ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಸಮಾನ ನಾಗರಿಕ ಸಂಹಿತೆಯನ್ನು ಸೇರಿಸಿದ್ದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಕುರಿತ ಚರ್ಚೆಗೆ ಚಾಲನೆ ನೀಡಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಕ್ಕೂ ಹತ್ತು ಸಾವಿರ ರೂ. ಲಂಚ ಕೊಡಿ ಎಂದು ಬಾಯಿಬಿಟ್ಟು ಕೇಳಿದ ಇಬ್ಬರು ವೈದ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಂಗಳೂರು ಸ್ಫೋಟದ ಬಳಿಕ ಮೈಸೂರಿನಲ್ಲಿ ಮನೆ ಬಾಡಿಗೆಗೆ ಹೊಸ ಕಠಿಣ ನೀತಿ ಜಾರಿಯಾಗಿದ್ದರೆ, ಮುರುಘಾಶ್ರೀಗಳ ಕಾಮಕಾಂಡದ ಮತ್ತಷ್ಟು ಭಯಾನಕ ಮತ್ತು ಅಸಹ್ಯ ಅಧ್ಯಾಯಗಳು ತೆರೆದುಕೊಂಡಿವೆ. ಪ್ರವಾಸಕ್ಕೆ ಹೋದ ಮದರಸಾ ವಿದ್ಯಾರ್ಥಿನಿಯರ ಪೈಕಿ ನಾಲ್ವರು ಸೆಲ್ಫಿ ಕ್ರೇಜ್‌ನಿಂದಾಗಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುತ್ತಾರಂತೆ ಎನ್ನುವ ಸುದ್ದಿಯೊಂದು ಹರಿದಾಡಿದೆ… ಹೀಗೆ ಎಲ್ಲ ವಲಯಗಳ ಮಹತ್ವದ ಸುದ್ದಿಗಳನ್ನು ಒಳಗೊಂಡ ವಿಸ್ತಾರ TOP 10 NEWS bulletin ಇಲ್ಲಿದೆ.
೧. ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಜಾರಿಯ ಚರ್ಚೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯ ಚರ್ಚೆ ಆರಂಭಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ವರ್ಗದಲ್ಲಿ ಈ ಚಿಂತನೆಯನ್ನು ಹರಿಬಿಟ್ಟಿದ್ದು, ಶನಿವಾರ ನಡೆದ ಸಂವಿಧಾನ ದಿನಾಚರಣೆಯ ವೇಳೆ ಅದನ್ನು ಪುನರುಚ್ಚರಿಸಿದರು. ಅಚ್ಚರಿ ಎಂದರೆ, ಪ್ರತಿಪಕ್ಷ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸದೆ ಮೌನದ ತಂತ್ರ ಪ್ರಯೋಗ ಮಾಡುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೨. ಚಾನ್ಸೇ ಇಲ್ಲ, 10 ಸಾವಿರ ಕೊಟ್ಟರಷ್ಟೇ ಡಿಸ್ಚಾರ್ಜ್; ಲಂಚಕ್ಕೆ ಬೇಡಿಕೆ ಇಟ್ಟ ಸರ್ಕಾರಿ ವೈದ್ಯೆ!
ʻಸರ್ಕಾರಿ ಕೆಲಸ ದೇವರ ಕೆಲಸʼ ಎಂಬ ಮಾತು ಕೇವಲ ಗೋಡೆ ಮೇಲಿರುವ ಬೋರ್ಡ್‌ಗಷ್ಟೇ ಸೀಮಿತವಾಗಿ ಎಷ್ಟೋ ಸಮಯ ಕಳೆದಿದೆ. ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯೊಬ್ಬರನ್ನು ಬಿಡುಗಡೆ ಮಾಡಲು ಸ್ತ್ರೀ ರೋಗ ತಜ್ಞೆ ಶಶಿಕಲಾ ಮತ್ತು ಡಾ. ಐಶ್ವರ್ಯ ೧೦,೦೦೦ ರೂ. ಬೇಡಿಕೆ ಇಟ್ಟಿದ್ದರು. ಬಾಯಿ ಬಿಟ್ಟು ಲಂಚ ಕೇಳಿದ ಇವರ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಅಮಾನತು ಮಾಡಲಾಗಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
3. ಗಡಿ ವಿವಾದ: ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಮುಂದುವರಿದ ಬಸ್ ತಡೆ, ದಾಂಧಲೆ
ವಿಜಯಪುರ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮಹಾರಾಷ್ಟ್ರದ ಪುಂಡರ ವರ್ತನೆ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆಗಳು, ಆಕ್ರೋಶಗಳು ವ್ಯಕ್ತವಾಗಿವೆ. ಈ ನಡುವೆ, ಕರ್ನಾಟಕ ಸೇರಬೇಕು ಎಂದು ಠರಾವು ಮಂಡಿಸಿದ ಮಹಾರಾಷ್ಟ್ರದ ಜತ್ತ್ ಗ್ರಾಮದಲ್ಲಿ ಕನ್ನಡ ಧ್ವಜ ಹಾರಾಡಿದೆ. ಜೈ ಕರ್ನಾಟಕ ಜಯಘೋಷ ಮೊಳಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಕುಕ್ಕರ್ ಸ್ಫೋಟದ ಮರುಕ್ಷಣವೇ ‘ಆತ್ಮಾಹುತಿ ಬಾಂಬ್’ ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್! ಏನಿದು ಕನೆಕ್ಷನ್?
ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ನವೆಂಬರ್ ೧೯ರ ಸಂಜೆ ೪.೧೯ಕ್ಕೆ ಕುಕ್ಕರ್ ಬಾಂಬ್ ಸ್ಫೋಟ (ಮಂಗಳೂರು ಸ್ಫೋಟ) ಸಂಭವಿಸಿದ ಒಂದೂವರೆ ಗಂಟೆ ಮಧ್ಯಂತರದಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್‌ನ ಮುಖ್ಯಸ್ಥ, ಧಾರ್ಮಿಕ ಭಾಷಣಕಾರ ಝಾಕಿರ್ ನಾಯ್ಕ್ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದೂ ಓದಬೇಕು | ಮಂಗಳೂರು ಸ್ಫೋಟ ಎಫೆಕ್ಟ್: ಮೈಸೂರಿನಲ್ಲಿ ಬಾಡಿಗೆಗೆ ಮನೆ ನೀಡಲು ಕಠಿಣ ಷರತ್ತು
೫. ಸವಿಸ್ತಾರ ಅಂಕಣ | ಮುಸ್ಲಿಂ ಪ್ರತ್ಯೇಕತೆ ಹೋಗಲಾಡಿಸಲು ಇದು ಪರಿಹಾರ ಆಗಬಲ್ಲದೇ?
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮೂಲ ಯಾವುದೆಂದರೆ, ಮತ್ತದೇ ಭಯೋತ್ಪಾದನೆ. ಹೀಗೆ ಸದಾ ಕಂಟಕವಾಗಿರುವ ಮುಸ್ಲಿಂ ಪ್ರತ್ಯೇಕತೆ ತೊಡೆದುಹಾಕಲು ಸಮುದಾಯದ ಧಾರ್ಮಿಕ ಮುಖಂಡರು ಏನೆಲ್ಲ ಮಾಡಬಹುದು ಎನ್ನುವ ಬಗ್ಗೆ ಹಲವು ಹೊಸ ಹೊಳಹುಗಳನ್ನು ನೀಡಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್ ಕೋಣೆಮನೆಯವರು ತಮ್ಮ ಸವಿಸ್ತಾರ ಅಂಕಣದಲ್ಲಿ. ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
೬. ಬಟ್ಟೆಯಲ್ಲೇ ಹೀಗೆ ಕಾಣುತ್ತೀಯಾ, ಬಟ್ಟೆ ಬಿಚ್ಚಿದರೆ ಹೇಗೆ ಎಂದು ಕೇಳುತ್ತಿದ್ದರಂತೆ ಮುರುಘಾಶ್ರೀ!
“ಪ್ರತಿ ಭಾನುವಾರ ಟ್ಯೂಷನ್ ಮಾಡುತ್ತಿದ್ದ ಮುರುಘಾ ಮಠದ ಮುರುಘಾ ಶರಣರು ಒಂದು ದಿನ ಅವರ ಕೋಣೆಗೆ ಕರೆಸಿಕೊಂಡಿದ್ದರು. ಆಗ ಶ್ರೀಗಳು ಕುಡಿಯುತ್ತಿದ್ದರು, ಬಾರೇ ಎಂದು ಕೆಟ್ಟದಾಗಿ ಮಾತನಾಡಿ ಬೈದಿದ್ದರು. ಯಾಕಪ್ಪಾಜಿ ಅಂದು ಎಷ್ಟು ಚಂದ ಮಾತನಾಡಿದಿರಿ ಎಂದರೆ ಉತ್ತರಿಸಲಿಲ್ಲ. ಬಳಿಕ ಮಾತನಾಡಿದ ಅವರು ಬಟ್ಟೆಯಲ್ಲೇ ಹೀಗೆ ಕಾಣುತ್ತೀಯಾ, ಬಟ್ಟೆ ಬಿಚ್ಚಿದರೆ ಹೇಗೆ ಎಂದು ಕೇಳಿದರು: ಮುರುಘಾಶ್ರೀಗಳ ಕಾಮಕಾಂಡದ ಹೊಸ ಅಧ್ಯಾಯವನ್ನು ಹೀಗೆ ತೆರೆದಿಟ್ಟಿದ್ದಾರೆ ಸಂತ್ರಸ್ತ ಬಾಲಕಿಯರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದೂ ಓದಬೇಕು | ಮುರುಘಾ ಶ್ರೀ ವಿಚಾರದಲ್ಲಿ ಒಡನಾಡಿ ಬಾಯಿ ಮುಚ್ಚಿಸಲು ೩ ಕೋಟಿ ಆಫರ್ ಮಾಡಿದ ಮಂತ್ರಿ ಯಾರು?
೭. ಕಿತವಾಡ್ ಫಾಲ್ಸ್‌ನಲ್ಲಿ ದುರಂತ: ನಾಲ್ವರು ಮದರಸಾ ವಿದ್ಯಾರ್ಥಿನಿಯರ ಬಲಿ ಪಡೆದ ಸೆಲ್ಫಿ ಕ್ರೇಜ್
ಅವರೆಲ್ಲ ಬೆಳಗಾವಿಯ ಮದರಸಾವೊಂದರ ವಿದ್ಯಾರ್ಥಿನಿಯರು. ನಗರದ ವಿವಿಧ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ವೀಕೆಂಡ್ ಎನ್ನುವ ಕಾರಣಕ್ಕೆ ನಲವತ್ತು ವಿದ್ಯಾರ್ಥಿನಿಯರು ಜತೆಯಾಗಿ ಕಿತವಾಡ್ ಫಾಲ್ಸ್‌ಗೆ ತೆರಳಿದ್ದರು. ಅಲ್ಲಿ ಸೆಲ್ಫಿಯಲ್ಲಿ ಮೈಮರೆತ ಆ ಕ್ಷಣ ಅವರ ಬದುಕಿನ ಕೊನೆ ಕ್ಷಣವಾಗಿದೆ. ಫೋಟೊ ತೆಗೆದುಕೊಳ್ಳುತ್ತಿದ್ದ ಐವರು ವಿದ್ಯಾರ್ಥಿನಿಯರೂ ನೀರಿಗೆ ಉರುಳಿಬಿದ್ದಿದ್ದಾರೆ. ಅವರನ್ನು ನಾಲ್ವರ ಉಸಿರು ಅಲ್ಲೇ ನಿಂತು ಹೋಗಿದೆ. ಮನಕಲಕುವ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಸೇನೆಯನ್ನು ಗೇಲಿ ಮಾಡಿದ್ದ ರಿಚಾ ಚಡ್ಡಾಗೆ ಪ್ರಕಾಶ್ ರೈ ಬೆಂಬಲ; ವಿರೋಧಿಸಿದ್ದ ಅಕ್ಷಯ್ ಕುಮಾರ್ಗೆ ತರಾಟೆ
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಬಗ್ಗೆ ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ವಿರುದ್ಧ ಅಪಾರ ವಿರೋಧ ವ್ಯಕ್ತವಾಗಿತ್ತು. ನಟ ಅಕ್ಷಯ್ ಕುಮಾರ್ ರಿಚಾ ಚಡ್ಡಾ ಅವರನ್ನು ವಿರೋಧಿಸಿದ್ದರು. ಇದೀಗ ಬಹುಭಾಷಾ ನಟ ಪ್ರಕಾಶ್ ರೈ ರಿಚಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಕ್ಷಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೯. Voter data | ಸಸ್ಪೆಂಡ್ ಆದ ಐಎಎಸ್ ಅಧಿಕಾರಿಗಳ ವಿಚಾರಣೆಗೆ ಆದೇಶ, ಇನ್ನಷ್ಟು ಮಂದಿಗೆ ನಡುಕ ಮತದಾರರ ಮಾಹಿತಿ ಕದ್ದ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಅಮಾನತುಗೊಂಡಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಜತೆಗೆ ಈ ಬೆಳವಣಿಗೆ ಇನ್ನಷ್ಟು ಅಧಿಕಾರಿಗಳಿಗೆ ನಡುಕ ಉಂಟು ಮಾಡಿದ್ದು, ಹಲವರ ತಲೆದಂಡ ಆಗುವ ಸಾಧ್ಯತೆಗಳಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10.ನಿವೃತ್ತಿ ಘೋಷಿಸಿದರೇ ವಿರಾಟ್ ಕೊಹ್ಲಿ; ಇನ್‌ಸ್ಟಾಗ್ರಾಮ್ ಪೋಸ್ಟ್ ಹೇಳುವುದೇನು?
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆಂಬ ಸುದ್ದಿ ಶನಿವಾರ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಬಿಸಿಸಿಐ ಮುಂದಿನ ಐಸಿಸಿ ಟ್ರೋಫಿಗಳಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ಯುವಕರನ್ನು ಒಳಗೊಂಡಿರುವ ಹೊಸ ತಂಡ ಕಟ್ಟುತ್ತದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ವಿರಾಟ್ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿಗೆ ಕಾರಣವಾಗಿದ್ದು ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್. ಏನಿದೆ ಅದರಲ್ಲಿ? ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
1. Oceans 3 | ಓಷ್ಯನ್‌ಸ್ಯಾಟ್ 3 ಸೇರಿ 9 ಉಪಗ್ರಹ ಉಡಾವಣೆ ಮಾಡಿದ ಇಸ್ರೊ
೨. ಮಂಗಳೂರು ಬೆನ್ನಲ್ಲೇ ಕಾಶ್ಮೀರದಲ್ಲೂ ಕುಕ್ಕರ್ ಬಾಂಬ್ ಪತ್ತೆ, ತಪ್ಪಿದ ಭಾರಿ ದುರಂತ
೩. ಏಕರೂಪ ನಾಗರಿಕ ಸಂಹಿತೆ, ಮಲಭೂತವಾದ ನಿಗ್ರಹ, 20 ಲಕ್ಷ ಜಾಬ್: ಗುಜರಾತ್ ಬಿಜೆಪಿ ಪ್ರಣಾಳಿಕೆ
೪. ಲಂಡನ್‌ನಲ್ಲಿ ಕೇರಳದ ಕೂಚಿಪುಡಿ ನೃತ್ಯ ಮಾಡಿದ ರಿಷಿ ಸುನಕ್ ಪುತ್ರಿ
೫. ವಾರದ ವ್ಯಕ್ತಿಚಿತ್ರ | ʼಕ್ಯಾಲ್ಕುಲೇಟಿವ್ ಟಾಸ್ಕ್‌ಮಾಸ್ಟರ್ʼ ಅರುಣ್ ಗೋಯಲ್
೬. ಕಿವೀಸ್ ವಿರುದ್ಧ ದ್ವಿತೀಯ ಏಕ ದಿನ ನಾಳೆ; ಧವನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
೭. ಮಗಳ ಮೇಲೆ ಆಪಾದನೆ ಮಾಡಿದರೆ ಕಮಿಷನರ್‌ವರೆಗೂ ಹೋಗುತ್ತೇವೆ: ವೈಷ್ಣವಿ ಗೌಡ ಪೋಷಕರು
೮. 26/11 ಮುಂಬಯಿ ಉಗ್ರ ದಾಳಿಗೆ 14 ವರ್ಷ; ದೇಶದ ಇತಿಹಾಸದಲ್ಲಿ ಇದು ಕರಾಳ ದಿನ
9. ವಿಸ್ತಾರ Explainer | 2,000 ಕೋಟಿ ರೂ. ಬಂಡವಾಳ! 2023ರಲ್ಲಾದರೂ ಗೆಲ್ಲುವುದೇ ಬಾಲಿವುಡ್?
೧೦. Loneliness | ಎಲ್ಲರೂ ಜತೆಗಿದ್ದರೂ ಏಕಾಂಗಿತನ ಕಾಡಿದಾಗ ಹೇಗೆ ಹೊರಬರಲಿ!?