1. ಬಿಜೆಪಿ ಪ್ರಣಾಳಿಕೆ: ಹಾಲು, ಸಿರಿಧಾನ್ಯ, ಎಲ್ಪಿಜಿಯ ಬಂಪರ್ ಗಿಫ್ಟ್; ಸಮಾನ ನಾಗರಿಕ ಸಂಹಿತೆ ಜಾರಿ
ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಪಿಎಲ್ ಮನೆಗಳಿಗೆ ದಿನವೂ ಅರ್ಧ ಲೀಟರ್ ಹಾಲು, ಪ್ರತಿಯೊಬ್ಬರಿಗೆ ತಿಂಗಳಿಗೆ ಐದು ಕೆಜಿ ಸಿರಿ ಧಾನ್ಯ ನೀಡುವ ಭರವಸೆ ನೀಡಲಾಗಿದೆ. ವರ್ಷಕ್ಕೆ ಮೂರು ಉಚಿತ ಅಡುಗೆ ಸಿಲಿಂಡರ್‌ಗೆ ಘೋಷಣೆ ಮಾಡಲಾಗಿದೆ. ಅದರ ಜತೆಗೇ ಸಮಾನ ನಾಗರಿಕ ಸಂಹಿತೆ ಮತ್ತು ಎನ್‌ಆರ್‌ಸಿ ಜಾರಿಯನ್ನೂ ಪ್ರಕಟಿಸಲಾಗಿದೆ. ಬಿಜೆಪಿಯ ಉಚಿತ ಘೋಷಣೆಗಳನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಪ್ರಣಾಳಿಕೆ ಸಂಬಂಧಿತ ಪ್ರಮುಖ ಸುದ್ದಿಗಳು
1. ಬಿಪಿಎಲ್ ಪಡಿತರದಾರರಿಗೆ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು; ಬಿಜೆಪಿ ಭರವಸೆ
2. ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆ ಜಾರಿ; ಪ್ರಜಾ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ
3. BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?
4. ಬಿಜೆಪಿ ಉಚಿತ ಘೋಷಣೆಗೆ ಕಾಂಗ್ರೆಸ್ ಲೇವಡಿ; ನಾವು ಮಾಡಿದ್ರೆ ತಪ್ಪು, ನೀವು ಮಾಡಿದ್ರೆ ಸರೀನಾ?
2. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಕದ್ದಿರುವ ಎಲ್ಲ ಹಣ ವಾಪಸ್: ರಾಹುಲ್ ವಾಗ್ದಾನ
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ತುಂಬ ಕೇವಲ ಮೋದಿ, ಮೋದಿ, ಮೋದಿ ಬಿಟ್ಟರೆ ಬೇರೆ ಏನೂ ಇರಲ್ಲ. ರಾಜ್ಯದಲ್ಲಿ ಇಷ್ಟು ವರ್ಷ ಬಿಜೆಪಿ ಜನರ ಜೇಬಿನಿಂದ ದುಡ್ಡು ಕೊಳ್ಳೆ ಹೊಡೆದಿದೆ. ಮುಂದಿನ ಐದು ವರ್ಷದವರೆಗೆ ನಮಗೆ ಅಧಿಕಾರ ಕೊಡಿ. ಬಿಜೆಪಿಯವರು ಕದ್ದಿರುವ ಹಣವನ್ನು ವಾಪಸ್ ನಿಮ್ಮ ಜೇಬಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು. ತುಮಕೂರು ಜಿಲ್ಲೆಯ ತುರುವೇಕೆರೆ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ನಾಳೆಯಿಂದ 2 ದಿನ ಮತ್ತೆ ಮೋದಿ ಮೋಡಿ, 62 ಕ್ಷೇತ್ರಗಳಿಗೆ ನಮೋ ಟಾರ್ಗೆಟ್
ರಾಜ್ಯ ವಿಧಾನಸಭೆ ಚುನಾವಣಾ ಅಖಾಡದಲ್ಲಿ ಏಪ್ರಿಲ್ 29 ಮತ್ತು 30ರಂದು ಧೂಳೆಬ್ಬಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಎರಡನೇ ಸುತ್ತಿನ ಮಿಂಚಿನ ಸಂಚಾರಕ್ಕೆ ರೆಡಿಯಾಗಿದ್ದಾರೆ. ಮೇ 2 ಮತ್ತು 3ರಂದು ರಾಜ್ಯದ ಏಳು ಕಡೆಗಳಲ್ಲಿ ಮೋದಿ ಅವರು ಸಮಾವೇಶ ಮತ್ತು ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಕರಾವಳಿ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಸಂಚರಿಸಲಿರುವ ಅವರು ಒಟ್ಟು 62 ಕ್ಷೇತ್ರಗಳನ್ನು ಟಾರ್ಗೆಟ್ ಆಗಿ ಇಟ್ಟುಕೊಂಡು ಪ್ರಚಾರ ನಡೆಸಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಕಾಂಗ್ರೆಸ್‌ನಿಂದ ಮತ್ತೆ ಬೈಗುಳ: ಮೋದಿ ನಾಲಾಯಕ್ ಮಗ ಎಂದ ಖರ್ಗೆ ಮಗ
ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಮಗ ಎಂದು ಹೇಳಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಕೆಲವು ದಿನದ ಹಿಂದಷ್ಟೇ ಮೋದಿಯನ್ನು ವಿಷದ ಹಾವು ಎಂದು ಕರೆದು ವಿವಾದಕ್ಕೆ ಒಳಗಾಗಿದ್ದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ಸುದ್ದಿ : ರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ; ಮತ್ತೆ ನಾಲಿಗೆ ಹರಿಬಿಟ್ಟ ಯತ್ನಾಳ್
5. ಬಿಜೆಪಿಯಲ್ಲಿ ಲಿಂಗಾಯತ ಸಿಎಂ ಸಾಧ್ಯವೇ ಇಲ್ಲ: ಎಚ್‌ಡಿಕೆ ಪುನರುಚ್ಚಾರ, ನಾನು ಜನರ ಟೀಮ್
ಜೆಡಿಎಸ್ ಪಕ್ಷವು ಕಾಂಗ್ರೆಸ್‌ನ ಬಿ ಟೀಮ್ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. “ನಾನು ನಾಡಿನ ಜನತೆಯ ಟೀಮ್. ರಾಜ್ಯದ ಕನ್ನಡಿಗರ ಬಿ ಟೀಮ್ʼ ಎಂದಿದ್ದಾರೆ. ಜತೆಗೆ ಬಿಜೆಪಿಯಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ಬಗ್ಗೆ ಈ ಮೊದಲು ನಾನು ಪ್ರಸ್ತಾಪ ಮಾಡಿದ್ದೆ. ಈಗ ನಡೆಯುತ್ತಿರೋದು ಅದೇ ಅಲ್ವಾ? ರಾಜ್ಯದಲ್ಲಿ ಬಿಜೆಪಿಯವರು ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಡೈವೋರ್ಸ್ಗಿನ್ನು 6 ತಿಂಗಳು ಕಾಯಬೇಕಿಲ್ಲ; ದಂಪತಿ ನಡುವೆ ಪರಸ್ಪರ ಒಪ್ಪಿಗೆ ಇದ್ರೆ ತಕ್ಷಣವೇ ವಿಚ್ಛೇದನ
ಜತೆಯಾಗಿ ಬಾಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಪತಿ-ಪತ್ನಿ ಇಬ್ಬರೂ ತಲುಪಿದ್ದರೆ. ಅಂಥ ಸನ್ನಿವೇಶಗಳಲ್ಲಿ, ಆ ದಂಪತಿಗೆ ತತ್ಕ್ಷಣವೇ ಡಿವೋರ್ಸ್ ನೀಡಬಹುದು. ಆರು ತಿಂಗಳು ಕಾಯುವ ಅಗತ್ಯ ಇರುವುದಿಲ್ಲ ಎಂದಿದೆ ಸುಪ್ರೀಂಕೋರ್ಟ್. ಹಾಗಿದ್ದರೆ ಯಾವ ಆಧಾರದಲ್ಲಿ ಹೀಗೆ ಹೇಳಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮುಂದಿನ 24 ಗಂಟೆಯಲ್ಲಿ ಈ 8 ಜಿಲ್ಲೆಗಳಲ್ಲಿ ಭಾರಿ ಮಳೆ; ಬೆಂಗಳೂರಲ್ಲಿ ಸಂಜೆ ಮಳೆ
ಕಳೆದೊಂದು ವಾರದಿಂದ ರಾಜ್ಯದ ಹಲವೆಡೆ ಮಳೆ ಅಬ್ಬರ ಮುಂದುವರಿದಿದ್ದು, ಸೋಮವಾರ ಸಂಜೆ ವೇಳೆಗೆ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ 2ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಮ್ಯೂಚುವಲ್ ಫಂಡ್‌ನಿಂದ ಎಲ್ಪಿಜಿ ದರದ ತನಕ ಮೇ 1ರಿಂದಲೇ ಏನೇನು ಹೊಸ ಬದಲಾವಣೆ?
ಮೇ 1ರಿಂದ ಮ್ಯೂಚುವಲ್ ಫಂಡ್‌ನಿಂದ ಎಟಿಎಂ ವರ್ಗಾವಣೆಗಳು, ಎಲ್ಪಿಜಿ ದರದ ತನಕ ಹಲವಾರು ವಿಷಯಗಳಿಗೆ ಸಂಬಂಧಿಸಿ ಹಲವಾರು ಹೊಸ ಬದಲಾವಣೆಗಳು ಜಾರಿಯಾಗುತ್ತಿವೆ. ಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
9. ಪಾಕಿಸ್ತಾನದಿಂದ ಸಲಹೆ ಪಡೆಯಲು ಉಗ್ರರು ಬಳಸುತ್ತಿದ್ದ 14 ಆ್ಯಪ್‌ಗಳಿಗೆ ಭಾರತ ನಿಷೇಧ
ಕೇಂದ್ರ ಸರ್ಕಾರ 14 ಮೊಬೈಲ್ ಮೆಸೆಂಜರ್ ಆ್ಯಪ್‌ಗಳನ್ನು ನಿರ್ಬಂಧಿಸಿದೆ. ಭಯೋತ್ಪಾದಕರು ಪಾಕಿಸ್ತಾನದಿಂದ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳಿಸಲು ಈ ಮೆಸೆಂಜರ್ ಆ್ಯಪ್‌ಗಳನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. Viral News: ಬಿಟ್ಟು ಹೋದ ಮಾಲೀಕನ ಹುಡುಕುತ್ತ 27 ದಿನ ನಡೆದ ಶ್ವಾನ!
ನಾಯಿಗಳು ಮನುಷ್ಯನತ್ತ ತೋರಿಸುವ ಪ್ರೀತಿ, ನಿಷ್ಠೆಗೆ ಸಂಬಂಧಪಟ್ಟ ಹಲವು ಸ್ಟೋರಿಗಳನ್ನು ಓದಿದ್ದೇವೆ, ವಿಡಿಯೊಗಳಲ್ಲಿ ನೋಡಿದ್ದೇವೆ. ಇದೀಗ ಗೋಲ್ಡನ್ ರಿಟ್ರೈವರ್ ಪ್ರಭೇದಕ್ಕೆ ಸೇರಿದ ಸಾಕು ನಾಯಿಯೊಂದು ಇದೇ ಸಾಲಿಗೆ ಸೇರಿದೆ. ಮತ್ತೊಬ್ಬರ ಮನೆಯಲ್ಲಿ ತನ್ನನ್ನು ಬಿಟ್ಟು ಹೋದ ಮಾಲೀಕನನ್ನು ಅರಸಿಕೊಂಡು ವಾಪಸ್ ಹೋಗಿದೆ. ಅವನಿಗಾಗಿ 40 ಮೈಲುಗಳಷ್ಟು ದೂರ (64 ಕಿಮೀ) ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ