1. ಇಂದು ನಿರ್ಣಾಯಕ ಮತದಾನ: ರಾಜ್ಯದ ಅಧಿಕಾರ ಯಾರ ಕೈಗೆ; ಮತದಾರರ ನಿರ್ಧಾರ
ಭಾರಿ ಅಬ್ಬರದ ಪ್ರಚಾರ ಕಂಡ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ನಿರ್ಣಾಯಕ ದಿನ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ, ಮುಂದಿನ ಐದು ವರ್ಷಗಳ ಕಾಲ ರಾಜ್ಯಭಾರ ಮಾಡುವವರು ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸಲಿದ್ದಾರೆ. 224 ಕ್ಷೇತ್ರಗಳಿಗೆ 2615 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
2. ಪ್ರಜಾಪ್ರಭುತ್ವ ಹಬ್ಬಕ್ಕೆ ಚುನಾವಣೆ ಆಯೋಗ ಸಿದ್ಧ; ಹೇಗಿದೆ ವ್ಯವಸ್ಥೆ? ಯಾವ ರೀತಿ ಇದೆ ಭದ್ರತೆ?
ಪ್ರಜಾಪ್ರಭುತ್ವದ ಹಬ್ಬಕ್ಕೆ ಕರುನಾಡೇ ಸನ್ನದ್ಧವಾಗಿದೆ. ಬುಧವಾರ ಸೂರ್ಯ ಉದಯಿಸುತ್ತಲೇ, ಕರ್ನಾಟಕದಲ್ಲಿ ಹೊಸ ಸರ್ಕಾರದ ಉದಯಕ್ಕೆ ನಾಡಿನ ಮತದಾರರು ನಾಂದಿ ಹಾಡಲಿದ್ದಾರೆ. ಚುನಾವಣೆ ಆಯೋಗವು ಕೂಡ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಹೇಗಿದೆ ಸಿದ್ಧತೆ? ಯಾವ ರೀತಿಯ ಭದ್ರತೆ ಇದೆ? ಎಲ್ಲ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಕರ್ನಾಟಕವನ್ನು ನಂಬರ್ ಒನ್ ಆಗಿಸಲು ಬಿಜೆಪಿಗೆ ನೆರವಾಗಿ: ಟ್ವಿಟರ್‌ನಲ್ಲಿ ಪ್ರಧಾನಿ ಕರೆ
ಇನ್ನೊಂದು ಸುದ್ದಿ: ಮುಂದಿನ 2 ದಿನ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ
3. 26 ಹೈವೋಲ್ಟೇಜ್ ಕ್ಷೇತ್ರಗಳತ್ತ ಎಲ್ಲರ ಚಿತ್ತ- ಸಿದ್ದು, ಸೋಮಣ್ಣ, ಶೆಟ್ಟರ್, ಎಚ್ಡಿಕೆ ಕಣಕದನ ರೋಚಕ
ವಿಧಾನಸಭಾ ಚುನಾವಣೆಯ ಕದನ ಕಣದಲ್ಲಿ ಭಾರಿ ಕುತೂಹಲ ಹುಟ್ಟಿಸಿರುವುದು 26 ಕ್ಷೇತ್ರಗಳು. ಯಾವುವು ಆ ಕ್ಷೇತ್ರಗಳು. ಯಾಕಾಗಿ ಅಲ್ಲಿನ ಬಗ್ಗೆ ಜನರಿಗೆ ಆಸಕ್ತಿ? ಪೂರ್ಣ ಪಟ್ಟಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
4. ಮತದಾನದ ಮುನ್ನಾದಿನವೂ ಹನುಮಾನ್ ಚಾಲೀಸ್ ಪಠಣ; ಕಾಂಗ್ರೆಸ್ ವಿರುದ್ಧ ಬಜರಂಗ ಅಸ್ತ್ರ
ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೈಗೆ ಸಿಕ್ಕ ಅತಿ ದೊಡ್ಡ ಅಸ್ತ್ರವಾಗಿರುವ ʻʻಬಜರಂಗದಳ ನಿಷೇಧ ಪ್ರಸ್ತಾಪʼʼವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಮತದಾನದ ಮುನ್ನಾದಿನವಾದ ಮಂಗಳವಾರ (ಮೇ 9) ಬಜರಂಗ ಭಜನೆ ನಡೆಸಿದೆ. ಸ್ವಯಂ ಮುಖ್ಯಮಂತ್ರಿಗಳೇ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸ್ ಪಠಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : ಹನುಮಾನ್ ಚಾಲೀಸಾ ಪಠಣಕ್ಕೆ ತಡೆ; ಚುನಾವಣಾಧಿಕಾರಿಗಳ ಜತೆ ಬಜರಂಗದಳ ವಾಗ್ವಾದ
5. ಚಾಮುಂಡೇಶ್ವರಿಯ ಮುಂದೆ ಗ್ಯಾರಂಟಿ ಕಾರ್ಡ್ ಇಟ್ಟು ಪ್ರಮಾಣ ಮಾಡಿದ ಸಿದ್ದರಾಮಯ್ಯ-ಡಿಕೆಶಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡನ್ನು ದೇವರ ಮುಂದಿಟ್ಟು ಇವುಗಳನ್ನು ಜಾರಿ ಮಾಡುವುದಾಗಿ ಪ್ರಮಾಣ ಮಾಡಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
6. ಮುಸ್ಲಿಮ್ ಮೀಸಲಾತಿ ರದ್ದತಿ ವಿಚಾರಣೆ: ಚುನಾವಣಾ ಕಣದಲ್ಲಿ ಮೀಸಲು ಪ್ರಸ್ತಾಪಕ್ಕೆ ಸುಪ್ರೀಂ ಆಕ್ರೋಶ
ಕರ್ನಾಟಕ ರಾಜ್ಯ ಸರ್ಕಾರವು ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ರದ್ದು ಮಾಡಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ 25ಕ್ಕೆ ಮುಂದೂಡಿದೆ. ಇದೇ ವೇಳೆ, ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕಾಗಿ ಬಿಜೆಪಿ ನಾಯಕರ ನಡೆಯನ್ನು ಆಕ್ಷೇಪಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ಪೂರಕ ಸುದ್ದಿ: ಗೃಹ ಸಚಿವ ಅಮಿತ್ ಶಾ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದ್ದೇಕೆ?
7. ಕೇರಳ ಸ್ಟೋರಿ: ಮಮತಾ ಬ್ಯಾನರ್ಜಿ ನಿಷೇಧ ವಿಧಿಸಿದ ಬೆನ್ನಿಗೇ ತೆರಿಗೆ ವಿನಾಯಿತಿ ನೀಡಿದ ಯೋಗಿ ಸರ್ಕಾರ
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ‘ದಿ ಕೇರಳ ಸ್ಟೋರಿ’ಯನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿದೆ. ಮಮತಾ ಬ್ಯಾನರ್ಜಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಈ ಕ್ರಮವನ್ನು ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ಸುದ್ದಿ: ಪಶ್ಚಿಮ ಬಂಗಾಲದಲ್ಲಿ ಕೇರಳ ಸ್ಟೋರಿಗೆ ನಿಷೇಧ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಂಡ
8. ವಿದೇಶಿ ಉಡುಗೊರೆ ಅಕ್ರಮ ಮಾರಾಟ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಪಾಕಿಸ್ತಾನ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಅವರನ್ನು ಇಸ್ಲಮಾಬಾದ್ನ ಹೈಕೋರ್ಟ್ ಆವರಣದಲ್ಲಿಯೇ ಬಂಧಿಸಿದ್ದಾಗಿ ಪಾಕ್ನ ಮಾಧ್ಯಮಗಳು ವರದಿ ಮಾಡಿವೆ. ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿಯಾಗಿದ್ದಾಗ ಗಣ್ಯರಿಂದ ಪಡೆದಿದ್ದ ಉಡುಗೊರೆಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. 2027ರ ಹೊತ್ತಿಗೆ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳಿಗೆ ಬ್ಯಾನ್? ಸರ್ಕಾರಕ್ಕೆ ನೀಡಿದ ವರದಿಯಲ್ಲೇನಿದೆ?
10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ 2027ರ ಹೊತ್ತಿಗೆ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಮತ್ತು ಅವುಗಳ ಬದಲು ಎಲೆಕ್ಟ್ರಿಕ್ ಮತ್ತು ಗ್ಯಾಸ್ ಫ್ಯುಯೆಲ್ (ಅನಿಲ ಇಂಧನ) ಚಾಲಿತ ವಾಹನಗಳ ಬಳಕೆಗೆ ಅನುಮತಿ ಕೊಡಬೇಕು ಎಂದು ಪೆಟ್ರೋಲಿಯಂ ಸಚಿವಾಲಯದಿಂದ ರಚಿಸಲ್ಪಟ್ಟ ಸಮಿತಿಯೊಂದು ವರದಿ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ನೀಟ್ ದುಃಸ್ವಪ್ನ; ವಿದ್ಯಾರ್ಥಿನಿಯರ ಬ್ರಾ ಪಟ್ಟಿ ಚೆಕ್, ಒಳ ಚೆಡ್ಡಿಯಲ್ಲೇ ಪರೀಕ್ಷೆ ಬರೆಸಿದರು!
ದಿನೇ ದಿನೆ ನೀಟ್ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ದುಃಸ್ವಪ್ನ ಎಂಬಂತಾಗುತ್ತಿದೆ. ಭಾನುವಾರ ದೇಶಾದ್ಯಂತ ನಡೆದ ನೀಟ್ ಪರೀಕ್ಷೆ ಯಲ್ಲಿ ಹಲವು ಕಡೆ ವಿದ್ಯಾರ್ಥಿನಿಯರು ಧರಿಸಿದ ಬ್ರಾದ ಪಟ್ಟಿಗಳನ್ನು ಕೂಡ ಚೆಕ್ ಮಾಡಲಾಗಿದೆ. ಇನ್ನೂ ಕೆಲವರನ್ನು ಅವರ ದಿರಿಸು ಬದಲಿಸುವಂತೆ ಸೂಚಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ