ವಿಸ್ತಾರ TOP 10 NEWS | ಸಕ್ಕರೆ ನಾಡಿಗೆ ತೆರಳಲಿರುವ ನುಡಿತೇರಿನಿಂದ, ಸ್ಯಾಂಟ್ರೊ ರವಿಯ ಇನ್ನಷ್ಟು ಪಾತಕಗಳವರೆಗೆ ಪ್ರಮುಖ ಸುದ್ದಿಗಳು - Vistara News

ಕನ್ನಡ ಸಾಹಿತ್ಯ ಸಮ್ಮೇಳನ

ವಿಸ್ತಾರ TOP 10 NEWS | ಸಕ್ಕರೆ ನಾಡಿಗೆ ತೆರಳಲಿರುವ ನುಡಿತೇರಿನಿಂದ, ಸ್ಯಾಂಟ್ರೊ ರವಿಯ ಇನ್ನಷ್ಟು ಪಾತಕಗಳವರೆಗೆ ಪ್ರಮುಖ ಸುದ್ದಿಗಳು

ವಿಸ್ತಾರ TOP 10 NEWS: ರಾಜ್ಯ, ದೇಶ, ಕ್ರಿಕೆಟ್‌, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಬೆಳವಣಿಗೆಗಳ ಪ್ರಮುಖ ಸುದ್ದಿ ತೋರಣ ಇಲ್ಲಿದೆ.

VISTARANEWS.COM


on

TOP 10
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡದ ನಾಡು ನುಡಿಯ ೮೬ನೇ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಮುಂದಿನ ಸಾಹಿತ್ಯ ಸಮ್ಮೇಳನಕ್ಕಾಗಿ ನುಡಿತೇರು ಸಕ್ಕರೆ ನಾಡಿಗೆ ತೆರಳಲಿದೆ. ವಿವಾದಿತ ಸ್ಯಾಂಟ್ರೊ ರವಿ ಗೃಹ ಸಚಿವರ ಮನೆಯಲ್ಲೇ ಕುಳಿತು ದುಡ್ಡು ಎಣಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮೇಲೆ ಹೊಸ ಹೊಸ ರೀತಿಯಲ್ಲಿ ಮುಗಿಬಿದ್ದ ಬಿಜೆಪಿ ಮತ್ತು ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶದ ಮೂಲಕ ಸೆಡ್ಡು ಹೊಡೆದ ಕಾಂಗ್ರೆಸ್‌ನ ಸವಾಲಿನ ಸುದ್ದಿ. ರಾಹುಲ್‌ ಗಾಂಧಿ ಅವರ ಚಳಿ ತಡೆಯುವ ರಹಸ್ಯ ಸ್ಫೋಟಗೊಂಡದ್ದು, ರಿಷಭ್‌ ಪಂತ್‌ ಅವರು ಐಪಿಎಲ್‌ ಆಡದಿದ್ದರೂ ೧೬ ಕೋಟಿ ರೂ. ಸಿಗುವುದರ ರಹಸ್ಯದೊಂದಿಗೆ, ೧೨ ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಆತಂಕದ ಘಟನೆ ಸಹಿತ ನಾನಾ ವಲಯಗಳ ಪ್ರಮುಖ ಸುದ್ದಿಗಳ ಗುಚ್ಛವಿದು ವಿಸ್ತಾರ TOP 10 NEWS.

1. ಏಲಕ್ಕಿ ನಾಡಿನಿಂದ ಸಕ್ಕರೆ ನಾಡಿಗೆ ಸವಿನುಡಿ ತೇರು: ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡುವೆಯೇ ಕಸಾಪ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೨. ಅನ್ಯ ಭಾಷೆ ಹೇರಬೇಡಿ, ಹೋರಾಟಗಾರರನ್ನು ಬಿಡುಗಡೆ ಮಾಡಿ: ನಾಡು-ನುಡಿಯ ಕುರಿತು 6 ನಿರ್ಣಯ
ಹಾವೇರಿ:
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಹಿಂದಿ ಹಾಗೂ ಇನ್ನಾವುದೇ ಭಾಷೆಯನ್ನು ಕನ್ನಡದ ಮೇಲೆ ಹೇರುವಂತಿಲ್ಲ ಎನ್ನುವ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಒಟ್ಟು ಆರು ನಿರ್ಣಯಗಳ ಕುರಿತು ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೀಲ್‌ ಪಾಂಡು ಮಾಹಿತಿ ನೀಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ವರದಿಗಳನ್ನೂ ಓದಿ
ಸಾಹಿತಿಗಳು ರಾಜಕೀಯ ಮಾಡಬೇಡಿ: ಮುಸ್ಲಿಂ ಪ್ರಾತಿನಿಧ್ಯದ ಕುರಿತು ಕಸಾಪಕ್ಕೆ ಬಿ.ಕೆ. ಹರಿಪ್ರಸಾದ್‌ ಬುದ್ಧಿಮಾತು
– ಒಡೆಯುವವರನ್ನು ತಿರಸ್ಕರಿಸಿ: ಹರಿಪ್ರಸಾದ್ ಮಾತಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ತಿರುಗೇಟು

೩. ಗೃಹ ಸಚಿವರ ಮನೆಯಲ್ಲೇ 15 ಲಕ್ಷ ರೂ. ಎಣಿಸಿದ ಸ್ಯಾಂಟ್ರೋ ರವಿ!
ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೊ ತೆಗೆದವರು ಯಾರು? ಅವರ ಮನೆಯಲ್ಲಿ ೧೫ ಲಕ್ಷ ಎಣಿಕೆ ಮಾಡಿದ್ದರ ಬಗ್ಗೆ ಅವರೇ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಪ್ರಭಾವ! ಯುವತಿಗೆ 1.83 ಲಕ್ಷ ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್!
ಸುಳ್ಳು ಕೇಸು ಹಾಕಿ ಪೊಲೀಸರು, ಅಧಿಕಾರಿಗಳನ್ನು ಕಾಡುತ್ತಿರುವ ಸ್ಯಾಂಟ್ರೋ ರವಿ, ಅದಕ್ಕೇ ಅವರಿಗೆ ಭಯ!

4. ಕಾಂಗ್ರೆಸ್-ಬಿಜೆಪಿ ನಡುವೆ ಥಟ್ ಅಂತ ಹೇಳಿ ಫೈಟ್; ಶಿಕ್ಷಕರ ನೇಮಕಾತಿ‌ ಅಕ್ರಮ V/S 40% ಕಮಿಷನ್‌ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಲ್ಕೇ ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ವಿವಿಧ ಸಮಾವೇಶಗಳು, ಯಾತ್ರೆಗಳು, ಸಭೆಗಳು ಸೇರಿದಂತೆ ಹಲವು ರೀತಿಯ ಚಟುವಟಿಕೆಯನ್ನು ಆಯೋಜನೆ ಮಾಡುತ್ತಿವೆ. ಈ ಮೂಲಕ ಮತದಾರರ ಮನ ಮುಟ್ಟುವ ತಂತ್ರಗಾರಿಕೆಗೆ ಮೊರೆಹೋಗಿವೆ. ಪೇಸಿಎಂ, ಕೆಸಿಸಿ (ಕಂಗಾಲ ಕಾಂಗ್ರೆಸ್‌ ಕಂಪನಿ)ಗಳಂತಹ ಅಭಿಯಾನಗಳ ಬಳಿಕ ಈಗ “ಥಟ್ ಅಂತ ಹೇಳಿ” ಅಭಿಯಾನವು ಕಾಂಗ್ರೆಸ್‌-ಬಿಜೆಪಿ ಮಧ್ಯೆ ಶುರುವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೫. ಅಂದಿನ ಟಿಪ್ಪು ಇಂದಿನ ಸಿದ್ದುವೇ? ಸಿದ್ದು ನಿಜ ಕನಸುಗಳು ಪುಸ್ತಕ ಸಿದ್ಧಪಡಿಸಿದ ಬಿಜೆಪಿ: ಜ. 9ಕ್ಕೆ ರಿಲೀಸ್‌ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಗೆಬಗೆಯ ಅಸ್ತ್ರ ಪ್ರಯೋಗ ಮಾಡುತ್ತಿರುವ ಬಿಜೆಪಿ (Siddaramaiah VS BJP) ಈಗ ಹೊಸದೊಂದು ಅಸ್ತ್ರ ರೆಡಿ ಮಾಡಿದೆ. ಅದುವೇ ಒಂದು ಪುಸ್ತಕ! ಟಿಪ್ಪು ನಿಜ ಕನಸುಗಳು ಮಾದರಿಯಲ್ಲಿ ʻಸಿದ್ದು ನಿಜ ಕನಸುಗಳುʼ! ಪುಸ್ತಕವನ್ನು ಬಿಜೆಪಿ ಸಿದ್ಧಪಡಿಸಿದ್ದು, ಸೋಮವಾರ ಅದರ ಬಿಡುಗಡೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. Rishabh Pant | ಐಪಿಎಲ್​ ಆಡದಿದ್ದರೂ ಪಂತ್​ಗೆ 16 ಕೋಟಿ ರೂ. ಸಿಗಲಿದೆ; ಇದು ಹೇಗೆ ಸಾಧ್ಯ?
ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್​ ಪಂತ್(Rishabh Pant)​ ಚೇತರಿಕೆಗೆ ಸುಮಾರು 9 ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಂತ್​ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್​ ಸರಣಿಯಿಂದ ದೂರ ಉಳಿಯುವುದು ಬಹುತೇಕ ಖಚಿತಗೊಂಡಂತಿದೆ. ‌ ಆದರೆ ಅವರಿಗೆ ೧೬ ಕೋಟಿ ರೂ. ಸಿಗಲಿದೆ. ಅದು ಹೇಗೆ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಚಳಿ ನಿಗ್ರಹಕ್ಕೆ ರಾಹುಲ್‌ ಟಿ ಶರ್ಟ್‌ ಒಳಗೆ ಥರ್ಮಲ್‌ ಉಡುಪು, ಕೈ-ಕಮಲ ಕೆಸರೆರಚಾಟ
ಬಿಜೆಪಿ ಹಾಗೂ ಕಾಂಗ್ರೆಸ್‌ ಇರುವುದೇ ಹಾಗೆ. ದೇಶ, ಧರ್ಮ, ಸೇನೆ, ಜಾತಿ, ಉಡುಪು, ಮಾಂಸಾಹಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಕೆಸರೆರಚಾಟ ಮಾಡಿದ್ದರೆ ಎರಡೂ ಪಕ್ಷಗಳಿಗೆ ಆಗುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚಳಿ ನಿಗ್ರಹಕ್ಕೆ ಟಿ-ಶರ್ಟ್‌ ಒಳಗೆ ಥರ್ಮಲ್‌ ಉಡುಪು ಧರಿಸಿದ್ದು ಕೂಡ ಎರಡೂ ಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಲು ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮. Actor Yash‌ birthday | ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು: ಯಶ್‌ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ!
ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್​ ಸಿನಿಮಾದ ನಾಯಕ ರಾಕಿಂಗ್‌ ಸ್ಟಾರ್‌ ಯಶ್‌ಗೆ ಜನವರಿ 8ರಂದು 37ನೇ ಜನುಮ ದಿನದ ಸಂಭ್ರಮ.​ ಅಭಿಮಾನಿಗಳಿಗೆ ಪತ್ರ ಬರೆದು ಪತ್ನಿ, ಮಕ್ಕಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್‌ಗೆ ದುಬೈಗೆ ಹಾರಿದ್ದಾರೆ ಯಶ್. ಯಶ್‌ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. Tweaks In Twitter | ಫೆಬ್ರವರಿಯಿಂದ ಟ್ವಿಟರ್‌ನಲ್ಲಿ 280 ಪದಗಳ ಮಿತಿ ರದ್ದು, ದೀರ್ಘ ಟ್ವೀಟ್‌ಗಳಿಗೆ ಅವಕಾಶ
ಮುಂದಿನ ಫೆಬ್ರವರಿಯಿಂದ ಟ್ವಿಟರ್‌ನಲ್ಲಿ ಹಲವಾರು ಹೊಸ ಬದಲಾವಣೆಗಳು ನಡೆಯಲಿವೆ. ಮುಖ್ಯವಾಗಿ ಸುದೀರ್ಘವಾದ ಟ್ವೀಟ್‌ ಬರಹಗಳಿಗೂ ಅವಕಾಶ ಸಿಗಲಿದೆ. ಟ್ವಿಟರ್‌ನಲ್ಲಿ ಈಗ ಟ್ವೀಟ್‌ ಮಾಡುವಾಗ 280 ಪದಗಳ ಮಿತಿ ಇದೆ. ಆದರೆ ಫೆಬ್ರವರಿಯಿಂದ ಈ ಮಿತಿ ರದ್ದಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕೇವಲ 12 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮಲಗಿದ್ದಾಗಲೇ ಕಾಡಿತು ಎದೆ ನೋವು
ಕೇವಲ ೧೨ ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ (Heart attack) ಪ್ರಾಣ ಕಳೆದುಕೊಂಡಿದ್ದಾನೆ. ಮನೆಯಲ್ಲಿ ಮಲಗಿದ್ದ ವೇಳೆ ಒಮ್ಮಿಂದೊಮ್ಮೆಗೇ ಎದೆನೋವು ಕಾಣಿಸಿಕೊಂಡಿದ್ದು, ನೋವಿನಿಂದ ನರಳಿ ಮಂಚದಿಂದ ಕೆಳಗೆ ಉರುಳಿ ಬಿದ್ದು ಮೃತಪಟ್ಟಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು
1. ಅಮೆರಿಕದ ಸಿಂಗರ್ ಮನೆಯ ಬೆಕ್ಕು ಜಗತ್ತಿನ 3ನೇ ಶ್ರೀಮಂತ ಸಾಕುಪ್ರಾಣಿ! ಟಾಪ್‌ ೨ ಯಾವ ಪ್ರಾಣಿ?
೨. ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಪರ ಮತಯಾಚಿಸಿದ ಬಿಜೆಪಿ ಸಂಸದ ಜಿ.ಎಸ್.ಬಸವರಾಜು!
೩. ಜಯಲಲಿತಾ ಅವರನ್ನು ಕೊಂದಿದ್ದು ಮೋದಿ, ವಿವಾದ ಹುಟ್ಟುಹಾಕಿದ ಡಿಎಂಕೆ ಶಾಸಕ
೪. ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸರಕಾರಿ ನೌಕರನ ಬಂಧನ: ಮಕ್ಕಳಿಗೆ ಪುಸ್ತಕ ಹಂಚುತ್ತಿದ್ದ!
೫. Surendran K Pattel | ಕಾಸರಗೋಡಿನಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ ಈಗ ಅಮೆರಿಕದಲ್ಲಿ ಜಿಲ್ಲಾ ನ್ಯಾಯಾಧೀಶ
೬. ಮುಳುಗುತ್ತಿರುವ ಜೋಶಿಮಠ: ಕೇಂದ್ರ ಸಭೆ, ಸೋಮವಾರ ಅಧಿಕಾರಿಗಳ ಭೇಟಿ, ಇಲ್ಲಿದೆ ಸಮಗ್ರ ವರದಿ
೭. ಪರಿಶಿಷ್ಟರ ಕೈಗೆ ಹಣ ಸಿಗಬಾರದು ಎಂದು ಬಿಜೆಪಿ ಮೀಸಲಾತಿ ತಪ್ಪಿಸಿದೆ: ಮಲ್ಲಿಕಾರ್ಜುನ ಖರ್ಗೆ
೮. ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಸಂವಿಧಾನ ಬಾಹಿರ: ಸಿದ್ದರಾಮಯ್ಯ ಕಿಡಿ
೯. ಕೂಡಲ ಸಂಗಮ ತ್ರಿವೇಣಿ ಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಚಿತಾಭಸ್ಮ ವಿಲೀನ
೧೦. ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದವರು 18 ಗಂಟೆಯಲ್ಲಿ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kannada Sahitya Sammelana: ಡಿಸೆಂಬರ್‌ 20, 21, 22ರಂದು ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Kannada Sahitya Sammelana: ಈ ಹಿಂದೆ ಜೂನ್‌ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್‌ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.

VISTARANEWS.COM


on

mandya kannada sahitya sammelana
Koo

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Kannada Sahitya Sammelana) ಮಂಡ್ಯದಲ್ಲಿ ಡಿಸೆಂಬರ್‌ 20, 21, 22ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಈ ಹಿಂದೆ ಜೂನ್‌ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್‌ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ, ಹೊರರಾಜ್ಯ ಹಾಗೂ ವಿದೇಶದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಸರ್ಕಾರ ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಯಾದ ಕೂಡಲೇ ಮಾಹಿತಿ ನೀಡಲಾಗುವುದು. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿನವರು ಸಾಹಿತಿಗಳ ಪಟ್ಟಿ ಒದಗಿಸಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮಗೊಳಿಸಲು ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಂಡ್ಯದಲ್ಲಿ 48ನೇ ಸಾಹಿತ್ಯ ಸಮ್ಮೇಳನ 1974ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ, 63ನೇ ಸಾಹಿತ್ಯ ಸಮ್ಮೇಳನ 1994ರಲ್ಲಿ ಡಾ. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರನೇ ಬಾರಿ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ಅಯೋಜಿಸುವ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್‌ ಅಹ್ಮದ್‌, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್‌ ಜೋಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ವರ್ಷ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳ ನಡೆದಿತ್ತು. 2023ರ ಜನವರಿ 6, 7, 8ರಂದು ಸಾಹಿತ್ಯ ಸಮ್ಮೇಳನ ಕವಿ ದೊಡ್ಡರಂಗೇಗೌಡರ ಅಧ್ಯಕ್ಷತೆಯನ್ನು ನಡೆದಿತ್ತು.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ | ಬೆಟ್ಟದಂತೆ ಬಂದ ಜನ. ಮುಗಿಯಿತೇ ಸಮ್ಮಿಲನ?

Continue Reading

ಕನ್ನಡ ಸಾಹಿತ್ಯ ಸಮ್ಮೇಳನ

Sahitya Sammelana: ಮಾ.20 ರಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ವಿ.ಗಣೇಶ್ ಅಧ್ಯಕ್ಷತೆ

Sahitya Sammelana: ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಹಾಲಪ್ಪ ಅವರು ಉದ್ಘಾಟಿಸಲಿದ್ದಾರೆ.

VISTARANEWS.COM


on

V Ganesh writer Sahitya Sammelana sagara
ಹಿರಿಯ ಸಾಹಿತಿ ವಿ.ಗಣೇಶ್.
Koo

ಸಾಗರ: ಇಲ್ಲಿನ ಶಿವಪ್ಪ ನಾಯಕ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Sahitya Sammelana) ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಾ. 20ರಂದು ಬೆಳಗ್ಗೆ 9 ರಿಂದ ಆಯೋಜಿಸಲಾಗಿದೆ.

ಬೆಳಗ್ಗೆ 8.45ಕ್ಕೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ರಾಷ್ಟ್ರ ಧ್ವಜಾರೋಹಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ ನಾಡ ಧ್ವಜವನ್ನು ಹಾಗೂ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನಾಡ ಧ್ಜಜಾರೋಹಣ ನೆರವೇರಿಸುವರು.

ಬೆಳಗ್ಗೆ 9ಕ್ಕೆ ಶಿವಪ್ಪ ನಾಯಕ ನಗರ ಆಶ್ರಮ ಶಾಲೆಯಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಆಯೋಜಿಸಿದ್ದು ಬಿಇಒ ಯಮನೂರಪ್ಪ, ನಗರಸಭೆ ಸದಸ್ಯರಾದ ಸವಿತಾವಾಸು, ಮಧುಮಾಲತಿ, ಉಮೇಶ್ ಎ, ಸಬೀನಾ ತನ್ವೀರ್, ಬಿ.ಎಚ್.ಲಿಂಗರಾಜ್, ಗಜೇಂದ್ರ, ಡಿ.ಕೆ.ಮೋಳೆ ಮೊದಲಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಪೂರ್ತಿಯಾಗಿ ಮಾಡಿದ್ರಾ ರಿಷಬ್‌?ವಿಡಿಯೊದಲ್ಲಿ ಏನಿದೆ?

ಬೆಳಗ್ಗೆ 10ಕ್ಕೆ ಶಾಸಕ ಎಚ್. ಹರತಾಳು ಹಾಲಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ನಾ.ಡಿಸೋಜ ದಿಕ್ಸೂಚಿ ಮಾತುಗಳನ್ನಾಡುವರು. ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೋಹನ್ ಮೂರ್ತಿ, ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಜಿ, ಪ್ರಮುಖರಾದ ಬಿ.ಆರ್.ಜಯಂತ್, ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ವಿಜಯ ಕುಮಾರ್ ವಿ.ಕೆ, ಮೊದಲಾದವರು ಉಪಸ್ಥಿತರಿರುವರು.

ಬೆಳಗ್ಗೆ 11.45 ಕ್ಕೆ ವರ್ತಮಾನದ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಕೆ.ಎನ್.ವೆಂಕಟಗಿರಿ ವಹಿಸಲಿದ್ದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಆರಡಿ ಮಲ್ಲಯ್ಯ ಕಟ್ಟೇರ ವಿಷಯ ಮಂಡಿಸಲಿದ್ದಾರೆ. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ಲಕ್ಷ್ಮಣ್ ಸಾಗರ್, ರವಿರಾಜ್ ಮಂಡಗಳಲೆ, ರಾಮಚಂದ್ರ ಸಾಗರ್, ಸಫ್ರಾಜ್ ಚಂದ್ರಗುತ್ತಿ, ಡಾ.ಕೆಳದಿ ವೆಂಕಟೇಶ್ ಜೋಯಿಸ್, ಸತೀಶ್ ಕೆ. ಉಪಸ್ಥಿತರಿರುವರು. ಮಧ್ಯಾಹ್ನ 12.45ರಿಂದ ನಡೆಯುವ ಎರಡನೇ ಗೋಷ್ಠಿ ರಾಜಕೀಯ ಮತ್ತು ಮಹಿಳಾ ಪ್ರಾತಿನಿಧ್ಯ ಗೋಷ್ಠಿ ಅಧ್ಯಕ್ಷತೆಯನ್ನು ಹೆಸರಾಂತ ವೈದ್ಯೆ ಡಾ.ರಾಜನಂದಿನಿ ಕಾಗೋಡು ವಹಿಸಲಿದ್ದು ಸಾಹಿತಿ ಹಾಗೂ ಉಪನ್ಯಾಸಕಿ ಡಾ. ವಸುಮತಿ ಗೌಡ ವಿಷಯ ಮಂಡಿಸುವರು. ವೇದಿಕೆಯಲ್ಲಿ ಎನ್.ಲಲಿತಮ್ಮ, ಶರಾವತಿ ಸಿ.ರಾವ್, ರೋಹಿಣಿ ಶರ್ಮ, ಚೂಡಾಮಣಿ ರಾಮಚಂದ್ರ, ಸುಮಂಗಲ ರಾಮಕೃಷ್ಣ, ವೀಣಾ ನಾಯ್ಡು, ಕಸ್ತೂರಿ ಸಾಗರ್, ನಾದಿರ ಪರ್ವಿನ್ ಉಪಸ್ಥಿತರಿರುವರು.

ಮಧ್ಯಾಹ್ನ 2.15ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬ್ರಯ್ಯ ಮಠ ವಹಿಸಲಿದ್ದು, ಸಾಹಿತಿ ಡಾ.ಗುರುದತ್ತ ಶಿವಮೊಗ್ಗ ಇವರು ವಿಷಯ ಮಂಡಿಸಲಿದ್ದಾರೆ. ಗೋಷ್ಠಿಯಲ್ಲಿ ಕೃಷ್ಣಯ್ಯ, ತಿಮ್ಮಪ್ಪ ಕಲಸಿ, ಪ್ರೊ.ಮಹಾಬಲೇಶ್ವರ, ಶಕುಂತಲ ಹಿರೇಮಠ, ಈಳಿ ಶ್ರೀಧರ್, ಎಸ್.ಬಿ.ಮಹಾದೇವ್, ಬಿ.ಜಿ.ಮಂಜಪ್ಪ, ಮ.ಸ.ನಂಜುಂಡಸ್ವಾಮಿ, ದಿನೇಶ್ ಶಿರವಾಳ, ರಮೇಶ್ ಕೆಳದಿ, ಸತ್ಯನಾರಾಯಣ ಖಂಡಿಕಾ, ಬಿ.ಡಿ.ರವಿಕುಮಾರ್ ಉಪಸ್ಥಿತರಿರುವರು.

ಮಧ್ಯಾಹ್ನ 3ಕ್ಕೆ ನಡೆಯುವ ಕಾವ್ಯ ಕಲರವ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ವಹಿಸಲಿದ್ದು, ಗೋಷ್ಠಿಯಲ್ಲಿ ಕುಸುಮ ಸುಬ್ಬಣ್ಣ, ಶಂಕರ್ ಅಳ್ವಿಕೋಡು, ತಸ್ರಿಫ್ ಇಬ್ರಾಹಿಂ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಭಾಗೀರಥಿ, ಚಂದ್ರಶೇಖರ್ ಸಿರಿವಂತೆ, ಯೋಗೀಶ್ ಭಟ್, ಚಂದ್ರಮೌಳಿ, ವಿಷ್ಣುಮೂರ್ತಿ, ಆನಂದಪುರ, ಪಾಲಾಕ್ಷಪ್ಪ ಎಸ್.ಎನ್, ಗವಿಯಪ್ಪ ಎಲ್.ಟಿ., ಜಗನ್ನಾಥ ಕೆ, ಗಜಾನನ, ಡಾ.ಅನ್ನಪೂರ್ಣ, ಅರ್ಚನ ಪ್ರಸನ್ನ, ಅವಿನಾಶ್ ಜಿ, ಗಾರ್ಗಿ ಬಂದಗದ್ದೆ, ಭದ್ರಪ್ಪ ಗೌಡ, ವೆಂಕಟೇಶ್ ಸಂಪ, ಕವನ ವಾಚಿಸಲಿದ್ದಾರೆ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಕೋದಂಡ ಸಾಗರ್, ದೀಪಕ್ ಸಾಗರ್, ಸಹನಾ ಜಿ ಭಟ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: World Sleep Day : ಉದ್ಯೋಗಿಗಳಿಗೆ ಸಾವಕಾಶ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಫ್ಟ್

ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದು ಶಾಸಕರಾದ ಎಚ್. ಹರತಾಳು ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದು ಸಂಸದರಾದ ಬಿ.ವೈ.ರಾಘವೇಂದ್ರ, ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಸಾಧಕರನ್ನು ಸನ್ಮಾನಿಸುವರು, ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ಪ್ರಮುಖರಾದ ಅಶ್ವಿನಿ ಕುಮಾರ್, ಟಿ.ಡಿ.ಮೇಘರಾಜ್, ಐ.ಎನ್.ಸುರೇಶ್ ಬಾಬು, ಶ್ರೀನಿವಾಸ್ ಆರ್, ಟಿ.ವಿ.ಪಾಂಡುರಂಗ ಉಪಸ್ಥಿತರಿರುವರು, ಡಾ.ಎಚ್.ಎಸ್.ಮೋಹನ್-ಸಾಹಿತ್ಯ, ಮುನಾಫ್ ಶ್ರೀಧರನಗರ-ಕಾಯಕ, ಗಣಪತಿಯಪ್ಪ ಜಂಬೂರು ಮನೆ-ಕೃಷಿ, ಅಬಸೆ ದಿನೇಶ್ ಕುಮಾರ್ ಜೋಷಿ-ಸಮಾಜಸೇವೆ, ಎಂ.ಎಸ್.ಗೌಡರು —ಕಾನೂನು, ಫ್ರಾನ್ಸಿಸ್ ಪಿಯೂಸ್ ಫರ್ನಾಂಡಿಸ್-ಸಾಂಸ್ಕೃತಿಕ, ಡಿ.ಎಂ.ಗಜಾನನ-ಕಲೆ, ಮಂಜಣ್ಣ-ಶ್ರಮಜೀವಿ, ಸಾವಿತ್ರಿ-ಮಹಿಳಾ ಕ್ಷೇತ್ರ, ರೋಟರಿ ರಕ್ತನಿಧಿ-ಸಂಘ ಸಂಸ್ಥೆ, ಸರ್ಕಾರಿ ಉರ್ದು ಪ್ರೌಢಶಾಲೆ-ಶಿಕ್ಷಣ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.

ಇದನ್ನೂ ಓದಿ: Shakib Al Hasan: ಜುವೆಲ್ಲರಿ ಶಾಪ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ​; ವಿಡಿಯೊ ವೈರಲ್

ಸಂಜೆ 5.30ಕ್ಕೆ ಕ.ಸಾ.ಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಾಹಿತಿ ಹಾಗೂ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶುಭಾ ಮರವಂತೆ ಸಮಾರೋಪ ನುಡಿಗಳನ್ನಾಡುವರು. ವೇದಿಕೆಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ. ದಿವಾಕರ್, ಪೌರಾಯುಕ್ತ ಸಿ.ಚಂದ್ರಪ್ಪ, ಹೆಚ್.ಕೆ.ನಾಗಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹಿತಕರ್ ಜೈನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜನಾರ್ಧನ ಪೂಜಾರಿ ಮೊದಲಾದವರು ಉಪಸ್ಥಿತರಿರುವರು.

ಸಮ್ಮೇಳನಾಧ್ಯಕ್ಷರ ಪರಿಚಯ

ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಾ. 20 ರಂದು ಆಯೋಜಸಿರುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ವಿ.ಗಣೇಶ್ ಅವರು ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್‌; ಪೊಲೀಸರಿಂದ ಭರ್ಜರಿ ಗಿಫ್ಟ್‌!

ಸಾಗರದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ಸಹಸ್ರಾರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್ ಎರಡನ್ನೂ ಬೋಧಿಸುತ್ತಾ ಮೆಚ್ಚಿನ ಶಿಕ್ಷಕರಾಗಿ ಅವರ ಬದುಕನ್ನು ಬೆಳಗುವುದರಲ್ಲಿ ಸಹಕಾರಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಕಾಲೇಜನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನಿವೃತ್ತಿ ನಂತರ ನಿಂತ ನೀರಾಗದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಪಾಂಡಿತ್ಯವನ್ನು ಹೊಂದಿರುವ ಗಣೇಶ್‍ ಅವರು ಎರಡೂ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವನ, ಅನುವಾದ ಮುಂತಾದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಹೆಚ್ಚಿನ ಕೃತಿ ರಚನೆ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿರುವ ವಿ.ಗಣೇಶ್, ಸುಗಮ ಸಂಗೀತ ಪರಿಷತ್, ಸಿರಿಗನ್ನಡ ವೇದಿಕೆ, ಸ್ಮಾರ್ತ ಬ್ರಾಹ್ಮಣ ಒಕ್ಕೂಟ, ಎಸ್.ವಿ.ಪಿ. ಕಾಲೋನಿ ರಾಮ ಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸುಮ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಗರದ ಶ್ರೀ ಶೃಂಗೇರಿ ಶಂಕರ ಮಠ, ನಿವೃತ್ತ ನೌಕರರ ಸಂಘ, ರಾಷ್ಟ್ರೋತ್ತಾನ ಪರಿಷತ್ತು, ಹೊಸಪೇಟೆಯ ಶಂಕರ ಸಾಹಿತ್ಯ ಪರಿಷತ್ತು,, ಜನ್ ಜೀವನ್ ಜಾಗೃತ್ ವೇದಿಕೆ ಮುಂತಾದ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ. ಇತ್ತೀಚೆಗೆ ಶಿಕಾರಿಪುರದ ಹಳೆಯ ವಿದ್ಯಾರ್ಥಿಗಳ ಸಂಘವು ಶ್ರೀಯುತರನ್ನು ಗೌರವಿಸಿ ಪ್ರಸನ್ನವದನ ಪ್ರಥಿತರು ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿರುತ್ತಾರೆ.

ಪತ್ನಿ ನಿರ್ಮಲಾ ಅವರೊಂದಿಗೆ ಸಾಗರದಲ್ಲಿ ವಾಸವಾಗಿರುವ ಗಣೇಶ್ ಅವರಿಗೆ ಸಾಫ್ಟ್ ವೇರ್ ಎಂಜಿನಿಯುರುಗಳಾಗಿ ಕೆಲಸ ಮಾಡುತ್ತಿರುವ ಆಕಾಶ್ ಮತ್ತು ಅವಿನಾಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆಕಾಶ್ ಕೆನಡಾದಲ್ಲಿದ್ದರೆ, ಅವಿನಾಶ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಗಣೇಶ್ ಅವರ ಇಬ್ಬರು ಮಕ್ಕಳೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌!

Continue Reading

ಕನ್ನಡ ಸಾಹಿತ್ಯ ಸಮ್ಮೇಳನ

ಕಸಾಪ ಸದಸ್ಯತ್ವದಿಂದ ಡಿಡಿ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಯಲಿಗಾರ್‌ ಅಮಾನತು, ಪ್ರಶಸ್ತಿ ವಾಪಸ್‌

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡೀಸೆಲ್‌ ವ್ಯವಸ್ಥೆ ಮಾಡಿಕೊಡದ್ದನ್ನು ಆಕ್ಷೇಪಿಸುವ ವೇಳೆ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಿರ್ಮಲಾ ಸಿ ಯಲಿಗಾರ್‌ ಅವರನ್ನು ಸಂಸ್ಥೆಯ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

VISTARANEWS.COM


on

Nirmala C yaligar
Koo

ಬೆಂಗಳೂರು: ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿಯಾಗಿರುವ ನಿರ್ಮಲಾ ಸಿ. ಯಲಿಗಾರ್ʼ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಮತ್ತು ಅವರಿಗೆ ಪ್ರಕಟಿಸಲಾಗಿದ್ದ ಶ್ರೀಮತಿ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯ ಆಯ್ಕೆಯನ್ನು ಹಿಂಪಡೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಸಂಬದ್ಧವಾಗಿ ನಡೆದುಕೊಂಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್‌ ವಿರುದ್ಧ ಮೌನಾಚರಣೆಯ ಪ್ರತಿಭಟನೆ ದಾಖಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಹಿತ್ಯ ಪರಿಷತ್‌ನ ಮಾಧ್ಯಮ ಸಲಹೆಗಾರರಾದ ಶ್ರೀನಾಥ್‌ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ಮಲಾ ಸಿ. ಯಲಿಗಾರ್‌ ಮೇಲಿನ ಆರೋಪವೇನು?

1. ಈ ವರ್ಷದ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ನಿರ್ಮಲಾ ಸಿ. ಯಲಿಗಾರ್‌ ಅವರು ತಮ್ಮ 31 ಸಿಬ್ಬಂದಿಗಳಿಗೆ ವಸತಿ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ 65/35 ಕೆವಿಎ ಡಿಸೇಲ್ ಜನರೇಟರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಿಲ್ಲ, ಎಂಬ ಕಾರಣಕ್ಕಾಗಿ ಜನವರಿ 6ರಂದು ಮಾಧ್ಯಮಗಳ ಎದುರು ಹಾಗೂ ಜನಸಾಮಾನ್ಯರ ಎದುರು ಅಸಂಬದ್ಧವಾಗಿ ಮಾತನಾಡಿದ್ದರು.

2. ನಿರ್ಮಲಾ ಸಿ. ಯಲಿಗಾರ್‌ ಅವರು ಜನವರಿ 8ರಂದು ದೂರದರ್ಶನ ಕೇಂದ್ರದಲ್ಲಿ ಸಾಹಿತ್ಯ ಪರಿಷತ್‌ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದಾರೆ. ಮತ್ತು ಇದನ್ನು ಸಾಮಾಜಿಕ ಜಾಲ ತಾಣದಲ್ಲೂ ಪ್ರಕಟಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಆಕ್ಷೇಪವೇನು?

1. ಕನ್ನಡ ಸಾಹಿತ್ಯ ಪರಿಷತ್‌ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಮಾಡಿದ ಅಪಮಾನ.
2. ಈ ರೀತಿ ಮೌನಾಚರಣೆ ಮಾಡುವುದು ಯಾರಾದರು ಮೃತ ಹೊಂದಿದ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ಮೃತ ಹೊಂದುವ ಸಂಸ್ಥೆಯಲ್ಲ. ಸೂರ್ಯ ಚಂದ್ರರಿರುವವರೆಗೂ ಹಾಗೂ ಕನ್ನಡಿಗರು ಈ ಭೂಮಿಯಲ್ಲಿ ಇರುವವರೆಗೂ ಪರಿಷತ್ತು ಜೀವಂತವಾಗಿರುವ ಸಂಸ್ಥೆ.
3. ನಿರ್ಮಲಾ ಯಲಿಗಾರ್‌ ಅವರಿಗೆ ಫೆಬ್ರವರಿ 7ರಂದು ನೀಡಿದ್ದ ಕಾನೂನು ತಿಳುವಳಿಕೆ ಪತ್ರಕ್ಕೆ 15 ದಿನದಲ್ಲು ವಿವರಣೆ ಕೋರಿದ್ದರೂ ಅದನ್ನು ನೀಡಿಲ್ಲ. ಹೀಗಾಗಿ ಅವರನ್ನು ಸದಸ್ಯತ್ವದಿಂದ ವಜಾ ಮಾಡಲಾಗಿದೆ.

ಪಂಕಶ್ರೀ ಸಾಹಿತ್ಯ ಪ್ರಶಸ್ತಿ ವಾಪಸ್‌

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್‌ 6ರಂದು ಪರಿಷತ್‌ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಮಲಾ ಸಿ. ಯಲಿಗಾರ್‌ ಅವರಿಗೆ ನೀಡಿದ ʻಶ್ರೀಮತಿ ಪಂಕಜಶ್ರೀ ಸಾಹಿತ್ಯ ಪ್ರಶಸ್ತಿʼ ಆಯ್ಕೆಯನ್ನು ಹಿಂಪಡೆಯಲು ನಿರ್ಧರಿಸಲಾಯಿತು.

ಇದನ್ನೂ ಓದಿ : BKS Varma Death | ಬಿ.ಕೆ.ಎಸ್‌. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು

Continue Reading

ಕನ್ನಡ ಸಾಹಿತ್ಯ ಸಮ್ಮೇಳನ

Sahitya Sammelana: ಜಾತಿ, ಧರ್ಮ ಮೀರಿರುವುದೇ ಸಾಹಿತ್ಯ: ಎಸ್.ಜಿ. ಸಿದ್ದರಾಮಯ್ಯ

Sahitya Sammelana: ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ‌ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

sahitya sammelana shivamogga
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು.
Koo

ಶಿವಮೊಗ್ಗ: ಸಾಹಿತ್ಯವೆಂಬುದು (Sahitya Sammelana) ಜಾತಿ ಧರ್ಮಗಳನ್ನು ಮೀರಿದೆ. ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್‌ಸ್ಟಾಯ್ ತಮ್ಮ ಸಾಹಿತ್ಯದ‌ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ‌. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆ ಮೂಡಿಸಿದರು ಎಂದರು.

ಇದನ್ನೂ ಓದಿ: Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್‌

ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವು ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ‌ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಗಳ ಅವಶ್ಯಕತೆಯಿದೆ. ಗಂಭೀರವಾದ ವಿಚಾರಗಳ ಚರ್ಚೆ ಸಾಹಿತ್ಯ ಸಮ್ಮೇಳನದ ಘನತೆ ಹೆಚ್ಚಿಸಿದೆ. ಅಧ್ಯಾಪಕರು ಶಿಕ್ಷಣದ ಬಗ್ಗೆ ಚರ್ಚಿಸುವ ಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಭಾಯಿಸಬೇಕಾದ ಕೌಶಲ್ಯತೆ ರೂಢಿಸಿಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನದ ಚರ್ಚಿತ ವಿಚಾರಗಳನ್ನು ಕನ್ನಡದ ಮನಸ್ಸುಗಳು ಆತ್ಮಾವಲೋಕನ ನಡೆಸಬೇಕಿದೆ ಎಂದು ಹೇಳಿದರು‌.

ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಮಾತನಾಡಿ, ಸಾಹಿತ್ಯ ಸಮ್ಮೇಳನ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾರಸ್ವತ ಲೋಕದಿಂದ ಅನೇಕ ಗೌರವ ಪಡೆಯುವಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

ಮುಖ್ಯ ಅತಿಥಿ ಅರಣ್ಯ ಇಲಾಖೆ‌ಯ ನೌಕರರ ಮಹಾಮಂಡಲದ‌ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು. ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ತಾ.ಮ.ನರಸಿಂಹ, ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Continue Reading
Advertisement
Nitin Gadkari
ದೇಶ22 mins ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್34 mins ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ39 mins ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest53 mins ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ1 hour ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest2 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ2 hours ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Viral Video
Latest2 hours ago

Viral Video: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

Arvind Kejriwal
ದೇಶ2 hours ago

Arvind Kejriwal: ಅರೆಸ್ಟ್‌ ಬೆನ್ನಲ್ಲೇ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಜ್ರಿವಾಲ್‌

Actor Darshan Full aggressive mode while he drunk
ಸ್ಯಾಂಡಲ್ ವುಡ್2 hours ago

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌