1. ಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ, ಇನ್ನು ಗ್ಯಾರಂಟಿ ಕಥೆ ಏನು?; ಮೋದಿ ಪ್ರಶ್ನೆ
ʻಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ.. ಇನ್ನು ಅದು ಕೊಡುವ ಗ್ಯಾರಂಟಿಗಳಿಗೆ ಯಾವ ಬೆಲೆ ಇದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು. ಅದರ ಜತೆಗೆ ಕಾಂಗ್ರೆಸ್ ನೀಡುತ್ತಿರುವ ಉಚಿತ ಕೊಡುಗೆಗಳ ಮೇಲೂ ವಾಗ್ದಾಳಿ ನಡೆಸಿದರು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆಗೆ ವರ್ಚ್ಯುವಲ್ ಸಂವಾದದಲ್ಲಿ ಅವರು ಈ ಮಾತು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿಗಳು : 1. ಕರ್ನಾಟಕದ ವಿಕಾಸವೇ ಭಾರತದ ವಿಕಾಸ; ಸಂವಾದದಲ್ಲಿ ಮೋದಿ ಹೇಳಿದ 6 ಸಂಗತಿಗಳು
2. ಮೋದಿಜಿ ನಮ್ ಗ್ಯಾರಂಟಿ ಕಾರ್ಡ್ ನೋಡಿದ್ದಕ್ಕೆ ಥ್ಯಾಂಕ್ಸ್, ನಿಮ್ಮ ಗ್ಯಾರಂಟೀನೂ ನೋಡ್ಕೊಳ್ಳಿ ಎಂದ ಡಿಕೆಶಿ
2. ಮೋದಿ ಅಂದ್ರೆ ವಿಷದ ಹಾವಿದ್ದಂತೆ; ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ, ಬಳಿಕ ವಿಷಾದ
ನರೇಂದ್ರ ಮೋದಿ ಅಂದರೆ ವಿಷದ ಹಾವಿದ್ದಂತೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ವಿಧಾನಸಭಾ ಚುನಾವಣೆಯ ಸನಿಹದಲ್ಲಿ ಖರ್ಗೆ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡಿದೆ. ಕಳೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲೂ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. ಕೆಲವೇ ಗಂಟೆಗಳಲ್ಲಿ ಖರ್ಗೆ ವಿಷಾದ ವ್ಯಕ್ತಪಡಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿಗಳು : 1. ನಾನು ಹೇಳೇ ಇಲ್ಲ ಎಂದ ಖರ್ಗೆ, ವಿವಾದಕ್ಕೆ ಸಿಲುಕಿದ ತಕ್ಷಣ ಪ್ಲೇಟ್ ಬದಲು
2. ಮೋದಿ ವಿಷದ ಹಾವು ಎಂದ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಲಿ: ಶೋಭಾ ಕರಂದ್ಲಾಜೆ
3. ಕಾಂಗ್ರೆಸ್ ನಾಯಕರ ದಿಢೀರ್ ರಹಸ್ಯ ಸಭೆ, ಬಿಜೆಪಿಯಿಂದಲೂ ಡೇ ಎಂಡ್ ನೈಟ್ ಮೀಟಿಂಗ್
ಕಾಂಗ್ರೆಸ್ ನಾಯಕರು ನಿನ್ನೆ ತಡರಾತ್ರಿವರೆಗೂ ರಹಸ್ಯ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರು ಎತ್ತಿರುವ ಲಿಂಗಾಯತ ಅಪಮಾನ ಮತ್ತಿತರ ಸಂಗತಿಗಳನ್ನು ಎದುರಿಸುವ ಚರ್ಚೆ ಅಲ್ಲಿ ನಡೆದಿದೆ. ಬಿಜೆಪಿ ಪಾಳಯದಲ್ಲಿ ಜಗದೀಶ್ ಶೆಟ್ಟರ್ ಫ್ಯಾಕ್ಟರ್ ಕುರಿತು ಗಾಢ ಚಿಂತನೆಗಳು ನಡೆದಿವೆ.
1. ಕಾಂಗ್ರೆಸ್ ನಾಯಕರ ದಿಢೀರ್ ರಹಸ್ಯ ಸಭೆ, ಬಿಜೆಪಿ ಲಿಂಗಾಯತ ಕಾರ್ಡ್ ಎದುರಿಸುವ ಚಿಂತನೆ
2. ಶೆಟ್ಟರ್ ಸೋಲಿಸಲು ಬಿಜೆಪಿ ತಂತ್ರ; ಕೇಸರಿ ಪಕ್ಷದ ಪಾಲಾದ ಸ್ಥಳೀಯ ಕೈ ನಾಯಕರು
4. ಸಾಮಾಜಿಕ ಭದ್ರತಾ ಯೋಜನೆಗಳ ಜತೆಗೆ, ಕನ್ನಡವೇ ಮೊದಲು! ಇದು ಜೆಡಿಎಸ್ ಪ್ರಣಾಳಿಕೆ
ವಿಧಾನಸಭಾ ಚುನಾವಣೆಗಾಗಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವರ್ಷಕ್ಕೆ ಐದು ಉಚಿತ ಗ್ಯಾಸ್ ಸಿಲಿಂಡರ್, ಗರ್ಭಿಯರಿಗೆ ಆರು ಸಾವಿರ, ಹೆಣ್ಮಕ್ಕಳಿಗೆ ವಿದ್ಯುತ್ ಚಾಲಿತ ಸ್ಕೂಟಿ, ವೃದ್ಧಾಪ್ಯ ವೇತನ ಹೆಚ್ಚಳ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಜತೆಗೆ ಕನ್ನಡವೇ ಮೊದಲು ಎಂದು ಘೋಷಿಸಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. Congress Guarantee No 5: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಸಂಚಾರ ಉಚಿತ
ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ, ಪದವೀಧರರಿಗೆ ಮಾಸಿಕ 3 ಸಾವಿರ ರೂ. ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಹಲವು ಭರವಸೆಗಳ ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್ ಈಗ ಐದನೇ ಗ್ಯಾರಂಟಿ ಘೋಷಿಸಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುವುದೇ ಕಾಂಗ್ರೆಸ್‌ನ ಐದನೇ ಗ್ಯಾರಂಟಿಯಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಇದನ್ನೂ ಓದಿ: ಕರಾವಳಿಯಲ್ಲಿ ರಾಹುಲ್ ಹವಾ: ಮೀಸಲಾತಿ ಪ್ರಮಾಣ ಏರಿಕೆ ಭರವಸೆ ನೀಡಿದ ಕೈ ನಾಯಕ
6. Operation Kaveri: ಸುಡಾನ್‌ನಲ್ಲಿ 68 ಕನ್ನಡಿಗರು ಅತಂತ್ರ; ನೆರವಿಗೆ ಬಾರದ ಆಪರೇಷನ್ ಕಾವೇರಿ ಟೀಂ
ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರವು ಆಪರೇಷನ್ ಕಾವೇರಿ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈಗಾಗಲೇ ಮೂರು ಬ್ಯಾಚುಗಳಲ್ಲಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಆದರೆ, ಇನ್ನೂ 68 ಕನ್ನಡಿಗರು ಸುಡಾನ್‌ನಲ್ಲಿ ಸಿಲುಕಿದ್ದು, ಅವರ ನೆರವಿಗೆ ರಾಯಭಾರ ಕಚೇರಿ ಬಂದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ವಿಸ್ತಾರ Explainer: ಜೈಲಿಂದ ಬಿಡುಗಡೆಯಾದ ಕೊಲೆ ಅಪರಾಧಿ, ಮಾಜಿ ಸಂಸದ, ʻಬಾಹುಬಲಿ’ ಯಾರಿವನು?
ಮಾಜಿ ಸಂಸದ. ಆಪ್ತರು ಇವನನ್ನು ʼಬಾಹುಬಲಿʼ ಎಂದು ಕರೆಯುತ್ತಾರೆ. ಆದರೆ ಜೈನಪುರಾಣದ ಬಾಹುಬಲಿಗೆ ಈತನ ಸ್ವಭಾವ ತದ್ವಿರುದ್ಧ. ಆನಂದ್ ಮೋಹನ್ ಸಿಂಗ್ (Anand Mohan Singh) ಎಂಬ ಹೆಸರಿನ ಇವನು ಹಿಂಸೆಯ ಪ್ರತಿನಿಧಿ. ಕೊಲೆ ಅಪರಾಧಿ. ಸದ್ಯ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾನೆ. ಬಿಡುಗಡೆ ಮಾಡಿದ್ದು ಬಿಹಾರದ ನಿತೀಶ್ ಕುಮಾರ್ (Nitish Kumar) ಸರ್ಕಾರ. ಅವನ ಪೂರ್ಣ ಮಾಹಿತಿಗಾಗಿ ಓದಿ ಈ ವರದಿ
8. ಛತ್ತೀಸ್ಗಢ ನಕ್ಸಲ್ ದಾಳಿ ಕ್ಷಣದ ವಿಡಿಯೊ ವೈರಲ್; ವಾಹನದ ಕೆಳಗೆ ಅಡಗಿದ್ದ ಸಿಬ್ಬಂದಿಯಿಂದ ಚಿತ್ರೀಕರಣ
ಛತ್ತೀಸ್ಗಢ್ನ ದಾಂತೇವಾಡಾದಲ್ಲಿ ನಕ್ಸಲರು ಐಇಡಿ ದಾಳಿ ನಡೆಸಿ, 10 ಯೋಧರು ಮೃತಪಟ್ಟ ದಾರುಣ ಘಟನೆಗೆ ಸಂಬಂಧಪಟ್ಟಂತೆ ಒಂದು ವಿಡಿಯೊ ವೈರಲ್ ಆಗಿದೆ. ಸ್ಫೋಟ ನಡೆದ ಕ್ಷಣದ ವಿಡಿಯೊ ಇದಾಗಿದ್ದು, ಅವಘಡದಿಂದ ಪಾರಾದ ಪೊಲೀಸ್ ಸಿಬ್ಬಂದಿಯೊಬ್ಬ ಚಿತ್ರೀಕರಿಸಿದ್ದು ಎಂದು ವರದಿಯಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
9. ಅಧಿಕ ಸಕ್ಕರೆಯ ವಿವಾದ, ಬೋರ್ನ್‌ವಿಟಾಗೆ ಮಕ್ಕಳ ಹಕ್ಕುಗಳ ಆಯೋಗ ನೀಡಿದ ನೋಟಿಸ್‌ನಲ್ಲಿ ಏನಿದೆ?
ಹೆಲ್ತ್ ಡ್ರಿಂಕ್ ತಯಾರಕ ಬೋರ್ನ್‌ವಿಟಾದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗಿದೆ ಎಂಬ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗದಿಂದ (NCPCR) ಬೋರ್ನ್‌ವೀಟಾ ತಯಾರಕ ಮೋಂಡೆಲ್ಜ್ ಇಂಡಿಯಾ ಇಂಟರ್‌ನ್ಯಾಶನಲ್‌ಗೆ ನೋಟಿಸ್ ಜಾರಿಯಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. ಸಿಂಹದ ಮರಿಯಂಥ ಕರುವಿಗೆ ಜನ್ಮ ನೀಡಿದ ಹಸು; ಮೃತಪಟ್ಟರೂ ಮಣ್ಣು ಮಾಡಲು ತೆಗೆದುಕೊಂಡು ಹೋಗಲು ಆಗದಷ್ಟು ಜನವೋ ಜನ!
ಮಧ್ಯಪ್ರದೇಶದಲ್ಲಿ ಹಸುವೊಂದರ ಹೊಟ್ಟೆಯಲ್ಲಿ ಸಿಂಹದ ಮರಿಯಂಥ ಕರು ಹುಟ್ಟಿದೆ (lion-like calf in Madhya Pradesh). ಅಲ್ಲಿನ ರೈಸೆನ್ ಜಿಲ್ಲೆಯ ಬೇಗಂಗಂಜ್ನಲ್ಲಿರುವ ಗೋರ್ಖಾ ಎಂಬ ಹಳ್ಳಿಯಲ್ಲಿ ಹುಟ್ಟಿದ ವಿಚಿತ್ರ ಕರುವನ್ನು ನೋಡಲು ಆ ಹಳ್ಳಿ ಮಾತ್ರವಲ್ಲ, ಸುತ್ತಲಿನ ಹಳ್ಳಿಗಳ ಜನರೂ ದಂಡುದಂಡಾಗಿ ಬರುತ್ತಿದ್ದಾರೆ. ಸದ್ಯ ಅಲ್ಲಿನ ಎಲ್ಲರ ಬಾಯಲ್ಲೂ ಈಗ ಸಿಂಹದ ಮರಿಯಂಥ ಹಸುವಿನ ಕರುವಿನ ಸುದ್ದಿಯೇ..! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವೈರಲ್ ಸುದ್ದಿ ಓದಿ : 30 ಅಡಿ ಎತ್ತರದಿಂದ ಬಿದ್ದು, ಆರಾಮಾಗಿ ಎದ್ದು ನಿಂತ ಪುಟಾಣಿ ಹುಡುಗಿ
ಇನ್ನಷ್ಟು ಪ್ರಮುಖ ಸುದ್ದಿಗಳು
- Karnataka Election 2023 : ಪ್ರಚೋದನಕಾರಿ ಹೇಳಿಕೆ; ಅಮಿತ್ ಶಾ ವಿರುದ್ಧ ದೂರು ನೀಡಿದ ಕಾಂಗ್ರೆಸ್
2. KEA Recruitment 2023 : 757 ಹುದ್ದೆಗಳ ನೇಮಕ ಪ್ರಕ್ರಿಯೆ ಮುಂದೂಡಿಕೆ; ಕೆಇಎ ಹೇಳಿದ್ದೇನು?
3.ಕೇರಳದಿಂದ ಕಾಣೆಯಾದ 32 ಸಾವಿರ ಹುಡುಗಿಯರ ನೈಜ ಕಥೆ: ʻದಿ ಕೇರಳ ಸ್ಟೋರಿʼ ಟ್ರೈಲರ್ ಔಟ್
4. Upcoming Movies: ನಾಳೆ ತೆರೆ ಕಾಣಲಿರುವ ಸಿನಿಮಾಗಳಿವು!
5. ರಾಜ ಮಾರ್ಗ : ಲೈಂಗಿಕ ಸಂತ್ರಸ್ತರ ಆಶಾಕಿರಣ ಸುನೀತಾ ಕೃಷ್ಣನ್; ಆಕೆಯ ಹೋರಾಟ ನಮ್ಮ ಕಲ್ಪನೆಗೂ ಮೀರಿದ್ದು!