Site icon Vistara News

ವಿಸ್ತಾರ TOP 10 NEWS | ರಾಮನಗರದಲ್ಲಿ ʼದಕ್ಷಿಣದ ಅಯೋಧ್ಯೆʼಯಿಂದ ಪ್ರಧಾನಿ ಮೋದಿ ತಾಯಿ ಅನಾರೋಗ್ಯದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-mini-ayodhya-in-ramanagar-to-modi mother hospitalized and more news

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ರಾಮನಗರದಲ್ಲಿ ಅಯೋಧ್ಯಾ ಮಾದರಿಯನ್ನು ನಿರ್ಮಿಸುವ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಸಂಚಲನ ಮೂಡಿಸಿದೆ. ಹಳೆ ಮೈಸೂರಿನಲ್ಲಿ ಅಮಿತ್‌ ಶಾ ಆಗಮನ ಮತ್ತಷ್ಟು ಸಂಚಲನ ಮೂಡಿಸಿದೆ. ಬೂಸ್ಟರ್‌ ಲಸಿಕೆ ಕೊರತೆ ಎದುರಾಗಿದೆ. ಅನಾರೋಗ್ಯಕ್ಕೀಡಾದ ತಾಯಿಯನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ, ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಕಾಯ್ದೆಗೆ ಒಪ್ಪಿಗೆ ನೀಡಲಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Ramanagara | ಅಶ್ವತ್ಥನಾರಾಯಣ ಮಂದಿರವನ್ನು ಕಟ್ಟಲಿ ಎಂದ ಡಿಕೆಶಿ; ಅವರಿಗೂ ರಾಮನಗರಕ್ಕೂ ಸಂಬಂಧ ಏನು ಎಂದ ಎಚ್‌ಡಿಡಿ
ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ಯೋಜನೆ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Amit Shah | ಹಳೆ ಮೈಸೂರಿನಲ್ಲಿ ಕಹಳೆ ಮೊಳಗಿಸಿದ ಬಿಜೆಪಿ; HDK ಟೀಕೆ ಮೂಲಕ ಅಮಿತ್‌ ಶಾಗೆ ಸ್ವಾಗತ ಕೋರಿದ ಪಕ್ಷ
ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಡಿಸೆಂಬರ್‌ 30ರಂದು ಕರ್ನಾಟಕಕ್ಕೆ ಆಗಮಿಸುತ್ತಿರುವುದು ಹಳೆ ಮೈಸೂರಿನಲ್ಲಿ ಪಕ್ಷದ ಕಹಳೆ ಮೊಳಗಿಸಲು ಎನ್ನುವುದು ಇದೀಗ ಸುಸ್ಪಷ್ಟವಾಗಿದೆ. ರಾಜ್ಯ ಬಿಜೆಪಿ ಟ್ವಿಟರ್‌ ಖಾತೆ ಮೂಲಕ ಬಹಿರಂಗವಾಗಿಯೇ ಈ ಮಾಹಿತಿಯನ್ನು ನೀಡಲಾಗಿದ್ದು, ಹಳೆ ಮೈಸೂರಿನಲ್ಲಿ ಬಿಜೆಪಿ ಸಂಚಲನ ಆರಂಭದ ಮೊದಲ ಹೆಜ್ಜೆಯಾಗಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Coronavirus | ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಕೊರತೆ; ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ಗೆ ಜನ ಹಿಂದೇಟು
ಪ್ರತಿರೋಧಕ ಶಕ್ತಿ ಹೊಂದಿರುವ ಕೋವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಕೊರತೆ ಎದುರಾಗಿದ್ದು, ಬೆಂಗಳೂರಿನಲ್ಲಿ ಹಲವು ಕಡೆ ನೋ ಸ್ಟಾಕ್‌ ಬೋರ್ಡ್‌ ಕಂಡುಬರುತ್ತಿದೆ. ಇವುಗಳಿಗೆ ಪರ್ಯಾಯವಾಗಿ ಈಗಾಗಲೇ ಚಾಲ್ತಿಯಲ್ಲಿರುವ “ಕಾರ್ಬಿವ್ಯಾಕ್ಸ್‌” ಅನ್ನು ಬೂಸ್ಟರ್‌ ಡೋಸ್‌ ಆಗಿ ಪಡೆಯಲು ವೈದ್ಯರು ಸೂಚಿಸುತ್ತಿದ್ದರೂ ಜನ ಮಾತ್ರ ಹಿಂದೇಟು ಹಾಕುತ್ತಿರುವ ಬಗ್ಗೆ ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Heeraben Modi | ಅನಾರೋಗ್ಯಕ್ಕೀಡಾದ ತಾಯಿಯನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ಮೋದಿ; ರಾಹುಲ್​ ಗಾಂಧಿ ಭಾವನಾತ್ಮಕ ಟ್ವೀಟ್​​
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಾಯಿ ಹೀರಾಬೆನ್​​ರನ್ನು ನೋಡಲು ಪ್ರಧಾನಿ ನರೇಂದ್ರ ಮೋದಿಯವರು ಅಹ್ಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ. ಹಾಗೇ, ಅಮ್ಮನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Al-Qaeda Targets India | ಇಸ್ಲಾಂ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್‌ ಮಾಡಲಿ, ಹಿಂದುಗಳನ್ನು ಓಡಿಸಲಿ: ಅಲ್‌ಕೈದಾ ಮತ್ತೆ ಕುತಂತ್ರ
ಕರ್ನಾಟಕದಲ್ಲಿ ಭುಗಿಲೆದ್ದಿದ್ದ ಹಿಜಾಬ್‌ ಪರ ಹೋರಾಟದಲ್ಲಿ ಮೂಗು ತೂರಿಸಿದ್ದ, ‘ಅಲ್ಲಾ ಹು ಅಕ್ಬರ್’‌ ಎಂದು ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಲ್‌ಕೈದಾ (Al-Qaeda Targets India) ಉಗ್ರ ಸಂಘಟನೆಯು ಈಗ ಭಾರತದ ವಿಚಾರದಲ್ಲಿ ಮತ್ತೆ ಉದ್ಧಟತನ ಮಾಡಿದೆ. “ಇಸ್ಲಾಮಿಕ್‌ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್‌ ಮಾಡಬೇಕು” ಎಂದು ಕರೆ ನೀಡುವ ಮೂಲಕ ಹೊಸ ಉಪಟಳ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Terrorists Killed | ಜಮ್ಮುವಿನಲ್ಲಿ ನಾಲ್ವರು ಉಗ್ರರ ಹತ್ಯೆ; ಭದ್ರತಾ ಪಡೆ ಗುಂಡಿನ ದಾಳಿಗೆ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್​
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಸಿಬ್ಬಂದಿ ಭರ್ಜರಿ ಬೇಟೆಯಾಡಿದ್ದಾರೆ. ಜಮ್ಮು ಹೊರವಲಯದಲ್ಲಿ ಸಾಗುತ್ತಿದ್ದ ಟ್ರಕ್​​​ನಲ್ಲಿ ಅಡಗಿದ್ದ ನಾಲ್ವರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Maharashtra Lokayukta Bill | ಅಣ್ಣಾ ಹಜಾರೆ ಕನಸು ನನಸು, ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಬಿಲ್ ಪಾಸ್,‌ ಇನ್ನು ಸಿಎಂ ವಿರುದ್ಧವೂ ತನಿಖೆ
ಭ್ರಷ್ಟಾಚಾರ ತಡೆ, ಭ್ರಷ್ಟಾಚಾರ ಎಸಗುವ ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ದಿಸೆಯಲ್ಲಿ ಮಹಾರಾಷ್ಟ್ರ ಐತಿಹಾಸಿಕ ನಡೆ ಇಟ್ಟಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಧಿಕಾರವಿರುವ ‘ಲೋಕಾಯುಕ್ತ ವಿಧೇಯಕ’ಕ್ಕೆ ಮಹಾರಾಷ್ಟ್ರ ವಿಧಾನಸಭೆಯು ಅಂಗೀಕಾರ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. AK Antony | ಮೋದಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಹಿಂದುಗಳ ಬೆಂಬಲ ಅನಿವಾರ್ಯ ಎಂದ ಕೈ ನಾಯಕ ಎ.ಕೆ.ಆ್ಯಂಟನಿ
“ನರೇಂದ್ರ ಮೋದಿ ಅವರ ಸರ್ಕಾರವನ್ನು ಸೋಲಿಸಲು ಕಾಂಗ್ರೆಸ್‌ಗೆ ಹಿಂದುಗಳ ಬೆಂಬಲ ಅತ್ಯಗತ್ಯವಾಗಿದೆ. ಇದರ ದೃಷ್ಟಿಯಿಂದ ನಾವು ಬಹುಸಂಖ್ಯಾತರ ವಿಶ್ವಾಸವನ್ನು ಗಳಿಸಲೇಬೇಕಿದೆ. ಕೇವಲ ಅಲ್ಪಸಂಖ್ಯಾತರ ಬೆಂಬಲದಿಂದ ಕಾಂಗ್ರೆಸ್‌ ಗೆಲುವು ಸಾಧಿಸಲು ಸಾಧ್ಯವಿಲ್ಲʼ ಎಂದು ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. SC ST Reservation | ಮುಂಬಡ್ತಿಯಲ್ಲಿಯೂ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ; ಸರ್ಕಾರದಿಂದ ಆದೇಶ
ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿಯೂ ಈ ಮೀಸಲಾತಿ ಹೆಚ್ಚಳವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Hassan Blast | ಮಹಿಳೆಯ ಹಿಂದೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ, ಅವಳಿಗೆ ಪಾಠ ಕಲಿಸಲು ಮಿಕ್ಸಿ ಬಾಂಬ್‌ ಕಳಿಸಿದ!
ನಗರದಲ್ಲಿ ಡಿಸೆಂಬರ್‌ ೨೬ರ ಸೋಮವಾರ ಸಂಜೆ ಕೊರಿಯರ್ ಅಂಗಡಿಯಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಾಸನದ ವಿಚ್ಛೇದಿತ ಮಹಿಳೆಗೆ ಮ್ಯಾಟ್ರಿಮೊನಿಯಲ್ಲಿ ಪರಿಚಿತನಾದ ಅನೂಪ್‌ ಕುಮಾರ್‌ ಎಂಬಾತ ಆಕೆಯ ರೂಪಕ್ಕೆ ಮರುಳಾಗಿ ಒಂದಿಷ್ಟು ಕಾಲ ಆಕೆ ಜತೆ ಓಡಾಡಿದ್ದ. ಲಕ್ಷಾಂತರ ರೂ. ಹಣವನ್ನೂ ನೀಡಿದ್ದ ಎನ್ನಲಾಗಿದೆ. ಆದರೆ, ಕೊನೆಗೆ ಆಕೆ ತನ್ನನ್ನು ದೂರ ಮಾಡಲು ಮುಂದಾದಾಗ ಆಕೆಯನ್ನು ಸಾಯಿಸಲು ಇಲ್ಲವೇ ಸೌಂದರ್ಯವನ್ನು ವಿರೂಪಗೊಳಿಸಲು ಮಾಡಿದ ತಂತ್ರವೇ ಈ ಮಿಕ್ಸಿ ಬಾಂಬ್‌! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Devadasi system | ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜೀವಂತ, ಮುತ್ತು ಕಟ್ಟಿಸಿದ ಪ್ರಕರಣ ಬೆಳಕಿಗೆ
  2. Siddheshwar Swamiji | ಭಕ್ತರಿಗೆ ದರ್ಶನ ನೀಡಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ; ಆರೋಗ್ಯದ ಕುರಿತ ವದಂತಿಗಳಿಗೆ ತೆರೆ
  3. Drunken teacher | ಡ್ಯೂಟಿ ಟೈಮಲ್ಲೇ ಮತ್ತೇರಿದ ಮಾಸ್ಟರ್; ಶಾಲೆ ಜಗುಲಿಯಲ್ಲೇ ಮಲಗಿ ಹೊರಳಾಟ; ಇದು ಅಲಂಗಾರು ಶಾಲೆಯ ಗೋಳಾಟ
  4. ಶಿರಸಿ ಪ್ರತ್ಯೇಕ ಜಿಲ್ಲೆ | ಪಕ್ಷಾತೀತವಾಗಿ ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ ನಿಯೋಗ: ಸಕಾರಾತ್ಮಕ ಸ್ಪಂದನೆ
  5. Year- end special | ಬ್ರಹ್ಮೋಸ್‌, ಅಗ್ನಿ, ಪೃಥ್ವಿII : ಪ್ರಳಯಾಂತಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತ
  6. ಮಗು ಹೆತ್ತುಕೊಡಲಿಲ್ಲ ಎಂದು ಪತ್ನಿಯ ಗುಪ್ತಾಂಗವನ್ನು ಬ್ಲೇಡ್​​ನಿಂದ ಕೊಯ್ದ ದುಷ್ಟ ಪತಿ; ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ
Exit mobile version