Site icon Vistara News

ವಿಸ್ತಾರ Top 10 News : ಹನುಮಾನ್‌ ಚಾಲೀಸಾ ಮಂತ್ರ, ಮೋದಿ ರೋಡ್‌ ಶೋ ಹೊಸ ತಂತ್ರ ಸಹಿತ ಪ್ರಮುಖ ಸುದ್ದಿಗಳು

#image_title

1. ರಾಜ್ಯಾದ್ಯಂತ ಹರಡಿತು ಬಜರಂಗದಳ ನಿಷೇಧದ ಕಿಚ್ಚು: ದೇಗುಲಗಳಲ್ಲಿ ಮೊಳಗಿತು ಹನುಮಾನ್‌ ಚಾಲೀಸಾ
ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಪ್ರಸ್ತಾಪದ ವಿರುದ್ಧ ಸಿಡಿದೆದ್ದ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ರಾಜ್ಯಾದ್ಯಂತ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡುವ ಮೂಲಕ ತಿರುಗೇಟು ನೀಡಿದರು. ಹಿಂದೂ ಮತ ಕ್ರೋಡೀಕರಣದ ಬಿಜೆಪಿ ತಂತ್ರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಕಾಂಗ್ರೆಸ್​​ ಪ್ರಣಾಳಿಕೆ ಸಮರ್ಥಿಸಿದ ಡಿಕೆಶಿಗೆ ಸಿಗದ ಸ್ವಪಕ್ಷೀಯರ ಬೆಂಬಲ

2. ಬೆಂಗಳೂರಲ್ಲಿ ಒಂದಲ್ಲ, 2 ದಿನ ಮೋದಿ ರೋಡ್​ ಶೋ: ಮೇ 6ರ ಜತೆಗೆ 7ರಂದೂ ನಮೋ ಸಂಚಾರ
ಚುನಾವಣೆಯಲ್ಲಿ ಬೆಂಗಳೂರಿನ ಜನರನ್ನು ಸೆಳೆಯುವುದಕ್ಕಾಗಿ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಒಂದು ದಿನದ ಬದಲಾಗಿ, ಎರಡು ದಿನ ನಡೆಯಲಿದೆ. ಈ ಮೊದಲು ಮೇ 6ರಂದು ಒಂದೇ ದಿನ ಎರಡು ಹಂತಗಳಲ್ಲಿ ರೋಡ್‌ ಶೋ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ವೇಳಾಪಟ್ಟಿ ಪ್ರಕಾರ, ಮೇ 6 ಮತ್ತು 7ರಂದು ಎರಡು ದಿನ ರೋಡ್‌ ಶೋ ನಡೆಯಲಿದೆ. ಜತೆಗೆ ರೋಡ್‌ ಶೋ ನಡೆಯಲಿರುವ ಮಾರ್ಗವೂ ಬದಲಾವಣೆಯಾಗಲಿದೆ.‌ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಚುನಾವಣೆಗೆ ಮೊದಲೇ ಕನಕಪುರ ಕೈಚೆಲ್ಲಿದ್ರಾ ಬಿಜೆಪಿ ನಾಯಕರು? ವರುಣಾ ಒಂದೇ ಟಾರ್ಗೆಟ್‌?
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರಾದ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ವಿರುದ್ಧ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿ ಸದ್ದು ಮಾಡಿದ್ದ ಬಿಜೆಪಿ ಇದೀಗ ಸದ್ದಿಲ್ಲದೆ ಕನಕಪುರದ ಜಿದ್ದಿನಿಂದ ಹಿಂದೆ ಸರಿದು ವರುಣಾವನ್ನು ಮಾತ್ರ ಟಾರ್ಗೆಟ್‌ ಮಾಡುತ್ತಿದೆಯಾ? ಏನಿದು ಹಿಂಜರಿತದ ಕಥೆ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ವರುಣಗೆ ಎಂಟ್ರಿ ಕೊಟ್ಟ ನಟ ಶಿವಣ್ಣ: ಅಸಮಾಧಾನಗೊಂಡ ಪ್ರತಾಪ್‌ ಸಿಂಹ ಮತ್ತು ಸೋಮಣ್ಣ
ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಕ್ಕೆ ಸಂಸದ ಪ್ರತಾಪ್‌ ಸಿಂಹ, ಸಚಿವ ವಿ.ಸೋಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ಅವರನ್ನು ಹೊಗಳಿದ್ದ ಶಿವಣ್ಣ ಹೀಗೇಕೆ ಮಾಡಿದರು, ಒತ್ತಡ ಇತ್ತಾ ಎಂದು ಪ್ರಶ್ನಿಸಿದ್ದಾರೆ ಪ್ರತಾಪ್‌ಸಿಂಹ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ‘ನಾನೆಂದು ನಿಮ್ಮವನು, ನಿಮಗಾಗಿ ಬಂದವನು’; ವರುಣದಲ್ಲಿ ಶಿವಣ್ಣ, ರಮ್ಯಾ, ವಿಜಯ್‌ ಪ್ರಚಾರ

5. ಡಿಕೆ. ಶಿವಕುಮಾರ್​​ಗೆ ಮತ್ತೆ ಕಾಡಿದ ಹೆಲಿಕಾಪ್ಟರ್ ಭೀತಿ, ಹೊನ್ನಾವರದಲ್ಲಿ ಏನಾಯ್ತು?
ಎರಡು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಬಡಿದು ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿತ್ತು. ಇದೀಗ ಎರಡೇ ದಿನದ ಮಧ್ಯಂತರದಲ್ಲಿ ಹೊನ್ನಾವರದಲ್ಲಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಇಳಿಯುತ್ತಿದ್ದಂತೆಯೇ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಸಕಲೇಶಪುರದಲ್ಲಿ ದೇವೇಗೌಡರು ಪ್ರಯಾಣಿಸುತ್ತಿದ್ದ ಕಾಪ್ಟರ್​ ತುರ್ತು ಭೂಸ್ಪರ್ಶ

6. ರಾಜ್ಯ ಸರ್ಕಾರಕ್ಕೆ ಜಾತಿಗಣತಿಯ ಅಧಿಕಾರವೇ ಇಲ್ಲ ಎಂದ ಪಟನಾ ಹೈಕೋರ್ಟ್​- ಬಿಹಾರದ ಸರ್ವೆಗೆ ತಡೆ
ಬಿಹಾರದಲ್ಲಿ ಅಲ್ಲಿನ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆಗೆ ಪಾಟ್ನಾ ಹೈಕೋರ್ಟ್​ ತಡೆ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲು ರಾಜ್ಯ ಸರ್ಕಾರ ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಮೀಸಲಾತಿ ಸಂಘರ್ಷದಲ್ಲಿ ಹೊತ್ತಿ ಉರಿದ ಮಣಿಪುರ, 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ

7. 800 ದೇಗುಲ ನಾಶ, 40 ಲಕ್ಷ ಹಿಂದುಗಳ ಮತಾಂತರ; ಬರಲಿದೆ ಟಿಪ್ಪು ಸುಲ್ತಾನ್‌ ಕುರಿತ ಸಿನಿಮಾ
ಟಿಪ್ಪು ಸುಲ್ತಾನ್‌ ಕುರಿತು ಕಾಂಗ್ರೆಸ್‌, ಬಿಜೆಪಿ ನಡುವೆ ನಡೆಯುತ್ತಿರುವ ಫೈಟ್‌ ನಡುವೆಯೇ ಆತನ ಕರಾಳ ಮುಖವನ್ನು ಅನಾವರಣ ಮಾಡುವ ಉದ್ದೇಶದಿಂದ ಸಿನಿಮಾ ಘೋಷಣೆಯಾಗಿದೆ. ಟಿಪ್ಪು ಸುಲ್ತಾನ್‌ ಕುರಿತ ‘ಟಿಪ್ಪು’ ಎಂಬ ಪ್ಯಾನ್‌ ಇಂಡಿಯಾ ಸಿನಿಮಾ ಬರಲಿದ್ದು, ಇದರ ಮೋಷನ್‌ ಪೋಸ್ಟರ್‌ಅನ್ನು ಆತನ ಪುಣ್ಯತಿಥಿಯ ದಿನವಾದ ಗುರುವಾರ ಬಿಡುಗಡೆ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 62,000 ರೂ. ಗಡಿ ದಾಟಿದ ಬಂಗಾರ ದರ, ಎರಡೇ ದಿನದಲ್ಲಿ 1,420 ರೂ. ಹೆಚ್ಚಳ
ಬೆಂಗಳೂರಿನಲ್ಲಿ ಗುರುವಾರ ಬಂಗಾರದ ದರದಲ್ಲಿ 540 ರೂ. ಹೆಚ್ಚಳವಾಗಿದ್ದು, 24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರ 62,230 ರೂ.ಗೆ ಏರಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರದಲ್ಲೀ 500 ರೂ. ಏರಿದ್ದು, 57,050 ರೂ.ಗೆ ವೃದ್ಧಿಸಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ 1420 ರೂ. ಏರಿದ್ದು, ಗ್ರಾಹಕರು ಕಂಗಾಲಾಗುವಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಹೈದರಾಬಾದ್ ವಿರುದ್ಧ ಕೋಲ್ಕೊತಾ ತಂಡಕ್ಕೆ 5 ರನ್ ಜಯ
ನಾಯಕ ನಿತೀಶ್​ ರಾಣಾ (42) ಹಾಗೂ ಯುವ ಬ್ಯಾಟರ್​ ರಿಂಕು ಸಿಂಗ್​ (46) ಅವರ ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್​ಗಳ ಹೋರಾಟದ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 16ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ 5 ರನ್​ಗಳ ರೋಚಕ ಜಯ ಪಡೆಯಿತು. ಈ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಹಿಂದಿನ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ದಾಖಲಿಸಿದ್ದ ಎಸ್​ಆರ್​ಎಚ್​ ಗೆಲುವಿಗಿದ್ದ ಮತ್ತೊಂದು ಅವಕಾಶವನ್ನು ನಷ್ಟ ಮಾಡಿಕೊಂಡಿತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ವರ ಹಾರ ಹಾಕಿದ್ದು ಒಬ್ಬಳಿಗೆ, ತಾಳಿ ಕಟ್ಟಿದ್ದು ಅವಳ ತಂಗಿಗೆ; ವಧುವನ್ನೇ ಬದಲಿಸಿತು ಒಂದು ಫೋನ್‌ ಕರೆ!
ಬಿಹಾರದ ಸಾರನ್​ ಎಂಬಲ್ಲಿ ಮದುವೆಯೊಂದು ನಡೆಯುತ್ತಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಮದುವೆಗೆ ಟ್ವಿಸ್ಟ್​ ಸಿಕ್ಕಿದೆ. ವಧುವಿಗೆ ತಾಳಿ ಕಟ್ಟಲು ಸಜ್ಜಾಗಿದ್ದ ವರ, ಆಕೆಯ ತಂಗಿಗೆ ತಾಳಿ ಕಟ್ಟಿದ್ದಾನೆ. ಇದೇನಾಯ್ತು ಎಂದು ಅಲ್ಲಿದ್ದವರೆಲ್ಲ ಗೊಂದಲದಲ್ಲಿ ಇದ್ದಾಗಲೇ ಸತ್ಯ ಹೊರಬಿದ್ದಿದೆ. ಏನಿದು ಮದುವೆ ಕಥೆ? ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version