1. ಸರ್ಕಾರ ರಚನೆಗೆ ತೆರೆಮರೆ ಕಸರತ್ತು: ಮೂರೂ ಪಕ್ಷಗಳ ಮುಂದೆ ಸಾಲು ಸಾಲು ಸವಾಲು
ರಾಜ್ಯದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಅಭಿಪ್ರಾಯಪಟ್ಟಿರುವುದರಿಂದ ಮುಂದೇನು ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚಿಂತಿಸುತ್ತಿದ್ದಾರೆ. ಅವರ ಪ್ಲ್ಯಾನ್‌ಗಳೇನು? ಸವಾಲುಗಳೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
2. ರಾಜ್ಯದಲ್ಲಿ ಎಕ್ಸಿಟ್ ಪೋಲ್ ಫೈಟ್: ಸಮೀಕ್ಷೆ ಸುಳ್ಳು ಎಂದ ಬಿಜೆಪಿ, 140 ಸೀಟ್ ನಮ್ದೇ ಎಂದ ಕಾಂಗ್ರೆಸ್
ರಾಜ್ಯದಲ್ಲೀಗ ಎಕ್ಸಿಟ್ ಪೋಲ್ ವಿಚಾರದ್ದೇ ಚರ್ಚೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ, ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ ಬರಲಿದೆ ಎಂಬ ವಾದವನ್ನು ಬಿಜೆಪಿ ಮತ್ತೆ ತಳ್ಳಿ ಹಾಕಿದೆ. ಕಾಂಗ್ರೆಸ್ 140 ಸೀಟು ಬದಲಿದೆ ಅಂತಿದೆ.
ಇಲ್ಲಿವೆ ಈ ಕುರಿತ ವರದಿಗಳು
1. ಬೂತ್ ಲೆಕ್ಕಾಚಾರ ಪ್ರಕಾರ ನಮಗೆ 120 ಸೀಟ್ ಫಿಕ್ಸ್ ಎಂದ ಕರಂದ್ಲಾಜೆ
2. ವಾಸು ಹೋಟೆಲ್‌ನಲ್ಲಿ ಟಿಫಿನ್, ಅಮ್ಮನ ಆಶೀರ್ವಾದ; ರಿಲಾಕ್ಸ್‌ಡ್ ಡಿಕೆಶಿಗೆ ಸ್ವಲ್ಪ ಜ್ವರ!
3. ದಳಪತಿಗಳ ನಡೆಯತ್ತ ಕರುನಾಡ ಚಿತ್ತ: ಎಚ್ಡಿಕೆ ದಿಢೀರ್ ತೆರಳಿದ್ದು ಸಿಂಗಾಪುರಕ್ಕೋ ದೆಹಲಿಗೋ?
ರಾಜ್ಯದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಸಾರಿರುವ ಹಿನ್ನೆಲೆಯಲ್ಲಿ ಈಗ ಎಲ್ಲರ ಕಣ್ಣು ಜೆಡಿಎಸ್‌ನತ್ತ ನೆಟ್ಟಿದೆ. ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಅವರು ಮತದಾನ ಮುಗಿಯುತ್ತಿದ್ದಂತೆಯೇ ಸಿಂಗಾಪುರಕ್ಕೆ ತೆರಳಿದ್ದು, ಈ ಕುರಿತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಕೂಸು ಹುಟ್ಟುವ ಮೊದಲೇ ಕುಲಾವಿ ಚಿಂತೆ: ಸಿದ್ದು, ಡಿಕೆಶಿ ಜತೆ ಶಾಮನೂರು ಕೂಡಾ ಸಿಎಂ ರೇಸ್‌ಗೆ!
ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಲಿಂಗಾಯತ ಅಭ್ಯರ್ಥಿಗಳು ಗೆದ್ದರೆ ನಾನೂ ಮುಖ್ಯಮಂತ್ರಿ ಅಭ್ಯರ್ಥಿ ಯಾಗಲಿದ್ದೇನೆ: ಹೀಗೆಂದು ನೇರವಾಗಿ ಹೇಳಿದ್ದಾರೆ 92 ವರ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ. ಈ ಮೂಲಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಸಾಲಿಗೆ ಶಾಮನೂರು ಸೇರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಜೋರಾಯ್ತು ಬೆಟ್ಟಿಂಗ್: ಹಣದ ಜತೆ ಚಿನ್ನ, ಜಮೀನು, ಬೈಕ್ ಕೂಡಾ ಪಣ: ಹಾಟ್ ಫೇವರಿಟ್ ಯಾರು?
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಈ ನಡುವೆ ಮತದಾನ ಮುಗಿಯುತ್ತಿದ್ದಂತೆಯೇ ಚಿಗಿತುಕೊಂಡಿರುವ ಬೆಟ್ಟಿಂಗ್ ದಂಧೆ ವೇಗವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುತ್ತೋ? ಸ್ವತಂತ್ರ ಸರ್ಕಾರ ಬರುತ್ತೋ? ಯಾರಿಗೆ ಎಷ್ಟು ಸೀಟ್ ಬರಬಹುದು ಎನ್ನುವುದು ಬೆಟ್ಟಿಂಗ್‌ನ ಒಂದು ಲೆಕ್ಕಾಚಾರವಾದರೆ, ನಿರ್ದಿಷ್ಟ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ, ಲೀಡ್ ಎಷ್ಟು ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಬಿಸಿನೆಸ್ ಜೋರಾಗಿ ನಡೆಯುತ್ತಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
6. ಆಡಳಿತ ನಿಯಂತ್ರಣದಲ್ಲಿ ಸರ್ಕಾರವೇ ಪರಮೋಚ್ಛ: ಕೇಜ್ರಿವಾಲ್ ಪರವಾಗಿ ಸುಪ್ರೀಂ ಮಹತ್ವದ ತೀರ್ಪು
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೇವೆ/ಆಡಳಿತಗಳ ನಿಯಂತ್ರಣ ಯಾರಿಗೆ ಸೇರಿದ್ದು? ಕೇಂದ್ರ ಸರ್ಕಾರದ್ದೋ, ಸ್ಥಳೀಯ ಚುನಾಯಿತ ಸರ್ಕಾರದ್ದೊ ಎಂಬ ಪ್ರಶ್ನೆಯ ಕಾನೂನು ಹೋರಾಟದಲ್ಲಿ ಸುಪ್ರೀಂಕೋರ್ಟ್ ದಿಲ್ಲಿಯ ಆಮ್ ಆದ್ಮಿ ಸರ್ಕಾರ ಪರವಾಗಿ ತೀರ್ಪು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಮರುಸ್ಥಾಪನೆ ಅಸಾಧ್ಯ ಎಂದ ಕೋರ್ಟ್
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಮರು ಸ್ಥಾಪನೆ ಅಸಾಧ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರೊಂದಿಗೆ ಶಿಂಧೆ ಸರ್ಕಾರದ ಸ್ಥಿರತೆಗೆ ಸುಪ್ರೀಂ ಬಲ ಬಂದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ಇಮ್ರಾನ್ ಖಾನ್ ಬಿಡುಗಡೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ: ಮಾಜಿ ಪ್ರಧಾನಿಗೆ ರಿಲೀಫ್
ಎರಡು ದಿನಗಳ ಹಿಂದಷ್ಟೇ ಬಂಧಿತರಾಗಿದ್ದ ಇಮ್ರಾನ್ ಖಾನ್(Imran Khan)ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ‘ ಭ್ರಷ್ಟಾಚಾರ ಕೇಸ್ನಡಿ ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ, ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದು ಕಾನೂನು ಬಾಹಿರ ಮತ್ತು ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ, ಎಲ್ಲೆಲ್ಲಿ ವರ್ಷಧಾರೆ? ಏನಾಯ್ತು ಮೋಚಾ?
ರಾಜ್ಯದಲ್ಲಿ ಮೋಚಾ ಚಂಡಮಾರುತ ತೀವ್ರತೆ ಕಡಿಮೆ ಆದರೂ ರಾಜ್ಯದಲ್ಲಿ ಮಳೆ (Karnataka rains) ಅಬ್ಬರ ಮುಂದುವರಿಯಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಮದುವೆ ಮನೆಯಲ್ಲಿ ಕುಣಿಯುತ್ತಲೇ ಹೋಯ್ತು ಪ್ರಾಣ ಪಕ್ಷಿ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಕೆಲಸ ಮಾಡುತ್ತಿರುವವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪುವ ಘಟನೆ ಬಗ್ಗೆ ನೀವು ಕೇಳಿರುತ್ತೀರಿ. ಇದೀಗ ಛತ್ತೀಸ್‌ಗಢದ ಮದುವೆ ಮನೆಯಲ್ಲಿ ಸಂಭ್ರಮದಿಂದ ಕುಣಿಯುತ್ತಿದ್ದ ವ್ಯಕ್ತಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ