ಬೆಂಗಳೂರು: ಕನ್ನಡದ ನಾಡು ನುಡಿಯ ೮೬ನೇ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಮುಂದಿನ ಸಾಹಿತ್ಯ ಸಮ್ಮೇಳನಕ್ಕಾಗಿ ನುಡಿತೇರು ಸಕ್ಕರೆ ನಾಡಿಗೆ ತೆರಳಲಿದೆ. ವಿವಾದಿತ ಸ್ಯಾಂಟ್ರೊ ರವಿ ಗೃಹ ಸಚಿವರ ಮನೆಯಲ್ಲೇ ಕುಳಿತು ದುಡ್ಡು ಎಣಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮೇಲೆ ಹೊಸ ಹೊಸ ರೀತಿಯಲ್ಲಿ ಮುಗಿಬಿದ್ದ ಬಿಜೆಪಿ ಮತ್ತು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶದ ಮೂಲಕ ಸೆಡ್ಡು ಹೊಡೆದ ಕಾಂಗ್ರೆಸ್‌ನ ಸವಾಲಿನ ಸುದ್ದಿ. ರಾಹುಲ್ ಗಾಂಧಿ ಅವರ ಚಳಿ ತಡೆಯುವ ರಹಸ್ಯ ಸ್ಫೋಟಗೊಂಡದ್ದು, ರಿಷಭ್ ಪಂತ್ ಅವರು ಐಪಿಎಲ್ ಆಡದಿದ್ದರೂ ೧೬ ಕೋಟಿ ರೂ. ಸಿಗುವುದರ ರಹಸ್ಯದೊಂದಿಗೆ, ೧೨ ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಆತಂಕದ ಘಟನೆ ಸಹಿತ ನಾನಾ ವಲಯಗಳ ಪ್ರಮುಖ ಸುದ್ದಿಗಳ ಗುಚ್ಛವಿದು ವಿಸ್ತಾರ TOP 10 NEWS.
1. ಏಲಕ್ಕಿ ನಾಡಿನಿಂದ ಸಕ್ಕರೆ ನಾಡಿಗೆ ಸವಿನುಡಿ ತೇರು: ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡುವೆಯೇ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೨. ಅನ್ಯ ಭಾಷೆ ಹೇರಬೇಡಿ, ಹೋರಾಟಗಾರರನ್ನು ಬಿಡುಗಡೆ ಮಾಡಿ: ನಾಡು-ನುಡಿಯ ಕುರಿತು 6 ನಿರ್ಣಯ
ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಹಿಂದಿ ಹಾಗೂ ಇನ್ನಾವುದೇ ಭಾಷೆಯನ್ನು ಕನ್ನಡದ ಮೇಲೆ ಹೇರುವಂತಿಲ್ಲ ಎನ್ನುವ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಒಟ್ಟು ಆರು ನಿರ್ಣಯಗಳ ಕುರಿತು ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೀಲ್ ಪಾಂಡು ಮಾಹಿತಿ ನೀಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ವರದಿಗಳನ್ನೂ ಓದಿ
–ಸಾಹಿತಿಗಳು ರಾಜಕೀಯ ಮಾಡಬೇಡಿ: ಮುಸ್ಲಿಂ ಪ್ರಾತಿನಿಧ್ಯದ ಕುರಿತು ಕಸಾಪಕ್ಕೆ ಬಿ.ಕೆ. ಹರಿಪ್ರಸಾದ್ ಬುದ್ಧಿಮಾತು
– ಒಡೆಯುವವರನ್ನು ತಿರಸ್ಕರಿಸಿ: ಹರಿಪ್ರಸಾದ್ ಮಾತಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ತಿರುಗೇಟು
೩. ಗೃಹ ಸಚಿವರ ಮನೆಯಲ್ಲೇ 15 ಲಕ್ಷ ರೂ. ಎಣಿಸಿದ ಸ್ಯಾಂಟ್ರೋ ರವಿ!
ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೊ ತೆಗೆದವರು ಯಾರು? ಅವರ ಮನೆಯಲ್ಲಿ ೧೫ ಲಕ್ಷ ಎಣಿಕೆ ಮಾಡಿದ್ದರ ಬಗ್ಗೆ ಅವರೇ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
– ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಪ್ರಭಾವ! ಯುವತಿಗೆ 1.83 ಲಕ್ಷ ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್!
– ಸುಳ್ಳು ಕೇಸು ಹಾಕಿ ಪೊಲೀಸರು, ಅಧಿಕಾರಿಗಳನ್ನು ಕಾಡುತ್ತಿರುವ ಸ್ಯಾಂಟ್ರೋ ರವಿ, ಅದಕ್ಕೇ ಅವರಿಗೆ ಭಯ!
4. ಕಾಂಗ್ರೆಸ್-ಬಿಜೆಪಿ ನಡುವೆ ಥಟ್ ಅಂತ ಹೇಳಿ ಫೈಟ್; ಶಿಕ್ಷಕರ ನೇಮಕಾತಿ ಅಕ್ರಮ V/S 40% ಕಮಿಷನ್ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಲ್ಕೇ ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ವಿವಿಧ ಸಮಾವೇಶಗಳು, ಯಾತ್ರೆಗಳು, ಸಭೆಗಳು ಸೇರಿದಂತೆ ಹಲವು ರೀತಿಯ ಚಟುವಟಿಕೆಯನ್ನು ಆಯೋಜನೆ ಮಾಡುತ್ತಿವೆ. ಈ ಮೂಲಕ ಮತದಾರರ ಮನ ಮುಟ್ಟುವ ತಂತ್ರಗಾರಿಕೆಗೆ ಮೊರೆಹೋಗಿವೆ. ಪೇಸಿಎಂ, ಕೆಸಿಸಿ (ಕಂಗಾಲ ಕಾಂಗ್ರೆಸ್ ಕಂಪನಿ)ಗಳಂತಹ ಅಭಿಯಾನಗಳ ಬಳಿಕ ಈಗ “ಥಟ್ ಅಂತ ಹೇಳಿ” ಅಭಿಯಾನವು ಕಾಂಗ್ರೆಸ್-ಬಿಜೆಪಿ ಮಧ್ಯೆ ಶುರುವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೫. ಅಂದಿನ ಟಿಪ್ಪು ಇಂದಿನ ಸಿದ್ದುವೇ? ಸಿದ್ದು ನಿಜ ಕನಸುಗಳು ಪುಸ್ತಕ ಸಿದ್ಧಪಡಿಸಿದ ಬಿಜೆಪಿ: ಜ. 9ಕ್ಕೆ ರಿಲೀಸ್ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಗೆಬಗೆಯ ಅಸ್ತ್ರ ಪ್ರಯೋಗ ಮಾಡುತ್ತಿರುವ ಬಿಜೆಪಿ (Siddaramaiah VS BJP) ಈಗ ಹೊಸದೊಂದು ಅಸ್ತ್ರ ರೆಡಿ ಮಾಡಿದೆ. ಅದುವೇ ಒಂದು ಪುಸ್ತಕ! ಟಿಪ್ಪು ನಿಜ ಕನಸುಗಳು ಮಾದರಿಯಲ್ಲಿ ʻಸಿದ್ದು ನಿಜ ಕನಸುಗಳುʼ! ಪುಸ್ತಕವನ್ನು ಬಿಜೆಪಿ ಸಿದ್ಧಪಡಿಸಿದ್ದು, ಸೋಮವಾರ ಅದರ ಬಿಡುಗಡೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. Rishabh Pant | ಐಪಿಎಲ್ ಆಡದಿದ್ದರೂ ಪಂತ್ಗೆ 16 ಕೋಟಿ ರೂ. ಸಿಗಲಿದೆ; ಇದು ಹೇಗೆ ಸಾಧ್ಯ?
ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್(Rishabh Pant) ಚೇತರಿಕೆಗೆ ಸುಮಾರು 9 ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಂತ್ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್ ಸರಣಿಯಿಂದ ದೂರ ಉಳಿಯುವುದು ಬಹುತೇಕ ಖಚಿತಗೊಂಡಂತಿದೆ. ಆದರೆ ಅವರಿಗೆ ೧೬ ಕೋಟಿ ರೂ. ಸಿಗಲಿದೆ. ಅದು ಹೇಗೆ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಚಳಿ ನಿಗ್ರಹಕ್ಕೆ ರಾಹುಲ್ ಟಿ ಶರ್ಟ್ ಒಳಗೆ ಥರ್ಮಲ್ ಉಡುಪು, ಕೈ-ಕಮಲ ಕೆಸರೆರಚಾಟ
ಬಿಜೆಪಿ ಹಾಗೂ ಕಾಂಗ್ರೆಸ್ ಇರುವುದೇ ಹಾಗೆ. ದೇಶ, ಧರ್ಮ, ಸೇನೆ, ಜಾತಿ, ಉಡುಪು, ಮಾಂಸಾಹಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಕೆಸರೆರಚಾಟ ಮಾಡಿದ್ದರೆ ಎರಡೂ ಪಕ್ಷಗಳಿಗೆ ಆಗುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಳಿ ನಿಗ್ರಹಕ್ಕೆ ಟಿ-ಶರ್ಟ್ ಒಳಗೆ ಥರ್ಮಲ್ ಉಡುಪು ಧರಿಸಿದ್ದು ಕೂಡ ಎರಡೂ ಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಲು ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
೮. Actor Yash birthday | ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು: ಯಶ್ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ!
ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ನಾಯಕ ರಾಕಿಂಗ್ ಸ್ಟಾರ್ ಯಶ್‌ಗೆ ಜನವರಿ 8ರಂದು 37ನೇ ಜನುಮ ದಿನದ ಸಂಭ್ರಮ. ಅಭಿಮಾನಿಗಳಿಗೆ ಪತ್ರ ಬರೆದು ಪತ್ನಿ, ಮಕ್ಕಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್‌ಗೆ ದುಬೈಗೆ ಹಾರಿದ್ದಾರೆ ಯಶ್. ಯಶ್ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೯. Tweaks In Twitter | ಫೆಬ್ರವರಿಯಿಂದ ಟ್ವಿಟರ್‌ನಲ್ಲಿ 280 ಪದಗಳ ಮಿತಿ ರದ್ದು, ದೀರ್ಘ ಟ್ವೀಟ್‌ಗಳಿಗೆ ಅವಕಾಶ
ಮುಂದಿನ ಫೆಬ್ರವರಿಯಿಂದ ಟ್ವಿಟರ್‌ನಲ್ಲಿ ಹಲವಾರು ಹೊಸ ಬದಲಾವಣೆಗಳು ನಡೆಯಲಿವೆ. ಮುಖ್ಯವಾಗಿ ಸುದೀರ್ಘವಾದ ಟ್ವೀಟ್ ಬರಹಗಳಿಗೂ ಅವಕಾಶ ಸಿಗಲಿದೆ. ಟ್ವಿಟರ್‌ನಲ್ಲಿ ಈಗ ಟ್ವೀಟ್ ಮಾಡುವಾಗ 280 ಪದಗಳ ಮಿತಿ ಇದೆ. ಆದರೆ ಫೆಬ್ರವರಿಯಿಂದ ಈ ಮಿತಿ ರದ್ದಾಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಕೇವಲ 12 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮಲಗಿದ್ದಾಗಲೇ ಕಾಡಿತು ಎದೆ ನೋವು
ಕೇವಲ ೧೨ ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ (Heart attack) ಪ್ರಾಣ ಕಳೆದುಕೊಂಡಿದ್ದಾನೆ. ಮನೆಯಲ್ಲಿ ಮಲಗಿದ್ದ ವೇಳೆ ಒಮ್ಮಿಂದೊಮ್ಮೆಗೇ ಎದೆನೋವು ಕಾಣಿಸಿಕೊಂಡಿದ್ದು, ನೋವಿನಿಂದ ನರಳಿ ಮಂಚದಿಂದ ಕೆಳಗೆ ಉರುಳಿ ಬಿದ್ದು ಮೃತಪಟ್ಟಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿಗಳು
1. ಅಮೆರಿಕದ ಸಿಂಗರ್ ಮನೆಯ ಬೆಕ್ಕು ಜಗತ್ತಿನ 3ನೇ ಶ್ರೀಮಂತ ಸಾಕುಪ್ರಾಣಿ! ಟಾಪ್ ೨ ಯಾವ ಪ್ರಾಣಿ?
೨. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪರ ಮತಯಾಚಿಸಿದ ಬಿಜೆಪಿ ಸಂಸದ ಜಿ.ಎಸ್.ಬಸವರಾಜು!
೩. ಜಯಲಲಿತಾ ಅವರನ್ನು ಕೊಂದಿದ್ದು ಮೋದಿ, ವಿವಾದ ಹುಟ್ಟುಹಾಕಿದ ಡಿಎಂಕೆ ಶಾಸಕ
೪. ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸರಕಾರಿ ನೌಕರನ ಬಂಧನ: ಮಕ್ಕಳಿಗೆ ಪುಸ್ತಕ ಹಂಚುತ್ತಿದ್ದ!
೫. Surendran K Pattel | ಕಾಸರಗೋಡಿನಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ ಈಗ ಅಮೆರಿಕದಲ್ಲಿ ಜಿಲ್ಲಾ ನ್ಯಾಯಾಧೀಶ
೬. ಮುಳುಗುತ್ತಿರುವ ಜೋಶಿಮಠ: ಕೇಂದ್ರ ಸಭೆ, ಸೋಮವಾರ ಅಧಿಕಾರಿಗಳ ಭೇಟಿ, ಇಲ್ಲಿದೆ ಸಮಗ್ರ ವರದಿ
೭. ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ
೮. ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ: ಸಿದ್ದರಾಮಯ್ಯ ಕಿಡಿ
೯. ಕೂಡಲ ಸಂಗಮ ತ್ರಿವೇಣಿ ಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಚಿತಾಭಸ್ಮ ವಿಲೀನ
೧೦. ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದವರು 18 ಗಂಟೆಯಲ್ಲಿ ಬಂಧನ