1. Rice Politics: ತೆಲಂಗಾಣದಲ್ಲೂ ಅಕ್ಕಿ ಇಲ್ವಂತೆ; 7-8 ಕೆಜಿಗೆ ಇಳಿಯುತ್ತಾ ಅನ್ನಭಾಗ್ಯ?
ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲಾಗುವುದಿಲ್ಲ ಎಂದು ಕೈ ಎತ್ತಿರುವುದರಿಂದ ಬೇರೆ ಮೂಲಗಳಿಂದ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಭರವಸೆ ಇಟ್ಟಿದ್ದ ತೆಲಂಗಾಣದಲ್ಲೂ ಅಕ್ಕಿ ಇಲ್ಲ (Rice Politics) ಎಂದು ತಿಳಿಸಲಾಗಿದೆ. ಛತ್ತೀಸ್‌ಗಢವೊಂದೇ ಸದ್ಯಕ್ಕಿರುವ ಆಸರೆ. ಹೀಗಾಗಿ ಅನ್ನ ಭಾಗ್ಯದ ಅಕ್ಕಿಯ ಪ್ರಮಾಣವನ್ನೇ 7-8 ಕೆಜಿಗೆ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. Free Electricity : ಉಚಿತ ವಿದ್ಯುತ್ ಬೇಕಾ? ಜೂ. 18ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ (Free Electricity) ನೀಡುವ ʻಗೃಹ ಜ್ಯೋತಿʼ ಯೋಜನೆಯ ಫಲಾನುಭವಿಗಳಾಗಲು ಜೂನ್ 18ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 15ರಿಂದಲೇ ಆರಂಭವಾಗಬೇಕಾಗಿದೆ ಅರ್ಜಿ ಸಲ್ಲಿಕೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ಅರ್ಜಿ ಸ್ವೀಕಾರವನ್ನು ಜೂನ್ 18ರಿಂದ ಆರಂಭಿಸಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಲಿಂಗಾಯತ ಲಡಾಯಿ: ಸಂತೋಷ್ ಮುಂದಿನ ಟಾರ್ಗೆಟ್ ಒಕ್ಕಲಿಗರಾ ಅಂತ ಕಾಲೆಳೆದ ಎಂಬಿ ಪಾಟೀಲ್
ರಾಜ್ಯ ಬೃಹತ್ ಕೈಗಾರಿಕಾ ಖಾತೆ ಸಚಿವ ಎಂ.ಬಿ. ಪಾಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಡುವಿನ ಲಿಂಗಾಯತ ಲಡಾಯಿ ಜೋರಾಗಿದೆ. ಲಿಂಗಾಯತ ನಾಯಕರನ್ನು ಮುಗಿಸಿದ ಬಳಿಕ ನಿಮ್ಮ ಟಾರ್ಗೆಟ್ ಯಾರು, ಒಕ್ಕಲಿಗರಾ ಎಂದು ಪಾಟೀಲ್ ಕಾಲೆಳೆದಿದ್ದಾರೆ. ಇದಕ್ಕೆ ಸಂತೋಷ್ ನೀಡಿದ ಉತ್ತರವೂ ಮಜವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ವಿನಯ ಗುರೂಜಿ ಆಶ್ರಮದಲ್ಲಿ ಡಿಕೆಶಿ ಸಿಎಂ ಕೂಗು, ಸಿದ್ದರಾಮಯ್ಯ ಆಪ್ತರಿಂದಲೂ ಕಹಳೆ
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಫೈಟ್ ಕಡಿಮೆಯಾಗುವ ಲಕ್ಷಣಗಳಿಲ್ಲ. ಶನಿವಾರ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಕೂಗು ಜೋರಾಗಿತ್ತು. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಆಪ್ತ ಸಚಿವ ಡಾ. ಎಚ್.ಸಿ. ಮಹದೇವಪ್ಪ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಮೂರು ಬಾರಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮತ್ತೆ ಠುಸ್ ಪಟಾಕಿಯಾದ ಬಿಬಿಎಂಪಿ ಡೆಮಾಲಿಷನ್ ಡ್ರೈವ್; ಸ್ಟೇ ಆರ್ಡರ್ ನೋಡಿ ಕಾಲ್ಕಿತ್ತರು
ಬೆಂಗಳೂರಿನಲ್ಲಿ ಮತ್ತೆ ಬುಲ್ಡೋಜರ್ ಗರ್ಜಿಸಿ, ಅಕ್ರಮ ಒತ್ತುವರಿ ಕಟ್ಟಡಗಳನ್ನು ಬಿಬಿಎಂಪಿ ಉರುಳಿಸಿಯೇ ಬಿಡುತ್ತೆ ಎಂದುಕೊಂಡಿದ್ದರು. ಆದರೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಟೇ ಆರ್ಡರ್ ಬಿಸಿ ತುಪ್ಪವಾಗಿದೆ. ಕಂದಾಯ ಇಲಾಖೆ, ಬಿಬಿಎಂಪಿ ಸಮನ್ವಯ ಕೊರತೆಯಿಂದಾಗಿ ತೆರವು ಕಾರ್ಯವು ನಗೆಪಾಟಲಿಗೀಡಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಸ್ಥಳೀಯ ಶಾಸಕ, ಬಿಜೆಪಿ ಅಧ್ಯಕ್ಷರ ಮನೆ ಟಾರ್ಗೆಟ್
ಮಣಿಪುರದ ಸಂಘರ್ಷಪೀಡಿತ ಬಿಷ್ಣುಪುರ್ ಜಿಲ್ಲೆ ಮತ್ತು ಚುರಾಚಂದಪುರ ಜಿಲ್ಲೆಯ ಕಾಂಗ್ವೈ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಿಂಸಾಚಾರ ನಡೆದಿದೆ. ಈ ವೇಳೆ, ಆಟೋಮೆಟಿಕ್ ಆಯುಧಗಳನ್ನು ಬಳಸಲಾಗಿದೆ. ಬೆಳಗಿನ ಜಾವದವರೆಗೂ ಗುಂಡಿನ ಮೊರೆತಗಳು ಕೇಳಿ ಬಂದವು ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಬುರ್ಖಾ ಧರಿಸಿದ ಹೆಣ್ಣುಮಕ್ಕಳಿಗೆ ಕಾಲೇಜು ಪ್ರವೇಶ ಇಲ್ಲ, ಬುರ್ಖಾ ಬಿಚ್ಚಿಸಿಯೇ ಪರೀಕ್ಷೆ ಬರೆಸಿದ ಸಿಬ್ಬಂದಿ
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿ, ಸುಪ್ರೀಂ ಕೋರ್ಟ್ ಅಂಗಳ ಪ್ರವೇಶಿಸಿದ ಬೆನ್ನಲ್ಲೇ ತೆಲಂಗಾಣದಲ್ಲೂ ಬುರ್ಖಾ ವಿವಾದ ಭುಗಿಲೆದ್ದಿದೆ. ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸಲು ಆಡಳಿತ ಮಂಡಳಿ ನಿರಾಕರಿಸಿದ್ದು, ವಿದ್ಯಾರ್ಥಿನಿಯರು ಬುರ್ಖಾ ಬಿಚ್ಚಿಟ್ಟ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಪ್ರಕರಣವೀಗ (Burqa Row) ವಿವಾದಕ್ಕೂ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಪುಣ್ಯಕ್ಷೇತ್ರಗಳಿಗೆ ದಾಳಿಯಿಟ್ಟ ಮಹಿಳೆಯರು; ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲಿ ಕಾಲಿಡಲು ಜಾಗವಿಲ್ಲ!
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮ ವಾರಾಂತ್ಯದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಕಾಣಿಸುತ್ತಿದೆ. ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳಾ ಭಕ್ತಾದಿಗಳು ಪುಣ್ಯಕ್ಷೇತ್ರಗಳಿಗೆ ದಾಳಿಯಿಡುತ್ತಿದ್ದು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ತುಂಬಿ ತುಳುಕಾಡುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಸೇನೆಗೆ ಹೊರಟ ಕರ್ನಾಟಕದ ಶ್ವಾನಪಡೆ: ಅಂಕೋಲಾದ 17 ನಾಯಿಮರಿಗಳು 20 ಲಕ್ಷಕ್ಕೆ ಮಾರಾಟ
ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಸಾಕಿಕೊಂಡಿದ್ದ ನಾಯಿಮರಿಗಳು ಈಗ ದೇಶ ಸೇವೆ ಮಾಡಲು ಭಾರತೀಯ ಸೇನೆಗೆ ಹೊರಟಿವೆ. ರಾಘವೇಂದ್ರ ಭಟ್ ಎಂಬುವವರು ಸಾಕಿದ್ದ ಬೆಲ್ಜಿಯನ್ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಸೇನೆಯ ಕಮಾಂಡೋ ಹಾಗೂ ಜವಾನರು ಆಗಮಿಸಿ, ಎಸಿ ಬಸ್‌ನಲ್ಲಿ ಅಸ್ಸಾಂಗೆ ಕೊಂಡೊಯ್ದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಆದಿಪುರುಷ್‌ಗೆ ವಿಶ್ವಾದ್ಯಂತ ಭರ್ಜರಿ ಓಪನಿಂಗ್ ; ಯಾವ ವಿವಾದ, ಟೀಕೆಗೂ ಕ್ಯಾರೇ ಇಲ್ಲ!
ʻಆದಿಪುರುಷ್ʼ ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ, ಜೂನ್ 16ರ ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಓಪನಿಂಗ್ ಪಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ