1.ಕಾಂಗ್ರೆಸ್‌ನಲ್ಲಿ ಮತ್ತೆ ಕುರ್ಚಿ ಕಿತ್ತಾಟ; ಸಿದ್ದು ಪರ ಆಪ್ತರ ವಾದ, ಡಿಕೆಶಿ ಟೀಮ್ ಗರಂ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕಡೆ ಗ್ಯಾರಂಟಿ ಯೋಜನೆಗಳ ಜಾರಿಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಮುಖ್ಯಮಂತ್ರಿ ಅಧಿಕಾರ ಅವಧಿ ಹಂಚಿಕೆ ಬಗ್ಗೆಯೂ ಕಿಡಿ ಹತ್ತಿಕೊಂಡಿದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಕಾಲವೂ ಮುಂದುವರಿಯಲಿದ್ದಾರೆ ಎಂದು ಅವರ ಆಪ್ತರು ಸಾಲು ಸಾಲಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಇತ್ತ ಡಿ.ಕೆ ಶಿವಕುಮಾರ್ ಅವರ ಬಣದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಅವರ ಪರವೂ ಬ್ಯಾಟಿಂಗ್ ಶುರುವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಸಿದ್ದರಾಮಯ್ಯ ದೇವೇಗೌಡರನ್ನೇ ಬಿಟ್ಟಿಲ್ಲ, ಡಿಕೆಶೀನ ಬಿಡ್ತಾರಾ?; ಆರ್ ಅಶೋಕ್ ವ್ಯಂಗ್ಯ
2. ಬಡವರ ಮೇಲೇಕೆ ಸಿಟ್ಟು; ಕೇಂದ್ರ ವಿರುದ್ಧ ಸಿದ್ದರಾಮಯ್ಯ ಗರಂ, ಅಕ್ಕಿ ಕೊಡದಿದ್ರೆ ಪ್ರತಿಭಟನೆ ಎಂದ ಬಿಜೆಪಿ
ಅನ್ನ ಭಾಗ್ಯ ಯೋಜನೆಯ (Anna Bhagya scheme) ಅಕ್ಕಿ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಫೈಟ್ (Rice politics) ಜೋರಾಗಿದೆ. ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರದ (Central government) ವಿರುದ್ಧ ಕೆಂಡ ಕಾಡುತ್ತಿದ್ದಾರೆ. ಇತ್ತ ಬಿಜೆಪಿ ಜುಲೈ 1ರಂದು 10 ಕೆಜಿ ಅಕ್ಕಿ ಕೊಡದೆ ಹೋದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಅವಾಂತರ; ಪೋರ್ಟಲ್ ಓಪನ್ ಆಗದೆ ಪರದಾಟ
ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಯ (Free Electricity) ಅನುಕೂಲ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆಯಾದರೂ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕ್ರಿಯೆ ಆರಂಭಕ್ಕೆ ಅಡ್ಡಿಯಾಗಿದೆ. ಬೆಂಗಳೂರು ಮತ್ತು ರಾಜ್ಯದ ನಾನಾ ಕಡೆಗಳಲ್ಲಿ ಈ ಸಮಸ್ಯೆಯಾಗಿದ್ದು, ಮೊದಲ ದಿನವೇ ಅರ್ಜಿ ಸಲ್ಲಿಕೆಯ ಸೇವಾ ಸಿಂಧು ಪೋರ್ಟಲ್ ಕ್ರ್ಯಾಶ್ ಆಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಬಳಿಕ ಸಂಜೆ ಪೋರ್ಟಲ್ ಓಪನ್ ಆಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
4.ಫ್ರೀ ಬಸ್ ಸರ್ವಿಸ್‌ಗೆ ಮಹಿಳೆಯರ ಲಗ್ಗೆ: ನಾಡಿನಾದ್ಯಂತ ಬಸ್ ಸೇವೆ ಅಸ್ತವ್ಯಸ್ತ, ನೂಕುನುಗ್ಗಲು
ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಮೊದಲ ಭಾಗವಾದ “ಶಕ್ತಿ” ಯೋಜನೆಗೆ (Shakti scheme) ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ಇದರ ಸಂಪೂರ್ಣ ಲಾಭ ಪಡೆಯಲು ಪುಣ್ಯಕ್ಷೇತ್ರಗಳು ಸೇರಿ ಪ್ರವಾಸಿತಾಣಗಳಿಗೆ ತಂಡೋಪ ತಂಡವಾಗಿ (Free Bus service) ಭೇಟಿ ನೀಡಿದರು. ಇದರಿಂದ ಬಸ್ ಸಂಚಾರ ಅಸ್ತವ್ಯಸ್ತವಾದರೆ, ಪುಣ್ಯ ಕ್ಷೇತ್ರಗಳು ತುಂಬಿ ತುಳುಕಿದವು. ಇದರ ಸಮಗ್ರ ಚಿತ್ರಣಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ರಷ್, ಸಾರಿಗೆ ಸಚಿವರು ಏನು ಹೇಳ್ತಾರೆ?
ಇನ್ನೊಂದು ಸುದ್ದಿ: ಜನರಿಗೆ ಧರ್ಮದ ದಾರಿ ತೋರಿದ ಫ್ರೀ ಬಸ್; ಪ್ರಿಯಾಂಕ್ ಖರ್ಗೆ ಹೊಸ ವ್ಯಾಖ್ಯಾನ
5. ಮೋದಿ ಮನ್ ಕಿ ಬಾತ್: ಎಲ್ಲರೂ ಯೋಗ ಮಾಡಿ ಎಂದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಇಂದು ಹಲವು ವಿಷಯಗಳನ್ನು ಮಾತನಾಡಿದರು. ಮುಖ್ಯವಾಗಿ ಅಂತಾರಾಷ್ಟ್ರಿಯ ಯೋಗ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ‘ಎಲ್ಲರೂ ಯೋಗ ಮಾಡಿ’ ಎಂದು ಕರೆ ಕೊಟ್ಟರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : ವಿಸ್ತಾರ ಯೋಗ ಡೇ ಸ್ಪೆಷಲ್: ಹಾಲಿವುಡ್-ಬಾಲಿವುಡ್ ಸೆಲೆಬ್ರಿಟಿಗಳ ಯೋಗಾಯೋಗ
ಪೂರಕ ಸುದ್ದಿ: ಭ್ರಾಂತ ಮನಸ್ಸನ್ನು ಶಾಂತ ಸ್ಥಿತಿಗೆ ತರುವ ಪ್ರಾಣಾಯಾಮ
6. Fathers day: ತಾಯಿಗೊಂದು ದಿನ, ತಂದೆಗಿಂದು ದಿನ; ಕುಟುಂಬ ಸಲಹುವ ಕೈಗಳಿಗೆ ಒಂದು ಮುತ್ತು
ತಂದೆಯ ಬೆನ್ನು ಸಾಮಾನ್ಯವಾದುದಲ್ಲ. ಅದು ತನ್ನ ಮಕ್ಕಳನ್ನು ಎಷ್ಟು ದೂರವಾದರೂ ಲೀಲಾಜಾಲವಾಗಿ ಹೊರಬಲ್ಲುದು. ತಂದೆಯ ಕೈಗಳು ಸಾಮಾನ್ಯವಾದುದಲ್ಲ. ಅವು ತನ್ನ ಕುಟುಂಬ ಎಷ್ಟೇ ದೊಡ್ಡದಿದ್ದರೂ ದುಡಿದು ಅವರನ್ನೆಲ್ಲ ಸಾಕಿ ಸಲಹಬಲ್ಲುದು. ಸಂಜೆ ಮನೆಗೆ ಮರಳುವ ತಂದೆಯ ಚೀಲದಲ್ಲಿ ಇರುವ ದಿನಸಿ, ತರಕಾರಿ, ಚಾಕಲೇಟುಗಳ ಜತೆ ಅವನು ಹೃದಯದಲ್ಲಿ ತುಂಬಿ ತರುವ ಪ್ರೀತಿಯೂ ಅಗಾಧವಾದುದು. ಅಂಥ ತಂದೆಯ ದಿನ (Father’s Day) ಇಂದು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಅಪ್ಪನ ಪ್ರೀತಿಯ ಸೆಂಟಿಮೆಂಟ್ ಸಿನಿಮಾಗಳಿವು
7. ವಿಶ್ವ ಕಪ್ ಬಳಿಕ ಟೀಮ್ ಇಂಡಿಯಾಗೆ ನೂತನ ಕೋಚ್ ಆಯ್ಕೆ: ಯಾರಾಗಬಹುದು?
ಭಾರತ ತಂಡದ ಹೆಡ್ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್(Rahul Dravid) ಅವರು ಏಕದಿನ ವಿಶ್ವ ಕಪ್(ICC World Cup) ಬಳಿಕ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ವಿಶ್ವ ಕಪ್ ಬಳಿಕ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ಅವರ ಗುತ್ತಿಗೆ ಅವಧಿ ಮುಂದುವರಿಸುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಿಂದು ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕಿ ಕರೆ, ನಮಗೆ ಸಂಬಂಧವಿಲ್ಲ ಎಂದ ಪಕ್ಷ
: “ಭಾರತವನ್ನು ಹಿಂದು ರಾಷ್ಟ್ರ ಮಾಡಬೇಕು” ಎಂಬುದಾಗಿ ಬಿಜೆಪಿಯ ಕೆಲ ನಾಯಕರು, ಹಿಂದು ಸಂಘಟನೆಗಳ ಮುಖಂಡರು ಹೇಳುತ್ತಲೇ ಇರುತ್ತಾರೆ. ಈಗ ಕಾಂಗ್ರೆಸ್ ನಾಯಕಿಯೊಬ್ಬರು ಕೂಡ ಹಿಂದು ರಾಷ್ಟ್ರ ನಿರ್ಮಾಣಕ್ಕೆ (Hindu Rashtra) ಕರೆ ನೀಡಿದ್ದಾರೆ. “ಭಾರತವನ್ನು ಹಿಂದು ರಾಷ್ಟ್ರ ಮಾಡಲು ಎಲ್ಲರೂ ಒಗ್ಗೂಡಬೇಕು” ಎಂದು ಛತ್ತೀಸ್‌ಗಢ ಕಾಂಗ್ರೆಸ್ ಶಾಸಕಿ ಅನಿತಾ ಶರ್ಮಾ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. Weather report: ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿಯಲ್ಲಿ ಅಬ್ಬರಿಸುವ ವರುಣ
ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜೂನ್ 19-20ರಂದು ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. ರೊನಾಲ್ಡೊ ಕಂಡು ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ ಅಭಿಮಾನಿ; ವಿಡಿಯೊ ವೈರಲ್
ಕಾಲ್ಚಳಕದಿಂದಲೇ ಬೆರಗು ಮೂಡಿಸಿ ವಿಶ್ವದ ಮೂಲೆ ಮೂಲೆಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೊ ಆಟ ನೋಡಲು ಜನ ಮುಗಿ ಬೀಳುತ್ತಾರೆ, ಅದರಲ್ಲೂ ಅವರನ್ನು ಭೇಟಿ ಮಾಡಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಇದೀಗ ಅವರ ಅಪ್ಪಟ ಅಭಿಮಾನಿಯಾಗಿರುವ ಸ್ಟಾರ್ ಯೂಟ್ಯೂಬರ್ ಸ್ಪೀಡ್(IShowSpeed) ಎಂಬಾತ ರೊನಾಲ್ಡೊ ಅವರನ್ನು ಕಂಡು ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ