1 .ಶಿಗ್ಗಾಂವಿಯಲ್ಲಿ ಕೇಸರಿ ಮೇನಿಯಾ; ಕಿಚ್ಚನ ಅಬ್ಬರ, ನಡ್ಡಾ ಉಪಸ್ಥಿತಿಯಲ್ಲಿ ಕಣಕ್ಕಿಳಿದ ಭಾವುಕ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಕಂಡು ಬೀಗಿದರೆ ಜನರ ಪ್ರೀತಿ ಕಂಡು ಭಾವುಕರಾದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ; ಊರ ಹಬ್ಬದಂತೆ ಸಂಭ್ರಮಿಸಿದ ಜನ
ಪೂರಕ ಸುದ್ದಿ: ಸಿಎಂ ಬೊಮ್ಮಾಯಿ ವಿರುದ್ಧದ ಅಭ್ಯರ್ಥಿಯನ್ನೇ ಬದಲಾಯಿಸಿದ ಕಾಂಗ್ರೆಸ್
2. ಇದು ಕೊನೆಯ ಚುನಾವಣೆ; ಮಗ ಯತೀಂದ್ರ, ಮೊಮ್ಮಗ ಧವನ್ ಉತ್ತರಾಧಿಕಾರಿಗಳು ಎಂದ ಸಿದ್ದರಾಮಯ್ಯ
ʻʻಮೈಸೂರು: ಇದು ನನ್ನ ಕೊನೆಯ ಚುನಾವಣೆ. ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಮುಂದೆ ಮಗ ಡಾ. ಯತೀಂದ್ರ ಇದ್ದಾನೆ, ಮೊಮ್ಮಗ ಧವನ್ ಇದ್ದಾನೆʼʼ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವರುಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ಅವರು ಅದಕ್ಕಿಂತ ಮೊದಲು ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: 1. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಶಕ್ತಿ ಪ್ರದರ್ಶನ, ರೋಡ್ ಶೋ ಬಳಿಕ ನಾಮಪತ್ರ ಸಲ್ಲಿಕೆ
2. ಕೊರಟಗೆರೆಯಲ್ಲಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ; ಕುಸಿದು ಬಿದ್ದ ಮಹಿಳಾ ಪೇದೆ
3. ಜೆಡಿಎಸ್‌ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ; ಮಂಡ್ಯದ ಅಭ್ಯರ್ಥಿಯ ಹೆಸರಿಲ್ಲ!
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಜಾತ್ಯತೀತ ಜನತಾದಳ ಬುಧವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮಂಡ್ಯದ ಅಭ್ಯರ್ಥಿಯ ಹೆಸರಿಲ್ಲ. ಹೀಗಾಗಿ ಈ ಕ್ಷೇತ್ರದಿಂದ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತ ಕುತೂಹಲ ಮುಂದುವರಿದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಮೂರು ಪಕ್ಷಗಳಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ: ಜಗದೀಶ್ ಶೆಟ್ಟರ್ ಕೈ ಪಾಳಯದ ಸ್ಟಾರ್ ಕ್ಯಾಂಪೇನರ್
ಬಿಜೆಪಿ, ಕಾಂಗ್ರೆಸ್‌ನ ತಲಾ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದೆ. ಕಮಲ ಪಕ್ಷಕ್ಕೆ ಮೋದಿ, ಕೈಪಡೆಯಲ್ಲಿ ರಾಹುಲ್, ರಮ್ಯಾಗೆ ಮಣೆ ಸಿಕ್ಕಿದೆ. ಜೆಡಿಎಸ್ ಪಟ್ಟಿಯಲ್ಲಿ ದೇವೇಗೌಡರೇ ಸುಪ್ರೀಂ ಆಗಿದ್ದಾರೆ. ಮೂರು ದಿನದ ಹಿಂದಷ್ಟೇ ಪಕ್ಷ ಸೇರಿದ್ದ ಜಗದೀಶ್ ಶೆಟ್ಟರ್ ಕೈ ಪಾಳಯದ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ.
ಮೂರು ಪ್ರತ್ಯೇಕ ವರದಿಗಳಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ
1. ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ಮೋದಿಯೇ ಪ್ರಧಾನ, ಬಿ.ಎಲ್. ಸಂತೋಷ್, ವಿಜಯೇಂದ್ರ ಹೆಸರಿಲ್ಲ
2. 3 ದಿನ ಹಿಂದಷ್ಟೇ ಬಿಜೆಪಿ ಬಿಟ್ಟು ಬಂದ ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ, ರಮ್ಯಾಗೂ ಸ್ಥಾನ
3. ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡರ ಕುಟುಂಬದ 8 ಮಂದಿ, ಭವಾನಿ ರೇವಣ್ಣಗೂ ಸ್ಥಾನ
5. ಲಿಂಗಾಯತ ಡ್ಯಾಮೇಜ್ ಕಂಟ್ರೋಲ್‌ಗಾಗಿ ಅಖಾಡಕ್ಕಿಳಿದ ಬಿಎಸ್‌ವೈ, ಮಠಾಧೀಶರನ್ನು ಭೇಟಿ ಮಾಡಿದ ನಡ್ಡಾ
ರಾಜ್ಯದಲ್ಲಿ ಕೆಲವೊಂದು ವಿದ್ಯಮಾನಗಳಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಲಿಂಗಾಯತ ಮತಬ್ಯಾಂಕ್‌ಗೆ ಹೊಡೆತ ಬೀಳುವ ಅಪಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಾಯಕರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಒಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿಯಲ್ಲಿ ಲಿಂಗಾಯತ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆ ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಲಿಂಗಾಯತ ಮುಖಂಡರನ್ನು ಕರೆಸಿಕೊಂಡು ಚರ್ಚೆ ನಡೆಸಿದರು. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
6.ಕೆಜಿಎಫ್ ಬಾಬು ಸಹಿತ 50 ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್; ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳ ಲಗ್ಗೆ
ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಸೇರಿದಂತೆ ಸುಮಾರು 50ಕ್ಕೂ ಅಧಿಕ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ (IT Raid) ನಡೆದಿದೆ. ಬುಧವಾರ ಬೆಳಗ್ಗಿನ ಜಾವವೇ ಈ ದಾಳಿ ನಡೆದಿದೆ. ಬಾಬು ಮನೆಯಿಂದ ಚೆಕ್, ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ವಿಸ್ತಾರ Explainer : ಚೀನಾದ ಜನಸಂಖ್ಯೆ ಕುಸಿತ, ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚು?
ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ, ಅಲ್ಲಿನ ಜನಸಂಖ್ಯೆ ಕಳೆದ ವರ್ಷಕ್ಕಿಂತ ಕುಸಿತ ಕಂಡಿದೆ. ಹಿಂದಿನ ವರ್ಷ 1,41.26 ಕೋಟಿ ಇದ್ದ ಜನಸಂಖ್ಯೆ 2022ರಲ್ಲಿ 1,41.18 ಕೋಟಿಗೆ ಇಳಿದಿದೆ. ಇದೇ ಮೊದಲ ಬಾರಿಗೆ ಹೀಗಾಗುತ್ತಿದೆ. ಭಾರತ ಶೀಘ್ರದಲ್ಲೇ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲು ಸಿದ್ಧವಾಗಿದೆ ಎಂದು ನಂಬಲಾಗಿತ್ತು. ಈಗಾಗಲೇ ಅದು ಮೀರಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಸಲಿಂಗ ವಿವಾಹ ಕೇವಲ ನಗರ ಮೇಲ್ ಸ್ತರದ ದೃಷ್ಟಿಕೋನ ಎಂಬುದಕ್ಕೆ ಡೇಟಾಗಳಿಲ್ಲ; ಸುಪ್ರೀಂ
ಸಲಿಂಗ ವಿವಾಹ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ 15 ಅರ್ಜಿಗಳ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, ಸಲಿಂಗ ವಿವಾಹ ಮಾನ್ಯತೆಯ ಬೇಡಿಕೆಯು ನಗರ ಮೇಲ್ ಸ್ತರದ ದೃಷ್ಟಿಕೋನ ಎಂದು ಬೆಂಬಲಿಸುವ ಡೇಟಾಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳ ಕಳವು; ಚಿಂತೆಯಲ್ಲಿ ಆಟಗಾರರು
ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತವೊಂದು ಸಂಭವಿಸಿದೆ. ತಂಡದ ಬಹುತೇಕ ಎಲ್ಲ ಆಟಗಾರರ ಬೆಲೆ ಬಾಳುವ ಬ್ಯಾಟ್ ಮತ್ತು ಕ್ರಿಕೆಟ್ ಉಪಕರಣಗಳು ಕಳವಾಗಿವೆ. ಈ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ‘ವೋಡ್ಕಾ ಕುಡಿತಿಯಾ ಅಂತ ಕೇಳಿದ್ರು’-ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷನ ವಿರುದ್ಧ ಸಿಡಿದೆದ್ದ ಕೈ ನಾಯಕಿ
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಅಸ್ಸಾಂ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ ಅವರು ದೌರ್ಜನ್ಯ, ತಾರತಮ್ಯದ ಆರೋಪ ಮಾಡಿದ್ದಾರೆ. ವೊಡ್ಕಾ ಕುಡೀತಿಯಾ ಎಂದು ಕೇಳಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ