1.ದಕ್ಷಿಣ ಆಫ್ರಿಕಾದಿಂದ ನೇರ ಇಸ್ರೊ ಕಚೇರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ, 1 ಕಿ.ಮೀ ರೋಡ್ ಶೋ
ಚಂದ್ರಯಾನ 3 ಯಶಸ್ಸಿನಿಂದ ಪ್ರಧಾನಿ ನರೇಂದ್ರ ಮೋದಿ ಎಷ್ಟು ಥ್ರಿಲ್ಲಾಗಿದ್ದಾರೆ ಎಂದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದಿಂದ ಅವರು ನೇರವಾಗಿ ಬೆಂಗಳೂರಿನ ಇಸ್ರೋ ಕಚೇರಿಗೇ ಬರಲಿದ್ದಾರೆ. ಆಗಸ್ಟ್ 26ರಂದು ಅವರು ಇಸ್ರೋ ಸಾಧಕರನ್ನು ಗೌರವಿಸುವ ಜತೆಗೆ ಒಂದು ಕಿ.ಮೀ. ರೋಡ್ ಶೋ ಕೂಡಾ ನಡೆಸುತ್ತಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: ಆ.27ರಂದು ಮೋದಿ ರೋಡ್ ಶೋ; ರಸ್ತೆ ಸಂಚಾರದಲ್ಲಿ ಭಾರಿ ಬದಲಾವಣೆ, ಎಲ್ಲೆಲ್ಲಿ ಗಮನಿಸಿ
ಪೂರಕ ಸುದ್ದಿ 2: ದಕ್ಷಿಣ ಏಷ್ಯಾದ ದೈತ್ಯ ದೇಶದಿಂದ ಚಂದ್ರನ ದಕ್ಷಿಣ ಧ್ರುವ ಚುಂಬನ: ಜಾಗತಿಕ ಮೀಡಿಯಾ
ಪೂರಕ ಸುದ್ದಿ3: ಇಸ್ರೋ ಅಂಗಳದಲ್ಲಿ ಸಿಎಂ; 500 ವಿಜ್ಞಾನಿಗಳನ್ನು ಸನ್ಮಾನಿಸಲು ರಾಜ್ಯ ಸರ್ಕಾರ ತೀರ್ಮಾನ
ಚಂದ್ರಯಾನ ಕುರಿತ ವಿಸ್ತೃತ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
2. ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಸುತ್ತಿನ ಕಾವೇರಿ ಕದನ
ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶ ಕೊಡಿ ಎಂದು ಕೋರಿ ತಮಿಳುನಾಡು ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಎದುರು ಶುಕ್ರವಾರ ವಿಚಾರಣೆಗೆ ಬರಲಿದೆ. ಯಾವ ಕಾರಣಕ್ಕೂ ತಮಿಳುನಾಡು ಕೇಳಿದಷ್ಟು ನೀರು ಬಿಡಲಾಗದು ಎಂದು ಕರ್ನಾಟಕ ಆಗಲೇ ಅಫಿಡವಿಟ್ ಸಲ್ಲಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. 777 ಚಾರ್ಲಿ ಕನ್ನಡದ ಅತ್ಯುತ್ತಮ ಚಿತ್ರ: ನಮ್ಮ ಭಾಷೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
69ನೇ ರಾಷ್ಟ್ರೀಯ ಚಲನಚಿತ್ರ (National Film Awards 2023) ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಸಂದಿವೆ. ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ನಾನ್ ಫೀಚರ್ ವಿಭಾಗದಲ್ಲಿ ಅನಿರುದ್ಧ್ ಜತ್ಕಾರ್ ನಿರ್ದೇಶನ ಮಾಡಿರುವ ‘ಬಾಳೆ ಬಂಗಾರ’ ಡಾಕ್ಯುಮೆಂಟರಿಗೆ ತೀರ್ಪುಗಾರರ ವಿಶೇಷ ಮೆಚ್ಚುಗೆ ಲಭಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಆಲಿಯಾ, ಕೃತಿ ಅತ್ಯುತ್ತಮ ನಟಿ, ಅಲ್ಲು ಅರ್ಜುನ್ ಬೆಸ್ಟ್ ಆಕ್ಟರ್, ರಾಕೆಟ್ರಿ ಅತ್ಯುತ್ತಮ ಚಿತ್ರ
4. ಒಂದು ವೀರೋಚಿತ ಸೋಲು: ಸೋತರೂ ಕೋಟ್ಯಂತರ ಭಾರತೀಯರ ಮನಗೆದ್ದ ಚೆಸ್ ಪ್ರತಿಭೆ ಪ್ರಜ್ಞಾನಂದ
ಕೋಟ್ಯಂತರ ಭಾರತಿಯರು ಕಾದು ಕುಳಿತಿದ್ದ ವಿಶ್ವಕಪ್ ಚೆಸ್ ಫೈನಲ್(Chess World Cup) ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen) ವಿರುದ್ಧ ಸೋಲು ಕಂಡಿದ್ದಾರೆ. ಆದರೆ ಸೋತರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮೈಸೂರಿನಲ್ಲಿ ತಲೆ ಎತ್ತಲಿದೆ ಸೆಮಿ ಕಂಡಕ್ಟರ್ ಘಟಕ; 10 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ
6. ವರ ಮಹಾಲಕ್ಷ್ಮಿ ಹಬ್ಬ ಸಂಭ್ರಮಕ್ಕೆ ಮಳೆ ಅಡ್ಡಿ ಯಾಗುವ ಸಾಧ್ಯತೆ
7. ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
8.ಪಿ ವಿ ನರಸಿಂಹ ರಾವ್ ಬಿಜೆಪಿಯ ಮೊದಲ ಪ್ರಧಾನಿ ಎಂದ ಮಣಿಶಂಕರ್ ಅಯ್ಯರ್
9. ಕಿರುತೆರೆಯಲ್ಲಿ ಗೀತಾ ಧಾರಾವಾಹಿಯ ಓಟ ಶುರು, ಎರಡನೇ ಸ್ಥಾನದಲ್ಲಿ ಸೀತಾರಾಮ
10. ಚುನಾವಣೆ ನಡೆಸುವಲ್ಲಿ ವಿಫಲ: ಭಾರತದ ಕುಸ್ತಿ ಫೆಡರೇಷನ್ ಸದಸ್ಯತ್ವ ರದ್ದು