1.ಹೊರಗುತ್ತಿಗೆಯಲ್ಲೂ ಶೀಘ್ರ ಮೀಸಲು ಜಾರಿಗೆ ಸಿದ್ದರಾಮಯ್ಯ ಚಿಂತನೆ
ರಾಜ್ಯ ಸರ್ಕಾರದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವ ಹೊರಗುತ್ತಿಗೆಯಲ್ಲೂ ಮೀಸಲಾತಿ ತರುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಮಕ್ಕಳ ತಲೆಯಲ್ಲಿ ತುಂಬಬೇಕಿರುವುದು ಧರ್ಮ ಅಲ್ಲ, ವೈಚಾರಿಕತೆ ಎಂದ ಸಿದ್ದರಾಮಯ್ಯ
2. ಬೆಳಗಾವಿಯಲ್ಲಿ ಜೈನಮುನಿಗಳ ಬರ್ಬರ ಹತ್ಯೆ: 9 ತುಂಡು ಮಾಡಿ ಕೊಳವೆ ಬಾವಿಗೆಸೆದ ಕಿರಾತಕರು
ಬೆಳಗಾವಿ ಜಿಲ್ಲೆಯ ಹಿರೇಕೋಡಿ ಜೈನ ಮಠದ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮುನಿಗಳ ಜತೆ ಆತ್ಮೀಯವಾಗಿದ್ದ ನಾರಾಯಣ ಮಾಳಿ ಮತ್ತು ಆತನ ಸ್ನೇಹಿತ ಹುಸೇನ್ ಡಾಲಾಯತ್ ಎಂಬವರೇ ಹಂತಕರು. ಮಾಳಿಗೆ ನೀಡಿದ್ದ 6 ಲಕ್ಷ ರೂ. ಹಣವನ್ನು ವಾಪಸ್ ಕೇಳಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ದುಷ್ಟರು ಮುನಿಗಳನ್ನು ಕೊಂದು ಒಂಬತ್ತು ತುಂಡು ಮಾಡಿ ಕೊಳವೆಬಾವಿಗೆ ಹಾಕಿದ್ದು ಬೆಳಕಿಗೆ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಕಾಮಕುಮಾರ ನಂದಿ ಹತ್ಯೆ; ಅನ್ನಾಹಾರ ಬಿಟ್ಟ ಜೈನಮುನಿ ಗುಣಧರನಂದಿ ಮಹಾರಾಜ್
3. ರಾಜ್ಯದಲ್ಲಿ ಮಳೆ ಅವಾಂತರಕ್ಕೆ 21 ಬಲಿ, 47ಕ್ಕೂ ಹೆಚ್ಚು ಜಾನುವಾರು ಸಾವು
ರಾಜ್ಯ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಅಬ್ಬರ (Rain News) ಜೋರಾಗಿದ್ದರೆ, ಕೆಲವು ಭಾಗಗಳಲ್ಲಿ ಅನಾವೃಷ್ಟಿ ಕಾಡುತ್ತಿದೆ. ಈ ದ್ವಂದ್ವ ಸ್ಥಿತಿಯನ್ನು ಸಂಭಾಳಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಕಂದಾಯ ಸಚಿವ ಸಿ. ಕೃಷ್ಣ ಭೈರೇಗೌಡ ಹೇಳಿದ್ದಾರೆ. ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಸಚಿವರು ಮಾತನಾಡಿದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ವರದಿ : ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ; ಮೀನುಗಾರರೇ ಇರಲಿ ಎಚ್ಚರ
4. ಆನ್‌ಲೈನ್ ಮದುವೆ ನೋಂದಣಿಯಿಂದ ಲವ್ ಜಿಹಾದ್ ಹೆಚ್ಚಳ; ಹಿಂದು ಸಂಘಟನೆಗಳ ವಿರೋಧ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ ಆನ್‌ಲೈನ್ ಮದುವೆ ನೋಂದಣಿಯ (Online Marriage Registration) ಹೊಸ ಅವಕಾಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತೀಯ ಜನತಾ ಪಕ್ಷ ಬಜೆಟ್ ಮಂಡನೆಯ ಬೆನ್ನಿಗೇ ಇದನ್ನು ಆಕ್ಷೇಪಿಸಿದ್ದರೆ, ಈಗ ಶ್ರೀರಾಮ ಸೇನೆ (Sreerama Sene) ಸಂಚಾಲಕ ಪ್ರಮೋದ್ ಮುತಾಲಿಕ್ (Pramod Mutalik) ಅವರು ಕೂಡಾ ಧ್ವನಿ ಎತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ವಿಸ್ತಾರ ಅಂಕಣ: ಕಾಂಗ್ರೆಸ್ಸಿನ ಅಪೂರ್ಣ ಕಾರ್ಯ ಪೂರ್ಣವೇ ಸಮಾನ ನಾಗರಿಕ ಸಂಹಿತೆ ಜಾರಿಯ ಗುರಿ!
ದೇಶ ಮೊದಲು ಎಂದು ಬಂದಾಗ ಹಿಂದುವಾದರೇನು? ಮುಸ್ಲಿಮನಾದರೇನು? ಕ್ರೈಸ್ತನಾದರೇನು? ಏಕರೂಪ ನಾಗರಿಕ ಸಂಹಿತೆಯ ಈ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಕಾಯಬೇಕು? ಇದೇ ಸರಿಯಾದ ಸಮಯ- ಎಂದು ಸಮಾನ ನಾಗರಿಕ ಸಂಹಿತೆಯ ವಿಚಾರದಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಂಚಿಕೊಂಡಿದ್ದಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
6.ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ರಕ್ತಸಿಕ್ತ: 13 ಕಾರ್ಯಕರ್ತರು ಬಲಿ, ಬರೀ ಗುಂಡು-ಬಾಂಬ್ ಸದ್ದು
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯಿತಿ ಚುನಾವಣೆಯ ಮತದಾನ ರಕ್ತಸಿಕ್ತವಾಗಿತ್ತು. ದಿನವಿಡೀ ನಡೆದ ಚುನಾವಣಾ ಸಂಬಂಧಿ ಹಿಂಸಾಚಾರದಲ್ಲಿ 13 ಮಂದಿ ಕೊಲೆಯಾಗಿದ್ದಾರೆ. ಇವರಲ್ಲಿ 8 ಟಿಎಂಸಿ, ಮೈವರು ಸಿಪಿಎಂ, ತಲಾ ಒಬ್ಬರು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ನಿರ್ಮಾಪಕ ಕುಮಾರ್ ಆರೋಪಕ್ಕೆ ಕೆಂಡವಾದ ಕಿಚ್ಚ; 10 ಕೋಟಿ ರೂ. ಕೇಳಿ ನೋಟಿಸ್
ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕೊನೆಗೂ ಮೌನ ಮುರಿದಿದ್ದಾರೆ. “ಕಿಚ್ಚ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಸುದೀಪ್ ಹಣ ಪಡೆದಿರುವ ವಿವಾದ: ಈ ಬಗ್ಗೆ ರವಿಚಂದ್ರನ್‌ಗೂ ಗೊತ್ತೆಂದ ವಿತರಕ ಕುಮಾರ್!
8.ವಾಯುಪಡೆ SDI ಬೆಂಗಳೂರಿನ ಮುಖ್ಯಸ್ಥರಾಗಿ ಕನ್ನಡಿಗ ಕೆ ಎನ್ ಸಂತೋಷ್; ಇವರು ಓಡಿದ್ದು ಮಂಡ್ಯದಲ್ಲಿ
ಭಾರತದ ವಾಯು ಪಡೆಯ (Air Force) ಬೆಂಗಳೂರು ವಿಭಾಗದ ಸಾಫ್ಟ್ವೇರ್ ಡೆವಲೆಪ್ಮೆಂಟ್ ಇನ್ಸ್ಟಿಟ್ಯೂಟ್ ಕಮಾಂಡಂಟ್ (ಮುಖ್ಯಸ್ಥ) ಆಗಿ ಏರ್ ವೈಸ್ ಮಾರ್ಷಲ್ ಕೆ.ಎನ್.ಸಂತೋಷ್ (Air Vice Marshal K N Santosh)ನೇಮಕಗೊಂಡಿದ್ದಾರೆ. ಇವರು ವಾಯುಪಡೆಯಲ್ಲಿ ಸುಮಾರು 30ವರ್ಷಗಳಿಂದಲೂ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
9. World Cup 2023 : ಪಾಕಿಸ್ತಾನ ವಿರುದ್ಧದ ಭಾರತದ ಏಕ ದಿನ ವಿಶ್ವ ಕಪ್ ಪಂದ್ಯ ಕ್ಯಾನ್ಸಲ್?
ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್ (World Cup 2023) ಗಮನ ಸೆಳೆದಿರುವುದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಮೂಲಕ. ಈ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದೆ. ಆದರೆ, ಈ ಹಣಾಹಣಿ ನಡೆಯುವ ಖಾತರಿ ಇನ್ನೂ ಇಲ್ಲ. ಯಾಕೆ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
10. ‘ಕೈ’ ಕೆಸರಾದರೆ ಬಾಯಿ ಮೊಸರು; ಗದ್ದೆಗೆ ಇಳಿದು, ಟ್ರ್ಯಾಕ್ಟರ್ ಓಡಿಸಿ, ನಾಟಿ ಮಾಡಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯ ವೇಳೆ ಹಾಗೂ ಯಾತ್ರೆಯ ಬಳಿಕ ಜನರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದಾರೆ. ಅದರಲ್ಲೂ, ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರಿಗೆ ಅಪಾರ ಜನಬೆಂಬಲ ದೊರೆತಿದೆ. ಹಾಗಾಗಿ, ಅವರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಹರಿಯಾಣದ ಸೋನಿಪತ್‌ನಲ್ಲಿ ಅವರು ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ