Site icon Vistara News

ವಿಸ್ತಾರ Top 10 News : ಕನಕಪುರ ರಾಜಕಾರಣದ ಟ್ವಿಸ್ಟ್‌ನಿಂದ, ಸೇನಾ ವಾಹನಕ್ಕೆ ಬೆಂಕಿ ಹಚ್ಚಿದ ಉಗ್ರ ಕೃತ್ಯದವರೆಗೆ ಪ್ರಮುಖ ಸುದ್ದಿಗಳು

Vistara Top 10

Vistara Top 10

1. ಕನಕಪುರ ರಾಜಕಾರಣಕ್ಕೆ ರೋಚಕ ತಿರುವು: ಡಿಕೆಶಿ ಕ್ಷೇತ್ರದಲ್ಲಿ ತಮ್ಮ ಸುರೇಶ್‌ ನಾಮಪತ್ರ
ರಾಜ್ಯ ರಾಜಕಾರಣದಲ್ಲಿ ರೋಚಕ ಬೆಳವಣಿಗೆ ನಡೆದಿದೆ. ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಜತೆ, ಸೋದರ ಡಿ.ಕೆ. ಸುರೇಶ್‌ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಡಿ.ಕೆ. ಶಿವಕುಮಾರ್‌ ಅವರ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ನಾಮಪತ್ರ ತಿರಸ್ಕಾರವಾದರೆ ಇರಲಿ ಎಂಬ ಕಾರಣಕ್ಕೆ ಡಿ.ಕೆ ಸುರೇಶ್‌ ಕಣಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಭಯದಿಂದ ನಡುಗುತ್ತಿರುವ ಡಿಕೆಶಿ; ಡಿ.ಕೆ ಸುರೇಶ್‌ ನಾಮಪತ್ರ ಸಲ್ಲಿಕೆಗೆ ಬಿಜೆಪಿ ವ್ಯಾಖ್ಯಾನ
ಪೂರಕ ಸುದ್ದಿ : ಸಿಬಿಐ ತನಿಖೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ; ಚುನಾವಣೆಗೆ ಮೊದಲೇ ಡಿಕೆಶಿಗೆ ಸಂಕಷ್ಟ
ಪೂರಕ ಸುದ್ದಿ; ಮಂಗಳೂರು ಉತ್ತರ ಟಿಕೆಟ್‌ ವಂಚಿತ ಮೊಯ್ದಿನ್‌ ಬಾವಾ ಕಾಂಗ್ರೆಸ್‌ಗೆ ಗುಡ್‌ಬೈ, ಜೆಡಿಎಸ್‌ ಸೇರ್ಪಡೆ

2. ಸಿದ್ದರಾಮಯ್ಯ ಸ್ಪರ್ಧಾ ಕಣ ವರುಣದ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಬಿ.ವೈ ವಿಜಯೇಂದ್ರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸುವ ನಿಟ್ಟಿನಲ್ಲಿ ಬಿಜೆಪಿ ಹಲವು ತಂತ್ರಗಳನ್ನು ರೂಪಿಸಿದೆ. ಅದರ ಭಾಗವಾಗಿಯೇ ಪ್ರಬಲ ಲಿಂಗಾಯತ ನಾಯಕರಲ್ಲಿ ಒಬ್ಬರಾದ, ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿ ಸಡ್ಡು ಹೊಡೆದಿದೆ. ಇದರ ಜತೆಗೆ ಇದೀಗ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ವರುಣಕ್ಕೆ ಕಳುಹಿಸಿಕೊಡುವ ಮೂಲಕ ಸಿದ್ದರಾಮಯ್ಯ ಅವರ ಬೆವರಿಳಿಸಲು ಮುಂದಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಕಾಂಗ್ರೆಸ್‌ ಪ್ರಚಾರಕರ ಪಟ್ಟಿಯಲ್ಲಿ ಗ್ಯಾಂಗ್‌ಸ್ಟರ್‌ ಆತಿಕ್‌ ಅಹ್ಮದ್‌ ಆಪ್ತ ಇಮ್ರಾನ್ ಪ್ರತಾಪ್ ಗಡಿ; ಶೋಭಾ
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಸಂಸದ ಇಮ್ರಾನ್ ಪ್ರತಾಪ್ ಗಡಿ ಹೆಸರಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಇತ್ತೀಚೆಗೆ ಎನ್‌ಕೌಂಟರ್‌ ಆದ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಆತಿಕ್‌ ಅಹ್ಮದ್‌ನ ಆಪ್ತ ಎನ್ನುವುದು ಅವರ ವಾದ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ತೇಜಸ್ವಿ ಸೂರ್ಯ ಏಕಿಲ್ಲ?

4. ಶುರುವಾಗಲಿದೆ ಮೆಗಾ ರ‍್ಯಾಲಿಗಳ ಅಬ್ಬರ; ವಾರದಲ್ಲಿ ಅಮಿತ್‌ ಶಾ, ರಾಹುಲ್‌ ಗಾಂಧಿ, ನರೇಂದ್ರ ಮೋದಿ ಪ್ರಚಾರರಾಜ್ಯ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಭರಾಟೆ ಅಂತ್ಯಗೊಳ್ಳುತ್ತಿದ್ದಂತೆಯೇ ಚುನಾವಣೆಯ ಮೆಗಾರ‍್ಯಾಲಿಗಳ ಅಬ್ಬರ ಶುರುವಾಗಲಿದೆ. ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೂರ್‌ ಪ್ಲ್ಯಾನ್‌ಗಳು ಈಗಾಗಲೇ ರೆಡಿಯಾಗಿದ್ದರೆ ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ರಾಹುಲ್​ ಗಾಂಧಿಗೆ ಹಿನ್ನಡೆ; ದೋಷಿ ತೀರ್ಪಿಗೆ ತಡೆ ಕೋರಿದ ಅರ್ಜಿ ವಜಾ ಮಾಡಿದ ಸೂರತ್​ ಸೆಷನ್ಸ್ ಕೋರ್ಟ್​
2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್​​ನಲ್ಲಿ ಸೂರತ್​ ಕೋರ್ಟ್​​ನಿಂದ ದೋಷಿ ಎಂದು ಪರಿಗಣಿತರಾಗಿ, ಸಂಸದನ ಸ್ಥಾನವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ಕೆಳ ನ್ಯಾಯಾಲಯ ತಮಗೆ ನೀಡಿದ್ದ ಶಿಕ್ಷೆಗೆ ತಡೆ ನೀಡುವಂತೆ ಸೂರತ್​ ಸೆಷನ್ಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಅಲ್ಲಿಯೂ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಇಂಗ್ಲಿಷ್ ಮೀಡಿಯಂ ಡಿಗ್ರಿ, ಪಿಜಿ ಕೋರ್ಸ್ ಪರೀಕ್ಷೆ ಕನ್ನಡದಲ್ಲೂ ಬರೆಯಬಹುದು
ಕೇಂದ್ರೀಯ ಸಶಸ್ತ್ರ ಪಡೆಗಳ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಿದ ಬೆನ್ನಲ್ಲೇ ಮತ್ತೊಂದು ಅಂಥದ್ದೇ ಸೌಲಭ್ಯ ಒದಗಿ ಬಂದಿದೆ. ಉತನ್ನ ಶಿಕ್ಷಣದ ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು‌ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

7. 2nd PUC Result 2023 : ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ವೆಬ್‌ಸೈಟ್‌ ಮಾಹಿತಿ ಇಲ್ಲಿದೆ
ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಏ. 21ರ ಶುಕ್ರವಾರ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಫಲಿತಾಂಶವನ್ನು ಬೆಳಗ್ಗೆ 10 ಗಂಟೆಗೆ ಘೋಷಣೆ ಮಾಡಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. Army Jawans Killed: ಸೇನಾ ವಾಹನಕ್ಕೆ ಬೆಂಕಿ ಆಕಸ್ಮಿಕವಲ್ಲ, ಅದು ಉಗ್ರರ ಕೃತ್ಯ! ಐವರು ಯೋಧರು ಬಲಿ
ಜಮ್ಮು ಮತ್ತು ಕಾಶ್ಮೀರದ ಪೂಂಚ್​ ವಲಯದಲ್ಲಿ ಭಾರತೀಯ ಸೇನೆಯ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು, ಅದರಲ್ಲಿದ್ದ ಯೋಧರ ಪೈಕಿ ಐವರು ದುರ್ಮರಣಕ್ಕೀಡಾಗಿದ್ದರು(Army Jawans Killed). ಈ ಘಟನೆಯು ಆಕಸ್ಮಿಕವಾಗಿರದೇ, ಭಯೋತ್ಪಾದನಾ ಕೃತ್ಯವಾಗಿದ್ದು, ಗ್ರೆನೇಡ್ ಎಸೆದಿದ್ದರಿಂದ ಸೇನಾವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ (Terror Attack) ಎಂದು ಸೇನೆ ಹೇಳಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ಕಾದ ಕಾವಲಿಯಾದ ಕಲಬುರಗಿ, ಬೆಳಗಾವಿ, ಚಿತ್ರದುರ್ಗ; ಏರುತ್ತಲೇ ಹೋಗಲಿದೆ ತಾಪಮಾನ
ರಾಜ್ಯದ ಹಲವು ಜಿಲ್ಲೆಗಳು ಕಾದ ಕಾವಲಿಯಂತಾಗಿವೆ. ಜನರು ಮನೆಯಿಂದ ಹೊರಗೆ ಬರಲು ಆಗದೆ ಒಳಗೆ ಕೂರಲೂ ಆಗದೆ ಪರದಾಡುವಂತಾಗಿದೆ. ಮುಂದಿನ ಒಂದು ವಾರದ ಕಾಲ ಉಷ್ಣಾಂಶ ಇನ್ನಷ್ಟು ಹೆಚ್ಚಬಹುದು ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. IPL 2023: ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಜನಂತೆ ಮೆರೆದ ಆರ್‌ಸಿಬಿಗೆ ರೋಚಕ ಗೆಲುವು
ಒಂದೆಡೆ ಮಧ್ಯಮ ಕ್ರಮಾಂಕದಲ್ಲಿ ಜಿತೇಶ್​ ಶರ್ಮ ಅವರ ಅಸಮಾನ್ಯ ಹೋರಾಟ, ಮತ್ತೊಂದೆಡೆ ಮೊಹಮ್ಮದ್​ ಸಿರಾಜ್​ ಅವರ ಘಾತಕ ಬೌಲಿಂಗ್​ ದಾಳಿ. ಇದು ಗುರುವಾರದ ಐಪಿಎಲ್​ನ ಮೊದಲ ಪಂದ್ಯದ ಹೈಲೆಟ್​ ಆಗಿತ್ತು. ಆದರೆ ಅಂತಿಮವಾಗಿ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ 24 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವುನಿಂದಿಗೆ ಆರ್​ಸಿಬಿ ತಾನಾಡಿದ 6 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿತು. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

ಇತರ ಪ್ರಮುಖ ವರದಿಗಳು

1.ಲಂಡನ್​ ಶಾಲೆಗಳಲ್ಲಿ ಹಿಂದು ಮಕ್ಕಳಿಗೆ ಧರ್ಮದ ಹೆಸರಲ್ಲಿ ದೌರ್ಜನ್ಯ, ಗೋಮಾಂಸ ಎಸೆದು ನಿಂದನೆ
‌2.ಖಲಿಸ್ತಾನಿ ನಾಯಕ ಅಮೃತ್​ಪಾಲ್ ಸಿಂಗ್ ಪತ್ನಿ ಬಂಧನ; ಲಂಡನ್​ಗೆ ಹೊರಟಿದ್ದವಳು ಖಾಕಿ ಖೆಡ್ಡಾಕ್ಕೆ
3. Electric shock: ಕರೆಂಟ್‌ ಶಾಕ್‌ ಹೊಡೆದು ತುಮಕೂರಲ್ಲಿ ಇಬ್ಬರು ಬಾಲಕರು ಮೃತ್ಯು
4. Lottery: ಬಡ ಟೈಲರ್‌ಗೆ ಒಲಿದ ಅದೃಷ್ಟ ಲಕ್ಷ್ಮಿ; ಉಪ್ಪಿನಂಗಡಿಯ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ ಬಂತು 80 ಲಕ್ಷ

Exit mobile version