1. ಹಂಗೋ? ಹಿಂಗೋ?!: ಕರ್ನಾಟಕ ಎಲೆಕ್ಷನ್ ಕ್ಲೈಮ್ಯಾಕ್ಸ್ ನಾಳೆ, ಮತ ಎಣಿಕೆಗೆ ರೆಡಿ
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಕೌಂಟ್ಡೌನ್ ಶುರುವಾಗಿದೆ. ಯಾರ ಕೈಗೆ ಅಧಿಕಾರ ಸಿಗಲಿದೆ? ಬಿಜೆಪಿಗೆ ಬಹುಮತ ಬರುತ್ತಾ? ಕಾಂಗ್ರೆಸ್ ಅಧಿಕಾರ ಸ್ಥಾಪಿಸುತ್ತಾ? ಅಥವಾ ಅತಂತ್ರ ಫಲಿತಾಂಶನಾ? ಶನಿವಾರ ಮಧ್ಯಾಹ್ನದ ವೇಳೆಗೆ ಸಿಗಲಿದೆ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆಯಾಗಿದೆ. ನಿಷೇಧಾಜ್ಞೆ ಜಾರಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಮೈತ್ರಿ ನಿರ್ಧಾರ ಫೈನಲ್ ಆಗಿದೆ ಎಂದ ಜೆಡಿಎಸ್; ಆಯ್ಕೆ ಕಾಂಗ್ರೆಸ್ಸೋ, ಬಿಜೆಪಿಯೋ?
ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯ ಪಡುತ್ತಿರುವಂತೆ ಈ ಬಾರಿಯೂ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು, ಯಾವ ಪಕ್ಷದೊಂದಿಗೆ ಸೇರಿ ಸರ್ಕಾರ ರಚನೆ ಮಾಡಬೇಕು ಎಂಬುದನ್ನು ಈಗಾಗಲೇ ತೀರ್ಮಾನಿಸಿರುವುದಾಗಿ ಜೆಡಿಎಸ್ ಪ್ರಕಟಿಸಿದೆ. ಆದರೆ, ಯಾರ ಜತೆ ಎನ್ನುವುದು ಗೊತ್ತಾಗಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಬಿಜೆಪಿಗೆ 110 ಗ್ಯಾರಂಟಿ, ಉಳಿದ ಸೀಟಿಗೆ ಪಕ್ಷೇತರರ ಬೇಟೆಗೆ ಸೂಚನೆ
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13ರಂದು ನಡೆಯಲಿದ್ದು, ಎಲ್ಲರ ಕಣ್ಣು ಕೌಂಟಿಂಗ್ ಸೆಂಟರ್‌ಗಳತ್ತ ನೆಟ್ಟಿದೆ. ಇದರ ನಡುವೆ, ಅಧಿಕಾರಾರೂಢ ಬಿಜೆಪಿ ಅತ್ಯಂತ ನಿರಾಳವಾಗಿರುವಂತೆ ಕಾಣುತ್ತಿದೆ. ಮತದಾನೋತ್ತರ ಸಮೀಕ್ಷೆಗಳ ಬಗ್ಗೆ ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಳ್ಳದ ನಾಯಕರು ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದುಕೊಂಡು ಆರಾಮವಾಗಿದ್ದಾರೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ: ಮುಖ್ಯಮಂತ್ರಿಗೆ ಗಾದಿಗೆ 50:50 ಸೂತ್ರ, ಯಾರು ಮೊದಲು?
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್) ಅಭಿಪ್ರಾಯ ಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೂಡ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ಪಕ್ಷಕ್ಕೆ ಸರಳ ಬಹುಮತ ಬರಲಿದೆ ಎಂಬ ವರದಿ ಬಂದಿದೆ. ಇದರ ಬೆನ್ನಲ್ಲೇ ಪಕ್ಷದಲ್ಲಿ ಮುಖ್ಯಮಂತ್ರಿ ಗಾದಿ ಯಾರಿಗೆ ಎಂಬ ಕುರಿತು ಚರ್ಚೆ ಆರಂಭವಾಗಿದ್ದು, ಪಕ್ಷದ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ 50:50 ಸೂತ್ರದಡಿ ಅಧಿಕಾರ ಹಂಚುವ ಸಾಧ್ಯತೆಗಳಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಪಕ್ಷೇತರರು, ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಗಾಳ: ಫೀಲ್ಡಿಗೆ ಇಳಿದ ಸಿದ್ದರಾಮಯ್ಯ
ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಾವೇ ಬಹುಮತದ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿವೆ. ಇದರ ನಡುವೆಯೇ ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಬಲ್ಲ ಪಕ್ಷೇತರ ಅಭ್ಯರ್ಥಿಗಳ ಜತೆ ಸಂಪರ್ಕ ಸಾಧಿಸುತ್ತಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಮುಂದಿದ್ದಂತೆ ಕಾಣುತ್ತಿದೆ. ಇದರ ಸಾರಥ್ಯವನ್ನು ಸಿದ್ದರಾಮಯ್ಯ ವಹಿಸಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
6. ಕೋಟಿ ರೂಪಾಯಿ ಬೆಟ್ ಕಟ್ಟಿದ ಪುರಸಭೆ ಸದಸ್ಯನ ಮನೆಗೆ ಪೊಲೀಸರ ದಾಳಿ!
ಕಂತೆ ಕಂತೆ ಹಣ ಇಟ್ಟುಕೊಂಡು ಒಂದು ಕೋಟಿ ರೂ. ಬೆಟ್ ಕಟ್ಟಲು ಆಹ್ವಾನ ನೀಡಿದ ಗುಂಡ್ಲುಪೇಟೆಯ ಪುರಸಭೆ ಸದಸ್ಯ ಕಿರಣ್ ಅವರ ಮನೆಗೆ ಪೊಲೀಸರು ಲಗ್ಗೆ ಇಟ್ಟಿದ್ದಾರೆ! ಅವರು ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹಣ ಇಟ್ಟು ಪಂಥಾಹ್ವಾನ ನೀಡಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಚುನಾವಣೆ ಮತ ಎಣಿಕೆಗೆ ಮುನ್ನವೇ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್
ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಶಾಕ್ ಕೊಟ್ಟಿದೆ. 2023-24ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದೆ. ಎಲ್‌ಟಿ (LT) ಮತ್ತು ಎಚ್‌ಟಿ (HT) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ಸರಾಸರಿ 8.42 ರೂ. ಇದ್ದು, 2022-24ನೇ ಸಾಲಿಗೆ ಇದು 9.12 ರೂಗೆ ಹೆಚ್ಚಳವಾಗಿದೆ. ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ- ಎರಡೂ ವಿಭಾಗಗಳಲ್ಲಿ ತಿರುವನಂತಪುರಂ ಟಾಪರ್
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 12 ಮತ್ತು 10ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಎರಡೂ ವಿಭಾಗಗಳಲ್ಲೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ತಿರುವನಂಪುರಂನಲ್ಲಿಯೇ ಗರಿಷ್ಠ ಮಟ್ಟದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದು ಬಿಟ್ಟರೆ ಈ ಎರಡೂ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಬೆಂಗಳೂರು ಮತ್ತು ಮೂರನೇ ಸ್ಥಾನದಲ್ಲಿ ಚೆನ್ನೈ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. IPL 2023: ಯಶಸ್ವಿ ಜೈಸ್ವಾಲ್ ಆಟಕ್ಕೆ ಫಿದಾ ಆದ ವಿರಾಟ್ ಕೊಹ್ಲಿ
ಕೆಕೆಆರ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಐಪಿಎಲ್ ಕ್ರಿಕೆಟ್ನಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನೂತನ ದಾಖಲೆ ಬರೆದಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ದಿ ಕೇರಳ ಸ್ಟೋರಿ ನಿಷೇಧಿಸಿದ್ಯಾಕೆ?: ಪಶ್ಚಿಮ ಬಂಗಾಳ, ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನೋಟಿಸ್
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ, ಅಫ್ಘಾನ್ಗೆ ಕರೆದುಕೊಂಡು ಹೋಗಿ ಇಸ್ಲಾಮ್ಗೆ ಮತಾಂತರ ಮಾಡುವ ಜತೆ ಐಸಿಸ್ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್ ಜಿಹಾದ್ಗೆ ಗುರಿಪಡಿಸುವ ಕತೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಸಿನಿಮಾವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ