದ್‌ ಖಾನ್‌ ಇತ್ತೀಚೆಗೆ ಕೆ. ಚಂದ್ರಶೇಖರ ರಾವ್‌ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಒಂದು ಕಾಲದ ಜೆಡಿಎಸ್‌ ಕಟ್ಟಾಳುವಾಗಿದ್ದು ಇದೀಗ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯುವ ಜಮೀರ್‌ ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ನಂಬಿ ನಾರಾಯಣ್​ರನ್ನು ಸುಳ್ಳು ಕೇಸ್​​ನಲ್ಲಿ ಸಿಲುಕಿಸಿದ್ದ ಅಧಿಕಾರಿಗಳ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್​
ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕಾ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಗುಪ್ತಚರ ದಳದ ಮಾಜಿ ಅಧಿಕಾರಿಗಳು ಮತ್ತು ಕೇರಳ ರಾಜ್ಯ ಮಾಜಿ ಪೊಲೀಸ್​ ಅಧಿಕಾರಿಗಳು ಸೇರಿ ಒಟ್ಟು ನಾಲ್ವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಕೇರಳ ಹೈಕೋರ್ಟ್ 2021ರಲ್ಲಿ​ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Bharat jodo ಯಾತ್ರೆಯ ಹಾಡಿನಿಂದ ಕೆಜಿಎಫ್‌-2 ಸಂಗೀತ ತೆಗೆಯದೆ ನ್ಯಾಯಾಂಗ ನಿಂದನೆ: ರಾಹುಲ್‌, ಇತರರಿಗೆ ನೋಟಿಸ್‌
ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆಗೆ (Bharat jodo) ಸಂಬಂಧಿಸಿ ರೂಪಿಸಲಾದ ಹಾಡಿನಲ್ಲಿ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತವನ್ನು ಬಳಸಿರುವ ವಿವಾದಕ್ಕೆ ಸಂಬಂಧಿಸಿ ಸಂಗೀತವನ್ನು ತೆಗೆಯುವಂತೆ ಕೋರ್ಟ್‌ ಆದೇಶಿಸಿತ್ತು. ಆದರೆ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Salary package | ಐಐಟಿ ವಿದ್ಯಾರ್ಥಿಗೆ 4 ಕೋಟಿ ರೂ. ವೇತನ ಘೋಷಿಸಿದ ಜಾನೆ ಸ್ಟ್ರೀಟ್
ಭಾರತದ ಉನ್ನತ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲಿ (Indian Institutes of Technology) ಈ ವರ್ಷದ ಕೊನೆಯ ಹಂತದ ಪ್ಲೇಸ್‌ಮೆಂಟ್‌ ಪ್ರಕ್ರಿಯೆ ಆರಂಭವಾಗಿದೆ. ಟ್ರೇಡಿಂಗ್‌ ಕಂಪನಿ ಜಾನೆ ಸ್ಟ್ರೀಟ್‌, ಮೊಟ್ಟ ಮೊದಲ ಬಾರಿಗೆ 4 ಕೋಟಿ ರೂ.ಗಳ ವೇತನ ಪ್ಯಾಕೇಜ್‌ ( Salary package ) ಅನ್ನು ಪ್ರಕಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Voter Data | ಬಿಜೆಪಿ ಮುಕ್ತ ಕರ್ನಾಟಕಕ್ಕೆ ಕರೆ ನೀಡಿದ ಕಾಂಗ್ರೆಸ್‌; ಆನ್‌ಲೈನ್‌ ಅಭಿಯಾನ ಆರಂಭ
ಈ ಹಿಂದೆ ಕಾಂಗ್ರೆಸ್‌ ಕುರಿತು ಬಿಜೆಪಿ ನಾಯಕರು ಉಪಯೋಗಿಸುತ್ತಿದ್ದ ಕಾಂಗ್ರೆಸ್‌ ಮುಕ್ತ ಕರ್ನಾಟಕ, ಕಾಂಗ್ರೆಸ್‌ ಮುಕ್ತ ಭಾರತ ಘೋಷಣೆಯಂತೆಯೇ ಇದೀಗ ಕಾಂಗ್ರೆಸ್‌ ವತಿಯಿಂದ ಬಿಜೆಪಿ ವಿರುದ್ಧ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಲಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದ ಮತದಾರರ ದತ್ತಾಂಶ ಅಕ್ರಮ ಸಂಗ್ರಹ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾಂಗ್ರೆಸ್‌ ನಿರ್ಧರಿಸಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ, ಮತದಾರರ ಗುರುತಿನ ಚೀಟಿಯನ್ನಲ್ಲ, ಬಿಜೆಪಿಯನ್ನು ಡಿಲೀಟ್‌ ಮಾಡಿ (Delete BJP Not Voter ID) ಎಂಬ ಅಭಿಯಾನ ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Border Dispute | ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಸೇರಿಸುವ ಹುನ್ನಾರ ನಡೆದಿತ್ತು: ಡಾ. ಸಿ. ಸೋಮಶೇಖರ್‌ ಹೇಳಿಕೆ
  2. Kantara Movie | ವರಾಹ ರೂಪಂ ಹಾಡಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ
  3. Pamban bridge | ಲಿಫ್ಟ್‌ನಂತೆ ಏರಬಲ್ಲ ದೇಶದ ಮೊದಲ ರೈಲ್ವೆ ಸೇತುವೆ ಪಂಬಾನ್‌ನಲ್ಲಿ ಶೀಘ್ರ ಸಿದ್ಧ
  4. ಸೊಂಟಕ್ಕೆ ಪೇಟಿಎಂ ಸ್ಕ್ಯಾನರ್​ ಇಟ್ಟುಕೊಂಡು ವಕೀಲರ ಬಳಿ ಭಕ್ಷೀಸು ಪಡೆಯುತ್ತಿದ್ದ ಹೈಕೋರ್ಟ್​ ಜಮಾದಾರ ಅಮಾನತು
  5. Avatar: The Way of Water | ಕೇರಳದ 400 ಚಿತ್ರಮಂದಿರಗಳಲ್ಲಿ ಅವತಾರ್‌-2 ಬ್ಯಾನ್‌: ಕಾರಣವೇನು?
  6. Regional Languages | ಕೋರ್ಟ್‌ ಚಟುವಟಿಕೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ, ಕಿರಣ್‌ ರಿಜಿಜು ಮಹತ್ವದ ಘೋಷಣೆ
Exit mobile version