Site icon Vistara News

ವಿಸ್ತಾರ TOP 10 NEWS : ಬೀದಿಗೆ ಬಂದ ಅಕ್ಕಿಕಾಳಗ, ವಿಶ್ವಸಂಸ್ಥೆಯಲ್ಲಿ ಮೋದಿ ಯೋಗ.. ಹೀಗೆ ಪ್ರಮುಖ ಸುದ್ದಿಗಳು

Vistara Top 10

#image_title

1.ಬೀದಿಗೆ ಬಂತು ಅಕ್ಕಿ ಜಗಳ: ಕೇಂದ್ರದ ವಿರುದ್ಧ ಜೂ.20ರಂದು ಕೈಪಡೆ ಹೋರಾಟ, ಎದುರಿಸಲು ಕಮಲಪಡೆ ರೆಡಿ
ಅನ್ನ ಭಾಗ್ಯ ಅಕ್ಕಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಗಳ ಬೀದಿಗೆ ಬಂದಿದೆ. ಅಕ್ಕಿಗೆ ಕೊಕ್ಕೆ ಹಾಕುವ ಕೇಂದ್ರದ ಕ್ರಮದ ವಿರುದ್ಧ ಜೂನ್‌ 20ರಂದು ಕಾಂಗ್ರೆಸ್‌ ಜಿಲ್ಲಾ ಮಟ್ಟದಲ್ಲಿ ಹೋರಾಟ ಸಂಘಟಿಸಲು ಮುಂದಾಗಿದ್ದರೆ, ಇದನ್ನು ಎದುರಿಸಲು ಬಿಜೆಪಿಯೂ ಅಣಿಯಾಗುತ್ತಿದೆ.
ಪೂರ್ಣ ವರದಿಗಳಿಗೆ ಈ ಎರಡು ವರದಿಗಳನ್ನು ಓದಿ
1. Karnataka Politics : ಅಕ್ಕಿ ಕೊಡದ ಕೇಂದ್ರದ ವಿರುದ್ಧ ಜೂ. 20ರಂದು ಕಾಂಗ್ರೆಸ್‌ ಉಗ್ರ ಹೋರಾಟ
2. ಕರ್ನಾಟಕ ಮಿನಿ ಪಾಕಿಸ್ತಾನ ಆದೀತು, ರಾಜ್ಯ ಒಂದೇ ವರ್ಷದಲ್ಲಿ ದಿವಾಳಿ; ಬಿಜೆಪಿ ಎಚ್ಚರಿಕೆ

2. ಮತಾಂತರ ನಿಷೇಧ ಕಾಯ್ದೆ ರದ್ದತಿಗೆ ಭುಗಿಲೆದ್ದ ಆಕ್ರೋಶ: ಹಲವೆಡೆ ಹಿಂದೂ ಸಂಘಟನೆಗಳ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರ ಬಂದನಂತರ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಗಳನ್ನು ರದ್ದು ಮಾಡಲು ಮುಂದಾಗಿದೆ. ಅದರಲ್ಲಿ ಮತಾಂತರ ನಿಷೇಧ ಕಾಯ್ದೆಯೂ ಒಂದು. ಹೀಗಾಗಿ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಹಿಂದುಪರ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಗ್ಯಾರಂಟಿಗಳಿಗೆ ಗ್ರಹಣ : ಜುಲೈ ತಿಂಗಳಲ್ಲಿ ಅಕ್ಕಿ ಸಿಗಲ್ಲ; ಗೃಹ ಲಕ್ಷ್ಮಿ, ಗೃಹಜ್ಯೋತಿಯೂ ವಿಳಂಬ
ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯಿಂದ ಘೋಷಿಸಿರುವ ಪಂಚ ಯೋಜನೆಗಳ (ಪೈಕಿ ಸದ್ಯಕ್ಕೆ ಜಾರಿಯಾಗಿರುವುದು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಸ್ಕೀಂ ಒಂದೇ. ಉಳಿದ ಯೋಜನೆಗಳ ಜಾರಿಗೆ ಹಲವು ಎಡರುತೊಡರುಗಳು ಎದುರಾಗಿದ್ದು, ಇವೆಲ್ಲವೂ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಜುಲೈ ತಿಂಗಳಿನಿಂದಲೇ ನೀಡಲಾಗುತ್ತದೆ ಎಂದು ಘೋಷಿಸಿರುವ ಅನ್ನ ಭಾಗ್ಯವೂ ಜಾರಿಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಬಿಜೆಪಿಯ ಒಳಬೇಗುದಿ ಮತ್ತೊಮ್ಮೆ ಸ್ಫೋಟ- ಬೊಮ್ಮಾಯಿ ವಿರುದ್ಧ ಪ್ರತಾಪ್‌ಸಿಂಹ ನೇರ ವಾಗ್ದಾಳಿ
ಕೆಲವು ದಿನಗಳ ಹಿಂದೆ ಹೊಂದಾಣಿಕೆ ರಾಜಕೀಯದಿಂದ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು ಎಂದು ನೇರ ಆರೋಪ ಮಾಡಿದ್ದ ಮೈಸೂರು ಸಂಸದ ಪ್ರತಾಪ್‌ಸಿಂಹ ಇದೀಗ ಮತ್ತೊಮ್ಮೆ ತಮ್ಮ ಪ್ರತಾಪ ತೋರಿಸಿದ್ದಾರೆ. ಈ ಬಾರಿ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ನೇರವಾಗಿ ಟಾರ್ಗೆಟ್‌ ಮಾಡಿ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಕಲಬುರಗಿಯಲ್ಲಿ ಮರಳು ಮಾಫಿಯಾಗೆ ಕಾನ್ಸ್‌ಟೇಬಲ್‌ ಬಲಿ: ರಾತ್ರೋರಾತ್ರಿ ಟ್ರ್ಯಾಕ್ಟರ್‌ ಹರಿಸಿ ಪರಾರಿ
ಅಫಜಲಪುರ ತಾಲೂಕಿನ ನಾರಾಯಣಪುರ ಬಳಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಯೂರ ಚವ್ಹಾಣ್‌ (51) ಮೃತ ದುರ್ದೈವಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಬಿಪರ್‌ಜಾಯ್‌ ಅಬ್ಬರಕ್ಕೆ ತತ್ತರಿಸಿದ ಗುಜರಾತ್‌: ಇಬ್ಬರ ಸಾವು, ಭಾರಿ ನಾಶ-ನಷ್ಟ
ಪಾಕಿಸ್ತಾನದ ಕರಾಚಿ ಮೂಲಕ ಗುಜರಾತ್‌ ಕರಾವಳಿಗೆ ಅಪ್ಪಳಿಸಿದ ಬಿಪರ್‌ಜಾಯ್‌ ಚಂಡಮಾರುತವು (Cyclone Biparjoy) ಅವಾಂತರ ಸೃಷ್ಟಿಸಿದೆ. ಗುಜರಾತ್‌ನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಭಾವನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ತಂದೆ-ಮಗ ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಮೇಕೆಗಳನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಮಗ ಮೃತಪಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಕರಾವಳಿಯಲ್ಲಿ ಮುಂದುವರಿದ ಮಳೆಯಾಟ, ಒಳನಾಡಿನಲ್ಲಿ ಕೊಂಚ ಬ್ರೇಕ್‌

7. ಜೂ.21ರಂದು ವಿಶ್ವಸಂಸ್ಥೆಯಲ್ಲಿ ಮೋದಿ ಯೋಗಾಯೋಗ- ಭಾರತಕ್ಕೆ ಒಲಿದ ಯೋಗದಿನಾಚರಣೆ ನೇತೃತ್ವ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ‘ಯೋಗ’ಕ್ಕೆ ಒಳ್ಳೆಯ ಯೋಗ ಬಂದಿದೆ. ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿಯೇ ಪ್ರತಿ ವರ್ಷ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನ (Yoga Day 2023) ಆಚರಿಸಲಾಗುತ್ತದೆ. ಹೀಗೆ, ಜಗತ್ತಿಗೇ ಯೋಗವನ್ನು ಪರಿಚಯಿಸಿದ ಭಾರತಕ್ಕೆ ಮತ್ತೊಂದು ಗರಿ ಮೂಡಿದೆ. ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಯೋಗಾಭ್ಯಾಸ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಮಂಡ್ಯದಲ್ಲಿ ಅಂಬರೀಷ್‌ ಮಗ ಪುತ್ರ ಅಭಿಷೇಕ್‌- ಅವಿವಾ ಮದುವೆಯ ಭರ್ಜರಿ ಬೀಗರೂಟ
ಖ್ಯಾತ ನಟ ದಿ. ಅಂಬರೀಷ್‌ ಮತ್ತು ಸಂಸದೆ ಸುಮಲತಾ ದಂಪತಿಯ ಪುತ್ರ ಅಭಿಷೇಕ್‌ ಅವರ ವಿವಾಹ ಸಂಬಂಧ ಮಂಡ್ಯದಲ್ಲಿ ಶುಕ್ರವಾರ ಭರ್ಜರಿ ಬೀಗರೂಟ ನಡೆಯಿತು. ಬಗೆಬಗೆಯ ಖಾದ್ಯಗಳು ಜನರಿಗೆ ಮುದ ನೀಡಿದವು.
ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಆದಿಪುರುಷ್‌ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೇ ಬಂದ ಹನುಮ!
ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಬಿಡುಗಡೆಯಾಗಿದೆ. ರಾಮಾಯಣ ಕಥೆಯನ್ನೇ ಆಧರಿಸಿ ಮಾಡಿರುವ ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿ ಮಿಂಚಿದ್ದಾರೆ. ದೇಶದೆಲ್ಲೆಡೆ ಜನರು ಮುಗಿಬಿದ್ದು ಈ ಸಿನಿಮಾ ನೋಡುತ್ತಿದ್ದಾರೆ. ವಿಶೇಷವೆಂದರೆ ಮನುಷ್ಯರಷ್ಟೇ ಅಲ್ಲದೆ ಹನುಮಂತನ ರೂಪ ಎಂದು ಆರಾಧಿಸಲ್ಪಡುವ ಮಂಗ ಕೂಡ ಚಿತ್ರಮಂದಿರವೊಂದಕ್ಕೆ ನುಗ್ಗಿ ಸಿನಿಮಾ ನೋಡಿದೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ರಾಜಿ ಮೂಲಕ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಡಿವೋರ್ಸ್‌ ನೀಡಿದ ಪತ್ನಿ
ಬದುಕಿನ ಪಯಣವೇ ಅಚ್ಚರಿ ಹಾಗೂ ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತದೆ. ನಾವು ಅಂದುಕೊಂಡಿದ್ದೇ ಒಂದಾದರೆ, ನಮಗೆ ಎದುರಾಗುವುದೇ ಬೇರೆ. ಎಷ್ಟೇ ಒಳ್ಳೆಯವರಾಗಿರಿ, ಎಷ್ಟೇ ಪರೋಪಕಾರಿಯಾಗಿರಿ, ವಿಧಿಯ ತೀರ್ಮಾನವೇ ಬೇರೆಯಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್‌ನಲ್ಲಿ ರಾಜಿ ಮೂಲಕ 138 ಜೋಡಿಗಳ ವಿಚ್ಛೇದನ ತಪ್ಪಿಸಿದ್ದ ವಕೀಲರೊಬ್ಬರಿಗೆ ಅವರ ಪತ್ನಿ ವಿಚ್ಛೇದನ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version