1. ಜೈ ಬಜರಂಗ ಬಲಿ ಎನ್ನುತ್ತಾ ಕಮಲದ ಚಿಹ್ನೆಗೆ ಮತ ಹಾಕಿ ಎಂದ ಮೋದಿ, ನಿಷೇಧ ಪ್ರಸ್ತಾಪಕ್ಕೆ ಕೌಂಟರ್
ಬಜರಂಗ ದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ಪ್ರಸ್ತಾಪವನ್ನು ಬಿಜೆಪಿ ಚೆನ್ನಾಗಿ ನಗದೀಕರಿಸಿಕೊಳ್ಳುತ್ತಿದೆ. ಮತದಾನದ ದಿನ ‘ಜೈ ಬಜರಂಗ ಬಲಿ’ ಎಂದು ಕಮಲದ ಬಟನ್ ಒತ್ತುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಫೂರಕ ಸುದ್ದಿಗಳು:
1. ಬಜರಂಗದಳ ನಿಷೇಧ ಪ್ರಸ್ತಾಪ ವಿರುದ್ಧ ಮೇ 4ರಂದು ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಠಣ
2. ಬಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತು ಎಂದ ಪ್ರತಾಪಸಿಂಹ
2. ಬಜರಂಗ ದಳ ಬ್ಯಾನ್ ಭರವಸೆಗೆ ಬದ್ಧ, ಪ್ರಣಾಳಿಕೆ ಬದಲಿಸಲ್ಲ ಎಂದ ಕಾಂಗ್ರೆಸ್
ಬಜರಂಗ ದಳಕ್ಕೂ ಆಂಜನೇಯನಿಗೂ ಏನು ಸಂಬಂಧ, ದೇವರ ಹೆಸರಿನ ಜತೆ ಸಂಬಂಧ ಕಲ್ಪಿಸಿ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಯಾವ ಕಾರಣಕ್ಕೂ ಪ್ರಣಾಳಿಕೆ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕರಾವಳಿ, ಬೆಳಗಾವಿಯಲ್ಲಿ ಮೋದಿ ಮಿಂಚಿನ ಸಂಚಲನ
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಂಗಳೂರಿನ ಮೂಲ್ಕಿ, ಉತ್ತರ ಕನ್ನಡದ ಅಂಕೋಲಾ ಮತ್ತು ಬೆಳಗಾವಿಯ ಬೈಲಹೊಂಗಲದಲ್ಲಿ ಮೂರು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ವಿರುದ್ಧ 85 ಪರ್ಸೆಂಟ್ ಕಮಿಷನ್, ನಕಲಿ ಫಲಾನುಭವಿಗಳ ಬ್ರಹ್ಮಾಸ್ತ್ರ ಪ್ರಯೋಗ ಪ್ರಯೋಗ ಮಾಡಿದರು.
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಮೋದಿ ಬೆಂಗಳೂರು ರೌಂಡ್ಸ್‌ಗೆ ಭರ್ಜರಿ ಸಿದ್ಧತೆ; ಮೇ 6ರಂದು ಇಡೀ ದಿನ ರೋಡ್ ಶೋ
4. ಬೆಂಗಳೂರಿನಲ್ಲಿ ಮೇ 6ರ ಮೋದಿ ರೋಡ್ ಶೋಗೆ ಮೇ 7ರಂದು ರಾಹುಲ್ ಗಾಂಧಿ ಕೌಂಟರ್
ಮೇ 6ರಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರು 37 ಕಿ.ಮೀ ರೋಡ್ ಶೋ ನಡೆಸಲು ಯೋಜನೆ ರೂಪಿಸಿರುವ ಬೆನ್ನಲ್ಲೇ, ಮೇ 7ರಂದು ರಾಹುಲ್ ಗಾಂಧಿ ಅವರು ಕೂಡ ಬೆಂಗಳೂರಿನಲ್ಲಿ ರೋಡ್ ಶೋ ಕೈಗೊಳ್ಳಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮಗನ ಕ್ಷೇತ್ರದಲ್ಲಿ ದೊಡ್ಡಗೌಡರ ಸಂಚಾರ: ತಮಿಳುನಾಡು ಮಾದರಿ ಪ್ರಾದೇಶಿಕ ರಾಜಕಾರಣ ಪ್ರತಿಪಾದನೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬುಧವಾರ ತಮ್ಮ ಪುತ್ರ ಕುಮಾರಸ್ವಾಮಿ ಸ್ಪರ್ಧಿಸಿರುವ ಚನ್ನಪಟ್ಟಣದಲ್ಲಿ ಮಿಂಚಿನ ಸಂಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕನ್ನಡಿಗರು ತಮಿಳಿಗರಿಂದ ರಾಜಕೀಯ ಕಲಿಯಬೇಕು.ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಕ್ಕೆ ಬಲ ನೀಡಬೇಕು ಎಂದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಪೆನ್ನಾರ್ ವಿವಾದ: ನ್ಯಾಯಾಧಿಕರಣ ರಚನೆಗೆ 4 ವಾರ ಸಮಯ ಕೇಳಿದ ಕೇಂದ್ರ, ಅಸ್ತು ಎಂದ ಸುಪ್ರೀಂ
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಾರ್ ನದಿ (ದಕ್ಷಿಣ ಪಿನಾಕಿನಿ) ನೀರು ಹಂಚಿಕೆ ವಿವಾದ ಬಗೆ ಹರಿಸುವ ಸಲುವಾಗಿ ನ್ಯಾಯಾಧಿಕರಣ ರಚಿಸಲು ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ ಸುಪ್ರೀಂಕೋರ್ಟ್. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ದಿ ಕೇರಳ ಸ್ಟೋರಿ ಬಿಡುಗಡೆಗೆ 2 ದಿನ ಬಾಕಿ; ಗುಪ್ತಚರ ದಳದಿಂದ ತಮಿಳುನಾಡಿಗೆ ಎಚ್ಚರಿಕೆ
ಟ್ರೇಲರ್ ರಿಲೀಸ್ ಆಗುತ್ತಿದ್ದಂತೆ ದೊಡ್ಡಮಟ್ಟ ವಿವಾದ ಸೃಷ್ಟಿಸಿರುವ ದಿ ಕೇರಳ ಸ್ಟೋರಿ (The Kerala Story ) ಮೇ 5ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗಲಿದೆ. ಥಿಯೇಟರ್ ರಿಲೀಸ್ಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಗುಪ್ತಚರ ದಳಗಳು ತಮಿಳುನಾಡಿನಲ್ಲಿ ಹಿಂಸಾಚಾರದ ಎಚ್ಚರಿಕೆ ನೀಡಿವೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
8. ಮೇ 6ಕ್ಕೆ ಏಳಲಿದೆ ವರ್ಷದ ಮೊದಲ ಚಂಡಮಾರುತ, ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಬಿರುಬೇಸಿಗೆಯಿಂದ ತತ್ತರಿಸುತ್ತಿದ್ದ ದೇಶದಲ್ಲಿ ಈಗ ಅಲ್ಲಲ್ಲಿ ಮತ್ತೆ ಮಳೆಯಾಗುತ್ತಿದೆ. ವಾತಾವರಣ ತಂಪಾಗುತ್ತಿದೆ. ಹೀಗಿರುವಾಗ ಈ ವರ್ಷದ ಮೊದಲ ಚಂಡಮಾರುತ ಏಳುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೇ 6ರಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಮೋಚಾ ಎಂದು ಹೆಸರಿಡಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ಸುದ್ದಿ: ಇನ್ನೂ ಇದೆ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಮಳೆ ಅಬ್ಬರ, ಬೆಂಗಳೂರಲ್ಲಿ ಯಾವ ಥರ?
9. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಕೊಲ್ಲಲು ಉಕ್ರೇನ್ 2 ಡ್ರೋನ್ ದಾಳಿ ನಡೆಸಿದೆ ಎಂದ ರಷ್ಯಾ
ಕಳೆದ ಒಂದೂವರೆ ವರ್ಷಗಳಿಂದ ಉಕ್ರೇನ್ ದೇಶದ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಈಗ ಹೊಸ ಆರೋಪವೊಂದನ್ನು ಮಾಡಿದೆ. ವ್ಲಾಡಿಮಿರ್ ಪುಟಿನ್‌ರ ಹತ್ಯೆಗೆ ಉಕ್ರೇನ್ ಪ್ರಯತ್ನ ಮಾಡುತ್ತಿದೆ. ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ನಡೆಸಿದೆ. ರಷ್ಯಾದ ಮಿಲಿಟರಿ ಮತ್ತು ಭದ್ರತಾ ಪಡೆಗಳು ಈ ಡ್ರೋನ್ನ್ನು ನಿಷ್ಕ್ರಿಯಗೊಳಿಸಿವೆ ಎಂದು ಕ್ರೆಮ್ಲಿನ್ ಪ್ರಕಟಣೆ ಹೊರಡಿಸಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. Godfather of A.I : ತಾನೇ ಸೃಷ್ಟಿಸಿದ ಎ.ಐ ತಂತ್ರಜ್ಞಾನಕ್ಕೆ ಬೆಚ್ಚಿ ಗೂಗಲ್‌ಗೇ ರಾಜೀನಾಮೆ ಕೊಟ್ಟ ವಿಜ್ಞಾನಿ!
ವಾಷಿಂಗ್ಟನ್ : ಜೆಫ್ರಿ ಹಿಂಟನ್ ! (Geoffrey Hinton) ಇವರ ಹೆಸರು ಇದೀಗ ವಿಶಿಷ್ಟ ಕಾರಣಕ್ಕಾಗಿ ಜಗತ್ತಿನ ಗಮನ ಸೆಳೆದಿದೆ. ಹಿರಿಯ ಕಂಪ್ಯೂಟರ್ ವಿಜ್ಞಾನಿಯಾಗಿರುವ ಜೆಫ್ರಿ ಹಿಂಟನ್ ಬರೋಬ್ಬರಿ 45 ವರ್ಷಗಳ ಹಿಂದೆಯೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ದಿಮತ್ತೆ (Artificial intelligence) ಬಗ್ಗೆ ಪಿಎಚ್‌ಡಿ ಬರೆದಿದ್ದರು. ತಮ್ಮ ಹಲವಾರು ದಶಕಗಳ ಸಂಶೋಧನೆಯಿಂದ ಎ.ಐ ಕ್ಷೇತ್ರದಲ್ಲಿ ಅವರ ಮಾತುಗಳಿಗೆ ಭಾರಿ ಬೆಲೆ ಇದೆ. ಈಗ ಅವರೇ ತನ್ನ ಸಂಶೋಧನೆಗೆ ಬೆಚ್ಚಿ ಬಿದ್ದಿದ್ದಾರೆ. ದೊಡ್ಡ ಅನಾಹುತವೇ ಆಗಲಿದೆಯಾ? ಪೂರ್ಣ ವರದಿಗೆ ಕ್ಲಿಕ್ ಮಾಡಿ