Site icon Vistara News

ವಿಸ್ತಾರ TOP 10 NEWS: ರಷ್ಯಾದಲ್ಲಿ ಆಂತರಿಕ ದಂಗೆ, ಹೋರಾಟದ ಅಖಾಡಕ್ಕಿಳಿದ ಬಿಎಸ್‌ವೈ, ಹೀಗೆ ಪ್ರಮುಖ ಸುದ್ದಿಗಳು

Vistara top 10 news 24062023

#image_title

1.ಗ್ಯಾರಂಟಿ ವಿರುದ್ಧ ಜನಾಂದೋಲನಕ್ಕೆ ಮುಂದಾದ ಬಿಎಸ್‌ವೈ- ಸೋತು ಸೊರಗಿದ್ದ ಪಕ್ಷಕ್ಕೆ ಸಿಕ್ಕಿತು ಆಕ್ಸಿಜನ್‌‌‌
ಜುಲೈ ಮೂರರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ (Joint session) ಉದ್ದಕ್ಕೂ ವಿಧಾನಸೌದದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಇದು ಸೋತು ಸುಣ್ಣವಾಗಿದ್ದ ಬಿಜೆಪಿಗೆ ಸಣ್ಣ ಆಕ್ಸಿಜನ್‌ ನೀಡಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಬಗೆಹರಿಯದ ಅನ್ನಭಾಗ್ಯದ ಅಕ್ಕಿ ಗೊಂದಲ: ಜುಲೈನಲ್ಲಂತೂ ಸಿಗಲ್ಲ ಹೆಚ್ಚುವರಿ ಅಕ್ಕಿ
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ (Anna Bhagya scheme) ವಿತರಿಸಲು ಬೇಕಾದ ಅಕ್ಕಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಆದರೆ, ಇನ್ನೂ ಅದು ಸಿಕ್ಕಿಲ್ಲ. ಶನಿವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಇದಕ್ಕೆ ಸ್ಪಷ್ಟತೆ ದೊರೆದಿಲ್ಲ. ಹೀಗಾಗಿ ಜುಲೈ ತಿಂಗಳಲ್ಲಿ ಪಡಿತರ ವ್ಯವಸ್ಥೆ ಮೂಲಕ ಹೆಚ್ಚುವರಿ ಐದು ಕೆಜಿ ಸಿಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ರಷ್ಯಾದಲ್ಲಿ ಭುಗಿಲೆದ್ದ ಆಂತರಿಕ ದಂಗೆ- ಮಾಸ್ಕೋ ವಶಕ್ಕೆ ಮುಂದಾದ ವ್ಯಾಗ್ನರ್‌ ಖಾಸಗಿ ಸೇನೆ
ಉಕ್ರೇನ್‌ ಮೇಲೆ ದಾಳಿ ಮಾಡಲು ಹೋಗಿ ತದುಕಿಸಿಕೊಡಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಇದೀಗ ಅವರು ಸಾಕಿದ ಬಾಡಿಗೆ ಕೊಲೆಗಡುಕರ ಸೈನ್ಯವೇ ಅವರಿಗೆ ತಿರುಗಿಬಿದ್ದಿದೆ. ರಷ್ಯಾದ ದಕ್ಷಿಣ ಮಿಲಿಟರಿ ಕೇಂದ್ರವಾದ ರಾಸ್ತಾವಾನ್‌ ಡಾನ್‌ ಪಟ್ಟಣವನ್ನು ಬಾಡಿಗೆ ಸೈನ್ಯ ವಶಪಡಿಸಿಕೊಂಡಿದ್ದು, ಮಾಸ್ಕೋ ಕಡೆಗೆ ಧಾವಿಸುತ್ತಿದೆ ಎನ್ನಲಾಗಿದೆ. ಇದು ರಷ್ಯದ ದೇಶದ ಸೈನ್ಯಕ್ಕೂ ಬಾಡಿಗೆ ಕೊಲೆಗಡುಕರ ಸೈನ್ಯಕ್ಕೂ ನಡುವೆ ನಡೆಯುತ್ತಿರುವ ಸಮರ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ವಿಸ್ತಾರ Explainer: ಯಾರಿವನು ಯೆವ್ಗೆನಿ ಪ್ರಿಗೋಜಿನ್?

4. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ರಾಜೀನಾಮೆ ಕೊಟ್ಟಿರುವೆ ಎಂದು ಬಳಿಕ ಉಲ್ಟಾ ಹೊಡೆದ ಕಟೀಲ್‌
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯಲ್ಲಿ ಈಗ ರಾಜ್ಯಾಧ್ಯಕ್ಷರು ಯಾರು ಎನ್ನುವ ಚರ್ಚೆ ತೀವ್ರವಾಗಿದೆ. ಅದರಲ್ಲೂ ಈಗ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಒಮ್ಮೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಘೋಷಿಸಿ ಬಳಿಕ ಯು-ಟರ್ನ್‌ ಹೊಡೆದ ಬಳಿಕ ಚರ್ಚೆ ಬಿರುಸು ಪಡೆದುಕೊಂಡಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ‌ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ; ಯು ಟರ್ನ್‌ ಹೊಡೆದ ನಳಿನ್‌ ಕಟೀಲ್‌

5. ಶಾಸಕರ ತರಬೇತಿ ವಿವಾದ- ಕರ್ಜಗಿ ಜಾಗಕ್ಕೆ ಮುಖ್ಯಮಂತ್ರಿ ಚಂದ್ರು ಹೆಸರು ಬಹುತೇಕ ಫೈನಲ್‌
ರಾಜ್ಯ ವಿಧಾನಸಭೆಗೆ ಆಯ್ಕೆಯಾದ 70 ಮಂದಿ ನೂತನ ಶಾಸಕರಿಗಾಗಿ ವಿಧಾನಸಭಾ ಸಚಿವಾಲಯದಿಂದ ಆಯೋಜನೆಯಾಗಿರುವ ಮೂರು ದಿನಗಳ ತರಬೇತಿ ಶಿಬಿರದ ಆಹ್ವಾನಿತರಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಿಬಿರಕ್ಕೆ ಆಹ್ವಾನಿತರಾಗಿದ್ದ ಶಿಕ್ಷಣ ತಜ್ಞ ಪ್ರೊ. ಗುರುರಾಜ ಕರ್ಜಗಿ ಅವರ ಬದಲು ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರ ಹೆಸರು ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ನಂದಿನಿ ಹಾಲಿಗೆ ಎದುರಾಯ್ತೇ ಸಂಚಕಾರ? – ಶೀಘ್ರದಲ್ಲೇ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ ಕೇರಳ ಹಾಲು
ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ ಉತ್ಪನ್ನಗಳು ದೇಶದಲ್ಲಿಯೇ ಖ್ಯಾತಿ ಗಳಿಸಿವೆ. ಆದರೆ, ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲಿನ ಖ್ಯಾತಿ ಸಹಿಸದೆ ಮಾರಾಟ ಮಾಡಲು ಬಿಡಲ್ಲ, ಇದು ನೈತಿಕತೆ ಅಲ್ಲ ಎಂದೆಲ್ಲ ಭಾಷಣ ಬಿಗಿದಿದ್ದ ಕೇರಳ ಈಗ ಕರ್ನಾಟಕದಲ್ಲೂ ಕೇರಳ ಕೋಆಪರೇಟಿವ್‌ ಮಿಲ್‌ ಮಾರ್ಕೆಟಿಂಗ್‌ ಫೆಡರೇಷನ್‌ (Milma-ಮಿಲ್ಮ) ಹಾಲಿನ ಮಾರಾಟಕ್ಕೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಮೋದಿ ಸಲಹೆ ಪಡೆದು ಭಾರತದ ಚಾಟ್, ಜಿಲೇಬಿ ಸವಿದ ಆಸ್ಟ್ರೇಲಿಯಾ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಅವರು ಆತ್ಮೀಯ ಸ್ನೇಹಿತರು. ಇತ್ತೀಚೆಗೆ ಮೋದಿ ಅವರು ಆಸ್ಟ್ರೇಲಿಯಾಗೆ ತೆರಳಿದ್ದಾಗ ಆಂಥೋನಿ ಅಲ್ಬನೀಸ್‌ ಅವರು ಉತ್ತಮ ಆತಿಥ್ಯ ಒದಗಿಸಿದ್ದರು. ಈಗ ಆಂಥೋನಿ ಅಲ್ಬನೀಸ್‌ ಅವರು ಆಸ್ಟ್ರೇಲಿಯಾದಲ್ಲಿರುವ ಭಾರತದ ರೆಸ್ಟೋರೆಂಟ್‌ನಲ್ಲಿ ಜಿಲೇಬಿ ಸೇರಿ ಹಲವು ತಿಂಡಿಗಳನ್ನು ಸವಿದಿದ್ದಾರೆ. ಅಲ್ಲದೆ, ಮೋದಿ ಅವರ ಸಲಹೆ ಮೇರೆಗೆ ಈ ತಿಂಡಿಗಳನ್ನು ಸವಿದಿದ್ದೇನೆ ಎಂದು ತಿಳಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ1: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ
ಪೂರಕ ಸುದ್ದಿ2: ಈಜಿಪ್ಟ್‌ ಸ್ಮಾರಕದಲ್ಲಿ ನಮನ ಸಲ್ಲಿಸಲಿದ್ದಾರೆ ಮೋದಿ

8. Seventh Pay Commission: NPS ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮಹತ್ವದ ಸಭೆ
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು ಈಗಾಗಲೇ ಸರ್ಕಾರಿ ನೌಕರರಿಂದ ಮತ್ತು ಸಾರ್ವಜನಿಕರಿಂದ ಪ್ರಶ್ನೋತ್ತರ ಮಾದರಿಯಲ್ಲಿ ಅಭಿಪ್ರಾಯ, ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದು, ಈಗ ಓಪಿಎಸ್‌ ಜಾರಿಗಾಗಿ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರದ ಎನ್‌ಪಿಎಸ್‌ ನೌಕರರ ಸಂಘದೊಂದಿಗೆ (NPS News) ವಿಶೇಷ ಸಭೆ ಆಯೋಜಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಕರ್ನಾಟಕ ಪಠ್ಯದಿಂದ ಕೈಬಿಟ್ಟ ವೀರ ಸಾವರ್ಕರ್ ಉ.ಪ್ರ ಪಠ್ಯದಲ್ಲಿ!
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಪಠ್ಯಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ (Veer Savarkar Row) ಅವರ ಅಧ್ಯಾಯವನ್ನು ಕೈಬಿಟ್ಟ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವೀರ ಸಾವರ್ಕರ್‌ ಕುರಿತ ಅಧ್ಯಾಯವನ್ನು ಸೇರಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ಗೆ ಉತ್ತರ ಪ್ರದೇಶ ಬಿಜೆಪಿಯು ತಿರುಗೇಟು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ವಿಜಯ್‌ ದೇವರಕೊಂಡ ಜತೆ ರಶ್ಮಿಕಾ; ಸೀಕ್ರೆಟ್‌ ಡೇಟಿಂಗ್‌ ವಿಡಿಯೊ ವೈರಲ್‌
ನ್ಯಾಶನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆಫ್‌ ಆಫ್‌ಸ್ಕ್ರೀನ್‌ನಲ್ಲಿಯೂ ಇವರಿಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಲೇ ಇವೆ.‌ ಒಂದು ಹಂತದಲ್ಲಿ ಬೇರೆಯಾಗಿದ್ದಾರೆ ಎಂದು ಹೇಳಲಾಗಿದ್ದ ಜೋಡಿ ಈಗ ಏಕಾಏಕಿ ಸ್ನೇಹಿತರ ಜತೆ ಊಟ ಮಾಡುವ ವಿಡಿಯೊ ವೈರಲ್‌ ಆಗಿದೆ. ಜೋಡಿ ಡೇಟಿಂಗ್ ನ್ಯೂಸ್ ನಿಜ ಎಂಬುದಕ್ಕೆ ಹೊಸ ಸಾಕ್ಷಿ ಸಿಕ್ಕಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version