Site icon Vistara News

ವಿಸ್ತಾರ TOP 10 NEWS: ರಾಜ್ಯದಲ್ಲಿ ಮೋದಿ ಹವಾದಿಂದ, ದಿ ಕೇರಳ ಸ್ಟೋರಿಯ ನಿಜಕಥನದವರೆಗಿನ ಪ್ರಮುಖ ಸುದ್ದಿಗಳು

Vistara Top 10

Vistara Top 10

1. ರಾಜ್ಯದಲ್ಲಿ ಮೋದಿ ಹವಾ; ಒಂದೇ ದಿನ ಮೂರು ಸಮಾವೇಶ, ಬೆಂಗಳೂರಲ್ಲಿ ರೋಡ್‌ ಶೋ ಮಿಂಚು
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಚುನಾವಣಾ ಅಖಾಡಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಒಂದೇ ದಿನ ಹುಮನಾಬಾದ್‌, ವಿಜಯಪುರ, ಕುಡಚಿಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ, ಸಂಜೆ ಬೆಂಗಳೂರಿನಲ್ಲಿ ರೋಡ್‌ ಶೋ ಮಿಂಚು ಹರಿಸಿದರು. ನಾಳೆಯೂ ರಾಜ್ಯದಲ್ಲಿ ಮೋದಿ ಹವಾ ಮುಂದುವರಿಯಲಿದೆ. ಒಟ್ಟು ಆರು ದಿನ ಅವರ ಶೋ ಇರಲಿದೆ.
ಮೋದಿ ಭೇಟಿಯ ಪ್ರಮುಖ ಸುದ್ದಿಗಳು
1. Modi in Karnataka : ತಮ್ಮ ವಿರುದ್ಧದ 91 ಬೈಗುಳಗಳ ಲೆಕ್ಕ ಇಟ್ಟ ಮೋದಿ; ಮೊದಲ ದಿನ 9 ಟಾರ್ಗೆಟ್‌
2. ಕಾಂಗ್ರೆಸ್‌ ಕಾಲದಲ್ಲಿ ಇದ್ದಿದ್ದು 85% ಸರ್ಕಾರ; 40% ಕಮಿಷನ್‌ಗೆ ಮೋದಿ ತಿರುಗೇಟು
3. ಅಂಬೇಡ್ಕರ್‌ಗೇ ರಾಕ್ಷಸ ಅಂದೋರು ನನ್ನನ್ನು ಬಿಡ್ತಾರಾ?: ಖರ್ಗೆ ವಿಷದ ಹಾವು ಹೇಳಿಕೆಗೆ ಮೋದಿ ಉತ್ತರ
4. Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಅಬ್ಬರ; ಇಲ್ಲಿವೆ ಫೋಟೊಗಳು
5. ಮೋದಿ ಶೋಗಾಗಿ ರೋಡ್ ಬಂದ್; ಸಿಕ್ಕಿಹಾಕಿಕೊಂಡ ರೋಗಿಗಳು, ಮದುಮಕ್ಕಳು: ಭುಗಿಲೆದ್ದ ಜನಾಕ್ರೋಶ

2. ಬಸವರಾಜ ಬೊಮ್ಮಾಯಿಯೇ ಮುಂದಿನ ಸಿಎಂ; ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಘೋಷಣೆ
ಒಂದು ವೇಳೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಬಸವರಾಜ ಬೊಮ್ಮಾಯಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ವದಂತಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಳ್ಳಿ ಹಾಕಿದ್ದಾರೆ. ಮುಂದಿನ ಸಿಎಂ ಬೊಮ್ಮಾಯಿಯವರೇ ಎಂದು ಸ್ಪಷ್ಪಪಡಿಸಿದ್ದಾರೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

3. ಕಾಂಗ್ರೆಸ್‌ನ ಉಚಿತ ಘೋಷಣೆ ಸುಳ್ಳಲ್ಲ, ಛತ್ತೀಸ್‌ಗಢ, ರಾಜಸ್ಥಾನದಂತೆ ಜಾರಿ; ಪ್ರಿಯಾಂಕಾ ಗಾಂಧಿ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, “ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು. ಹಾಗೆಯೇ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಸುಳ್ಳಲ್ಲ. ರಾಜಸ್ಥಾನ, ಛತ್ತೀಸ್‌ಗಢದಲ್ಲೂ ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ತಂದಿದ್ದೇವೆ. ಕರ್ನಾಟಕದಲ್ಲೂ ಮಾತು ಉಳಿಸಿಕೊಳ್ಳುತ್ತೇವೆ” ಎಂದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್‌; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು

4. 80 ವರ್ಷ ದಾಟಿದವರ ವೋಟಿಂಗ್‌ ಮನೆಯಿಂದಲೇ ಶುರು; ಮತದಾನ ಪ್ರಕ್ರಿಯೆ ಜೋರು
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯಿಸಲಾಗಿರುವ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ ಮತದಾನದ ಅವಕಾಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶನಿವಾರದಿಂದ ಮತದಾನ ಆರಂಭವಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

5. ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಮನ್​ ಕೀ ಬಾತ್​ 100ನೇ ಸಂಚಿಕೆ ನೇರ ಪ್ರಸಾರ; ಬಿಲ್​ ಗೇಟ್ಸ್​​ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್​ ನಾಳೆ (ಏಪ್ರಿಲ್​ 30)ಗೆ 100ನೇ ಆವೃತ್ತಿ ಪೂರೈಸಲಿದೆ. ಈ ನೂರನೇ ಸಂಚಿಕೆಯ ಮನ್​ ಕೀ ಬಾತ್​​ ಯುಎಸ್​​ನ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಮೂಲಕ ಐತಿಹಾಸಿಕ-ಅಭೂತಪೂರ್ವ ಎನ್ನಿಸಿಕೊಳ್ಳಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ ಅಂಕಣ: ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ
ಮನ್ ಕಿ ಬಾತ್ ಕೇವಲ ಒಂದು ರೇಡಿಯೊ ಕಾರ್ಯಕ್ರಮ ಅಲ್ಲ. ಅದು ಮೋದಿ ಸ್ಟೈಲಿನ ಆಡಳಿತ ವಿಧಾನ. ಇದು ಸುಮ್ಮನೆ ಒಬ್ಬ ವ್ಯಕ್ತಿ ಮಾತನಾಡಿಕೊಂಡು ಹೋಗುವ ವಿಚಾರವಲ್ಲ. ಎಂಟು ವರ್ಷದಿಂದಲೂ ಮೋದಿ ಈ ಕಾರ್ಯಕ್ರಮವನ್ನು ಜೀವಂತಿಕೆಯಿಂದ ಇರಿಸಿದ್ದಾರೆ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

7. ವಿಸ್ತಾರ Explainer: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ದಿ ಕೇರಳ ಸ್ಟೋರಿ
ʼದಿ ಕೇರಳ ಸ್ಟೋರಿʼ (The Kerala story)‌ ಎಂಬ ಸಿನಿಮಾದ ಟ್ರೇಲರ್‌ ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿದೆ. ಆಗಲೇ ಪರ ವಿರೋಧ ಸೆಣಸಾಟ ಶುರುವಾಗಿದೆ. ಇದು ಇನ್ನೊಂದು ʼದಿ ಕಾಶ್ಮೀರ್‌ ಫೈಲ್ಸ್‌ʼ (The Kashmir Files) ಆಗಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಹಾಗಿದ್ದರೆ ಸತ್ಯ ಏನು? ಏನಿದು ಕೇರಳ ಸ್ಟೋರಿ? ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8. ಮುಂದಿನ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ
ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಬೀದರ್‌, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. IPL 2023 : ಗುಜರಾತ್​ ಟೈಟನ್ಸ್ ತಂಡಕ್ಕೆ ಕೆಕೆಆರ್ ವಿರುದ್ಧ 7 ವಿಕೆಟ್​ ಸುಲಭ ಜಯ
ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಪಾರಮ್ಯ ಸಾಧಿಸಿದ ಗುಜರಾತ್ ಟೈಟನ್ಸ್​ ತಂಡ ಐಪಿಎಲ್​ 16ನೇ ಅವೃತ್ತಿಯ 39ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ವಿರುದ್ಧ ಏಳು ವಿಕೆಟ್​ ಸುಲಭ ಜಯ ದಾಖಲಿಸಿದೆ. ಗುಜರಾತ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ವಿಜಯ್​ ಶಂಕರ್​ 24 ಎಸೆತಗಳಲ್ಲಿ 51 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಸಂಸದ ಅಫ್ಜಲ್​ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ; ಲೋಕಸಭೆಯಿಂದ ಅನರ್ಹವಾಗೋದು ಪಕ್ಕಾ!
ಉತ್ತರ ಪ್ರದೇಶದ ಘಾಜಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಹುಜನ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್​ ಅನ್ಸಾರಿಗೆ (Afzal Ansari) ಗೂಂಡಾ ಕಾಯ್ದೆಯಡಿ 4ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಘಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. 1996ರಲ್ಲಿ ನಡೆದಿದ್ದ ವಿಶ್ವ ಹಿಂದು ಪರಿಷದ್​ ಪದಾಧಿಕಾರಿ ನಂದಕಿಶೋರ್​ ರೌಂಗ್ಟಾ ಅಪಹರಣ ಮತ್ತು ಕೊಲೆ ಪ್ರಕರಣ ಮತ್ತು 2005ರ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಅಪಹರಣ ಮತ್ತು ಹತ್ಯೆ ಕೇಸ್​​ನಲ್ಲಿ ಅಫ್ಜಲ್ ಅನ್ಸಾರಿ ಕೂಡ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋರ್ಟ್​ ಈ ಶಿಕ್ಷೆ ವಿಧಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version