Site icon Vistara News

ವಿಸ್ತಾರ TOP 10 NEWS | ತಾಯಿ-ಮಗು ಜೀವ ತೆಗೆದ ಮೆಟ್ರೊ ಪಿಲ್ಲರ್‌ನಿಂದ, ಲಂಕಾ ವಿರುದ್ಧ ವಿರಾಟ್‌ ದಾಖಲೆಯ ಶತಕದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-metro pillar collapse to virat kohli century and more news

1. Metro Pillar | ಮೆಟ್ರೋ ಪಿಲ್ಲರ್‌ ರೂಪದಲ್ಲಿ ಕಾದು ಕುಳಿತಿತ್ತು ಮೃತ್ಯು; ಛಿದ್ರವಾಯಿತು ಸುಂದರ ಸಂಸಾರ
ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮಂಗಳವಾರ ಮುಂಜಾನೆ ನಡೆದ ದುರ್ಘಟನೆಯಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕುಟುಂಬದ ಮೇಲೆ, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ರಾಡುಗಳು ಬಿದ್ದು ಜೀವ ತೆಗೆದಿದೆ. ಟನ್‌ಗಟ್ಟಲೆ ತೂಕದ ಮೆಟ್ರೋ ಪಿಲ್ಲರ್‌ ದಿಢೀರ್‌ ಮರದ ಮೇಲೆ ಉರುಳಿದಿದೆ. ಆ ಮರದ ಕೊಂಬೆ ಅದೇ ಹೊತ್ತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಕ್ಕಳ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ತಾಯಿ-ಮಗು ದುರ್ಮರಣ ಹೊಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Namma Metro Pillar | ತುಂಬ ಒಳ್ಳೆ ಮನುಷ್ಯರು, ದೇವರು ಹೀಗೆ ಯಾಕೆ ಮಾಡಿದ?: ಗದಗದ ನಿವಾಸಿಗಳ ಕಂಬನಿ

2. Oscar award | ಆಸ್ಕರ್‌ ಪ್ರಶಸ್ತಿ ಕಣದಲ್ಲಿ ಕನ್ನಡದ ಕಾಂತಾರ, ವಿಕ್ರಾಂತ್‌ ರೋಣ | ಇನ್ಯಾವ ಸಿನಿಮಾಗಳಿವೆ?
ಈ ವರ್ಷದ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಯ ಕಣಕ್ಕೆ ಕನ್ನಡದ ಎರಡು ಚಿತ್ರಗಳು ಧುಮುಕಿವೆ. ಕಾಂತಾರ ಹಾಗೂ ವಿಕ್ರಾಂತ್‌ ರೋಣ ಸಿನಿಮಾಗಳು ಆಸ್ಕರ್‌ ಪ್ರಶಸ್ತಿಯ ಸ್ಪರ್ಧಾರ್ಹತೆ ಗಳಿಸಿಕೊಂಡಿವೆ. ಇದಲ್ಲದೆ ಇನ್ನೂ ಹಲವು ಭಾರತೀಯ ಸಿನಿಮಾಗಳು ಆಸ್ಕರ್‌ ಸ್ಪರ್ಧೆಗೆ ಮುಂದಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Prajadhwani Yatre | ಬ್ರಿಟಿಷರನ್ನು ಓಡಿಸಿದಂತೆ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದ ಡಿ.ಕೆ. ಶಿವಕುಮಾರ್: ಪ್ರಜಾಧ್ವನಿ ಯಾತ್ರೆ ಲೋಗೊ ಬಿಡುಗಡೆ
ಭಾರತದಿಂದ ಬ್ರಿಟಿಷರನ್ನು ಓಡಿಸಿದಂತೆಯೇ ಕರ್ನಾಟಕದಿಂದ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬುಧವಾರದಿಂದ ಆರಂಭವಾಗಲಿರುವ ಪ್ರಜಾಧ್ವನಿ ಯಾತ್ರೆಯ (Prajadhwani Yatre) ಲೋಗೊ, ವೆಬ್‌ಸೈಟ್‌ ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Prajadhwani Yatre | ಸಿಎಂ ಹುದ್ದೆಗೆ ₹2,500 ಕೋಟಿ: ʼಬಿಜೆಪಿ ಪಾಪದ ಪುರಾಣʼ ಆರೋಪ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

4. Muslims protest | ಎಲ್ಲಿಂದಲೋ ಬಂದವರಿಗೆ ಮೀಸಲಾತಿ: ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುಸ್ಲಿಮರ ಪ್ರತಿಭಟನೆ
ʻಎಲ್ಲಿದಂಲೋ ಬೇರೆ ದೇಶದಿಂದ ಬಂದ ಮುಸ್ಲಿಮಗೆ ಮೀಸಲಾತಿ ಕೊಡ್ತೀರಿ… ನಮಗೆ ಕೊಡಲು ಆಗುವುದಿಲ್ಲವೇʼʼ ಎಂದು ಪ್ರಶ್ನಿಸಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Rahul Gandhi | 21ನೇ ಶತಮಾನದ ಕೌರವರು ಖಾಕಿ ಚಡ್ಡಿ ಧರಿಸುತ್ತಾರೆ: ಆರ್‌ಎಸ್‌ಎಸ್‌ ಮೇಲೆ ರಾಹುಲ್ ಮತ್ತೆ ವಾಗ್ದಾಳಿ
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಆರೆಸ್ಸೆಸ್‌ನವರನ್ನು 21ನೇ ಶತಮಾನದ ಕೌರವರು ಎಂದು ವಾಗ್ದಾಳಿ ನಡೆಸಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿರುವ ರಾಹುಲ್, ದಾರಿ ಮಧ್ಯ ಜನರನ್ನು ಉದ್ದೇಶಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Karnataka Election | ಪುತ್ರ ವ್ಯಾಮೋಹದಲ್ಲಿ ರಿಸ್ಕ್‌ ತೆಗೆದುಕೊಂಡ ಸಿದ್ದರಾಮಯ್ಯ; ಬಾದಾಮಿಯಂತೆಯೇ ʼಲಾಕ್‌ʼ ಆಗುತ್ತಾರೆಯೇ ಮಾಜಿ ಸಿಎಂ?
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಸೇಫ್‌ ಕ್ಷೇತ್ರ ಹುಡುಕುತ್ತಿರುವುದು ಎಂಎಲ್‌ಎ ಆಗುವುದಕ್ಕಲ್ಲ, ಬದಲಿಗೆ ಸಿಎಂ ಆಗುವುದಕ್ಕಾಗಿ. ಇದೀಗ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಸಾಧಕ-ಬಾಧಕದ ವಿಶ್ಲೇಷಣೆ. ಪೂರ್ಣ ವಿಶ್ಲೇಷಣೆಗೆ ಇಲ್ಲಿ ಕ್ಲಿಕ್‌ ಮಾಡಿ.

7. Shivamogga attack | ಸುನಿಲ್‌ ನನ್ನನ್ನು ಪೀಡಿಸುತ್ತಿದ್ದ, ಅಣ್ಣ ಅವನನ್ನು ಹೆದರಿಸಲು ಹೋಗಿರಬೇಕು: ಸಮೀರ್‌ ತಂಗಿ ಹೇಳಿಕೆ
ಬಜರಂಗ ದಳ ಸಹ ಸಂಚಾಲಕ ಸುನಿಲ್‌ ನನ್ನನ್ನು ಪೀಡಿಸುತ್ತಿದ್ದ. ಈ ವಿಚಾರವನ್ನು ನಾನು ಅಣ್ಣನಿಗೆ ಹೇಳಿದ್ದೆ. ಹೀಗಾಗಿ ಅವನು ಸುನಿಲ್‌ನನ್ನು ಹೆದರಿಸಲು ಹೋಗಿರಬೇಕು: ಇದು ಸಮೀರ್‌ ಸೋದರಿ ನಭಾ ಶೇಖ್‌ (Shivamogga attack) ಹೇಳಿರುವ ಮಾತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Shivamogga attack | ಸುನಿಲ್‌ ಕೊಲೆ ಯತ್ನಕ್ಕೆ ಟ್ವಿಸ್ಟ್‌: ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದೇ ಕಾರಣ ಎಂದ ಎಸ್‌ಪಿ

8. IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್​ ಕೊಹ್ಲಿ!
ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(113) ಶತಕ ಬಾರಿಸುವ ಜತೆಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Santro Ravi case | ಲುಕ್‌ ಔಟ್‌ ನೋಟಿಸ್‌ ಜಾರಿ, ರವಿ ಬ್ಯಾಂಕ್‌ ಖಾತೆ, ಆಸ್ತಿ ಜಪ್ತಿ ಬಗ್ಗೆ ಶೀಘ್ರ ನಿರ್ಧಾರ ಎಂದ ಎಡಿಜಿಪಿ
ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ವಂಚನೆ ನಡೆಸಿದ ಆರೋಪ ಎದುರಿಸುತ್ತಿರುವ, ರಾಜ್ಯದ ಹಲವು ರಾಜಕಾರಣಿಗಳು, ಅಧಿಕಾರಿಗಳ ಜತೆ ಸಂಬಂಧ ಹೊಂದಿರುವ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯ (Santro Ravi case) ಪತ್ತೆಗಾಗಿ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆತನ ಆಸ್ತಿ ಜಪ್ತಿ ಹಾಗೂ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Santro Ravi Case | ಸ್ಯಾಂಟ್ರೋ ಮಾತು ಕೇಳಿ ಪತ್ನಿ, ನಾದಿನಿಯನ್ನು ಜೈಲಿಗೆ ಹಾಕಿದ ಇನ್ಸ್‌ಪೆಕ್ಟರ್‌ ಪ್ರವೀಣ್‌ ಸಸ್ಪೆಂಡ್‌

10. Adhisthatri Biswas | ಈಕೆಯದ್ದು ಆಟೋಮೊಬೈಲ್ ಎಬಿಸಿಡಿ! ಎರಡೇ ವರ್ಷಕ್ಕೆ ದಾಖಲೆ ಬರೆದ ಪುಟಾಣಿ
ಎರಡು ವರ್ಷದವರಿದ್ದಾಗ ನಾವೆಲ್ಲ ಹೇಗಿದ್ದೆವು? ಅ, ಆ, ಇ, ಈ ಹೇಳುವುದೂ ಕಷ್ಟವಾಗುತ್ತಿದ್ದ ವಯಸ್ಸದು. ಆದರೆ ಪಶ್ಚಿಮ ಬಂಗಾಳದ ಈ ಮಗು‌ (Adhisthatri Biswas) ಎರಡೇ ವರ್ಷಕ್ಕೆ ಎ, ಬಿ, ಸಿ, ಡಿ ಅನ್ನು ಸರಾಗವಾಗಿ ಹೇಳುತ್ತಾಳೆ. ಎ ಫಾರ್ ಆಪಲ್ ಎನ್ನುವ ಬದಲು ಪ್ರತಿ ಅಕ್ಷರಕ್ಕೂ ಅದರಿಂದ ಬರುವ ಆಟೋಮೊಬೈಲ್ ಸಂಸ್ಥೆಗಳ ಹೆಸರನ್ನು ಹೇಳುವ ಮೂಲಕ ಈ ಪುಟಾಣಿ ದಾಖಲೆಗಳನ್ನೂ ಬರೆದಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Karnataka Election | ಕಾಂಗ್ರೆಸ್‌ ಸೇರುತ್ತಾರಾ ಕಿಚ್ಚ ಸುದೀಪ್‌? ರಮ್ಯಾ ಮಧ್ಯಸ್ಥಿಕೆ!
  2. Joshimath Sinking | ಮುಳುಗುತ್ತಿರುವ ಜೋಶಿಮಠ: ಕೇಂದ್ರ ಸಭೆ, ಸೋಮವಾರ ಅಧಿಕಾರಿಗಳ ಭೇಟಿ, ಇಲ್ಲಿದೆ ಸಮಗ್ರ ವರದಿ
  3. Yuvajanotsava | ಏಳು ಸಾವಿರ ಯುವಕರು ಭಾಗಿ; ಪ್ರಧಾನಿ ಮೋದಿ ಭಾಷಣ: ಸಿಎಂ ಬೊಮ್ಮಾಯಿ
  4. Budget 2023 | ಮೊದಲ ಬಜೆಟ್‌, ರೋಲ್‌ಬ್ಯಾಕ್‌ ಬಜೆಟ್‌, ಮಿಲೇನಿಯಂ ಬಜೆಟ್‌, ಡ್ರೀಮ್ ಬಜೆಟ್..!
  5. 50 ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ಟೇಕಾಫ್ ಆದ ವಿಮಾನ!
Exit mobile version