Site icon Vistara News

ವಿಸ್ತಾರ TOP 10 NEWS : ಬಹಿರಂಗ ಪ್ರಚಾರ ಅಂತ್ಯ, ಲಿಂಗಾಯತ ಪಾಲಿಟಿಕ್ಸ್‌ ಜೀವಂತ ಮತ್ತು ಇತರ ಪ್ರಮುಖ ಸುದ್ದಿಗಳು

Vistara Top 10

Vistara Top 10

1. ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ; ಇನ್ನೇನಿದ್ದರೂ ಮನೆ ಮನೆ ಮತಯಾಚನೆ
ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರವು ಸೋಮವಾರ ಸಂಜೆ ಅಂತ್ಯಗೊಳ್ಳುವುದರೊಂದಿಗೆ ಎಲೆಕ್ಷನ್ ಒಂದು ಹಂತಕ್ಕೆ ಬಂದು ನಿಂತಿದೆ. ರಾಜ್ಯಕ್ಕೆ ಬಂದಿದ್ದ ಕೇಂದ್ರ ನಾಯಕರು ಮರಳಿದ್ದಾರೆ. ಇನ್ನು ಮನೆ ಮನೆ ಮತ ಯಾಚನೆಯೊಂದೇ ದಾರಿ. ಈ ಹಂತದಲ್ಲಿ ಮೂರೂ ಪಕ್ಷಗಳು ತಮ್ಮದೇ ಬಹುಮತ ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುತ್ತಿವೆ. ಇದಕ್ಕೆಲ್ಲ ಮೇ 13ರಂದು ಉತ್ತರ ದೊರೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2.ಮತಕಣದಲ್ಲಿ ಅಂತಿಮ ಕಸರತ್ತು: ಬಿಎಂಟಿಸಿ ಬಸ್​​​ನಲ್ಲಿ ರಾಹುಲ್​ ಲವ್‌ ಸ್ಟೋರಿ, ಸ್ವಕ್ಷೇತ್ರದಲ್ಲಿ ನಾಯಕರ ಅಬ್ಬರ
ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ರಾಹುಲ್‌ ಗಾಂಧಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಓಡಾಡಿ ಸಂಚಲನ ಮೂಡಿಸಿದರು. ರಾಜ್ಯದ ಹಿರಿಯ ನಾಯಕರಾದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ ಮುಖಂಡರಾದ ಡಿಕೆಶಿವಕುಮಾರ್‌, ಸಿದ್ದರಾಮಯ್ಯ, ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಬೇಟೆ ನಡೆಸಿದರು.
ವಿವರ ವರದಿ: 1. ಲವ್‌ ಯು ಎಂದವಳಿಗೆ ಕೈ ಕೊಟ್ಟ ರಾಹುಲ್‌ ಗಾಂಧಿ; ಹೇಗಿತ್ತು ಗೊತ್ತಾ ಬೆಂಗಳೂರು ರೌಂಡ್ಸ್‌
2. Karnataka Election: ಸ್ವಂತ ಕ್ಷೇತ್ರದಲ್ಲೇ ಕೊನೆಯ ಮತಶಿಕಾರಿ ನಡೆಸಿದ ಕಟ್ಟಾಳುಗಳು

3 100ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಕಾಂಗ್ರೆಸ್​​ ಬೆಂಬಲಿಸಿದ್ರಾ? ಸಂಚಲನ ಮೂಡಿಸಿದ ಡಿಕೆಶಿ ಹೇಳಿಕೆ
ಬೆಂಗಳೂರು:
ʻʻರಾಜ್ಯದಲ್ಲಿ ಲಿಂಗಾಯತ ಮತದಾರರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ನೂರಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳು ನನಗೆ ಕರೆ ಮಾಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾವು ಮತ್ತು ತಮ್ಮ ಸಮುದಾಯ ಕಾಂಗ್ರೆಸ್‌ನ್ನೇ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆʼʼ- ಹೀಗೆಂದು ಹೇಳಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌. ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್‌ ಮುಕ್ತ ಸಂವಾದದ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

4. ವೀರಶೈವ, ಲಿಂಗಾಯತ ಸಮುದಾಯ ಬಿಜೆಪಿ ಪರ- ಡಿಕೆಶಿ ಹೇಳಿಕೆ ಬೆನ್ನಲ್ಲೇ ಕೊನೇ ಅಸ್ತ್ರ ಬಿಟ್ಟ ಬಿಎಸ್​​ವೈ
ಕಾಂಗ್ರೆಸ್‌ ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧವಾಗಿ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ಯಾರು ಏನೇ ಮಾಡಿದರೂ ಲಿಂಗಾಯತ ಸಮುದಾಯ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು 100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳು ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಅಭಿವೃದ್ಧಿ ಕೆಲಸ, ಸಾಧನೆಗಳೇ ಮತ್ತೆ ಅಧಿಕಾರ ತಂದು ಕೊಡಲಿವೆ ಎಂದ ಸಿಎಂ ಬೊಮ್ಮಾಯಿ

5. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕ ಡಿಸ್ಟಿಂಕ್ಷನ್​- ಈ ಬಾರಿ ನಾಲ್ವರು ವಿದ್ಯಾರ್ಥಿಗಳಿಗೆ ಪೂರ್ಣಾಂಕ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2023) ಪ್ರಕಟಿಸಿದ್ದು, ಈ ಬಾರಿ ಶೇ. 83.89 ರಷ್ಟು ಫಲಿತಾಂಶ ಬಂದಿದೆ. ಇದು ಕೊರೊನಾ ಮುಂಚಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ. 12 ರಷ್ಟು ಹೆಚ್ಚಾಗಿದೆ. ನಾಲ್ವರು ನೂರಕ್ಕೆ ನೂರರಷ್ಟು (625 ಅಂಕಗಳಿಗೆ 625 ಅಂಕ) ಅಂಕ ಪಡೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ರೈತನ ಮಗ ಈಗ SSLC ಟಾಪರ್‌; ಐಐಟಿ ಸೇರುವುದೇ ಗುರಿ ಎಂದ ಭೀಮನಗೌಡ

6. ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ನಿಷೇಧ; ಮಮತಾ ಬ್ಯಾನರ್ಜಿ ಆದೇಶ
ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ರದ್ದುಗೊಳಿಸುತ್ತಿರುವುದಾಗಿ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ:: ಕೇರಳ ಸ್ಟೋರಿಯಲ್ಲಿ ಹೊಸ ಮಾದರಿಯ ಭಯೋತ್ಪಾದನೆ ಅನಾವರಣ ಎಂದ ಜೆ.ಪಿ ನಡ್ಡಾ

7.ಮಿಗ್​-21 ವಿಮಾನ ದುರಂತ ಸರಣಿ- ರಾಜಸ್ಥಾನದಲ್ಲಿ ಮನೆ ಮೇಲೆ ವಿಮಾನ ಬಿದ್ದು ಇಬ್ಬರು ಸಾವು
ಭಾರತೀಯ ವಾಯುಪಡೆಯ ಮಿಗ್​ 21 ವಿಮಾನ ( ರಾಜಸ್ಥಾನದ ಹನುಮಾನ್​ಗಢ್​​ನಲ್ಲಿ ಪತನಗೊಂಡಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಹಾಗೇ, ವಿಮಾನದಲ್ಲಿದ್ದ ಪೈಲೆಟ್​ಗಳು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಮೋಚಾ ಎಫೆಕ್ಟ್‌ಗೆ ಈ 5 ಜಿಲ್ಲೆಗಳಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಮತದಾನ ದಿನವೂ ಮಳೆಯಾಗುವುದೆ?
ಮೋಚಾ ಚಂಡಮಾರುತ ಪ್ರಭಾವದಿಂದಾಗಿ ರಾಜ್ಯದಲ್ಲಿ ಒಂದು ವಾರ ವರುಣನ ಅಬ್ಬರ ಇರಲಿದೆ. ರಾಜ್ಯದ ಐದು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಮಳೆಯಾಗಲಿದ್ದು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಸೇರಿ ಕೊಡಗು, ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಿದ್ದರೆ ಮೇ 10ರ ಮತದಾನದ ದಿನದಂದು ಮಳೆಯಾಗುತ್ತದಾ? ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

9. ಓಲಾ ಸೇರಿ 4 ಇ-ಸ್ಕೂಟರ್‌ ಕಂಪನಿಗಳಿಗೆ 500 ಕೋಟಿ ರೂ. ಸಬ್ಸಿಡಿ, ಗ್ರಾಹಕರಿಗೆ ಏನೇನು ಲಾಭ?
ಕೇಂದ್ರ ಸರ್ಕಾರ 4 ಇ-ಸ್ಕೂಟರ್‌ ಕಂಪನಿಗಳಿಗೆ ದ್ವಿ ಚಕ್ರವಾಹನ ಉತ್ಪಾದನೆಗೆ ಸಂಬಂಧಿಸಿ 500 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಗ್ರಾಹಕರಿಗೆ ಇ-ಸ್ಕೂಟರ್‌ಗಳ ಚಾಜರ್‌ಗಳ ಮೌಲ್ಯವನ್ನು ಮರುಪಾವತಿಸಲು ಒಪ್ಪಿವೆ. FAME II ಸ್ಕೀಮ್‌ ಅಡಿಯಲ್ಲಿ ಓಲಾ ಎಲೆಕ್ಟ್ರಿಕ್‌, ಅಥೆರ್‌, ಟಿವಿಎಸ್‌ ಮತ್ತು ಹೀರೊ ಮೊಟೊಕಾರ್ಪ್‌ಗೆ ಸಬ್ಸಿಡಿ ಸಿಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ನಿದ್ದೆಯಲ್ಲಿದ್ದ ಉದ್ಯಮಿ ಕಾಲ್ಬೆರಳು ಚೀಪಿದ ಹೋಟೆಲ್‌ ಮ್ಯಾನೇಜರ್‌: ಪಾರಾಗಲು ಹೊಗೆ ವಾಸನೆ ಕತೆ ಕಟ್ಟಿದ
ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ, ವಿಲಕ್ಷಣ ಮನಸ್ಥಿತಿಯ ಜನರು ಇರುತ್ತಾರೆ ಎಂಬುದಕ್ಕೆ ಈ ಸ್ಟೋರಿ ಒಂದು ತಾಜಾ ಉದಾಹರಣೆ. ಯುಎಸ್​ನ ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆ ನಗರದ ಹೋಟೆಲ್​ವೊಂದರಲ್ಲಿ ನಡೆದ ಘಟನೆಯೀಗ ಭರ್ಜರಿ ಸುದ್ದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಏನಿದು ಕಥೆ ಇಲ್ಲಿ ಓದಿ

Exit mobile version