Site icon Vistara News

ವಿಸ್ತಾರ TOP 10 NEWS: ಮಾ. 1ರಿಂದ ಸರ್ಕಾರಿ ಸೇವೆ ಬಂದ್‌ನಿಂದ, ಕನ್ನಡ ಡಿಂಡಿಮದಲ್ಲಿ ಮೋದಿ ಸಂಭ್ರಮದವರೆಗಿನ ಪ್ರಮುಖ ಸುದ್ದಿಗಳಿವು

Vistata Top10

#image_title

೧. ಮಾ.1 ರಿಂದ ಸರ್ಕಾರಿ ನೌಕರರ ಮುಷ್ಕರ ಖಚಿತ; ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸೇವೆ ಬಂದ್‌
ಶಿವಮೊಗ್ಗ:
ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗಾಗಿ ಒತ್ತಾಯಿಸಿ ಈಗಾಗಲೇ ತೀರ್ಮಾನಿಸಿದಂತೆ ಸರ್ಕಾರಿ ನೌಕರರೆಲ್ಲರೂ ಒಗ್ಗಟ್ಟಾಗಿ ಮಾ.1 ರಿಂದ ಮುಷ್ಕರ ಆಂರಭಿಸುತ್ತೇವೆ. ಇದು ಖಚಿತ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ : ಸಾರ್ವಜನಿಕರಿಗೆ ತೊಂದರೆಯಾದರೂ ಹೋರಾಟ ಅನಿವಾರ್ಯ: ನಾಗರಾಜ ಜುಮ್ಮಣ್ಣನವರ

೨. ರಾಜಧಾನಿಯಲ್ಲಿ ಬಾರಿಸು ಕನ್ನಡ ಡಿಂಡಿಮವ: ಒಂದು ಗಂಟೆ ಕಾಲ ಕನ್ನಡಿಗರ ಜತೆ ಕೂಡಿ ನಲಿದ ಮೋದಿ
ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆರುಗು ನೀಡಿದರು. ಸುಮಾರು ಒಂದು ಗಂಟೆ ಕಾಲ ಕನ್ನಡಿಗರೊಂದಿಗೆ ಕೂಡಿ ನಲಿದು ಸಂಭ್ರಮಿಸಿದರು.
ಮೋದಿ ಹೇಳಿದ್ದೇನು?: ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಅಪೂರ್ಣ, ನರೇಂದ್ರ ಮೋದಿ ಶ್ಲಾಘನೆ
ಸಂಭ್ರಮಿಸಿದ ಬೊಮ್ಮಾಯಿ: ಕನ್ನಡ ನಾಡಿನಲ್ಲಿ ಹುಟ್ಟುವುದೇ ಪುಣ್ಯ, ‘ಬಾರಿಸು ಕನ್ನಡ ಡಿಂಡಿಮ’ದಲ್ಲಿ ಬೊಮ್ಮಾಯಿ

೩. ಅಪಾರ್ಥ ಮಾಡಿಕೊಳ್ಳಬೇಡಿ, ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ; ವೀರಶೈವ ಲಿಂಗಾಯತರಿಗೆ ಬಿಎಸ್‌ವೈ ಮನವಿ
ಬೆಂಗಳೂರು: ದಯವಿಟ್ಟು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಫೆಬ್ರವರಿ ೨೭ರಂದು ನಡೆಯಲಿರುವ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಲ್ಲರನ್ನು ಆಹ್ವಾನಿಸಿದ ವೇಳೆ ಈ ಮಾತು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಮತ್ತೆ ಸದ್ದು ಮಾಡಿದ ಮುಂದಿನ ಸಿಎಂ ವಿಜಯೇಂದ್ರ ಪ್ರಸ್ತಾಪ ; ಬಿಜೆಪಿ ಶಾಸಕರಿಂದಲೇ ಕೇಳಿಬಂದ ಹೇಳಿಕೆ

೪. ನನ್ನ ಇನಿಂಗ್ಸ್​ ಮುಕ್ತಾಯವಾಗಬಹುದು : ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ ಗಾಂಧಿ
ನವ ದೆಹಲಿ: ಛತ್ತೀಸ್​ಗಢ್​​ನ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ 85ನೇ ಮಹಾ ಅಧಿವೇಶನ (Congress Plenary Session)ದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಾಂಗ್ರೆಸ್​​ಗೆ ಮಹತ್ವದ ತಿರುವು ಕೊಟ್ಟಿರುವ ಈ ಭಾರತ್​ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೂಡ ಕೊನೆಯಾಗಬಹುದು. ಹೀಗಾಗುವುದು ಕೂಡ ನನಗೆ ಅತ್ಯಂತ ತೃಪ್ತಿ ತರುವ ಸಂಗತಿಯೇ ಆಗಿದೆ’ ಎಂದು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಪ್ರಿಯಾಂಕಾಗಾಗಿ ಇನಿಂಗ್ಸ್ ಮುಗಿಸುತ್ತಿದ್ದಾರಾ ಸೋನಿಯಾ ಗಾಂಧಿ?; 2024ರಲ್ಲಿ ಅಮ್ಮನ ಕ್ಷೇತ್ರದಿಂದ ಮಗಳ ಸ್ಪರ್ಧೆ?

೫. ಈ ಬಾರಿ 150 ಗುರಿ; ಮಾ.1ರಿಂದ 4 ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್‌ ೧೫೦ ಗುರಿ ಹೊತ್ತು ಸಾಗುತ್ತಿರುವ ರಾಜ್ಯ ಬಿಜೆಪಿ ಮಾರ್ಚ್‌ ೧ರಿಂದ ೨೦ರವರೆಗೆ ರಾಜ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲೂ ಸಂಚರಿಸುವ ಬೃಹತ್‌ ರಥ ಯಾತ್ರೆಯನ್ನು (BJP Rathayatre) ಸಂಘಟಿಸಿದೆ. ನಾಲ್ಕು ತಂಡಗಳಾಗಿ ಸಾಗುವ ಈ ರಥಯಾತ್ರೆಗೆ ಮಾರ್ಚ್‌ ೨೫ರಂದು ದಾವಣಗೆರೆಯಲ್ಲಿ ನಡೆಯುವ ಬೃಹತ್‌ ಸಮಾವೇಶದೊಂದಿಗೆ ತೆರೆ ಬೀಳಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ನಿರೀಕ್ಷೆ ಇದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೬. ಸಿದ್ದರಾಮಯ್ಯ ಕಟು ಸತ್ಯ ಎದುರಿಸುವ ಕಾಲ ಬಂದಿದೆ; ಸಿಎಂ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು: ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಕಟು ಸತ್ಯವನ್ನು ಎದುರಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai Vs Siddaramaiah) ಎಚ್ಚರಿಕೆ ನೀಡಿದ್ದಾರೆ. ʻʻಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಸುಳ್ಳು ಹೇಳಿದ್ದಾರೆʼʼ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಶನಿವಾರ ಪ್ರತಿಕ್ರಿಯೆ ನೀಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ :ಸಿದ್ರಾಮಣ್ಣ ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುವುದು ಗ್ಯಾರಂಟಿ ಎಂದ ನಳಿನ್‍ ಕುಮಾರ್ ಕಟೀಲ್

೭. ಹಾಸನ ಟಿಕೆಟ್‌ ಫೈಟ್‌; ಎಚ್‌.ಡಿ. ಕುಮಾರಸ್ವಾಮಿ ಕರೆದಿದ್ದ ನಾಳೆಯ ಸಭೆಗೆ ದೇವೇಗೌಡರ ಬ್ರೇಕ್‌
ಹಾಸನ: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ (Hasana Politics) ಜೆಡಿಎಸ್‌ ಟಿಕೆಟ್‌ ಗೊಂದಲ ಮತ್ತೂ ಮುಂದುವರಿದಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಕಡೆಗಣಿಸಿ, ಹಾಸನದಲ್ಲಿ ಭಾನುವಾರ ಕ್ಷೇತ್ರದ ೩೦೦ ಪ್ರಮುಖ ನಾಯಕರ ಸಭೆ ಕರೆದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ದೊಡ್ಡ ಹಿನ್ನಡೆಯಾಗಿದೆ. ಹಾಸನ ಟಿಕೆಟ್‌ ಗದ್ದಲಕ್ಕೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಧ್ಯಪ್ರವೇಶ ಮಾಡಿದ್ದು, ಸಭೆಯನ್ನೇ ರದ್ದುಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮. ಗ್ರಾಮ ವಾಸ್ತವ್ಯ ನನಗೆ ಪಾಠ ಶಾಲೆ ಇದ್ದಂತೆ, ಕಾಡಿನ ಜೀವನ ನೋಡಿದರೆ ಕಣ್ಣೀರು ಬರುತ್ತೆ: ಆರ್.‌ ಅಶೋಕ್‌
ಬಾಗಲಕೋಟೆ:
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಫೆಬ್ರವರಿ 25ರಂದು ಗ್ರಾಮ ವಾಸ್ತವ್ಯಕ್ಕಾಗಿ ಬಾಗಲಕೋಟೆ ತಾಲೂಕಿನ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಈ ವೇಳೆ ಮಾತನಾಡಿದ ಅಶೋಕ್‌, ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ, ಬಹಳಷ್ಟು ವಿಷಯಗಳನ್ನು ಇದು ನನಗೆ ಕಲಿಸಿದೆ. ಕಾಡಿನ ಜನರ ಜೀವನ ನೋಡಿದರೆ ಕಣ್ಣೀರು ಬರುತ್ತದೆ. ಅಲ್ಲದೆ, ನನ್ನ ಹೆಚ್ಚಿನ ಗ್ರಾಮ ವಾಸ್ತವ್ಯ ಆಗಿರುವುದು ಉತ್ತರ ಕರ್ನಾಟಕದಲ್ಲಿಯೇ ಎಂದು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಮತ್ತೆ ಅಧಿಕಾರಕ್ಕೆ ಬರುತ್ತೇವೆ; ಗ್ರಾಮ ವಾಸ್ತವ್ಯ ಮುಂದುವರಿಸುತ್ತೇನೆ: ಆರ್.‌ ಅಶೋಕ್

೯. ನೀವು ಪೋಷಿಸಿದ ಕ್ರಿಮಿನಲ್​ಗಳನ್ನು ಮಣ್ಣು ಮುಕ್ಕಿಸುತ್ತೇವೆ; ಅಖಿಲೇಶ್​ ಯಾದವ್​​ಗೆ ಸಿಎಂ ಯೋಗಿ ತಿರುಗೇಟು
ಉತ್ತರ ಪ್ರದೇಶ ಬಹುಜನ ಸಮಾಜ ಪಾರ್ಟಿ ಶಾಸಕರಾಗಿದ್ದ ರಾಜು ಪಾಲ್​ ಹತ್ಯೆ ಕೇಸ್​​ನಲ್ಲಿ (2005ರಲ್ಲಿ ನಡೆದಿದ್ದ ಕೊಲೆ)ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​​ ಎಂಬುವರನ್ನು ಪ್ರಯಾಗ್​ ರಾಜ್​​ನಲ್ಲಿ ಶುಕ್ರವಾರ ಗುಂಡಿಟ್ಟು ಕೊಂದಿದ್ದಾರೆ. ಇದೇ ವಿಷಯ ಇಂದು ಬೆಳಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ನಡುವಿನ ತೀವ್ರಸ್ವರೂಪದ ವಾಗ್ವಾದಕ್ಕೆ ಕಾರಣವಾಯಿತು. ‘ನೀವು ಪೋಷಿಸಿರುವ ಕ್ರಿಮಿನಲ್​​ಗಳು, ಮಾಫಿಯಾಗಳಿಗೆ ನಾವು ಮಣ್ಣು ಮುಕ್ಕಿಸುತ್ತೇವೆ’ ಎಂದು ಸಿಎಂ ಯೋಗಿ ಆದಿತ್ಯನಾಥ್​ ಅವರು ಅಖಿಲೇಶ್​ ಯಾದವ್​ ಉದ್ದೇಶಿಸಿ ಗುಡುಗಿದರು. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

೧೦. Viral News : ಇದು ಅತ್ಯಂತ ದುಬಾರಿ ದೋಸೆ! ಏಕೆಂದರೆ ಇದು ಚಿನ್ನದ ದೋಸೆ! ದರ ಎಷ್ಟಿರಬಹುದು?
ಹೈದರಾಬಾದ್: ಹೋಟೆಲ್‌ನಲ್ಲಿ ಒಂದು ದೋಸೆಯ ದರ ಎಷ್ಟಿರುತ್ತದೆ? 20ರಿಂದ 150 ರೂ. ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಏಕೆಂದರೆ ಈ ವಿಶೇಷ ಹೋಟೆಲ್‌ನಲ್ಲಿ ಒಂದು ದೋಸೆಯ ಬೆಲೆ ಬರೋಬ್ಬರಿ 1000 ರೂ.! ಹಾಗೆಯೇ ಇದು ಮಾಮೂಲಿ ದೋಸೆ ಅಲ್ಲ, ಬದಲಾಗಿ ಚಿನ್ನದ ದೋಸೆ! ಪೂರ್ಣ ವರದಿಗೆ ಕ್ಲಿಕ್‌ ಮಾಡಿ


Exit mobile version