ವಿಸ್ತಾರ Explainer | 2,000 ಕೋಟಿ ರೂ. ಬಂಡವಾಳ! 2023ರಲ್ಲಾದರೂ ಗೆಲ್ಲುವುದೇ ಬಾಲಿವುಡ್? - Vistara News

ಪ್ರಮುಖ ಸುದ್ದಿ

ವಿಸ್ತಾರ Explainer | 2,000 ಕೋಟಿ ರೂ. ಬಂಡವಾಳ! 2023ರಲ್ಲಾದರೂ ಗೆಲ್ಲುವುದೇ ಬಾಲಿವುಡ್?

ಬಾಲಿವುಡ್ ಪಾಲಿಗೆ 2022 ಕರಾಳ ವರ್ಷ. ಬಿಡುಗಡೆ ಕಂಡ ಬಹುತೇಕ ಚಿತ್ರಗಳು ಸೋತಿವೆ. ಬೆರಳೆಣಿಕೆಯಷ್ಟು ಸಿನಿಮಾ ಗೆದ್ದಿವೆ. ಹೀಗಿದ್ದೂ, 2023ರಲ್ಲಾದರೂ ಬಾಲಿವುಡ್‌‌ನ ಜಯದ ಕ್ಷಾಮ ನೀಗಲಿದೆಯಾ? (ವಿಸ್ತಾರ Explainer)

VISTARANEWS.COM


on

Bollywood @ 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇನ್ನೇನು 2022 ಮುಗಿದು 2023ಕ್ಕೆ ನಾವೆಲ್ಲ ಕಾಲಿಡಲಿದ್ದೇವೆ. ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳು ಸಹಜ. ಆದರೆ, ಕಳೆದ ವರ್ಷದಲ್ಲಾದ ಬೆಳವಣಿಗೆಗಳ ಮೇಲೆ ಕಣ್ಣಾಡಿಸಿದರೆ, ನಿರಾಸೆ ಕಾಣುತ್ತದೆ. ಅದರಲ್ಲೂ ಬಾಲಿವುಡ್ ಎಂದು ಕರೆಯಲಾಗುವ ಹಿಂದಿ ಚಿತ್ರರಂಗ ಅಕ್ಷರಶಃ ಯಶಸ್ಸಿನ ಕ್ಷಾಮವನ್ನು ಎದುರಿಸಿದ ವರ್ಷವಿದು. ಒಂದೆಡೆ, ದಕ್ಷಿಣ ಭಾರತದ ಚಿತ್ರಗಳು ದಿಗ್ವಿಜಯ ಸಾಧಿಸುತ್ತಿದ್ದರೆ, ಮತ್ತೊಂದೆಡೆ ಹಿಂದಿ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿದ್ದವು. ಹೆಸರಾಂತ ನಿರ್ದೇಶಕರು, ಸ್ಟಾರ್ ನಟರ ಸಿನಿಮಾಗಳು ಸೋತಿವೆ. ಮತ್ತೊಂದೆಡೆ, ಅನಿರೀಕ್ಷಿತವಾಗಿ ಕೆಲವೇ ಕೆಲವು ಚಿತ್ರಗಳು ಗೆದ್ದಿವೆ. ಆದರೆ, ವರ್ಷದ ಕೊನೆಯಲ್ಲಿ ಅಜಯ್ ದೇವಗನ್ ಅಭಿನಯದ ದೃಶ್ಯಂ-2 ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವುದು, ಬಾಲಿವುಡ್‌ಗೆ 2023 ಆಶಾದಾಯಕವಾಗುವಂತೆ ಮಾಡಿದೆ. ಮುಂದಿನ ವರ್ಷ ಕನಿಷ್ಠ 2 ಸಾವಿರ ಕೋಟಿ ರೂ. ವ್ಯವಹಾರದ ಸಿನಿಮಾಗಳು ತೆರೆಗೆ ಬರಲಿವೆ!(ವಿಸ್ತಾರ Explainer)

2022ರಲ್ಲಿ ಏನಾಯಿತು?
ಬಾಲಿವುಡ್ ಪಾಲಿಗೆ 2022 ಅಕ್ಷರಶಃ ದುಸ್ವಪ್ನವಾಗಿದೆ. ಬಚ್ಚನ್ ಪಾಂಡೆ, ಜರ್ಸಿ, ರನ್‌ವೇ 34, ಹೀರೋಪಂತಿ 2, ಧಾಕಡ್, ಸಾಮ್ರಾಟ ಪೃಥ್ವಿರಾಜ್, ಶಮ್ಷೇರ್, ಲಾಲ್ ಸಿಂಗ್ ಛಡ್ಡಾ ಸೇರಿದಂತೆ ಘಟಾನುಘಟಿಗಳ ಸಿನಿಮಾ ಫ್ಲಾಪ್ ಆದವು. ಇವೆಲ್ಲವೂ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ ಸಿನಿಮಾಗಳಾಗಿದ್ದವು. ಇನ್ನು ಭೂಲ್ ಭುಲಯ್ಯಾ 2, ದಿ ಕಾಶ್ಮೀರ್ ಫೈಲ್ಸ್, ಬ್ರಹ್ಮಾಸ್ತ್ರ, ಉಂಚಾಯಿ ಮತ್ತು ದೃಶ್ಯಂ 2 ಚಿತ್ರಗಳು ಮಾತ್ರವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಈ ಪೈಕಿ ದಿ ಕಾಶ್ಮೀರ್ ಫೈಲ್ಸ್ ನಿರೀಕ್ಷೆ ಮೀರಿ ಸಕ್ಸೆಸ್ ಆಗಿದೆ. ಕೆಲವು ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಹಲವು ಕಡೆ ಸಿನಿಮಾಗಳನ್ನು ಪ್ರದರ್ಶನದ ವ್ಯವಸ್ಥೆ ಮಾಡಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ.

The Kashmir File @ Vivek agnihotri

‘ಸ್ಟಾರ್’ ವ್ಯಾಲ್ಯೂ ಇಳಿಕೆ?
ಅದೊಂದು ಕಾಲವಿತ್ತು. ಸ್ಟಾರ್ ಹೆಸರ ಮೂಲಕವೇ ಸಿನಿಮಾ ಓಡುತ್ತಿತ್ತು. ಆದರೆ, ಆ ಪರಿಸ್ಥಿತಿ ಈಗಿಲ್ಲ. ಸ್ಟಾರ್ ವ್ಯಾಲ್ಯೂ ಕಳೆದುಕೊಂಡಿದೆ ಎನ್ನುವುದಕ್ಕೆ ಲಾಲ್ ಸಿಂಗ್ ಛಡ್ಡಾ, ಸಾಮ್ರಾಟ ಪೃಥ್ವಿರಾಜ್, ಹೀರೋಪಂತಿ 2, ಶಮ್ಷೇರ್ ಇದಕ್ಕೆ ಕೆಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಬಹುದು. ಈ ಸಿನಿಮಾಗಳು ದೊಡ್ಡ ಸ್ಟಾರ್ ಕಾಸ್ಟ್ ಹೊಂದಿದ್ದವು. ಸ್ಟಾರ್ ಮುಖವನ್ನೇ ನೋಡಿ ಜನ ಥಿಯೇಟರ್‌ಗೆ ಬರುವುದಿದ್ದರೆ ಈ ಚಿತ್ರಗಳು ಸೋಲುತ್ತಿರಲಿಲ್ಲ.

ಬಾಯ್ಕಾಟ್ ಎಫೆಕ್ಟ್ ಆಯ್ತಾ?
ಬಹುಶಃ ಈ ವರ್ಷ ಎದುರಿಸಿದ ಮತ್ತೊಂದು ಸಮಸ್ಯೆ ಬಾಯ್ಕಾಟ್ ಹ್ಯಾಷ್‌ಟ್ಯಾಗ್. ಲಾಲ್ ಸಿಂಗ್ ಛಡ್ಡಾ ಬಿಡುಗಡೆಯ ಮುಂಚೆಯೇ ಆನ್‌ಲೈನ್‌ನಲ್ಲಿ ಬಾಯ್ಕಾಟ್ ಕ್ಯಾಂಪೇನ್ ಜೋರಾಗಿತ್ತು. ಬ್ರಹ್ಮಾಸ್ತ್ರ ಬಿಡುಗಡೆಯಾದ ಬಳಿಕ ಬಾಯ್ಕಾಟ್‌ ಕ್ಯಾಂಪೇನ್‌ ಎದುರಿಸಬೇಕಾಯಿತು. ಆದಿಪುರುಷ್ ಟೀಸರ್‌ಗೆ ಬಾಯ್ಕಾಟ್ ಶುರುವಾಯಿತು. ಆನ್‌ಲೈನ್ ಬಾಯ್ಕಾಟ್ ಕ್ಯಾಂಪೇನ್ ಸರಿಯೋ ತಪ್ಪೋ ಎನ್ನುವುದಕ್ಕಿಂತ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಮುಖ್ಯ. ಆದರೆ, ಚಿತ್ರವೊಂದಕ್ಕೆ ನೆಗೆಟಿವ್ ಪ್ರಚಾರಕ್ಕೆ ಈ ಬಾಯ್ಕಾಟ್ ಖಂಡಿತವಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಾಲಿವುಡ್ ಯೋಚಿಸಬೇಕಿದೆ.

ಹೊಸತನಕ್ಕೆ ತೆರೆದುಕೊಳ್ಳಬೇಕು
ಶಾರುಖ್ ಖಾನ್, ಸಲ್ಮಾನ್ ಖಾನ್‌ರಂಥ ಸ್ಟಾರ್‌ಗಳು ಕಾಲದ ಜತೆಗೆ ಬದಲಾಗಬೇಕಿದೆ. ಹೊಸ ನಿರ್ದೇಶಕರು, ಹೊಸ ಕತೆಗಳು, ಹೊಸ ಸಿನಿಮಾಗಳು ಮಾಡಬೇಕು. ಆಗ ಮಾತ್ರ ಭವಿಷ್ಯ. ಇಲ್ಲದಿದ್ದರೆ ಅವರು ಕಾಲದ ಜತೆಗೇ ಅವರ ಚರಿಷ್ಮಾ ಕೂಡ ಕಳೆದು ಹೋಗಲಿದೆ. ಸ್ಟಾರ್ ನಟರು ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳಬೇಕು. ಹಳೆಯ ಫಾರ್ಮುಲಾಗೆ ಅಂಟಿಕೊಂಡು ಕುಳಿತರೆ ಸಾಲದು. ನಿನ್ನೆಯ ಸಕ್ಸೆಸ್ ಆದ ಫಾರ್ಮುಲಾ ನಾಳೆಗೆ ವೈಫಲ್ಯ ಕಾಣಬಹುದು. ಅದರರ್ಥ ನಿತ್ಯವೂ ಹೊಸ ಗೆಲುವಿನ ಸೂತ್ರವನ್ನು ಶೋಧಿಸುತ್ತಲೇ ಇರಬೇಕು. ಸೃಜನ ವಲಯವು ನಿತ್ಯ ನೂತನ.

ಗಟ್ಟಿ ಕತೆ ಬೇಕು
ಕಂಟೆಂಟ್ ಕಿಂಗ್ ಎಂಬ ಮಾತಿದೆ. ಸ್ಟಾರ್ ನಟರು, ಪ್ರಚಾರ, ಗಿಮಿಕ್‌ಗಳಿಂದ ಮಾತ್ರವೇ ಸಿನಿಮಾ ಓಡುವುದಿಲ್ಲ. ಕತೆ ಗಟ್ಟಿಯಾಗಿರಬೇಕು, ಅದನ್ನು ಅಷ್ಟೇ ಸಶಕ್ತವಾಗಿ ತೆರೆಯ ಮೇಲೆ ತರಬೇಕು. ಆಗ ಪ್ರೇಕ್ಷಕರಿಗೆ ಇಷ್ಟವಾಗಬಹುದು. ವರ್ಷದ ಅಂತ್ಯದಲ್ಲಿ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ದೃಶ್ಯಂ 2 ಚಿತ್ರವನ್ನು ಇದಕ್ಕೆ ಉದಾಹರಿಸಬಹುದು. ಈ ಸಿನಿಮಾದಲ್ಲಿ ಯಾವುದೇ ಸಿದ್ಧಸೂತ್ರಗಳಿಲ್ಲ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಗಾಗಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈ ಸಿನಿಮಾ ರಿಮೇಕ್ ಆದರೂ ಉತ್ತರ ಭಾರತದ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತಿದೆ.

Dhrashym 2 @ Ajay Devagan

2022ರಲ್ಲಿ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದು ದಕ್ಷಿಣ ಭಾರತ ಚಿತ್ರಗಳೇ. ಹಾಗೆ ನೋಡಿದರೆ, ಈ ಚಿತ್ರಗಳಲ್ಲಿ ಕಲಾವಿದರು ಉತ್ತರ ಭಾರತದ ಪ್ರೇಕ್ಷಕರಿಗೆ ಸ್ಟಾರ್‌ಗಳೇನಿಲ್ಲ. ಸಿನಿಮಾ ಸಕ್ಸೆಸ್ ಆದ ಮೇಲೆ ಅವರು ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ. ಪುಷ್ಪಾ, ಆರ್‌ಆರ್‌ಆರ್, ಕೆಜಿಎಫ್, ಸೀತಾ ರಾಮಮ್, ವಿಕ್ರಮ್ ರೋಣ, ಪೊನ್ನಿಯನ್ ಸೆಲ್ವನ್, ಲವ್ ಟುಡೇ, ಕಾಂತಾರ ಸಿನಿಮಾಗಳೆಲ್ಲವೂ ತಮ್ಮ ಕಂಟೆಂಟ್ ಮತ್ತು ಜನರಿಗೆ ಹತ್ತಿರವಾದ ಅಂಶಗಳನ್ನು ಹೊಂದಿರುವುದರಿಂದಲೇ ಗೆದ್ದಿವೆ. ಈ ಸಂಗತಿ ಬಾಲಿವುಡ್ ಅರ್ಥ ಮಾಡಿಕೊಳ್ಳಬೇಕಿದೆ. ಹಾಗಂತ, ಬಾಲಿವುಡ್ ಸಂಪೂರ್ಣವಾಗಿ ಖಾಲಿಯಾಗಿದೆ ಎಂದರ್ಥವಲ್ಲ. 2022 ಅವರ ಪಾಲಿಗೆ ಅಷ್ಟೊಂದು ಸಕ್ಸೆಸ್ ನೀಡಲಿಲ್ಲಷ್ಟೇ.

ಮುಂದಿನ ವರ್ಷ ಹೇಗಿದೆ?
2023 ಬಾಲಿವುಡ್‌ಗೆ ಸಕ್ಸೆಸ್ ತಂದುಕೊಡುವ ನಿರೀಕ್ಷೆಗಳಿವೆ. ಯಾಕೆಂದರೆ, ಸುಮಾರು 2000 ಕೋಟಿ ರೂ. ವ್ಯವಹಾರದ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ಶಾರುಖ್ ಮತ್ತು ಸಲ್ಮಾನ್ ಅವರಂಥ ಸ್ಟಾರ್‌ ನಟರ ಚಿತ್ರಗಳೂ ಇವೆ. ಶಾರುಖ್‌ ಖಾನ್ ಅವರಂತೂ ಕಳೆದ 5 ವರ್ಷಗಳಿಂದ ತೆರೆಗ ಬಂದಿಲ್ಲ. ಮುಂದಿನ ವರ್ಷ ವಿಭಿನ್ನ ಕತೆಗಳು ಇರುವ ಮೂರು ಚಿತ್ರಗಳು ಬರಲಿವೆ. ಹಾಗಾಗಿ, ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

ಪಠಾಣ(175 ಕೋಟಿ ರೂ.), ಮೈದಾನ್ (100 ಕೋಟಿ), ಸೆಲ್ಫೀ(70 ಕೋಟಿ ರೂ.), ಲವ್ ರಂಜನ್ ನಿರ್ದೇಶನದ ಚಿತ್ರ(90 ಕೋಟಿ), ಕಿಸ್ಸಿಕಾ ಭಾಯಿ ಕಿಸ್ಸಿಕಾ ಜಾನ್(120 ಕೋಟಿ ರೂ.), ಜವಾನ್ (120 ಕೋಟಿ ರೂ.), ಆದಿ ಪುರುಷ(600 ಕೋಟಿ ರೂ.), ಅನಿಮಲ್(90 ಕೋಟಿ), ಟೈಗರ್ -3 (300 ಕೋಟಿ ರೂ.), ಬಡೇ ಮಿಯಾ ಛೋಟೆ ಮಿಯಾ(115 ಕೋಟಿ ರೂ.), ಡಂಕಿ(125 ಕೋಟಿ ರೂ.), ಸೂರರೈ ಪೋಟ್ರು ರಿಮೇಕ್(80 ಕೋಟಿ ರೂ.) ಸೇರಿ ಅನೇಕ ಬಿಗ್‌ ಬಜೆಟ್‌ಗಳು ಮುಂದಿನ ವರ್ಷ ತೆರಿಗೆ ಬರಲಿವೆ. ಇವೆಲ್ಲವೂ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳೇ ಆಗಿವೆ. ಒಟ್ಟಾರೆ ಮುಂದಿನ ವರ್ಷಕ್ಕೆ 2 ಸಾವಿರ ಕೋಟಿ ರೂ. ಬಂಡವಾಳ ಹಾಕಿರುವ ಚಿತ್ರಕರ್ಮಿಗಳು, ಒಳ್ಳೆಯ ದಿನಗಳ ಬರಲಿ ಎಂದು ಕಾಯುತ್ತಿದ್ದಾರೆ.

ಗೆಲ್ಲುವ ಹಾದಿ ಯಾವುದು?
ಇಡೀ ಬಾಲಿವುಡ್ ಮುಂದಿನ ವರ್ಷ ಹೆಚ್ಚು ಆಶಾದಾಯಕವಾಗಿದೆ. ಅದರಲ್ಲೇನೂ ಅನುಮಾನವಿಲ್ಲ. ಸತತ ಸೋಲು ಅನುಭವಿಸಿದ ಬಾಲಿವುಡ್‌ಗೆ ಗೆಲ್ಲುವ ಅನಿವಾರ್ಯತೆಯಂತೂ ಇದೆ. ಹಿಂದಿ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಈ ಒತ್ತಡ ಹೆಚ್ಚಿದ್ದರೆ, ಸ್ಟಾರ್‌ ನಟರು ತಮ್ಮ ಸ್ಟಾರ್‌ಡಂ ಕಾಪಾಡಿಕೊಳ್ಳಲು ಮತ್ತು ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯುವ ಒತ್ತಡದಲ್ಲಿದ್ದಾರೆ.

ಸೋಲು ಅನಾಥ ಎಂಬ ಮಾತಿದೆ. ಬಾಲಿವುಡ್ ಸತತ ಸೋಲಿನಿಂದ ಕಂಗೆಟ್ಟ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೂಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ಬಾಲಿವುಡ್ ಗೆಲುವಿನ ಹಳಿಗೆ ಮರಳಿದರೆ, ಎಲ್ಲ ಕೊರತೆಗಳು ಕಣ್ಣಿಗೆ ಕಾಣದ ಹಾಗೆ ಹೋಗುತ್ತವೆ! ಚಿತ್ರಕರ್ಮಿಗಳು ಹಾಕಿದ ಬಂಡವಾಳನ್ನಾದರೂ ವಾಪಸ್ ಪಡೆಯಲೇಬೇಕಾದ ಅನಿವಾರ್ಯದ ಒತ್ತಡದಲ್ಲಿದ್ದಾರೆ. ವರ್ಷಾಂತ್ಯದಲ್ಲಿ ದೃಶ್ಯಂ 2 ಚಿತ್ರವೂ ಗಲ್ಲಾಪೆಟ್ಟಿಗೆ ಗೆಲುವಿನ ಓಟ ದಾಖಲಿಸುತ್ತಿದ್ದಂತೆ ಈ ಒತ್ತಡ ಉಳಿದ ಚಿತ್ರಕರ್ಮಿಗಳ ಮೇಲೂ ಹೆಚ್ಚಾಗಿದೆ. ಎಲ್ಲರಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸಕ್ಸೆಸ್ ಬೇಕು ಎಂದಾದರೆ ಒತ್ತಡವನ್ನು ಸಹಿಸಿಕೊಳ್ಳಬೇಕು. ಆಗಲೇ ಯಶಸ್ಸು ಸಾಧಿಸಲು ಸಾಧ್ಯ. ಜತೆಗೆ, ಸಹ ಚಿತ್ರರಂಗಳು ಯಶಸ್ಸಿನಲ್ಲಿದ್ದಾಗ ಸಹಜವಾಗಿಯೇ ಹಿಂದಿ ಚಿತ್ರರಂಗದ ಮೇಲೆ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೇ. ಈಗಲೂ ಅದೇ ಪರಿಸ್ಥಿತಿ ಇದೆ.

2023ರ ಮೇಲೆ ನಿರೀಕ್ಷೆಯ ಬೆಟ್ಟ
ಸಹಜವಾಗಿಯೇ ಸ್ಟಾರ್ ನಟರು, ಸೃಜನಶೀಲ ನಿರ್ದೇಶಕರು, ದೊಡ್ಡ ದೊಡ್ಡ ಬ್ಯಾನರ್ ಚಿತ್ರಗಳು ಮುಂದಿನ ವರ್ಷ ತೆರೆಗೆ ಬರಲಿವೆ. ಹಾಗಾಗಿ, ನಿರೀಕ್ಷೆಯ ಭಾರವಂತೂ ತುಸು ಹೆಚ್ಚೇ ಆಗಿದೆ. ಮತ್ತೆ ಮುಂಬರುವ ಚಿತ್ರಗಳೆಲ್ಲವೂ ಭಿನ್ನ, ವಿಭಿನ್ನವಾಗಿವೆ. ಕತೆಯಾಗಲೀ, ಮೇಕಿಂಗ್ ಆಗಲೀ ಎಲ್ಲವೂ ಹೊಸದಾಗಿದೆ. ಹೊಸ ಹೊಸ ಪ್ರಯತ್ನಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. ಆದರೆ, ಪ್ರೇಕ್ಷಕರು ಎಷ್ಟರ ಮಟ್ಟಿಗೆ ಬೆನ್ನುತಟ್ಟುತ್ತಾರೆ ಕಾದು ನೋಡಬೇಕು.

Gookha @ Akshay kumar

ಬಾಲಿವುಡ್ ಒಂದು ಉದ್ಯಮವಾಗಿ ಒಂದೇ ದಿಕ್ಕಿನಲ್ಲಿ ಸಾಗಬಾರದು. ಆಗ ಸಕ್ಸೆಸ್ ರೇಟ್ ಕಡಿಮೆಯಾಗುತ್ತದೆ. ಬಿ ಮತ್ತು ಸಿ ಸೆಂಟರ್‌ಗಳು, ಸಣ್ಣ ನಗರ ಪಟ್ಟಣ ಹಾಗೂ ಗ್ರಾಮೀಣ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ, ಅವರ ಕತೆಗಳು ಸಿನಿಮಾ ಪರದೆ ಮೇಲೆ ಒಡಮೂಡಿದರೆ ಸಕ್ಸೆಸ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಹಲವರದು. ಮುಂಬರುವ ಸಿನಿಮಾಗಳು ಇದೇ ದಾಟಿಯಲ್ಲಿರುವುದರಿಂದ ನಿರೀಕ್ಷೆಗಳು ಬೆಟ್ಟದಷ್ಟಿವೆ.

ಇದನ್ನೂ ಓದಿ | ಬಾಲಿವುಡ್‌ನ ಟಾಪ್‌ 10 ಗ್ಲಾಮರಸ್‌ ಗಾಯಕಿಯರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

DK Shivakumar: ಕೇರಳದಲ್ಲಿ ನನ್ನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಸುತ್ತಮುತ್ತ ಯಾಗ ನಡೆಯುತ್ತಿದೆ. ನನ್ನ ಹಾಗೂ ಸಿಎಂ ಮೇಲೆ ಯಾವ ಪೂಜೆ ನಡೆಯುತ್ತಿದೆ ಎಂಬುದು ಕೂಡ ಗೊತ್ತಿದೆ ಎಂಬುದಾಗಿ ಡಿ.ಕೆ. ಶಿವಕುಮಾರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಕರ್ನಾಟಕ ಸೇರಿ ದೇಶಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಇದರ ಬೆನ್ನಲ್ಲೇ, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. “ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿದೆ” ಎಂಬುದಾಗಿ ಹೇಳಿರುವುದು ಈಗ ಸಂಚಲನ ಮೂಡಿಸಿದೆ.

“ಕೇರಳದಲ್ಲಿ ನನ್ನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಸುತ್ತಮುತ್ತ ಯಾಗ ನಡೆಯುತ್ತಿದೆ. ನನ್ನ ಹಾಗೂ ಸಿಎಂ ಮೇಲೆ ಯಾವ ಪೂಜೆ ನಡೆಯುತ್ತಿದೆ ಎಂಬುದು ಕೂಡ ಗೊತ್ತಿದೆ” ಎಂದು ಹೇಳಿದ ಅವರು ಯಾರೋ ಬರೆದು ಕೊಟ್ಟಿದ್ದಾರೆ ಎಂಬುದಾಗಿ ಜೇಬಿನಲ್ಲಿರುವ ಚೀಟಿಯನ್ನು ತೆಗೆದು ನೋಡಿದ್ದಾರೆ.

ಪಂಚಬಲಿ ಕೊಡುತ್ತಿದ್ದಾರೆ ಎಂದ ಡಿಸಿಎಂ

ಅಘೋರಿಗಳ ಮೂಲಕ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ. ಇದಕ್ಕಾಗಿ ಪಂಚ ಬಲಿ ಕೊಡುತ್ತಿದ್ದಾರೆ. 21 ಕಪ್ಪು ಮೇಕೆ, 3 ಎಮ್ಮೆ, 21 ಕುರಿ, 5 ಹಂದಿ ಹಾಗೂ ಕೋಣವನ್ನು ಬಲಿ ಕೊಡುತಿದ್ದಾರೆ. ಈಗ ಯಾಗ ನಡೆಯುತ್ತಿದ್ದು, ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಆದರೆ, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಎಲ್ಲ ಡೀಟೇಲ್ಸ್‌ ಅನ್ನು ಚೀಟಿ ಬರೆದುಕೊಟ್ಟಿದ್ದಾರೆ. ಯಾರು ಭಾಗಿಯಾಗಿದ್ದರೋ ಅವರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಇದೆಲ್ಲವನ್ನು ರಾಜಕೀಯದವರಲ್ಲದೆ ಬೇರೆ ಯಾರು ಮಾಡಲು ಸಾಧ್ಯ. ಆದರೆ, ಇದೆಲ್ಲವನ್ನು ನಾವು ನಂಬುವುದಿಲ್ಲ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮೂಲಗಳ ಪ್ರಕಾರ, ರಾಜ್ಯ ಸರ್ಕಾರದ ವಿರುದ್ಧ ಕೇರಳದಲ್ಲಿ ರಾಜಕಂಟಕ ಯಾಗ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಸಿಎಂ, ಡಿಸಿಎಂ ಮಾರಣ ಮೋಹನ ಸ್ತಂಭನ ಪ್ರಯೋಗ ಯಾಗ ನಡೆಯುತ್ತಿದೆ. ಕೇರಳದ ನಿರ್ಜನ ಪ್ರದೇಶದಲ್ಲಿ ನಡೆದಿದೆ ಎಂಬ ಮಾಹಿತಿ ಇದೆ. ಇದೇ ಮಾಹಿತಿ ಆಧರಿಸಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜ”ಸ್ಥಾನ”ದಲ್ಲಿ ಕೂತವರ ವಿರುದ್ಧ ಪ್ರಯೋಗ ನಡೆದಿದೆ ಎಂದು ಪರೋಕ್ಷವಾಗಿ ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

Continue Reading

ಕ್ರೀಡೆ

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

IPL 2024: ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ.

VISTARANEWS.COM


on

IPL 2024
Koo

ಮುಂಬೈ: ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಆಗಿದ್ದ ಜಿಯೋಸಿನಿಮಾ, ಟಾಟಾ ಐಪಿಎಲ್‌-2024ರ (IPL 2024) ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆ ಸೃಷ್ಟಿಸಿದೆ. ಇದು ಟಾಟಾ ಐಪಿಎಲ್‌-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಹೆಚ್ಚಳವಾಗಿದೆ. ಜಿಯೋಸಿನಿಮಾ ಐಪಿಎಲ್​​ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ.

ಮೊದಲ ದಿನದ ಅದ್ಭುತ ಆರಂಭದ ನಂತರ ತನ್ನ ವೀಕ್ಷಣೆಯ ಪ್ರಮಾಣವನ್ನು ಹೆಚ್ಚಿಸಿದ ಜಿಯೋಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿದೆ. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ದೃಶ್ಯಗಳು ಮತ್ತು ಎಆರ್/ವಿಆರ್ ಮೂಲಕ ವರ್ಚುಯಲ್​ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯ ಅವಕಾಶ ನೀಡಿದ್ದರಿಂದ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.

ಜಿಯೋಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಶುಭಾರಂಭ ಮಾಡಿತ್ತು. ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳ. ಜಿಯೋಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್​ಫಾರ್ಮ್​​ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯ ದಾಖಲಿಸಿತು.

ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ. ನಮ್ಮ ಪಾಲುದಾರರು, ಪ್ರಾಯೋಜಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ವಯಾಕಾಮ್18ರ ವಕ್ತಾರರು ಹೇಳಿದ್ದಾರೆ.

28 ಪ್ರಾಯೋಜಕರು

ಜಿಯೊ ಸಿನಿಮಾಗೆ ಆರಂಭಲ್ಲಿ ಬ್ರಾಂಡ್‌ಗಳಾದ ಡ್ರೀಮ್11, ಥಮ್ಸ್ ಅಪ್, ಪಾರ್ಲೆ ಪ್ರಾಡಕ್ಟ್ಸ್, ಬ್ರಿಟಾನಿಯಾ, ದಾಲ್ಮಿಯಾ ಸಿಮೆಂಟ್ಸ್ ಮತ್ತು ಎಚ್ಡಿಎಫ್​ಸಿ ಬ್ಯಾಂಕ್‌ನ ಪ್ರಾಯೋಜಕತ್ವ ಇತ್ತು. ಋತುವಿನ ಅಂತ್ಯದ ವೇಳೆಗೆ ಜಿಯೋಸಿನಿಮಾ ದಾಖಲೆಯ 28 ಪ್ರಾಯೋಜಕರು ಮತ್ತು 1400ಕ್ಕೂ ಹೆಚ್ಚು ಜಾಹೀರಾತುದಾರರನ್ನು ಹೊಂದಿತ್ತು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ಅತ್ಯುತ್ತಮ ದರ್ಜೆಯ ಕ್ರೀಡಾ ವಿಷಯವನ್ನು ನೀಡುವ ಜಿಯೋಸಿನಿಮಾದ ಬದ್ಧತೆಯು ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024ರೊಂದಿಗೆ ಮುಂದುವರಿಯುತ್ತದೆ. ವೀಕ್ಷಕರು ಸಾವಿರಾರು ಗಂಟೆಗಳ ಲೈವ್ ಮತ್ತು ಬೇಡಿಕೆಯ ಕ್ರೀಡೆಯೊಂದಿಗೆ ಒಲಿಂಪಿಕ್ಸ್‌ನ ವರ್ಧಿತ ವೀಕ್ಷಣೆಯ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೀಕ್ಷಿಸಬಹುದು. ವಯಾಕಾಮ್18ರ ಪ್ಯಾರಿಸ್​ ಒಲಿಂಪಿಕ್ಸ್-2024ರ ಸಮಗ್ರ ಕವರೇಜ್, ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರು ನೋಡಲೇಬೇಕಾದ ಸ್ಪರ್ಧೆಗಳನ್ನು ವಿಕ್ಷಿಸಬಹುದು.

ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.

Continue Reading

ದೇಶ

RBI Balance Sheet: ಪಾಕಿಸ್ತಾನದ ಜಿಡಿಪಿಗಿಂತ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಎರಡೂವರೆ ಪಟ್ಟು ಹೆಚ್ಚು; ಹೀಗಿದೆ ವರದಿ

RBI Balance Sheet: ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯವು 338 ಬಿಲಿಯನ್‌ ಡಾಲರ್‌ (ಸುಮಾರು 28 ಲಕ್ಷ ಕೋಟಿ ರೂ.) ಇದೆ. ಆದರೆ, ಭಾರತದ ಕೇಂದ್ರೀಯ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟೇ ಪಾಕಿಸ್ತಾನದ ಜಿಡಿಪಿಗಿಂತ ಎರಡೂವರೆ ಪಟ್ಟು ಜಾಸ್ತಿ ಇದೆ. 2023ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು 63.44 ಲಕ್ಷ ಕೋಟಿ ರೂ. ಆಗಿತ್ತು.

VISTARANEWS.COM


on

RBI Balance Sheet
Koo

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ತನ್ನ ವಾರ್ಷಿಕ ಹಣಕಾಸು ವರದಿ ಬಿಡುಗಡೆ ಮಾಡಿದೆ. 2024ರ ಮಾರ್ಚ್‌ 31ಕ್ಕೆ ಅಂತ್ಯವಾದ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (ಹಣಕಾಸು ವರದಿ) ಕಳೆದ ಹಣಕಾಸು ವರ್ಷಕ್ಕಿಂತ ಶೇ.11ರಷ್ಟು ಏರಿಕೆಯಾಗಿದೆ. ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (RBI Balance Sheet) ಈಗ 70.48 ಲಕ್ಷ ಕೋಟಿ ರೂ. ಮೌಲ್ಯಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು ಪಾಕಿಸ್ತಾನದ ಒಟ್ಟು ಜಿಡಿಪಿಯ (Pakistan GDP) ಎರಡೂವರೆ ಪಟ್ಟು ಜಾಸ್ತಿ ಇದೆ ಎಂದು ತಿಳಿದುಬಂದಿದೆ. ಇದು ಭಾರತದ ಕೇಂದ್ರೀಯ ಬ್ಯಾಂಕ್‌ನ ಆರ್ಥಿಕ ಸುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಪ್ರಕಾರ, ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯವು 338 ಬಿಲಿಯನ್‌ ಡಾಲರ್‌ (ಸುಮಾರು 28 ಲಕ್ಷ ಕೋಟಿ ರೂ.) ಇದೆ. ಆದರೆ, ಭಾರತದ ಕೇಂದ್ರೀಯ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟೇ ಪಾಕಿಸ್ತಾನದ ಜಿಡಿಪಿಗಿಂತ ಎರಡೂವರೆ ಪಟ್ಟು ಜಾಸ್ತಿ ಇದೆ. 2023ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು 63.44 ಲಕ್ಷ ಕೋಟಿ ರೂ. ಆಗಿತ್ತು. ಅಷ್ಟೇ ಅಲ್ಲ, ಬಾಂಗ್ಲಾದೇಶದ ಒಟ್ಟು ಜಿಡಿಪಿ ಮೌಲ್ಯಕ್ಕಿಂತಲೂ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯ ಜಾಸ್ತಿ ಇದೆ ಎಂದು ತಿಳಿದುಬಂದಿದೆ.

ಟಿಸಿಎಸ್‌ ಮಹತ್ವದ ಮೈಲುಗಲ್ಲು

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (TCS) ಮಹತ್ವದ ಮೈಲುಗಲ್ಲು ಸಾಧಿಸಿದೆ. ಟಿಸಿಎಸ್‌ನ ಬ್ಯಾಲೆನ್ಸ್‌ ಶೀಟ್‌ 15 ಲಕ್ಷ ಕೋಟಿ ರೂ. ಆಗಿದೆ. ಇದು ದೇಶದಲ್ಲೇ ಆರ್‌ಬಿಐ ನಂತರ ಬೃಹತ್‌ ಮೊತ್ತದ ಬ್ಯಾಲೆನ್ಸ್‌ ಶೀಟ್‌ ಹೊಂದಿರುವ ಕಂಪನಿ ಎನಿಸಿದೆ. ಪಾಕಿಸ್ತಾನದ ಒಟ್ಟು ಜಿಡಿಪಿಯ ಅರ್ಧದಷ್ಟು ಮೌಲ್ಯವನ್ನು ಟಿಸಿಎಸ್‌ ಬ್ಯಾಲೆನ್ಸ್‌ ಶೀಟ್‌ ಹೊಂದಿದೆ ಎಂಬುದು ಗಮನಾರ್ಹವಾಗಿದೆ. ಉಗ್ರವಾದದ ಪೋಷಣೆ, ಚೀನಾ ಯೋಜನೆಗಳಿಗೆ ಹಣ ವಿನಿಯೋಗ, ಅಸಮರ್ಥ ನಾಯಕತ್ವ, ವಿತ್ತೀಯ ಸುಧಾರಣೆಗಳ ಕೊರತೆಯಿಂದಾಗಿ ಪಾಕಿಸ್ತಾನವು ದಿವಾಳಿಯಾಗಿದೆ.

ಬ್ಯಾಲೆನ್ಸ್‌ ಶೀಟ್‌ ಎಂದರೇನು?

ನಿರ್ದಿಷ್ಟ ಸಮಯದಲ್ಲಿ ಯಾವುದೇ ಕಂಪನಿಯು ತನ್ನ ಸ್ವತ್ತುಗಳು, ಷೇರುದಾರರ ಈಕ್ವಿಟಿಯ ಒಂದು ವರದಿ ಅಥವಾ ಸ್ಟೇಟ್‌ಮೆಂಟ್‌ ಆಗಿದೆ. ಹೂಡಿಕೆದಾರರಿಗೆ ಸಿಗುತ್ತಿರುವ ಲಾಭ (Returns) ಹಾಗೂ ಕಂಪನಿಯ ಬಂಡವಾಳದ ಸ್ಥಿತಿಗತಿಯನ್ನು ಬ್ಯಾಲೆನ್ಸ್‌ ಶೀಟ್‌ ವಿವರಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಾವುದೇ ಸಂಸ್ಥೆ ಅಥವಾ ಕಂಪನಿಯ ಹಣಕಾಸು ವಹಿವಾಟು, ಆಸ್ತಿಯ ಮೌಲ್ಯ, ಷೇರುಗಳ ಏರಿಳಿತದ ಲೆಕ್ಕಾಚಾರವಾಗಿದೆ. ಇದು ಆ ಕಂಪನಿಯ ಸುಸ್ಥಿತಿ ಅಥವಾ ದುಸ್ಥಿತಿಯನ್ನು ತಿಳಿಸುತ್ತದೆ.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

Continue Reading

ಪ್ರಮುಖ ಸುದ್ದಿ

Valmiki Corporation Scam: ಹಗರಣದ ಆರೋಪಿ ಜೊತೆಗೆ ಸಚಿವ ನಾಗೇಂದ್ರ ಕ್ಲೋಸ್‌? ಫೋಟೋ ಬಿಡುಗಡೆ ಮಾಡಿದ ಬಿಜೆಪಿ

Valmiki Corporation Scam: “ಈ ಹಣ ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿದೆ. ಇದನ್ನು ಸಿಬಿಐಗೆ ಒಪ್ಪಿಸಿದರೆ ಸತ್ಯಾಸತ್ಯತೆ ಹೊರಗಡೆಗೆ ಬರುತ್ತೆ. ಮುಖ್ಯಮಂತ್ರಿ ರಾಜೀನಾಮೆ ಕೇಳ್ತೀವಿ. ಮಂತ್ರಿ ರಾಜೀನಾಮೆ ಆಗಲೇಬೇಕು. ಆರನೇ ತಾರೀಖು ಡೆಡ್‌ಲೈನ್ ಕೊಡುತ್ತೇವೆ. ಅದರ ಒಳಗೆ ರಾಜೀನಾಮೆ ಪಡೆಯದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ” ಎಂದು ಅಶೋಕ್‌ ಆಗ್ರಹಿಸಿದರು.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ನಿಗಮ ಅಧೀಕ್ಷಕ (Valmiki development corporation) ಚಂದ್ರಶೇಖರ್‌ ಆತ್ಮಹತ್ಯೆ (Officer self harming) ಮಾಡಿಕೊಂಡಿರುವ (valmiki corporation scam) ಪ್ರಕರಣದಲ್ಲಿ, ನಿಗಮದಿಂದ ವರ್ಗಾವಣೆಯಾಗಿರುವ ಹಣದ ಅಕ್ರಮದಲ್ಲಿ (Illegal money transfer) ಸಚಿವರ ಹಾಗೂ ಅವರ ಆಪ್ತ ನಾಗರಾಜ್‌ ಎಂಬಾತನ ಕೈವಾಡವಿದೆ ಎಂದು ಬಿಜೆಪಿ ಫೋಟೋ ಸಹಿತ ಆರೋಪಿಸಿದೆ. ನಾಗರಾಜ್‌, ಸಚಿವ ನಾಗೇಂದ್ರ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯಗೆ ಆಪ್ತವಾಗಿರುವ ಫೋಟೋಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ (BJP) ಬಿಡುಗಡೆ ಮಾಡಿದೆ.

ಬಿಜೆಪಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಆಶೋಕ್, ಸಿಟಿ ರವಿ, ಗೋವಿಂದ ಕಾರಜೋಳ, ರಾಮಮೂರ್ತಿ, ಲೆಹರ್ ಸಿಂಗ್, ಪದ್ಮನಾಭ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

“ಇದೊಂದು ದೊಡ್ಡ ಹಗರಣ. ನಾಗರಾಜ್ ಅನ್ನುವ ಅಧಿಕಾರಿಯ ಹೆಸರು ಡೆತ್ ನೋಟ್‌ನಲ್ಲಿ ಇದೆ. ಈತ ಬಾರಿ ಪ್ರಭಾವಿ ಅಧಿಕಾರಿ. ಸಚಿವ ನಾಗೇಂದ್ರ ಜತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಆಪ್ತರಾಗಿದ್ದಾರೆ. ಹಗರಣದಲ್ಲಿ ಈತನ ಕೈವಾಡವಿದೆ. ಈ ದುಡ್ಡು ಬೇರೆ ರಾಜ್ಯಗಳಿಗೆ ಹೋಗಿದೆ. ಎಲೆಕ್ಷನ್ ಫಂಡ್‌ಗೆ ಬಳಸಿರುವ ಸಾಧ್ಯತೆ ಇದೆ. ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು. ಇದರಲ್ಲಿ ಸಚಿವರ ಪಾತ್ರ ಇರುವುದರಿಂದ ರಾಜ್ಯ ಸರ್ಕಾರದ ವ್ಯಾಪ್ತಿಯ ತನಿಖಾ ಸಂಸ್ಥೆಯಿಂದ ತನಿಖೆ ಆಗಬಾರದು. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಬಿಐಯಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ದೊಡ್ಡ ದೊಡ್ಡವರು ಸಹ ಇದರಲ್ಲಿ ಪಾತ್ರಧಾರಿಗಳು ಆಗಿರುವುದರಿಂದ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತೆ” ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.

Valmiki Corporation Scam nagaraj with minister nagendra and cm siddaramiah

ಕರ್ನಾಟಕದ ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣ ಬಯಲಿಗೆ ಬಂದಿದೆ. ಕಾಂಗ್ರೆಸ್‌ನ ಒಂದು ವರ್ಷದ ಸಾಧನೆ ಎಂದರೆ ಎಸ್‌ಟಿ ನಿಗಮದ 180 ಕೋಟಿ ರೂ. ಹಣ ಗುಳುಂ ಮಾಡಿರುವುದು. ಚುನಾವಣೆಗೂ ಮೊದಲು ದಲಿತರ ರಕ್ಷಣೆ ನಮ್ಮ ಹಕ್ಕು ಅಂತ ಹೇಳಿದ್ರು. ಅಧಿಕಾರ ಸಿಕ್ಕ ತಕ್ಷಣ ವಾಲ್ಮೀಕಿ ನಿಗಮದ 187 ಕೋಟಿ ಹಣ ಗುಳುಂ ಮಾಡಿದ್ದಾರೆ. ಒಂದು ವರ್ಷದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದೇ ಸಾಧನೆ ಎಂದು ಅಶೋಕ್‌ ಆರೋಪಿಸಿದರು.

ರಾಜ್ಯದಲ್ಲಿ ಹೆಣ್ಣು ಮಕ್ಕಳು ಹೊರಗಡೆ ಹೋದ್ರೆ ಗ್ಯಾರಂಟಿ ಇಲ್ಲ. ಈಗ ಸರ್ಕಾರಿ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ. ಚಂದ್ರಶೇಖರ್‌ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಡಿಟೈಲ್ ಆಗಿ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿಲ್ಲ. ಕಾಂಗ್ರೆಸ್‌ನವರು ಲೂಟಿ ಮಾಡಿರುವುದು ಸ್ಪಷ್ಟವಾಗಿ ಕಾಣ್ತಿದೆ. 187 ಕೋಟಿ ರೂ. ಹಗರಣದಲ್ಲಿ ಇಡೀ ಸರ್ಕಾರ ಭಾಗಿಯಾಗಿದೆ ಎಂದು ಅವರು ಆರೋಪಿಸಿದರು.

ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಟಕಾಟಕ್‌ ಹಣ ಹಾಕ್ತೀವಿ ಅಂತ ರಾಹುಲ್ ಹೇಳಿದ್ರು. 4, 6, 21, 25 ದಿನಾಂಕಗಳಂದು ಟಕಾಟಕ್‌ ಟ್ರಾನ್ಸ್‌ಫರ್ ಮಾಡಿದ್ದಾರೆ. ಕಾಂಗ್ರೆಸ್‌ನ ಲೂಟಿ ಅಕೌಂಟ್‌ಗೆ ಹಾಕಿದ್ದಾರೆ. ಇದು ಬ್ರಹ್ಮಾಂಡ ಭ್ರಷ್ಟಾಚಾರ. ದಲಿತರ ಹಣ ಮಾಯವಾಗಿದೆ. ಅಧಿಕಾರಿಗಳು ಸತ್ತು ಹೋಗ್ತಿದ್ದಾರೆ. ಕ್ರೈಮ್ ರೇಟ್, ಕೋಮುವಾದ ಮತ್ತು ಭಯೋತ್ಪಾದನೆ ಟಕಾಟಕ್‌ ಜಾಸ್ತಿ ಆಗಿದೆ ಎಂದು ಅವರು ಕಿಡಿ ಕಾರಿದರು.

ಸರ್ಕಾರಕ್ಕೆ ಆರ್ ಆಶೋಕ್ ಆರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
1) ಚಂದ್ರಶೇಖರ್‌ ಡೆತ್ ನೋಟ್‌ನಲ್ಲಿ ಮಂತ್ರಿ ಹೆಸರಿದೆ. ಆದರೆ ಎಫ್ಐಆರ್‌ನಲ್ಲಿ ಯಾಕೆ ಇಲ್ಲ?
2) ಎಫ್ಐಆರ್‌ನಲ್ಲಿ ಹೆಸರಿರುವ ಅಧಿಕಾರಿಗಳನ್ನು ಯಾಕೆ ಬಂಧಿಸಿಲ್ಲ?
3) ಬಂಧಿಸಿದ್ರೆ ನಿಮ್ಮ ಬಂಡವಾಳ ಬಯಲಾಗುತ್ತಾ?
4) ಸಿಐಡಿ ಕೊಟ್ಟು ಮುಚ್ಚಿ ಹಾಕುವ ಪ್ಲಾನ್ ಮಾಡಿದ್ರಾ?
5) ಕಮಿಷನ್ ಪಡೆದಿದ್ದರೆ ರಾಜೀನಾಮೆ ಕೊಡ್ತೀನಿ ಅಂದ್ರಿ. ರಾಜೀನಾಮೆ ಯಾವಾಗ ಕೊಡ್ತೀರಾ ಸಿದ್ದರಾಮಯ್ಯ ಅವರೇ?
6) ಲ್ಯಾಪ್ ಟಾಪ್ ಕದ್ದು ಮುಚ್ಚಿ ತೆಗೆದುಕೊಂಡು ಹೋಗಿದ್ದು ಯಾಕೆ?

“ಈಶ್ವರಪ್ಪ ಪ್ರಕರಣದಲ್ಲಿ ಮೌಖಿಕ ಆದೇಶ ಅಷ್ಟೇ ಮಾಡಿದ್ದರು. ಅವರು ನೈತಿಕ ಹೊಣೆಗಾರಿಕೆ ಮೇಲೆ ರಾಜೀನಾಮೆ ಕೊಟ್ಟರು. ಈಶ್ವರಪ್ಪ ಅವರನ್ನ ಕೂಡಲೇ ಬಂಧಿಸಿ ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ಈಗ ನೀವ್ಯಾರನ್ನು ಬಂಧಿಸಿದ್ದೀರಿ? ಇದು ಹಾದಿ ಬೀದಿಯಲ್ಲಿ ಮಾತನಾಡಿದ್ದು ಅಲ್ಲ, ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದು” ಎಂದು ಅಶೋಕ್ ಪ್ರಶ್ನಿಸಿದ್ದಾರೆ. “ಏನೂ ಆಗಿಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ. 20 ಕೋಟಿ ವಾಪಸು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಹಣ ವಾಪಸು ತಂದಿದ್ದೀರಿ. ಅವನ ಪ್ರಾಣ ಸಹ ವಾಪಸು ತನ್ನಿ” ಎಂದರು.

“ಈ ಹಣ ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿದೆ. ಇದನ್ನು ಸಿಬಿಐಗೆ ಒಪ್ಪಿಸಿದರೆ ಸತ್ಯಾಸತ್ಯತೆ ಹೊರಗಡೆಗೆ ಬರುತ್ತೆ. ಮುಖ್ಯಮಂತ್ರಿ ರಾಜೀನಾಮೆ ಕೇಳ್ತೀವಿ. ಮಂತ್ರಿ ರಾಜೀನಾಮೆ ಆಗಲೇಬೇಕು. ಆರನೇ ತಾರೀಖು ಡೆಡ್‌ಲೈನ್ ಕೊಡುತ್ತೇವೆ. ಅದರ ಒಳಗೆ ರಾಜೀನಾಮೆ ಪಡೆಯದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ” ಎಂದು ಅಶೋಕ್‌ ಆಗ್ರಹಿಸಿದರು.

“ಡೆತ್‌ ನೋಟ್‌ ಬಗ್ಗೆ ಪರಮೇಶ್ವರ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಪರಮೇಶ್ವರ್ ಹೇಳಿಕೆಯೇ ತನಿಖೆ ಯಾವ ರೀತಿಯಲ್ಲಿ ನಡೆಯುತ್ತಿದೆ ಅಂತ ತಿಳಿಸುತ್ತಿದೆ. ಸಿಐಡಿ ತನಿಖೆಗೆ ಯಾರು ಒತ್ತಾಯ ಮಾಡಿದರು? ಇವರು ಈ ಕೇಸ್ ಮುಚ್ಚಿ ಹಾಕಲು ಸಿಐಡಿಗೆ ನೀಡಿದ್ದಾರೆ” ಎಂದು ಅಶೋಕ್ ಹೇಳಿದರು.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

Continue Reading
Advertisement
Rishabh Pant
ಕ್ರೀಡೆ7 mins ago

Rishabh Pant: ದೇವರ ಕೃಪೆಯಿಂದ ಮತ್ತೆ ಟೀಮ್​ ಇಂಡಿಯಾ ಜೆರ್ಸಿ ಧರಿಸುವಂತಾಯಿತು ಎಂದು ಭಾವುಕರಾದ ರಿಷಭ್​ ಪಂತ್

IAS Exam
ಕರ್ನಾಟಕ12 mins ago

IAS Exam : ಯುಪಿಎಸ್ ಸಿ ಪರೀಕ್ಷಾ ಅಭ್ಯರ್ಥಿಗಳಿಗೆ ಉಚಿತ ತರಬೇತಿ

Kamal Haasan indian 2 second song out
ಕಾಲಿವುಡ್15 mins ago

Kamal Haasan: ‘ಇಂಡಿಯನ್-2’ ಸಿನಿಮಾದ ಎರಡನೇ ಹಾಡು ರಿಲೀಸ್!

Bus accident
ದೇಶ27 mins ago

Bus Accident: ಕಂದಕಕ್ಕೆ ಉರುಳಿದ ಬಸ್‌; 9 ಜನ ಬಲಿ; 40 ಜನರಿಗೆ ಗಂಭೀರ ಗಾಯ

Money Guide
ಮನಿ-ಗೈಡ್29 mins ago

Money Guide: ಹಣ ಪಾವತಿ ಅಂಗಳಕ್ಕೆ ಕಾಲಿಡಲು ಅದಾನಿ ಗ್ರೂಪ್‌ ಸಜ್ಜು; ಗೂಗಲ್‌ ಪೇ, ಫೋನ್‌ ಪೇಗೆ ಪ್ರಬಲ ಪೈಪೋಟಿ?

DK Shivakumar
ಕರ್ನಾಟಕ33 mins ago

DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Food Poisoning
ಬೆಳಗಾವಿ34 mins ago

Food Poisoning : ಜಾತ್ರೆಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

IPL 2024
ಕ್ರೀಡೆ42 mins ago

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

Kannada New Movie Dasappa Kannada Movie Trailer
ಸ್ಯಾಂಡಲ್ ವುಡ್54 mins ago

Kannada New Movie: ʻತಿಥಿʼ ಚಿತ್ರದ ಖ್ಯಾತಿಯ ತಮ್ಮಣ್ಣ ಅಭಿನಯದ ʻದಾಸಪ್ಪʼ ಸಿನಿಮಾ ಟ್ರೈಲರ್‌ ಔಟ್‌!

T20 World Cup 2024
ಕ್ರೀಡೆ54 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ಗಳಿವರು…

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ4 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌