ಬೆಂಗಳೂರು: ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಹಿಂದೆ ಉಗ್ರಕೃತ್ಯ ಖಚಿತಪಟ್ಟಿದ್ದು, ಅಪರಾಧಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶದ ಮೂಲಕ ದಲಿತ ಮತಗಳ ಮೇಲೆ ಕಣ್ಣಿಟ್ಟಿದೆ, ಮತದಾರರ ದತ್ತಾಂಶ ಅಕ್ರಮ ಸಂಗ್ರಹ ಪ್ರಕರಣದ ವಿಚಾರಣೆ ಮುಂದುವರಿದಿದೆ, ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಪ್ರಕರಣ ಬೆಳಕಿಗೆ ಬಂದಿದೆ, ಗುಜರಾತ್ ಚುನಾವಣೆ ಗರಿಗೆದರಿದೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಜಯಗಳಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Mangalore Blast | ಮಂಗಳೂರಿನ ಆಟೊ ರಿಕ್ಷಾದಲ್ಲಿ ಲಘು ಐಇಡಿ ಬಾಂಬ್ ಸ್ಫೋಟ
ಮಂಗಳೂರಿನಲ್ಲಿ ಶನಿವಾರ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ( Mangalore Blast ) ಲಘು ಐಇಡಿ ಬಾಂಬ್ ಅನ್ನು ಬಳಸಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ಲಾನ್ ಮಾಡಿದ್ದ ಸ್ಥಳಕ್ಕೆ ಸಾಗಿಸುವ ಮೊದಲೆ ಆಟೊ ರಿಕ್ಷಾದಲ್ಲಿ ಈ ಬಾಂಬ್ ಸ್ಫೋಟವಾಗಿದೆ. ಇದನ್ನು ಭಯೋತ್ಪಾದಕ ಕೃತ್ಯ ಎಂದು ಪೊಲೀಸ್ ಇಲಾಖೆ ದೃಢಪಡಿಸಿದೆ.
ಈಗಾಗಲೇ ಈ ಸ್ಫೋಟದಲ್ಲಿ ಭಾಗಿಯಾಗಿರುವ ಒಬ್ಬನನ್ನು ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನಿಗೆ ಸ್ಫೋಟದಲ್ಲಿ ಗಾಯಗಳಾಗಿದ್ದು,… ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Mangalore Blast | ಆಟೋ ಸ್ಫೋಟದ ಮಾಸ್ಟರ್ ಮೈಂಡ್ ಶಾರೀಕ್; ಮಂಗಳೂರು ಗೋಡೆ ಬರಹ ಪ್ರಕರಣದ 2ನೇ ಆರೋಪಿ ಈತ
ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಸ್ಟ್ ಸಿಕ್ಕಿದ್ದು, ಶಾರೀಕ್ ಎಂಬಾತನೇ ಸ್ಫೋಟದ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ. ಈತ ಮಂಗಳೂರು ಗೋಡೆ ಬರಹ ಪ್ರಕರಣ ಹಾಗೂ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್‌ಗೆ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಶಾರೀಕ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದಾನೆ. ಈತ ತೀರ್ಥಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Mangalore Blast | ಪ್ರೇಮ್ ರಾಜ್‌ಗೂ ಮಂಗಳೂರು ಸ್ಫೋಟಕ್ಕೂ ಸಂಬಂಧ ಇಲ್ಲ: ಡಿಜಿಪಿ ಪ್ರವೀಣ್ ಸೂದ್
ಮಂಗಳೂರಿನಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣದಲ್ಲಿ ಕೇಳಿಬಂದಿರುವ ಹುಬ್ಬಳ್ಳಿ ಮೂಲದ, ತುಮಕೂರಿನಲ್ಲಿ ರೇಲ್ವೆ ನೌಕರರಾಗಿರುವ ಪ್ರೇಮ್ ರಾಜ್ ಒಬ್ಬ ಸಂತ್ರಸ್ತನಷ್ಟೇ, ಅವರಿಗೂ ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Mangalore Blast | ಪಿಎಫ್ಐ ನಿಷೇಧಕ್ಕೆ ಪ್ರತೀಕಾರವಾ ಈ ಮಂಗಳೂರು ಆಟೋ ಸ್ಫೋಟ? -ಮಾಹಿತಿ ಕಲೆ ಹಾಕುತ್ತಿರುವ ಪೊಲೀಸ್
ನಾಗುರಿ ಬಳಿ ಶನಿವಾರ ಸಂಜೆ 4.40ರ ಹೊತ್ತಿಗೆ ಆಟೋ ಸ್ಫೋಟವಾಗಿದ್ದು ಈಗ ರಾಷ್ಟ್ರಮಟ್ಟದಲ್ಲಿ ಸಂಚಲನ ನಡೆಸಿದ ಸುದ್ದಿಯಾಗಿ ಮಾರ್ಪಾಡಾಗಿದೆ. ಮೊದಲು ಇದು ಸಿಲಿಂಡರ್ ಬ್ಲಾಸ್ಟ್ ಕೇಸ್ ಅಂದುಕೊಳ್ಳಲಾಯಿತು. ಆದರೆ ಈಗ ಅದೊಂದು ಭಯೋತ್ಪಾದಕ ಕೃತ್ಯ ಎಂಬುದು ಸಾಬೀತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಇದನ್ನೇ ಹೇಳಿದ್ದು, ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Explainer | ಪ್ರೆಷರ್ ಕುಕ್ಕರ್ ಬಾಂಬ್: ತಯಾರಿ ಸುಲಭ, ಪರಿಣಾಮ ಭೀಕರ
ಮಂಗಳೂರಲ್ಲಿ ಶನಿವಾರ ಸಂಜೆ ಸಂಭವಿಸಿದ ಆಟೋ ಸ್ಫೋಟದಲ್ಲಿ ಇಬ್ಬರು ಜನರಿಗೆ ಗಾಯಗಳಾಗಿವೆ. ಪ್ರೆಷರ್ ಕುಕ್ಕರ್ ಬಾಂಬ್ ಸ್ಫೋಟ (Pressure Cooker Bomb) ಇದಾಗಿದ್ದು, ಆಗಾಗ ನಾವು ಈ ಬಗ್ಗೆ ಕೇಳುತ್ತಿರುತ್ತೇವೆ. ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಎಷ್ಟು ಪರಿಣಾಮಕಾರಿ? ಇದು ಉಗ್ರರ ಫೇವರಿಟ್ ಬಾಂಬ್ ಏಕೆ?(ವಿಸ್ತಾರ Explainer) ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. BJP ನವಶಕ್ತಿ ಸಮಾವೇಶ | ದಲಿತರನ್ನು ಮತ್ತಷ್ಟು ಸೆಳೆದು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಬಲ ಪ್ರದರ್ಶನ
ಗಣಿನಾಡು ಬಳ್ಳಾರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶ ಕೇವಲ ಒಂದು ಸಮುದಾಯದ ಸಮಾವೇಶವಾಗಿ ಉಳಿಯದೆ, ಇದೊಂದು ದಲಿತ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ದಲಿತರ ಪಕ್ಷ, ಬಿಜೆಪಿ ಮೇಲ್ವರ್ಗ ಪಕ್ಷ ಎನ್ನುವ ಹಣೆಪಟ್ಟಿ ಕಳಚಿಹಾಕುವ ಪ್ರಯತ್ನ ನಡೆಯಿತು. ಇದಕ್ಕೆ ಉದಾಹರಣೆ ಸಹಿತವಾಗಿ ಪ್ರಮುಖ ಮುಖಂಡರು ಕೆಲವೊಂದು ಉದಾಹರಣೆಗಳನ್ನು ಲಕ್ಷಾಂತರ ಜನರ ಮಧ್ಯೆ ತೆರೆ ದಿಡುವ ಪ್ರಯತ್ನ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Voter Data | ʼಚಿಲುಮೆʼ ಮೊಬೈಲ್ ಆ್ಯಪ್ ಡೆವಲಪರ್ ವಶಕ್ಕೆ; ತೀವ್ರ ವಿಚಾರಣೆ
ಚಿಲುಮೆ ಸಂಸ್ಥೆ ವತಿಯಿಂದ ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಗೆ ಮೊಬೈಲ್ ಆ್ಯಪ್ ಡೆವಲಪ್ ಮಾಡಿಕೊಟ್ಟಿದ್ದವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು.
ಡೆವಲಪರ್ ಸಂಜೀವ್ ಶೆಟ್ಟಿಯನ್ನು ಭಾನುವಾರ ವಶಕ್ಕೆ ಪಡೆದ ಹಲಸೂರು ಗೇಟ್ ಪೊಲೀಸರು ವಿಚಾರಣೆ ನಡೆಸಿದ್ದು, ಯಾವ ಉದ್ಧೇಶಕ್ಕೆ ಆ್ಯಪ್ ಕೇಳಿದ್ದರು? ಎಷ್ಟು ಆ್ಯಪ್ ತಯಾರು ಮಾಡಿಕೊಡಲಾಗಿದೆ? ಮತದಾರರ ಬಗ್ಗೆ ಆ್ಯಪ್ ನಲ್ಲಿ ಡೀಟೇಲ್ಸ್ ಅಪ್ಲೋಡ್ ಮಾಡಲಾಗಿದ್ಯಾ? ಹೀಗೆ ಅನೇಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಖುದ್ದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡರಿಂದ ನಾಲ್ಕೈದು ಗಂಟೆ ವಿಚಾರಣೆ ನಡೆಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Untouchability | ಹೆಗ್ಗೋಠಾರ ಗ್ರಾಮಕ್ಕೆ ತಹಸೀಲ್ದಾರ್ ಭೇಟಿ; ಟ್ಯಾಂಕ್‌ನಲ್ಲಿ ದಲಿತರಿಗೆ ನೀರು ಕುಡಿಸಿ ಸಹಬಾಳ್ವೆ ಸಂದೇಶ
ದಲಿತ ಮಹಿಳೆ ನೀರು ಕುಡಿದಿದ್ದರಿಂದ ಟ್ಯಾಂಕ್‌ನಲ್ಲಿದ್ದ ನೀರು ಖಾಲಿ ಮಾಡಿದ ಪ್ರಕರಣ(Untouchability) ನಡೆದಿದ್ದ ತಾಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ತಹಸೀಲ್ದಾರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಟ್ಯಾಂಕ್‌ಗಳು ಸಾರ್ವಜನಿಕರ ಬಳಕೆಗಾಗಿ ಇವೆ ಎಂದು ಹೇಳಿ, ಗ್ರಾಮದ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿ, ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆ ಮಾಡದೆ ಸಹಬಾಳ್ವೆ ನಡೆಸಬೇಕು ಎಂದು ಗ್ರಾಮಸ್ಥರಿಗೆ ಸೂಚಿಸಿದರು.ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್‌ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ ಗೋಮೂತ್ರ ಹಾಕಿ ಶುದ್ಧಿಕರಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Narendra Modi | ಗುಜರಾತ್ ಚುನಾವಣೆ ರ‍್ಯಾಲಿಗೂ ಮುನ್ನ ಸೋಮನಾಥ ದೇಗುಲದಲ್ಲಿ ಮೋದಿ ಅಭಿಷೇಕ
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಲು ಸಾಲು ರ‍್ಯಾಲಿಗಳನ್ನು ನಡೆಸುತ್ತಿದ್ದು, ಭಾನುವಾರ (ನವೆಂಬರ್ 20) ಚುನಾವಣೆ ರ‍್ಯಾಲಿ ಆರಂಭಕ್ಕೂ ಮುನ್ನ ಸೋಮನಾಥ ದೇವಾಲಯಕ್ಕೆ (Somnath Temple) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಿವನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Gujarat Election | 7 ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ ಬಿಜೆಪಿ
10. INDvsNZ | ಮಿನುಗಿದ ಸೂರ್ಯ, ಹೂಡಾ, ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 65 ರನ್ ಜಯ
ಸೂರ್ಯಕುಮಾರ್ ಯಾದವ್ (೧೧೧ *ರನ್, ೫೧ ಎಸೆತ, ೧೧ ಫೋರ್, ೭ ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ದೀಪಕ್ ಹೂಡಾ (೧೦ ರನ್‌ಗಳಿಗೆ ೪ ವಿಕೆಟ್) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ನ್ಯೂಜಿಲ್ಯಾಂಡ್ (INDvsNZ) ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ೬೫ ರನ್‌ಗಳ ಭರ್ಜರಿ ವಿಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದ ಕಾರಣ ಮೂರನೇ ಪಂದ್ಯದಲ್ಲಿ ಸರಣಿ ವಿಜೇತರು ಯಾರು ಎಂಬುದು ನಿರ್ಣಯವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
1. ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ ಹರ್ವಿಂದರ್ ಸಿಂಗ್ ರಿಂದಾ ಪಾಕಿಸ್ತಾನದಲ್ಲಿ ಸಾವು; ಹತ್ಯೆಯ ಹೊಣೆ ಹೊತ್ತ ಬಂಬಿಹಾ ಗ್ಯಾಂಗ್
2. Chhattisgarh Murder | 11 ಲಕ್ಷ ರೂ.ಗಾಗಿ ಪ್ರಿಯತಮೆಯನ್ನೇ ಕೊಂದು, 4 ದಿನ ಮೆಡಿಕಲ್ ಶಾಪ್‌ನಲ್ಲಿಟ್ಟವ ಸಿಕ್ಕಿದ್ದು ಹೇಗೆ?
೩. Fifa World Cup | ವಿಶ್ವ ಕಪ್ ಪಂದ್ಯ ಆರಂಭಕ್ಕೂ ಮುನ್ನವೇ ಮ್ಯಾಚ್ ಫಿಕ್ಸಿಂಗ್ ಮಾಡೀತೇ ಕತಾರ್!
4. Aindrila Sharma | ಬದುಕುಳಿಯಲಿಲ್ಲ ನಟಿ ಐಂದ್ರಿಲಾ ಶರ್ಮಾ; 2 ಬಾರಿ ಕ್ಯಾನ್ಸರ್ ಗೆದ್ದಿದ್ದಾಕೆ, ಹೃದಯ ಸ್ತಂಭನದಿಂದ ಸಾವು
5. ಸಾಲಭಂಜಿಕೆ ಅಂಕಣ | ಅದೃಷ್ಟ ಬೇಕು ಪದ್ಯ ಓದಲು